ಬೆಳ್ಳಿತೆರೆ ಮೇಲೆ ಟಾಮ್‌ ಅಂಡ್‌ ಜರ‍್ರಿ ಸವಾರಿ! ಕೆಜಿಎಫ್ ಡೈಲಾಗ್ ರೈಟರ್ ಹೊಸ ಪ್ರಯತ್ನ; ಗಂಟುಮೂಟೆ ಹುಡುಗ, ಜೋಡಿಹಕ್ಕಿ ಹುಡುಗಿಯ ಡಿಂಗುಡಾಂಗು!!

ಟಾಮ್ ಅಂಡ್ ಜರ‍್ರಿ' ಇದೇ ಶುಕ್ರವಾರ ಬೆಳ್ಳಿತೆರೆ ಮೇಲೆ ಸವಾರಿ ಹೊರಡಲಿರುವ ಚಿತ್ರ. ರಾಜಾದ್ಯಂತ ಬಹುತೇಕ ಎಲ್ಲಾ ಚಿತ್ರಮಂದಿರಕ್ಕೆಟಾಮ್ ಅಂಡ್ ಜರ‍್ರಿ’ ಲಗ್ಗೆ ಇಡ್ತಿದ್ದಾರೆ. ಈಗಾಗಲೇ ಇವರಿಬ್ಬರು ಪ್ರೇಮಿಗಳ ಹೃದಯಕ್ಕೆ, ಪಡ್ಡೆಹೈಕ್ಳ ಹಾರ್ಟ್ಗೆ ಲಗ್ಗೆ ಇಟ್ಟಾಗಿದೆ. ಹೀಗಾಗಿಯೇ, ಲವ್ವಲ್ಲಿರೋರು, ಲವ್ವಲ್ಲಿ ಬೀಳೋರೆಲ್ಲರೂ ಕೂಡ `ಹಾಯಾಗಿದೆ ಎದೆಯೊಳಗೆ ಝಲ್ ಎಂದಿದೆ ಈ ಘಳಿಗೆ.. ನೀ ನೋಡೋ ನೋಟವೆಲ್ಲ… ನನ್ನನ್ನೇ ಕೊಲ್ಲೋ ಹಾಗೇ.. ನೀ ಮೋಡಿ ಮಾಡುವಾಗ.. ನಾ ಸೋತು ನಿಂತ ಹಾಗೇ.. ನಿನೆಂಥಾ ಮಾಯಗಾತಿಯೇ.. ಹೀಗಂತ ಹಾಡುತ್ತಾ ಪ್ರೇಮಲೋಕಕ್ಕೆ ಹೋಗಿಬರುತ್ತಿದ್ದಾರೆ. ಕೇವಲ ಒಂದೇ ಒಂದು ಹಾಡು ಯೂತ್ಸ್ನ ಇಷ್ಟೊಂದು ಇಂಪ್ರೆಸ್ ಮಾಡಿದೆ ಅಂದರೆ ಟಾಮ್ ಅಂಡ್ ಜರ‍್ರಿ ಪೂರ್ತಿ ಸಿನಿಮಾ ಯೂತ್ಸ್ ಮೇಲೆ ಇನ್ನೆಷ್ಟು ಪ್ರಭಾವ ಬೀರಬಹುದು. ಈ ಕೂತೂಹಲಕ್ಕೆ ಇದೇ ಶುಕ್ರವಾರ ತೆರೆಬೀಳಲಿದೆ.

ಸಿನಿಮಾದ ಹಾಡುಗಳು ಒಂದು ಚಿತ್ರಕ್ಕೆ ಇನ್ವಿಟೇಷನ್ ಇದ್ದಂತೆ. ರಿಲೀಸ್‌ಗೂ ಮುನ್ನ ಹಾಡು ಹಿಟ್ಟಾದರೆ ಅರ್ಧ ಸಿನಿಮಾ ಗೆದ್ದಂತೆ ಎನ್ನುವ ಮಾತಿದೆ. ಸದ್ಯ ಟಾಮ್ ಅಂಡ್ ಜರ‍್ರಿ ಮೊದಲ ಹಾಡು ಸೂಪರ್-ಡೂಪರ್ ಹಿಟ್ಟಾಗಿದೆ. ಇತ್ತೀಚೆಗೆ ಬಿಡುಗಡೆಯಾದ ಟ್ರೆöÊಲರ್ ಕೂಡ ಬ್ಲಾಕ್‌ಬಸ್ಟರ್ ಹಿಟ್ಟಾಗಿದೆ. ಇಲ್ಲಿವರೆಗೂ ಸುಮಾರು 12 ಲಕ್ಷ ಮಂದಿ ಟ್ರೇಲರ್ ವೀಕ್ಷಣೆ ಮಾಡಿದ್ದಾರೆ. ಟಾಮ್ ಅಂಡ್ ಜರ‍್ರಿಯ ಕಿತ್ತಾಟ-ಗುದ್ದಾಟ-ಮುದ್ದಾಟದ ಝಲಕ್ ಮಜಾ ಕೊಡ್ತಿದೆ. ಕಾಸು ಕೊಟ್ಟು ಸಿನಿಮಾ ನೋಡೋಕೆ ಬರುವವರಿಗೆ ಎಂಟರ್‌ಟೈನ್ಮೆಂಟ್‌ಗೆ ಬರ ಇರೋದಿಲ್ಲ ಎನ್ನುವುದು ಟ್ರೇಲರ್ ನೋಡಿದ್ರೇನೆ ಗೊತ್ತಾಗುತ್ತೆ.

ಫ್ರೆಂಡ್ಸ್ ಸರ್ಕಲ್‌ನಲ್ಲಿ ಖುಷ್ಕಾ ತಗೊಂಡು ಕಬಾಬ್ ತಗೊಳ್ಳೋಕೆ ಪರದಾಡುವವರನ್ನೂ ನೋಡಿರ‍್ತೀರಾ. ಕಾಲಲ್ಲಿ ಓಡಾಡಿ ಮನುಷ್ಯ ಅನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಅನಿಸಿಕೊಳ್ಳೋದು ಬೆಸ್ಟ್ ಅಂತ ಡೈಲಾಗ್ ಬಿಡೋ ಫ್ರೆಂಡ್‌ನೂ ನೀವು ನೋಡರ‍್ತೀರಾ. ಇಂಥಾ ಫ್ರೆಂಡ್ಸ್ಗಳನ್ನು ನಿಮ್ಮ ಸ್ನೇಹಕೂಟದಲ್ಲಿ ನೋಡಿದ್ದರೂ, ನೋಡಿಲ್ಲವಾದರೂ ಕೂಡ ಟಾಮ್ ಅಂಡ್ ಜರ‍್ರಿ'ಯನ್ನು ನೋಡೋದಕ್ಕೆ ಥಿಯೇಟರ್‌ಗೆ ಹೋಗಿ. ಯಾಕಂದ್ರೆ, ಸಾಮಾಜಿಕ ಕಟ್ಟುಪಾಡು ಏನೇ ಇದ್ದರೂ ಕೂಡನಾನ್ ಇರೋದು ಹಿಂಗೆ, ನನ್ನ ಜೀವನ ಹಿಂಗೆ ಅಂತ ಬದುಕುವ ಎರಡು ಕ್ಯಾರೆಕ್ಟರ್‌ನ ಕಮರ್ಷಿಯಲ್ ಎಲಿಮೆಂಟ್ಸ್ ಜೊತೆ ಬ್ಲೆಂಡ್ ಮಾಡಿ `ಟಾಮ್ ಅಂಡ್ ಜರ‍್ರಿ’ಯನ್ನು ನಿಮಗೋಸ್ಕರ ಸಿದ್ದಪಡಿಸಿದ್ದಾರೆ ನಿರ್ದೇಶಕ ರಾಘವ್ ವಿನಯ್ ಶಿವಗಂಗೆ.

ರಾಘವ್ ವಿನಯ್ ಶಿವಗಂಗೆ ಯುವ ನಿರ್ದೇಶಕ. ಆದರೆ, ಸಿನಿಮಾ ಇಂಡಸ್ಟ್ರೀಯಲ್ಲಿ ಇವರಿಗಿರುವ ಅನುಭವ ಹಾಗೂ ಸಿನಿಮಾ ವಿದ್ಯೆ ಇದ್ಯೆಯಲ್ಲ ಅದು ಅಘಾದವಾದದ್ದು. ಹೀಗಾಗಿಯೇ ಇವರಿಗೆ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಇಡೀ ದೇಶ ಮೆಚ್ಚಿಕೊಂಡಂತಹ ಕೆಜಿಎಫ್ ಪಾರ್ಟ್ 1ಗೆ ಡೈಲಾಗ್ ಬರೆಯುವಂತಹ ಅವಕಾಶ ಸಿಕ್ಕಿತ್ತು. ಇಂತಿಪ್ಪ ಡೈರೆಕ್ಟರ್ ರಾಘವ್ ವಿನಯ್ ಶಿವಗಂಗೆಯವರು ಇದೇ ಮೊದಲ ಭಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟು ಕಥೆ-ಚಿತ್ರಕಥೆ ರಚಿಸಿ `ಟಾ ಮ್ ಅಂಡ್ ಜರ‍್ರಿ’ಯನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಹೊಸತನವಿದೆ, ಹಳೇ ಫಾರ್ಮುಲ ಇಲ್ಲಿಲ್ಲ. ಪ್ರತಿ 20 ನಿಮಿಷಕ್ಕೆ ಸಿನಿಮಾದ ಜಾಹ್ನರ್ ಚೇಂಜ್ ಆಗುತ್ತೆ, ಮ್ಯೂಸಿಕ್ ಬದಲಾಗುತ್ತೆ, ಕಥೆ ಬೇರೊಂದು ಲೋಕವನ್ನೇ ನಿಮ್ಮ ಮುಂದೆ ಹರವಿಡುತ್ತೆ. ಸಂಪೂರ್ಣ ಹೊಸಬರ ತಂಡ ಸೇರಿಕೊಂಡು ಮಾಡಿರುವ ಚಿತ್ರವಾದರೂ ಸಹಿತ ಕಂಟೆAಟ್ ಹಾಗೂ ಅಪ್ರೋಚ್ ಮಾಡುವ ರೀತಿಯಲ್ಲಿ ಹೊಸತನವಿದೆ. ವಿಷ್ಯೂಯಲ್ ಟ್ರೀಟ್ ಎಕ್ಸ್ಟ್ರಾಡಿನರಿಯಾಗಿದೆ. ಬಿಗ್‌ಸ್ಕ್ರೀನ್‌ನಲ್ಲಿ ನೀವು ಅದನ್ನು ನೋಡಿಯೇ ಸವಿಬೇಕು.

ಇನ್ನೂ ಟಾಮ್ ಅಂಡ್ ಜರ‍್ರಿಯಾಗಿ ನಿಶ್ಚಿತ್ ಕೊರೋಡಿ ಹಾಗೂ ಚೈತ್ರಾ ರಾವ್ ಮಿಂಚಿದ್ದಾರೆ. ಗಂಟುಮೂಟೆ ಚಿತ್ರದಲ್ಲಿ ಮಿಂಚಿ ಸೈ ಎನಿಸಿಕೊಂಡಿದ್ದ ನಿಶ್ಚಿತ್ ಇಲ್ಲಿ ಹೀರೋ ಆಗಿದ್ದಾರೆ. ಜೋಡಿಹಕ್ಕಿ ಜಾನಕಿಯಾಗಿ ಕಿರುತೆರೆ ಪ್ರೇಕ್ಷಕರನ್ನು ಸೆಳೆದಿದ್ದ ಚೈತ್ರಾ ರಾವ್ ಮಾಯಬಜಾರ್ ಮೂಲಕ ಬೆಳ್ಳಿತೆರೆಗೆ ಬಂದಿದ್ದರು. ಇದೀಗ ಟಾಮ್ ಅಂಡ್ ಜರ‍್ರಿಯಲ್ಲಿ ಸತ್ಯ ಪಾತ್ರದ ಮೂಲಕ ಕಮಾಲ್ ಮಾಡೋದಕ್ಕೆ ಹೊರಟಿದ್ದಾರೆ. ಧರ್ಮ ಪಾತ್ರದ ಮೂಲಕ ಹವಾ ಎಬ್ಬಿಸೋಕೆ ನಿಶ್ಚಿತ್ ಒಂಟಿಕಾಲಿನಲ್ಲಿ ನಿಂತಿದ್ದಾರೆ. ಹಾಡು ಹಾಗೂ ಟ್ರೇಲರ್‌ನಲ್ಲೇ ಈ ಜೋಡಿಯ ಕೆಮಿಸ್ಟ್ರೊ ವರ್ಕೌಟ್ ಆಗಿದ್ದು ಫ್ಯಾನ್ಸ್ ಹುಟ್ಟಿಕೊಂಡಿದ್ದಾರೆ. ಇಡೀ ಸಿನಿಮಾ ಹೊರಬಂದ್ಮೇಲೆ `ಟಾಮ್ ಅಂಡ್ ಜೆರ್ರಿಗೆ ಸಂಘ-ಸಂಸ್ಥೆಗಳು ದುಪ್ಪಟ್ಟಾಗ್ಬೋದು.

ಹೀರೋ ನಿಶ್ಚಿತ್ ಸದ್ಯಕ್ಕೆ ಆಟಿಟ್ಯೂಡ್ ತೋರಿಸುತ್ತಿಲ್ಲ. ಮೊನ್ನೆ ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಾ, ಕೆಲಸದ ಆಳಿನ ಕ್ಯಾರೆಕ್ಟರ್ ಕೊಟ್ಟರೂ ಮಾಡ್ತೀನಿ, ರೊಮ್ಯಾನ್ಸ್ ಮಾಡೂ ಅಂದರೂ ಮಾಡ್ತೀನಿ. ಯಾಕಂದ್ರೆ, ಪ್ರತಿ ಪಾತ್ರಕ್ಕೂ ಅದರದ್ದೇ ಆದ ಪಾವಿತ್ರ್ಯತೆ ಇದೆ ಅಂದರು. ನಿಶ್ಚಿತ್ ಡೌಂಟ್ ಟು ಅರ್ಥ್ ನೇಚರ್ ನೋಡಿದರೆ ಮುಂದೊಂದು ದಿನ ಸ್ವಂತ ಬ್ರ್ಯಾಂಡ್ ಆಗೋದು ಗ್ಯಾರಂಟಿ ಬಿಡಿ. ಕಲಾವಿದ ನೀರಿದ್ದ ಹಾಗೇ, ಯಾವುದೇ ಪಾತ್ರೆಗೆ ಹಾಕಿದರೂ ಅದೇ ಆಕಾರ ಪಡಿಬೇಕು ಪಡಿತೀನಿ ಅಂತ ಬೇರೆ ಹೇಳಿದ್ದಾರೆ. ಅಭಿಮಾನಿ ದೇವರುಗಳ ಆಶೀರ್ವಾದ ಹೀರೋ ಮೇಲಿದ್ದುಟಾಮ್ ಅಂಡ್ ಜರ‍್ರಿ’ ಹಿಟ್ಟಾದರೆ ಹೀರೋ ನಿಶ್ಚಿತ್ ಈಗ ಹೇಗಿದ್ದಾರೋ ಹಾಗೆಯೇ ಇರುತ್ತಾರಾ ಇಲ್ಲವಾ ಕಾದುನೋಡಬೇಕು.‌

ಅಂದ್ಹಾಗೇ, ಟಾಮ್ ಅಂಡ್ ಜರ‍್ರಿಯಲ್ಲಿ ಅತೀ ದೊಡ್ಡ ತಾರಾಬಳಗವೇ ಇದೆ. ತಾರಾ ಅನುರಾಧ, ಜೈ ಜಗದೀಶ್, ಕೋಟೆ ಪ್ರಭಾಕರ್, ಕಡ್ಡಿಪುಡ್ಡಿ ಚಂದ್ರು, ರಾಕ್‌ಲೈನ್ ಸುಧಾಕರ್, ಸಂಪತ್ ಮೈತ್ರೇಯ, ಪದ್ಮಜಾ ರಾವ್, ಪ್ರಕಾಶ್ ತುಮ್ಮಿನಾಡು, ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಇತರರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸಿದ್ದಾರೆ.

ಸಂಕೇತ್ ಕ್ಯಾಮೆರಾ ವರ್ಕ್, ಸೂರಜ್ ಅಂಕೊಲೇಕರ್ ಸಂಕಲನ, ಅರ್ಜುನ್ ರಾಜ್ ಸಾಹಸ ಚಿತ್ರಕ್ಕಿದೆ. ರಾಜು ಶೇರಿಗಾರ್ ಬಂಡವಾಳ ಹೂಡಿದ್ದು ರಿದ್ಧಿ ಸಿದ್ಧಿ ಫಿಲಂಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಅದ್ಬೂತವಾಗಿ ಮೂಡಿಬಂದಿದೆ. ಇಲ್ಲಿವರೆಗೂ ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕ ಮಹಾಷಯರು ಜೈಕಾರ ಹಾಕಿದ್ದಾರೆ. ಈಗ ಸಂಪೂರ್ಣ ಹೊಸಬರಟಾಮ್ ಅಂಡ್ ಜರ‍್ರಿ’ಯನ್ನು ಸಿನಿರಸಿಕರು ಒಪ್ಪಿಕೊಳ್ತಾರಾ ? ಜಸ್ಟ್ ವೇಯ್ಟ್ ಅಂಡ್ ಸೀ…

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!