ಭಜರಂಗಿಯ ಅಖಾಡದಲ್ಲಿ ಎಂತೆಂತಹ ನಟರಾಕ್ಷಸರಿದ್ದಾರೆ ಎಂಬುದು ನಿಮಗೀಗಾಗಲೇ ಗೊತ್ತಿದೆ. ಸೆಂಚುರಿಸ್ಟಾರ್ ಶಿವಣ್ಣ ಸೇರಿದಂತೆ ಪ್ರತಿಯೊಬ್ಬ ಕಲಾವಿದರು ಕೂಡ ನಟನೆಯಲ್ಲಿ ಭೀಕರ ಹಾಗೂ ರಣಭಯಂಕರ ಎನ್ನುವುದು ಪೋಸ್ಟರ್‌ನಿಂದಲೇ ಗೊತ್ತಾಗ್ತಿದೆ. ಒಬ್ಬೊಬ್ಬರ ಲುಕ್-ಗೆಟಪ್ ನೋಡುಗರನ್ನು ದಿಗ್‌ದಿಗ್ಭ್ರಾಂತರನ್ನಾಗಿ ಮಾಡ್ತಿದೆ. ಲೋಕಿ ಹಾಗೂ ಚಿಣಿಮಿಣಿಕಿ ಕ್ಯಾರೆಕ್ಟರ್ ದಂಗುಬಡಿಸಿರುವ ಬೆನ್ನಲ್ಲೇ ಬಿಡುಗಡೆಗೊಂಡಿರುವ `ಆರಕ ದಿ ಡೆಮಾನ್’ ಪಾತ್ರ ಸಿನಿಪ್ರೇಮಿಗಳನ್ನು ಬೆಚ್ಚಿಬೀಳಿಸಿ ಮೈ ಬೆವರಿಳಿಸ್ತಿದೆ
ಸಿನಿದುನಿಯಾದಲ್ಲಿ ಭಜರಂಗಿ'ಯ ಹವಾ ಜೋರಾಗಿದೆ. ದೊಡ್ಮನೆ ಭಕ್ತರು ಮಾತ್ರವಲ್ಲ ಸಕಲ ಸಿನಿಮಾ ಪ್ರೇಮಿಗಳ ಬಳಗ ಬೆಳ್ಳಿತೆರೆಗೆ ಭಜರಂಗಿಯನ್ನು ಸ್ವಾಗತ ಮಾಡಿಕೊಳ್ಳಲಿಕ್ಕೆ ಒಂಟಿಕಾಲಿನಲ್ಲಿ ನಿಂತು ಕಾಯ್ತಿದ್ದಾರೆ. ಭಜರಂಗಿಯ ಅವತಾರವೆತ್ತಿ ಧಗಧಗಿಸೋ ಕರುನಾಡ ಚಕ್ರವರ್ತಿಯನ್ನು ತಲೆಮೇಲೆ ಹೊತ್ತು ಮೆರೆಸೋದಕ್ಕೆ ಉತ್ಸುಕರಾಗಿದ್ದಾರೆ. ಬಿಗ್‌ಸ್ಕ್ರೀನ್ ಮೇಲೆ ಭಜರಂಗಿಯ ಅಬ್ಬರ -ಆರ್ಭಟ ಹೇಗಿರಬಹುದು ಅಂತ ಲೆಕ್ಕಚ್ಚಾರ ಹಾಕ್ತಿದ್ದಾರೆ. ಇಂತಹ ಹೊತ್ತಲ್ಲಿ
ಆರಕ ದಿ ಡೆಮಾನ್’ ಕ್ಯಾರೆಕ್ಟರ್ ರಿವೀಲ್ ಆಗಿದೆ. ಭಜರಂಗಿ-2 ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಆರಕ ದಿ ಡೆಮಾನ್' ಭಜರಂಗಿ-2 ಚಿತ್ರದ ಮತ್ತೊಂದು ಪವರ್‌ಫುಲ್ ಕ್ಯಾರೆಕ್ಟರ್. ಪಾತ್ರದ ಹೆಸರೇ ಹೇಳುವಂತೆ ಇದೊಂದು ಭೀಕರ ಹಾಗೂ ರಣಭಯಂಕರ ಪಾತ್ರ. ಚೆಲುವರಾಜ್ ಎನ್ನುವ ಪ್ರತಿಭೆ ಈ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿರುವ ಹೊತ್ತಲ್ಲಿ ಭಜರಂಗಿ ಸಾರಥಿ
ʼಆರಕ ದಿ ಡೆಮಾನ್’ ಕ್ಯಾರೆಕ್ಟರ್‌ನ ರಿವೀಲ್ ಮಾಡಿದ್ದಾರೆ. ಹಣೆ-ಎದೆ ಹಾಗೂ ಕಟ್ಟುಮಸ್ತಾದ ತೋಳಿನ ಮೇಲಿರುವ ಟ್ಯಾಟೂ, ಡಿಫರೆಂಟ್ ಹೇರ್‌ಸ್ಟೈಲ್, ಚುಚ್ಚೆ ಬಿಡ್ತೀನಿ ಅಂತ ಎಗರೆಗರಿ ಹೊಡೆಯೋ ಓಟ ಹಾಗೂ ಎದೆಭಾಗ ಸೀಳುವಂತಹ ನೋಟ ಭಯಾನಕವಾಗಿದೆ. ಗಟ್ಟಿಗುಂಡಿಗೆಯನ್ನು ಅಲುಗಾಡಿಸೋ ತಾಕತ್ತಿರೋ ಚೆಲುವ `ಭಜರಂಗಿ-2′ ಬಿಡುಗಡೆಯಾದ್ಮೇಲೆ ನಟರಾಕ್ಷಸ ಪಟ್ಟಕ್ಕೇರಿದ್ರೂ ಏರಬಹುದು.
ಯಾರೂ ಈ ಚೆಲುವ ರಾಜ್? ಈ ಕಲಾವಿದನ ಹಿನ್ನಲೆ ಏನು? ಈ ಹಿಂದೆ ಯಾವುದಾದರೂ ಸಿನಿಮಾ ಮಾಡಿದ್ರಾ? ಬೆಳ್ಳಿತೆರೆ ಮೇಲೆ ಧಗಧಗಿಸಿದ್ದರಾ? ಪ್ರೇಕ್ಷಕರಿಂದ ಸಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರಾ? ಈ ಕೂತೂಹಲದ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಚೆಲುವರಾಜ್ ನಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಈಗಷ್ಟೇ ಭಜರಂಗಿ ಟೀಮ್ `ಆರಕ ದಿ ಡೆಮಾನ್’ ಪಾತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದೆ. ಈ ಮೂಲಕ ಚೆಲುವರಾಜ್ ಸೋಷಿಯಲ್ ಮೀಡಿಯಾದಲ್ಲಿ ಮೆರವಣಿಗೆ ಹೊರಟಿದ್ದಾರೆ. ಸಿನಿಪ್ರೇಕ್ಷಕರ ಕಣ್ಣಿಗೆ ಬಿದ್ದು ಕೂತೂಹಲ ಕೆರಳಿಸಿದ್ದಾರೆ. ಯಾರೀ ಈ ಪಾತ್ರಧಾರಿ? ನಿರ್ದೇಶಕ ಹರ್ಷ ಅವರು ಈ ಕಲಾವಿದನನ್ನು ಅದೆಲ್ಲಿಂದ ಹುಡುಕಿ ತಂದರು? ಅದ್ಹೇಗೆ ಭಜರಂಗಿ-2 ಪಾತ್ರಕ್ಕೆ ಆಯ್ಕೆಯಾದರು? ರಣರಾಕ್ಷಸ ಪಾತ್ರಕ್ಕೆ ಚೆಲುವರಾಜ್ ಏನೆಲ್ಲಾ ಕಸರತ್ತು ನಡೆಸಿದರು? ಹೇಗೆಲ್ಲಾ ತಯ್ಯಾರಿ ಮಾಡಿಕೊಂಡಿದ್ರು? ಹೀಗೆ ಪ್ರಶ್ನೆ ಮೇಲೊಂದು ಪ್ರಶ್ನೆ ಉದ್ಭವವಾಗುತ್ತಿದೆ. ಇದಕ್ಕೆಲ್ಲಾ ಉತ್ತರ ರಿಲೀಸ್‌ಗೂ ಮೊದಲೇ ನಡೆಯೋ ಪ್ರಿರಿಲೀಸ್ ಇವೆಂಟ್‌ನಲ್ಲಿ ಸಿಗಲಿದೆ. ಅನಂತರ ನಿಮ್ಮ ಮುಂದೆ ಬಿಚ್ಚಿಡಲಿದ್ದೇವೆ.
ಅಂದ್ಹಾಗೇ, ಭಜರಂಗಿ-2 ಚಿತ್ರದಲ್ಲಿ ಬರುವ ಒಂದೊಂದು ಕ್ಯಾರೆಕ್ಟರ್ ಕೂಡ ಪವರ್‌ಫುಲ್ಲೇ. ಕರುನಾಡ ಚಕ್ರವರ್ತಿ ಶಿವಣ್ಣನ ಜೊತೆಯಾಗಿ ನಿಲ್ಲುವ ಪ್ರತಿ ಪಾತ್ರಧಾರಿಯ ಕ್ಯಾರೆಕ್ಟರ್‌ಗೆ ಅದರದ್ದೇ ಆದ ತೂಕವಿದೆಯಂತೆ. ಈ ಬಗ್ಗೆ ಹಿಂದೊಮ್ಮೆ ಸಿನಿಲಹರಿ ಜೊತೆ ಮಾತನಾಡುತ್ತಾ ನಿರ್ದೇಶಕ ಹರ್ಷ ಅವರು ಒಂದಿಷ್ಟು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದರು. ಕಥೆ ಬರೆಯೋಕೆ ಕುಳಿತಾಗಲೇ ಪ್ರತಿ ಪಾತ್ರವನ್ನು ಡಿಸೈನ್ ಮಾಡಿದ್ದೆ. ಈ ಪಾತ್ರ ಹೀಗೆ ಇರಬೇಕು, ಈ ಪಾತ್ರ ತೆರೆಮೇಲೆ ಹೀಗೆ ಕಾಣಬೇಕು ಅಂತ ಸ್ಕೆಚ್ ಮಾಡಿಕೊಂಡಿದ್ದೆ ಅದರಂತೆಯೇ ಔಟ್‌ಫುಟ್ ಬಂದಿದೆ. ತನ್ನ ಕಲ್ಪನೆಯ ಕ್ಯಾರೆಕ್ಟರ್‌ಗೆ ಜೀವತುಂಬಲಿಕ್ಕೆ ಪಾತ್ರಧಾರಿಗಳು ಬೆವರು ಬಸಿದಿದ್ದಾರೆ. ಕಲಾನಿರ್ದೇಶಕ ರವಿ ಹಾಗೂ ಅವರ ತಂಡ, ಮೇಕಪ್ ಮ್ಯಾನ್ ಪ್ರಕಾಶ್, ಕಾಸ್ಟ್ಯೂಮ್ ಡಿಸೈನರ್‌ಗಳಾದ ಯೋಗಿ ಅಂಡ್ ಗಣೇಶ್ ಶ್ರಮವಹಿಸಿ ದುಡಿದಿದ್ದಾರೆ. ಒಬ್ಬೊಬ್ಬ ಕಲಾವಿದರಿಗೆ ಮೇಕಪ್ ಹಚ್ಚಲಿಕ್ಕೆ ಮೂರು ಮೂರು ಗಂಟೆ ಸಮಯ ಹಿಡಿದರೂ ನಿರಾಯಾಸವಾಗಿ ಕೆಲಸ ಮಾಡಿದ್ದಾರೆ. ಇವತ್ತು, ಇಡೀ ಸಿನಿಮಾ ಪ್ರೇಕ್ಷಕ ಕುಲ `ಭಜರಂಗಿ-2′ ಪಾತ್ರಧಾರಿಗಳ ಮೊದಲ ಲುಕ್-ಗೆಟಪ್‌ನ ನೋಡಿ ಆಶ್ಚರ್ಯಚಕಿತರಾಗಿದ್ದಾರೆ ಅಂದರೆ ಅದಕ್ಕೆ ಇವರೆಲ್ಲರೂ ಕೂಡ ಕಾರಣಿಭೂತರಾಗುತ್ತಾರೆ.
ಒಟ್ನಲ್ಲಿ ಭಜರಂಗಿ'ಯ ಹೊಸ ಹೊಸ ಪಾತ್ರಗಳನ್ನು ಸೃಷ್ಟಿ ಮಾಡಿದ್ದಾರೆ. ನಿರ್ದೇಶಕ ಕಲ್ಪನೆಯ ಕನಸಿನ ಕೂಸಿಗೆ ಪಾತ್ರಧಾರಿಗಳು ಜೀವತುಂಬಿದ್ದಾರೆ. ಹೀಗೆ ಜೀವ ಪಡೆದುಕೊಂಡಿರುವ ಪಾತ್ರ, ಬೆಳ್ಳಿತೆರೆಯ ಮಡಿಲು ಸೇರಿ ಪ್ರೇಕ್ಷಕರಿಂದ ಲಾಲಿ ಆಡಿಸಿಕೊಳ್ಳುವುದಕ್ಕೆ ಮುಹೂರ್ತ ಫಿಕ್ಸಾಗಿದೆ. ಇದೇ ಅಕ್ಟೋಬರ್ 29 ರಂದು
ಭಜರಂಗಿ-2′ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಅದಕ್ಕೂ ಮುನ್ನ ಅಂದರೆ ಅಕ್ಟೋಬರ್ 20ರಂದು ಟ್ರೈಲರ್ ಹೊರಬೀಳಲಿದೆ. ಈಗಾಗಲೇ ಟೀಸರ್‌ನಲ್ಲಿ ಭಜರಂಗಿ ಶಿವಣ್ಣನ ಜೊತೆಗೆ ಖಳನಾಯಕ ಲೋಕಿ ವಿಜೃಂಭಿಸಿದ್ದಾರೆ. ಹಿರಿಯ ನಟಿ ಶ್ರುತಿ ಕೈಯಲ್ಲಿ ಸಿಗಾರ್ ಹಿಡಿದು ನಶೆಯೇರಿಸಿದ್ದಾರೆ.
ಚಿಣಿಮಿಣಿಕಿ ಪಾತ್ರದಲ್ಲಿ ಜಾಕಿ ಭಾವನ ಬೆರಗುಗೊಳಿಸಿದ್ದಾರೆ. ಪ್ರಸನ್ನ ಕಣ್ಣೋಟದಲ್ಲೇ ಕೊಂದರೆ, ಚೆಲುವರಾಜ್ ಚಿತ್ರಪ್ರೇಮಿಗಳನ್ನು ಕುಂತಲ್ಲೇ ಬೆವರುವಂತೆ ಮಾಡಿದ್ದಾರೆ. ಕಾಮಿಡಿ ಖಿಲಾಡಿ ಶಿವರಾಜ್ ಕೆ. ಆರ್ ಪೇಟೆ ಕಮಾಲ್ ಮಾಡೋದಕ್ಕೆ ಸಜ್ಜಾಗಿದ್ದಾರೆ. ಅದ್ದೂರಿ ತಾರಾಬಳಗಕ್ಕೆ ಕೋಟಿ ಕೋಟಿ ಸುರಿದು `ಭಜರಂಗಿ-2′ ನಿರ್ಮಿಸಿರುವ ಅನ್ನದಾತರಾದ ಜಯ್ಯಣ್ಣ ಹಾಗೂ ಭೋಗೇಂದ್ರ ಅವರು ಹೊರರಾಜ್ಯದ ಮಂದಿ ಬೆಚ್ಚುವಂತೆ ಸಿನಿಮಾ ಬಿಡುಗಡೆ ಮಾಡೋದಕ್ಕೆ ಮುಂದಾಗಿದ್ದಾರೆ. ಅವರ ಇಚ್ಛೆಯಂತೆ ಎಲ್ಲವೂ ಸಾಗಲಿ ಬೆಳ್ಳಿಪರದೆಯ ಮೇಲೆ ಭಜರಂಗಿ ಧಗಧಗಿಸಲಿ, ಪ್ರೇಕ್ಷಕರ ಮನಸ್ಸು ಗೆದ್ದು ಬಾಕ್ಸ್ಆಫೀಸ್ ಧೂಳೆಬ್ಬಿಸಲಿ ಅಲ್ಲವೇ.
ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ