ಬದುಕಿದ್ದ ಅಷ್ಟು ದಿನ ನಿಸ್ವಾರ್ಥ ಜೀವನ ನಡೆಸಿ, ಸಾವಲ್ಲೂ ಸಾರ್ಥಕತೆ ಮೆರೆದ ಜೀವ ಅಪ್ಪು ಅವರು. ಪವರ್ಸ್ಟಾರ್ ಆದರೂ ಕೂಡ ಸಿಂಪಲ್ಸ್ಟಾರ್ನಂತೆ ಬದುಕಿ ತೋರಿಸಿದ ಅಪ್ಪು, ಅಪ್ಪನಂತೆ ಹಾದಿಯಲ್ಲಿ ಸಾಗಿ ಸಾಧನೆ ಮಾಡಿ ಸಾವಲ್ಲೂ ಅಪ್ಪನಂತೆ ಸಾರ್ಥಕತೆಯನ್ನು ಮೆರೆದರು. ಹೌದು, ಅಪ್ಪಾಜಿಯ ಅಣತಿಯಂತೆ ಅಪ್ಪು ನಿಧನದ ನಂತರ ಕುಟುಂಬಸ್ಥರು ಪುನೀತ್ ಕಣ್ಣುಗಳನ್ನು ನಾರಾಯಣ್ ನೇತ್ರಾಲಯಕ್ಕೆ ದಾನ ಮಾಡಿದರು. ಶುಕ್ರವಾರ ಕಲೆಕ್ಟ್ ಮಾಡಿದ ಅಪ್ಪು ಕಣ್ಣುಗಳನ್ನು ಶನಿವಾರ ಸಂಜೆಯಷ್ಟರಲ್ಲಿ ನಾಲ್ಕು ಮಂದಿಗೆ ಜೋಡಣೆ ಮಾಡುವಲ್ಲಿ ನಾರಾಯಣ್ ನೇತ್ರಾಯಲದ ವೈದ್ಯರ ತಂಡ ಯಶಸ್ವಿಯಾಗಿದೆ. ಮಾತ್ರವಲ್ಲ ಒಬ್ಬ ವ್ಯಕ್ತಿಯ ಕಣ್ಣುಗಳನ್ನು ನಾಲ್ಕು ವ್ಯಕ್ತಿಗಳಿಗೆ ಜೋಡಿಸಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ.
ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಕಣ್ಣು ದಾನ ಮಾಡಿದರೆ ಇಬ್ಬರು ಅಂಧರಿಗೆ ಕಣ್ಣು ಜೋಡಣೆ ಮಾಡಬಹುದು. ಆದರೆ, ಇದೇ ಮೊದಲ ಭಾರಿಗೆ ಹೊಸ ಪ್ರಯತ್ನ ಮಾಡಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಮನೆ ಹುಡುಗನ ಕಣ್ಣುಗಳನ್ನು ನಾಲ್ವರು ಅಂಧರಿಗೆ ಅಳವಡಿಸಿದ್ದಾರೆ. ನಾರಾಯಣ್ ನೇತ್ರಾಲಯದ ಡಾಕ್ಟರ್ ರಿತೀಶ್, ಡಾಕ್ಟರ್ ಶರಣ್ ಡಾಕ್ಟರ್ ಪ್ರಾರ್ಥನಾ, ಡಾಕ್ಟರ್ ಯತೀಶ್ ಸೇರಿದಂತೆ ಒಟ್ಟು ಆರು ಜನ ವೈದ್ಯರ ತಂಡದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಆಪರೇಷನ್ ಸಕ್ಸಸ್ ಆಗಿದ್ದು, ನಾಲ್ಕು ಮಂದಿಯೂ ಆರೋಗ್ಯವಾಗಿದ್ದಾರೆ.
ಜೊತೆಗೆ ನಾಲ್ವರು ಅಂಧರಿಗೆ ಒಳ್ಳೆಯ ದೃಷ್ಟಿ ಬಂದಿದೆ. ಈ ಕುರಿತು ಇಂದು ಸುದ್ದಿಗೋಷ್ಟಿ ನಡೆಸಿದ ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ಭುಜಂಗ ಶೆಟ್ಟಿ ಅವರು ಪುನೀತ್ ಕಣ್ಣುಗಳಿಂದ ನಾಲ್ವರ ಬದುಕು ಬಂಗಾರವಾಗಿದೆ. ಇನ್ನಿಬ್ಬರ ಬಾಳಿಗೆ ಅಪ್ಪು ಕಣ್ಣುಗಳ ಬೆಳಕಾಗಲಿವೆ ಎಂಬ ಮಾಹಿತಿಯನ್ನ ಹೊರಹಾಕಿದ್ದಾರೆ.
ಈಗಾಗಲೇ ನಾಲ್ವರಿಗೆ ಕಣ್ಣು ಜೋಡಣೆ ಮಾಡಿದ್ದಾರೆ ಅಂತಾದ್ರಲ್ಲಿ ಮತ್ತಿಬ್ಬರಿಗೆ ಅದ್ಹೇಗೆ ಅಪ್ಪು ಕಣ್ಣುಗಳನ್ನು ಅಳವಡಿಕೆ ಮಾಡ್ತಾರೆ ಇಂತಹದ್ದೊಂದು ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ. ಈ ಕೂತೂಹಲದ ಪ್ರಶ್ನೆಗೆ ಉತ್ತರ ಡಾ. ಭುಜಂಗ ಶೆಟ್ಟಿಯವರು ಹೇಳಿದಂತೆ ನಿಮ್ಮ ಮುಂದೆ ಇಡಲಿದ್ದೇವೆ. ಕಣ್ಣಿನ ಸಮಸ್ಯೆ ಎಲ್ಲರಿಗೂ ಒಂದೇ ತೆರನಾಗಿ ಇರೋದಿಲ್ಲ. ಕಾರ್ನಿಯ ಸಮಸ್ಯೆ ಇರುವವರ ಪೈಕಿ ಕೆಲವರಿಗೆ ಕಣ್ಣಿನ ಫ್ರಂಟ್ ಪೋರ್ಷನ್ ಸಮಸ್ಯೆ ಇರುತ್ತೆ. ಕೆಲವರಿಗೆ ಕಣ್ಣಿನ ಬ್ಯಾಕ್ ಪೋರ್ಷನ್ ಪ್ರಾಬ್ಲಮ್ ಇರುತ್ತೆ. ಈ ರೀತಿಯ ಸಮಸ್ಯೆ ಇರುವ ನಾಲ್ವರಿಗೆ ಇದೀಗ ಅಪ್ಪು ಎರಡು ಕಣ್ಣುಗಳ ಫ್ರಂಟ್ ಅಂಡ್ ಬ್ಯಾಕ್ ಪೋರ್ಷನ್ ಜೋಡಣೆ ಮಾಡಿದ್ದಾರೆ.
ಉಳಿದಂತೆ ಪಾರದರ್ಶಕ ಪಟಲ ಅಂತ ಕರೆಸಿಕೊಳ್ಳುವ
ಕರಿಗುಡ್ಡೆ ಹಾಗೂ ಬಿಳಿಗುಡ್ಡೆ ಭಾಗವನ್ನು ಸಂಗ್ರಹಿಸಿ ಲ್ಯಾಬ್ರೇಟರಿಗೆ ಕಳುಹಿಸಿಕೊಟ್ಟಿದ್ದಾರಂತೆ. ಈ ಬಿಳಿಗುಡ್ಡೆ ಹಾಗೂ ಕರಿಗುಡ್ಡೆ ಜಂಕ್ಷನ್ನಲ್ಲಿ ಸ್ಟೆಮ್ಸೆಲ್ಸ್ ಅಂತ ಇರುತ್ತಂತೆ. ಈ ಸ್ಟೆಮ್ಸೆಲ್ಸ್ನ ಪಟಾಕಿ ಸಿಡಿಸಿಕೊಂಡು ಕಣ್ಣು ಸುಟ್ಟುಕೊಂಡವರಿಗೆ ಮತ್ತು ಕೆಮಿಕಲ್ ವಸ್ತುಗಳಿಂದ ಕಣ್ಣಿಗೇನಾದರೂ ಸಮಸ್ಯೆ ಮಾಡಿಕೊಂಡವರಿಗೆ ಅಳವಡಿಸಬಹುದಂತೆ.
ಅಪ್ಪು ಬಹುಮುಖ ಪ್ರತಿಭೆಯಾಗಿದ್ದರು ಅದಕ್ಕೆ ಅನುಗುಣವಾಗಿಯೇ ಆಪರೇಷನ್ ಮಾಡಿ ನಾಲ್ವರ ಬಾಳಲ್ಲಿ ಬೆಳಕು ಮೂಡಿಸಿದ್ದೇವೆ ಎನ್ನುತ್ತಾರೆ ನಾರಾಯಣ್ ನೇತ್ರಾಲಯದ ವೈದ್ಯರು.
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ