ಸಿಎಂ ಜನಮನಗೆದ್ದರು. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಸಕಲ ಸರ್ಕಾರಿ ಗೌರವಗಳೊಂದಿಗೆ ಭಾನುವಾರ ಭಾವುಕವಾಗಿ ಬಿಳ್ಕೊಟ್ಟ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ದೊಡ್ಮನೆಯ ಪುತ್ರ, ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ, ಅಭಿಮಾನಿಗಳ ಪ್ರೀತಿಯ ಅಪ್ಪು ಅವರ ನಿಧನ ಸುದ್ದಿ ಗೊತ್ತಾಗುತ್ತಿದ್ದಂತೆ ಶುಕ್ರವಾರ ವಿಕ್ರಂ ಆಸ್ಪತ್ರೆಗೆ ಸಿಎಂ ಬಸವರಾಜ ಬೊಮ್ಮಾಯಿ ದೌಡಾಯಿಸಿದ ಕ್ಷಣದಿಂದ ಭಾನುವಾರ ಕಂಠೀರವ ಸ್ಟುಡಿಯೋದಲ್ಲಿನಡೆದ ಪುನೀತ್ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನಗಳೆಲ್ಲವೂ ಯಾವುದೇ ಗೊಂದಲಕ್ಕೆ ಸಿಲುಕದಂತೆ ಯಶಸ್ವಿಯಾಗಿ ನಡೆದವು. ಇದಕ್ಕ ಕಾರಣ ಸಿಎಂ ಬಸವರಾಜ್ ಬೊಮ್ಮಾಯಿ.
ರಾಜ್ ಕುಟುಂಬದ ಮೇಲೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಅತೀವ ಗೌರವ.ಹಾಗೆಯೇ ನಟ ಪುನೀತ್ ರಾಜಕುಮಾರ್ ಅಂದ್ರೆ ಅತೀವ ಪ್ರೀತಿ. ಕಳೆದ ಕೆಲವು ದಿನಗಳ ಹಿಂದಷ್ಟೇ ಇಬ್ಬರು ಒಟ್ಟಿಗೆ ವೇದಿಕೆಹಂಚಿಕೊಂಡಿದ್ದಾಗ ಸಿಎಂ ಬಸವರಾಜ ಬೊಮ್ಮಾಯಿ, ನಟ ಪುನೀತ್ ಅವರ ಮೇಲಿನ ಪ್ರೀತಿ ಹಾಗೂರಾಜ್ ಕುಟುಂಬದ ಮೇಲಿರುವ ಗೌರವ ಭಾವನೆಗಳನ್ನು ಬಹಿರಂಗ ಪಡಿಸಿದ್ದರು. ಅಷ್ಟುಮಾತ್ರವಲ್ಲಪುನೀತ್ ಅಂದ್ರೆ ಯೂತ್ ಐಕಾನ್ ಅಂತ ಮುಕ್ತ ಕಂಠದಿಂದ ಬಣ್ಣಿಸಿದ್ದರು. ದುರಂತ ಅಂದ್ರೆ ಇದಾದ ಕೆಲವೇ ದಿನಗಳು ಕಳೆಯುತ್ತಿದ್ದಂತೆಯೇ ನಟ ಪುನೀತ್ ರಾಜಕುಮಾರ್, ಹೃದಯಘಾತದಿಂದ ನಿಧನರಾಗಿದ್ದು ಸಿಎಂ ಬಸವರಾಜ ಬೊಮ್ಮಾಯಿ ಅವರಲ್ಲೂ ಅತೀವ ದುಃಖ ತರಿಸಿತ್ತು.
ಶುಕ್ರವಾರ ಮಧ್ಯಾಹ್ನ ಪುನೀತ್ ರಾಜ್ಕುಮಾರ್ ಹೃದಯಾಘಾತದಿಂದ ನಿಧನರಾದ ಸುದ್ದಿ ಅಧಿಕೃತವಾಗುತ್ತಿದ್ದಂತೆ ತಕ್ಷಣವೇ ತಮ್ಮ ಸಂಪುಟದ ಸಹೋದ್ಯೋಗಿಗಳ ಜತೆ ಆಸ್ಪತ್ರೆಗೆ ದೌಡಾಯಿಸಿದವರು, ಉಪಚುನಾವಣೆ ಸೇರಿದಂತೆ ತಮ್ಮೆಲ್ಲ ಕೆಲಸಗಳನ್ನು ಬದಿಗೊತ್ತಿ ಪುನೀತ್ ರಾಜಕುಮಾರ್ ಅವರ ಕುಟುಂಬದವರ ದುಃಖದಲ್ಲಿ ಭಾಗಿಯಾದರು.ಹಾಗೆಯೇ ಪಾರ್ಥೀವ ಶರೀರದ ಸಾರ್ವಜನಿಕ ದರ್ಶನ ಹಾಗೂ ಅಂತ್ಯ ಸಂಸ್ಕಾರದ ವಿಧಿ ವಿಧಾನ ಗಳಕಡೆ ಗಮನ ಹರಿಸಿದರು.
ಬೆಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಿಸಲು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ಸೂದ್ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ಪಂತ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಲ್ಲ ಮುಖ್ಯಸ್ಥರಿಗೂ ಸೂಚನೆ ಕೊಟ್ಟರು. ಅಭಿಮಾನಿಗಳ ದರ್ಶನಕ್ಕಾಗಿ ಪಾರ್ಥಿವ ಶರೀರವನ್ನು ಕಂಠೀರವ ಕ್ರೀಡಾಂಗಣಕ್ಕೆ ಕರೆದೊಯ್ಯುವ ಮೊದಲೇ ಅಲ್ಲಿಯೂ ಕೂಡ ಭದ್ರತೆಯನ್ನು ಹೆಚ್ಚಿಸಲಾಯಿತು.
ಪ್ರತಿಕ್ಷಣವೂ ಯಾವುದೇ ಪ್ರಮುಖ ತೀರ್ಮಾನ ತೆಗೆದುಕೊಳ್ಳುವ ಮುನ್ನ ಡಾ.ರಾಜ್ಕುಮಾರ್ ಕುಟುಂಬದವರ ಜತೆ ಚರ್ಚಿಸಿಯೇ ಮುಂದಡಿ ಇಡುತ್ತಾ ಬಂದರು.. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವರಾದ ಆರ್.ಅಶೋಕ್, ಅಶ್ವತ್ಥ್ ನಾರಾಯಣ್, ಮುನಿರತ್ನ, ಚಿತ್ರ ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಸೇರಿದಂತೆ ಮತ್ತಿತರರ ಸಲಹೆಗಳನ್ನು ಪಡೆದರು. ವರನಟ ರಾಜಕುಮಾರ್ ಅವರ ಅಂತ್ಯ ಸಂಸ್ಕಾರದ ವೇಳೆ ಅದಂತಹ ಯಾವುದೇ ಗೊಂದಲ ಹಾಗೂ ಅಹಿತಕರ ಘಟನೆಗಳು ನಡೆಯಬಾ ರದು ಎನ್ನುವುದು ಸಿಎಂ ಕಾಳಜಿ ಆಗಿತ್ತು. ಯಾಕಂದ್ರೆ ರಾಜ್ ಕುಟುಂಬ ಅಂದ್ರೆ ಅಭಿಮಾನಿಗಳ ಸಂಖ್ಯೆದೊಡ್ಡದು. ಸ್ವಲ್ಪ ಹೆಚ್ಚು ಕಡಿಮೆಯಾದರೆ ಅಭಿಮಾನಿಗಳು ಸಿಟ್ಟಾಗುವುದು
ಗ್ಯಾರಂಟಿಎನ್ನುವುದು ಸಿಎಂ ಆತಂಕ.
ಹಾಗಾಗಿಯೇ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳು ಯಾವ ರೀತಿ ನಡೆಯಬೇಕು, ಹೇಗೆ, ಎಲ್ಲಿ, ಯಾವಾಗ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಲು ರಾಕ್ಲೈನ್ ವೆಂಕಟೇಶ್ ಆಪ್ತ ಹಾಗೂ ಸಚಿವ ಮುನಿರತ್ನ ಅವರನ್ನು ಮುಂದೆ ಬಿಟ್ಟರು. ಖುದ್ದು ಬೊಮ್ಮಾಯಿ ಅವರೇ ರಾಜ್ಕುಮಾರ್ ಪುತ್ರರಾದ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಪತ್ನಿ ಅಶ್ವಿನಿ ಹಾಗೂ ಅವರ ಕುಟುಂಬದ ಸದಸ್ಯರ ಜತೆ ಅಂತ್ಯ ಸಂಸ್ಕಾರ ನಡೆಸುವ ಕುರಿತಾಗಿ ಪ್ರತಿಯೊಬ್ಬರ ಅಭಿಪ್ರಾಯ ಪಡೆಯುತ್ತಿದ್ದರು.
ಅಮೆರಿಕದಲ್ಲಿದ್ದ ಪುನೀತ್ ರಾಜ್ಕುಮಾರ್ ಪುತ್ರಿ ಧೃತಿಯನ್ನು ಬೆಂಗಳೂರಿಗೆ ಕರೆತರಲು ಬೇಕಾದ ಪಾಸ್ ಪೋರ್ಟ್, ವೀಸಾ ಸೇರಿದಂತೆ ಭಾರತದ ವಿದೇಶಾಂಗ ಕಚೇರಿ ವಿಭಾಗದ ಅಕಾರಿಗಳನ್ನು ಸಂಪರ್ಕಿಸಿ ಕೂಡಲೇ ಹಿಂದಿರುಗಲು ಬೇಕಾದ ಸೌಲಭ್ಯಗಳನ್ನು ಕಲ್ಪಿಸಿಕೊಡಲು ವ್ಯವಸ್ಥೆ ಮಾಡಿದರು. ದೆಹಲಿಗೆ ಧೃತಿ ಆಗಮಿಸುತ್ತಿದ್ದಂತೆ ಅವರನ್ನು ಬೆಂಗಳೂರಿಗೆ ಕರೆತರಲು ವಿಶೇಷವಾದ ವಿಮಾನವನ್ನು ಸಿಎಂ ಕಲ್ಪಿಸಿಕೊಟ್ಟರು. ವಲಸೆ ವಿಭಾಗದ ಅಕಾರಿಗಳು ವಿಳಂಬ ಮಾಡಬಹುದೆಂಬ ಕಾರಣಕ್ಕಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧ್ಯಾ ಅವರನ್ನು ಸಂಪರ್ಕಿಸಿದರು.
ಅಲ್ಲದೆ, ಕರ್ನಾಟಕ ಭವನದಲ್ಲಿರುವ ಅಧಿಕಾರಿಗಳನ್ನು ವಿಮಾನ ನಿಲ್ದಾಣಕ್ಕೆ ತೆರಳುವಂತೆ ಸೂಚಿಸಿ ವಲಸೆ ವಿಭಾಗದ ಅಕಾರಿಗಳ ಜತೆ ಸಂಪರ್ಕ ಸಾಸಲು ಸೂಚಿಸಿದರು. ಶನಿವಾರವೇ ಪುನೀತ್ ರಾಜ್ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಬೇಕಾಗಿತ್ತು. ಆದರೆ, ಪುತ್ರಿಯೂ ಬಂದು ಅಂತಿಮ ದರ್ಶನ ಪಡೆಯಬೇಕೆಂದು ಕುಟುಂಬದವರು ಕೋರಿಕೊಂಡಿದ್ದರಿಂದ ಭಾನುವಾರಕ್ಕೆ ಮುಂದೂಡಲಾಯಿತು. ಹೀಗೆ ಪ್ರತೀ ಹಂತದಲ್ಲೂ ಪುನೀತ್ ರಾಜ್ಕುಮಾರ್ ಅವರ ಅಂತ್ಯ ಸಂಸ್ಕಾರವನ್ನು ಸಣ್ಣದೊಂದು ಅಹಿತಕರ ಘಟನೆ ನಡೆಯದೆ ಅಚ್ಚುಕಟ್ಟಾಗಿ ನೆರವೇರಿಸಲು ಬಸವರಾಜ ಬೊಮ್ಮಾಯಿ ಅವರು ತೆಗೆದುಕೊಂಡ ಕ್ರಮ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.
ಅದೆಲ್ಲಕ್ಕಿಂತ ಮುಖ್ಯವಾಗಿ ಶುಕ್ರವಾರದಿಂದ ಭಾನುವಾರದ ತನಕ ಸಿಎಂತಮ್ಮೆಲ್ಲ ಕೆಲಸವನ್ನು ಬದಿಗೊತ್ತಿ, ರಾಜ್ ಕುಟುಂಬದ ನೋವಿನಲ್ಲಿ ಭಾಗಿಯಾದರು. ಇದು ಸರ್ಕಾರದ ಕರ್ತವ್ಯವೇ ಆದರೂ,ಸಿಎಂಬಸವರಾಜ ಬೊಮ್ಮಾಯಿ ಅವರು ಪುನೀತ್ ಅವರ ಮೇಲಿಟ್ಟ ಪ್ರೀತಿಗೆ ಹಿಡಿದ ಕನ್ನಡಿ ಎನ್ನುವುದು ಅಷ್ಟೇ ಸತ್ಯ.ಅದರಲ್ಲೂ ಅಂತ್ಯಸಂಸ್ಕಾರದ ವೇಳೆ ಪುನೀತ್ ಹಣೆಗೆ ಮುತ್ತಿಟ್ಟು ಸಿಎಂ ನೋವು ತೋಡಿಕೊಂಡ ದೃಶ್ಯ ಎಲ್ಲರ ಮನಕಲುಕುವಂತೆಮಾಡಿತು. ಈ ಫೋಟೋವೈರಲ್ ಆಗುತ್ತಿದ್ದಂತೆ ಸಿಎಂ ಅವರ ಕಾರ್ಯಕ್ಕೆ ಸೋಷಲ್ ಮೀಡಿಯಾದಲ್ಲಿಮೆಚ್ಚುಗೆಯ ಮಹಾಪೂರವೇ ಹರಿದು ಬಂತು.
…