ನನ್ನ ನೆಚ್ಚಿನ ನಟನೇ ಇನ್ನಿಲ್ಲ ಅಂದ್ಮೇಲೆ, ನಾನೇಕೆ ಇರಲಿ ಅಂತ ಶನಿವಾರ ರಾತ್ರಿ ಆತ್ಮಹತ್ಯೆಗೆ ಶರಣಾದ ಯುವಕನ ಹೆಸರು ರಾಹುಲ್ ಬಾಬು ಗಾಡಿವಡ್ಡರ್. ಊರು ಅಥಣಿ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಕಾಲಿಕ ಸಾವು ಇಡೀ ರಾಜ್ಯಕ್ಕೆ ಬರಸಿಡಿಲಿನಂತೆ ಬಂದೆರೆಗಿದ ಬಹುದೊಡ್ಡ ಆಘಾತ. ಅದರಲ್ಲೂ ಅವರ ಅಪ್ಪಟ್ಟ ಅಭಿಮಾನಿಗಳಿಗೆ ಬಹುದೊಡ್ಡ ಮೈಂಡ್ ಸ್ಟ್ರೋಕ್. ಈಗಾಗಲೇ ಈ ಸುದ್ದಿಯ ಶಾಕ್ ನಿಂದ ರಾಜ್ಯದಲ್ಲಿ ಇಬ್ಬರು ಪವರ್ ಸ್ಟಾರ್ ಅಭಿಮಾನಿಗಳು ಮೃತಪಟ್ಟಿದ್ದಾರೆ. ಇದೀಗ ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮತ್ತೋರ್ವ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಸುದ್ದಿ ಬಂದಿದೆ. ಆತನ ಹೆಸರೇ ರಾಹುಲ್ ಬಾಬು ಗಾಡಿವಡ್ಡರ್. ಈತ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಅಥಣಿ ಪಟ್ಟಣದ ವಡ್ಡರ ಗಲ್ಲಿ ನಿವಾಸಿ. ಆತನಿಗೀಗ ವಯಸ್ಸು ೨೪. ಕಾಲೇಜು ವಿದ್ಯಾರ್ಥಿ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿ. ಇತ್ತೀಚೆಗೆ ತೆರೆ ಕಂಡ ಪುನೀತ್ ಅಭಿನಯದ ಯಾವುದೇ ಸಿನಿಮಾವನ್ನು ಆತ ನೋಡದೆ ಬಿಟ್ಟಿಲ್ಲ. ಪುನೀತ್ ರಾಜಕುಮಾರ್ ಅಂದ್ರೆ ಆತನಿಗೆ ಪ್ರಾಣ. ಅವರ ಯಾವುದೇ ಸಿನಿಮಾ ರಿಲೀಸ್ ಅಂದ್ರೆ ಸಾಕು, ಅಲ್ಲಿನ ಥಿಯೇಟರ್ ನಲ್ಲಿ ತನ್ನದೇ ಸ್ವಂತ ಖರ್ಚಿನಲ್ಲಿ ಪೋಸ್ಟರ್, ಕಟೌಟ್ ಹಾಕಿಸಿ, ಸ್ಟಾರ್ ಮೇಲಿನ ಅಭಿಮಾನ ಮರೆಯುತ್ತಾ ಬಂದಿದ ಹುಡುಗ. ಶುಕ್ರವಾರ ದಿಢೀರ್ ಅಂತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಕಾಲಿಕ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ದಿಗ್ಬ್ರಮೆಗೆ ಒಳಗಾಗಿದ್ದ. ಕೊನೆಗೆ ಸಂಜೆಯೇ ಸ್ನೇಹಿತರನ್ನೆಲ್ಲ ಸೇರಿಸಿ, ತನ್ನ ನೆಚ್ಚಿನ ನಟನ ಸಾವಿಗೆ ಸಂತಾಪ ಸೂಚಿಸಿ ಶದ್ರ್ದಾಂಜಲಿ ಸಲ್ಲಿಸಿದ್ದ.
ಅಲ್ಲಿಂದ ಸಂಜೆ ಸ್ನೇಹಿತರೆಲ್ಲ ಮನೆಗೆ ಹೋದ ಬಳಿಕ, ನನ್ನ ನೆಚ್ಚಿನ ನಟನೇ ಇನ್ನಿಲ್ಲ ಅಂದ್ಮೇಲೆ ನಾನೇಕೆ ಇರಲಿ ಅಂತ ಗೆಳೆಯರಿಗೆಲ್ಲ ಮೊಬೈಲ್ ಮೂಲಕ ಮೆಸೇಜ್ ರವಾನಿಸಿ, ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆಂದು ಹೇಳಲಾಗಿದೆ. ಈ ಕುರಿತು ಆತನ ಸ್ನೇಹಿತ ಅಥಣಿಯ ಜಗದೀಶ್ ಗೆಳೆಯನ ಅಗಲಿಕೆಗೆ ಅತೀವ ನೋವು ವ್ಯಕ್ತಪಡಿಸಿದ್ದು, ಯಾರಿಗೂ ಗೊತ್ತಾಗದ್ದಂತೆ ಈ ಅಚಾತುರ್ಯ ನಡೆದುಹೋಗಿದೆ ಎಂದು ಕಣ್ಣೇರಿಟ್ಟಿದ್ದಾರೆ. ʼ ರಾಹುಲ್ ತುಂಬಾ ಚುರುಕಿನ ಹುಡುಗ. ನಟ ಪುನೀತ್ ಅಂದ್ರೆ ಆತನಿಗೆ ಪಂಚ ಪ್ರಾಣ. ಅವರ ಸಿನಿಮಾ ರಿಲೀಸ್ ಆದ್ರೆ ಸಾಕು ಆತನಿಗೆ ಹಬ್ಬವೇ ಇದ್ದಂತೆ ಇರುತ್ತಿದ್ದ. ಆ ಸಿನಿಮಾ ಬೆಳಗಾವಿ, ಹುಬ್ಬಳಿ ಎಲ್ಲಿಯೇ ಸನಿಹ ಇದ್ದರೂ ಸರಿ ಅಲ್ಲಿಗೇ ಹೋಗಿ ನೋಡಿಕೊಂಡು ಬರುತ್ತಿದೆ. ಈಗ ಅವರ ಸಾವಿನ ಸುದ್ದಿ ಕೇಳಇ ಆತನೂ ಸಾವಿಗೆ ಶರಣಾಗಿರುವುದು ನಮಗೆಲ್ಲ ಅತೀವ ದು:ಖ ತಂದಿದೆ ಎಂದು ಜಗದೀಶ್ ಹೇಳಿಕೊಂಡಿದ್ದಾರೆ.
- ಎಂಟರ್ ಟೈನ್ ಮೆಂಟ್ ಬ್ಯೂರೋ ಸಿನಿಲಹರಿ