ಟಾಮ್ ಅಂಡ್ ಜರ‍್ರಿ ಆಟ ಶುರು ಗುರು…! ನವೆಂಬರ್‌ 12 ರಂದು ಪ್ಯಾಕೇಜ್‌ ಧಮಾಕ!!


ಜೋಡಿಹಕ್ಕಿ ಖ್ಯಾತಿಯ ಚೈತ್ರಾರಾವ್, ನಿಶ್ಚಿತ್ ಕರೋಡಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಚಿತ್ರ ಟಾಮ್ ಅಂಡ್ ಜರ‍್ರಿ. ರಿದ್ಧಿಸಿದ್ಧಿ ಬ್ಯಾನರ್ ಅಡಿಯಲ್ಲಿ, ರಾಜು ಶೇರಿಗಾರ್ ಅವರು ನಿರ್ಮಿಸಿರುವ ಈ ಚಿತ್ರಕ್ಕೆ ರಾಘವ್ ವಿನಯ್ ಶಿವಗಂಗೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನವೆಂಬರ್ 12ರಂದು ತೆರೆಕಾಣಲಿರುವ ಈ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಸಿಕ್ಕಾಪಟ್ಟೆ ಸದ್ದು ಮಾಡಿದೆ.


ತಮ್ಮ ಚೊಚ್ಚಲ ನಿರ್ಮಾಣದ ಚಿತ್ರದ ಕುರಿತಂತೆ ಮಾತನಾಡುವ ನಿರ್ಮಾಪಕರು, “ಕಾಮಿಡಿ. ಫೈಟ್ ಎಲ್ಲಾ ಥರದ ಎಲಿಮೆಂಟ್ಸ್ ಇದೆ. ತಾಯಿ ಮಗನ ಸಂಬಂಧದ ಕಥೆ ಮನಸಿಗೆ ನಾಟುತ್ತದೆ. ಯೂಥ್‌ಗೆ ಸಪೋರ್ಟ್ ಮಾಡಬೇಕೆಂದು ಚಿತ್ರರಂಗಕ್ಕೆ ಬಂದೆ. ಆರಂಭದಿಂದಲೂ ವೆಂಕಟೇಶಗೌಡ್ರು ನಮ್ಮ ಜೊತೆ ಕೈಜೋಡಿಸಿದ್ದಾರೆ, ಈವಾರ ಎಷ್ಟೇ ಸಿನಿಮಾ ಬಂದರೂ ನಮ್ಮ ಚಿತ್ರಕ್ಕೆ ತೊಂದರೆಯಿಲ್ಲ ಎಂದು ಹೇಳಿದರು. ನಂತರ ನಿರ್ದೇಶಕ ರಾಘವ ಮಾತನಾಡಿ, ಈ ಮೊದಲು ನಮ್ಮ ಚಿತ್ರದ ಟ್ರೇಲರನ್ನು ಪುನೀತ್ ಅವರ ಕೈಲೇ ರಿಲೀಸ್ ಮಾಡಿಸಬೇಕೆಂಬ ಪ್ಲಾನ್ ಇತ್ತು. ಅವರು ನಮ್ಮ ಒಂದಷ್ಟು ಕನಸುಗಳ ಭಾಗವೂ ಆಗಿದ್ದರು. ಹೊಸತನ ಇಷ್ಟಪಡುವವರಿಗೆ ನಮ್ಮ ಚಿತ್ರ ಹಿಡಿಸುತ್ತದೆ. 2 ಪಾತ್ರಗಳು ಅವರವರ ವ್ಯಕ್ತಿತ್ವಕ್ಕೆ ಅನುಸಾರವಾಗಿ ಹೋಗುತ್ತಿರುತ್ತವೆ, ಟಾಮ್ ಅಂಡ್ ಜೆರ‍್ರಿ ನಡುವೆ ಆಗಾಗ ಜಗಳ ನಡೆಯುತ್ತಲೇ ಇರುತ್ತೆ, ಹುಚ್ಚನ ಪಾತ್ರ ಇವರಿಬ್ಬರಿಗೂ ಬ್ರಿಡ್ಜ್ ಆಗಿರುತ್ತದೆ ಎಂದು ಹೇಳಿದರು.

ನಾಯಕ ನಿಶ್ಚಿತ್ ಮಾತನಾಡಿ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದೇವೆ ಎಂದು ಹೇಳಿಕೊಂಡರೆ, ನಾಯಕಿ ಚೈತ್ರಾರಾವ್, ಚಿತ್ರದಲ್ಲಿ ನಾನು ಎನ್‌ಜಿಓದಲ್ಲಿ ಕೆಲಸ ಮಾಡುವ ಹುಡುಗಿ, ತನಗೇನು ಇಷ್ಟವೋ ಅದೇ ರೀತಿ ಬದುಕುತ್ತಿರುವಂಥ ಹುಡುಗಿ ಎಂದು ಹೇಳಿದರು.

ಟ್ರೇಲರ್‌ಗೆ ವಿಠಲ್ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ನಿರ್ದೇಶಕ ಮ್ಯಾಥ್ಯೂಸ್ ಮನು ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದಾರೆ. ಈ ಚಿತ್ರದ ಹಾಯಾಗಿದೆ ಎದೆಯೊಳಗೆ ಎಂಬ ಹಾಡಿಗೆ ಹಿನ್ನೆಲೆ ಗಾಯಕ ಸಿದ್ ಶ್ರೀರಾಮ್ ಅವರು ದನಿಯಾಗಿದ್ದಾರೆ. ಚಿತ್ರದ ಛಾಯಾಗ್ರಾಹಕರಾಗಿ ಸಂಕೇತ್ ಕೆಲಸ ಮಾಡಿದರೆ, ಸೂರಜ್ ಅಂಕೋಲೆಕರ್ ಸಂಕಲನ ಮಾಡಿದ್ದಾರೆ.


ಹಿರಿಯ ಕಲಾವಿದರಾದ ಜೈಜಗದೀಶ್, ತಾರಾ ಅನುರಾಧಾ, ರಾಕ್‌ಲೈನ್ ಸುಧಾಕರ್, ಪದ್ಮಜಾ ರಾವ್, ಕಡ್ಡಿಪುಡಿ ಚಂದ್ರು ಸೇರಿದಂತೆ ಕವಲುದಾರಿ ಖ್ಯಾತಿಯ ಸಂಪತ್ ಮೈತ್ರೇಯ, ಕೆಜಿಎಫ್ ಖ್ಯಾತಿಯ ಶೇಖರ್ ಹೀಗೆ ಸಾಕಷ್ಟು ಕಲಾವಿದರ ದಂಡೇ ಚಿತ್ರದಲ್ಲಿ ಅಭಿನಯಿಸಿದೆ.

Related Posts

error: Content is protected !!