ಎಲ್ಲರೂ ಫಸ್ಟ್‌ ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದ್ನೇ ಮಾಡಿದ್ದೀವಿ! ಡಿಂಪಲ್‌ಕ್ವೀನ್ ರಚ್ಚು ರೊಚ್ಚಿಗೇಳಿಸೋ ಬೆಡ್‌ರೂಮ್ ಮಾತು !!

ಸ್ಯಾಂಡಲ್‌ವುಡ್‌ನ ಡೇರಿಂಗ್ ಅಂಡ್ ಡ್ಯಾಶಿಂಗ್ ಹುಡುಗಿ ಅಂದ್ರೆ ಒನ್ ಅಂಡ್ ಓನ್ಲೀ ರಚಿತರಾಮ್. ಗುಳಿಕೆನ್ನೆ ಚೆಲುವಿನಿಂದ, ಮನಮೋಹಕ ಅಭಿನಯದಿಂದ ಎಲ್ಲರ ಹಾಟ್‌ಫೇವರಿಟ್ ಆಗಿರೋ ರಚ್ಚು ಈಗ ಹಾಟ್‌ನ್ಯೂಸ್ ಆಗಿದ್ದಾರೆ. `ಎಲ್ಲರೂ ಫಸ್ಟ್ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದನ್ನೇ ಮಾಡಿದ್ದೀವಿ’ ಅಂತೇಳಿ ಸೆನ್ಸೇಷನ್ ಸೃಷ್ಟಿಸಿದ್ದಾರೆ. ಅಷ್ಟಕ್ಕೂ, ಸಿಂಗಲ್ಲಾಗಿರೋ ರಚಿತರಾಮ್ ಹಿಂಗ್ಯಾಕ್ ಸ್ಟೇಟ್‌ಮೆಂಟ್ ಕೊಟ್ಟರು? ಏನಿದರ ಅಸಲಿಯತ್ತು ಹೇಳ್ತೀವಿ ಕೇಳಿ

ಗಂಧದಗುಡಿಯ ಬಹುತೇಕ ಎಲ್ಲಾ ಸೂಪರ್‌ಸ್ಟಾರ್‌ಗಳೊಟ್ಟಿಗೆ ಅಭಿನಯಿಸಿ ಸೈ ಎನಿಸಿಕೊಂಡಿರುವ ನಟಿ ರಚಿತರಾಮ್ ಗಡಿ ದಾಟಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಪರಭಾಷಾ ಮಂದಿ ರಚ್ಚುನಾ ಸೂಪರ್ ಮಚ್ಚಿ' ಎನ್ನಲಿದ್ದಾರೆ. ಈ ಮಧ್ಯೆ ಸ್ಯಾಂಡಲ್‌ವುಡ್‌ನ ಕೃಷ್ಣ ಅಜಯ್ ರಾವ್ಲವ್ ಯೂ ರಚ್ಚು’ ಎಂದಿದ್ದಾರೆ. ಹೀಗಾಗಿ, ಗಂಧದಗುಡಿಯಲ್ಲಿ ರಚ್ಚು ಹವಾ ಜೋರಾಗಿದೆ. ಒಂದಲ್ಲ.. ಎರಡಲ್ಲ.. ಭರ್ತಿ ಹದಿನೈದು ಸಿನಿಮಾಗಳನ್ನು ಒಪ್ಪಿಕೊಂಡು ಬಹುಬೇಡಿಕೆಯ ನಟಿಯಾಗಿರುವ ರಚಿತರಾಮ್, `ಲವ್ ಯೂ ರಚ್ಚು’ ಚಿತ್ರದಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ಲಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲೇ ಅಜಯ್ ಜೊತೆ ಕಿಚ್ಚು ಹಚ್ಚಿದ್ದ ರಚ್ಚು ಈಗ ರೊಮ್ಯಾಂಟಿಕ್ ಸಾಂಗ್ ಮೂಲಕ ಹಾರ್ಟ್ನ ಸೀಸ್ ಮಾಡಿದ್ದಾರೆ. ಮಾತ್ರವಲ್ಲ ಸಾಂಗ್ ರಿಲೀಸ್ ಸಂದರ್ಭದಲ್ಲಿ ಎಲ್ಲರೂ ಫಸ್ಟ್ನೈಟ್‌ನಲ್ಲಿ ಏನ್ಮಾಡ್ತಾರೋ ನಾವು ಅದನ್ನೇ ಮಾಡಿದ್ದೀವಿ ಅಂತೇಳಿ ಪಡ್ಡೆಹೈಕ್ಳ ಹಾರ್ಟ್ಟೆಂಪ್ರೇಚರ್‌ನ ಜಾಸ್ತಿ ಮಾಡೋದಲ್ಲದೇ ಹಾಟ್ ನ್ಯೂಸ್ ಕೂಡ ಆಗಿದ್ದಾರೆ.

ಹೌದು, ಲವ್ ಯೂ ರಚ್ಚು' ಫಿಲ್ಮ್ ಟೀಮ್ ಹೊಸ ಸಾಂಗ್‌ನ ರಿಲೀಸ್ ಮಾಡಿದೆ. ಮಣಿಕಾಂತ್ ಖದ್ರಿಯವರ ಸಂಗೀತ-ನಾಗಾರ್ಜುನ್ ಶರ್ಮಾರ ಸಾಹಿತ್ಯವಿರುವ ಮುದ್ದು ನೀನು… ಎದೆಯ ನಡೆಸೋ ಸದ್ದು ನೀನು’ ಹಾಡಿನಲ್ಲಿ ನಟ ಅಜಯ್‌ರಾವ್ ಹಾಗೂ ರಚಿತರಾಮ್ ಬೊಂಬಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಇನ್ಮೇಲೆ ಹಸಿಬಿಸಿ ದೃಶ್ಯಗಳಲ್ಲಿ ಕಾಣಿಸಿಕೊಳ್ಳಲ್ಲ ತುಂಬಾ ಹಾಟ್ ಆಗಿ ಮಿಂಚಲ್ಲ ಅಂತ `ಐ ಲವ್ ಯೂ ‘ ಸಿನಿಮಾ ಪ್ರಮೋಷನ್ ವೇಳೆ ಹೇಳಿಕೊಂಡು ಕಣ್ಣೀರಾಕಿದ್ದ ರಚ್ಚು ಈಗ ಮತ್ತೊಮ್ಮೆ ಸಿಕ್ಕಾಪಟ್ಟೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದಾರೆ. ಏನ್ ಮೇಡಂ ಇಷ್ಟೊಂದು ಬೋಲ್ಡ್ ಆಗಿ ಮಿಂಚಿದ್ದೀರಾ? ಹಿಂದೆ ನೀವು ಇನ್ಮೇಲೆ ಈ ರೀತಿ ಕಾಣಿಸಿಕೊಳ್ಳಲ್ಲ ಅಂತೇಳಿದ್ರಲ್ಲ ಏನ್ ಸಮಾಚಾರ ಮೇಡಂ ಅಂತ ಮಾಧ್ಯಮಮಿತ್ರರೊಬ್ಬರು ಕೇಳಿದ್ದಕ್ಕೆ ರಚ್ಚು ಹೇಳಿದ್ದಿಷ್ಟು.

`ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಳ್ಳಲ್ಲ ಅಂತ ಹೇಳಿದ್ದೆ ನಿಜ. ಆದರೆ, ಈಗ ಕಾಣಿಸಿಕೊಂಡಿದ್ದೇನೆ ಅಂದರೆ ಅದರಲ್ಲಿ ಏನೋ ವಿಶೇಷತೆ ಮತ್ತು ವಿಷಯ ಇರಬೇಕು ಮತ್ತು ಇರುತ್ತೆ ಅಲ್ಲವಾ. ಅಷ್ಟಕ್ಕೂ, ಮದುವೆಯಾದ್ಮೇಲೆ ಎಲ್ಲರೂ ಏನ್ ಮಾಡ್ತಾರೆ ರೊಮ್ಯಾನ್ಸ್ ಮಾಡ್ತಾರೆ ಅಲ್ಲವಾ? ಅದನ್ನೇ ನಾವು ಮಾಡಿದ್ದೇವೆ. ಡೀಟೈಲ್ ಆಗಿ ಹೋಗಿಲ್ಲ ಬೇಸಿಕ್ ಅಷ್ಟೇ ಮಾಡಿದ್ದೇವೆ. ಅಷ್ಟಕ್ಕೂ, ಸೀನ್‌ನಲ್ಲಿ ಹಾಗೂ ಶಾಟ್‌ನಲ್ಲಿ ಅಷ್ಟೇ ಇರೋದು ಹೀಗಾಗಿ ಅದನ್ನೇ ನಾವು ಮಾಡಿದ್ದೇವೆ. ಸೋ, ಮಾಡಲ್ಲ ಅಂದವರು ಯಾಕ್ ಹಾಟ್ ಸೀನ್ ಮಾಡಿದರು ಎನ್ನುವುದು ನೀವು ಸಿನಿಮಾ ನೋಡಿದ್ಮೇಲೆ ಗೊತ್ತಾಗುತ್ತೆ’

ಡಿಂಪಲ್‌ಕ್ವೀನ್ ರಚ್ಚು ಎಷ್ಟು ಹಾಟೋ ಅಷ್ಟೇ ಘಾಟು ಕೂಡ ಹೌದು. ಹಿಂದೆ ಒಂದು, ಮುಂದೆ ಒಂದು ಮಾತನಾಡಲ್ಲ. ಏನೇ ಇದ್ದರೂ ನೇರಾ-ನೇರಾ. ಪಕ್ಕಾ ಸ್ಟೇಟ್ಫಾ ಫಾರ್ವಡ್ ವ್ಯಕ್ತಿತ್ವ, ಏಕ್ ಮಾರ್ ದೋ ತುಕಡ ಎನ್ನುವ ಪಾಲಿಸಿ. ಅದರಂತೇ, ಕ್ಯಾಮೆರಾ ಮುಂದೆ ಬಂದಾಗ ಪಾತ್ರಕ್ಕೆ ನ್ಯಾಯ ಸಲ್ಲಿಸೋದಕ್ಕೆ ಮಡಿವಂತಿಕೆಯನ್ನು ಎಡಗೈನಲ್ಲಿ ಸರಿಸಿ ಅಭಿನಯಿಸ್ತಾರೆ. ಅದೇ ರೀತಿ ಸಿನಿಮಾದ ಬಗ್ಗೆ ಮಾತನಾಡಲಿಕ್ಕೆ ಕ್ಯಾಮೆರಾ ಮುಂದೆ ಬಂದಾಗ ಮುಕ್ತವಾಗಿ ಮಾತನಾಡುತ್ತಾರೆ. ಈಗಲೂ ಅದನ್ನೇ ಮಾಡಿದ್ದಾರೆ ಅಷ್ಟೇ.

ಅಂದ್ಹಾಗೇ, ಬಿಡುಗಡೆಯಾಗಿರುವ ಲವ್ ಯೂ ರಚ್ಚು' ಚಿತ್ರದಮುದ್ದು ನೀನು… ಎದೆಯ ನಡೆಸೋ ಸದ್ದು ನೀನು’ ಹಾಡನ್ನು ನೋಡಿದರೆ ಗೊತ್ತಾಗುತ್ತೆ. ಪ್ರೀತಿ-ಪ್ರೇಮ-ಪ್ರಣಯ ಎಲ್ಲವೂ ಒಂದೇ ಹಾಡಿನಲ್ಲಿ ಬಂದೋಗುವುದರಿಂದ, ಹಸ್ಬೆಂಡ್ ಅಂಡ್ ವೈಫ್ ಆಗಿ ಕಾಣಿಸಿಕೊಳ್ಳೋದಿಂದ ರೊಮ್ಯಾನ್ಸ್ ಸೀಕ್ವೆನ್ಸ್ ಇರಲೇಬೇಕು ಸೋ ಪಾತ್ರಕ್ಕೆ ನ್ಯಾಯ ಸಲ್ಲಿಸೋ ಸಲುವಾಗಿ ಗುಳಿಕೆನ್ನೆ ಚೆಲುವೆ ಹಾಟ್ ಸೀಕ್ವೆನ್ಸ್ ಒಪ್ಪಿಕೊಂಡು ಅಭಿನಯಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಲವ್‌ಸ್ಟೋರಿ ಚಿತ್ರವಾಗಿದ್ದು, ಶಂಕರ್ ಎಸ್. ರಾಜ್. ನಿರ್ದೇಶನದಲ್ಲಿ ಮೂಡಿರ‍್ತಿದೆ. ನಿರ್ದೇಶಕ ಶಶಾಂಕ್ ಕಥೆ-ಸಂಭಾಷಣೆ ಬರೆದಿದ್ದು, ಗುರುದೇಶ್ ಪಾಂಡೆಯವರು ಕ್ರಿಯೇಟೀವ್ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದಾರೆ ಮತ್ತು ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಹಾಡುಗಳಿಂದ ಬಜಾರ್‌ನಲ್ಲಿ ಸೌಂಡ್ ಮಾಡ್ತಿರೋ ಲವ್ ಯೂ ರಚ್ಚು ಸಿನಿಮಾ ಇನ್ನೇನು ಕೆಲವೇ ದಿನಗಳಲ್ಲಿ ಸಿನಿರಸಿಕರ ಮುಂದೆ ಬರಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆAಟ್ ಬ್ಯೂರೋ ಸಿನಿಲಹರಿ

Related Posts

error: Content is protected !!