ಇತಿಹಾಸ ಬರೆಯೋದು ಅಂದರೆ ಹಿಂದ್ಯಾರೋ ಮಹಾ ಪುರುಷರು ಬರೆದಿರುವ ಇತಿಹಾಸವನ್ನು ಬ್ರೇಕ್ ಮಾಡಿ ಬೀಗೋದಲ್ಲ. ಹಿಂದೆಂದೂ ಬೇರ‍್ಯಾರು ಕೆತ್ತಿರದ ಇತಿಹಾಸಕ್ಕೆ ಸಾಕ್ಷಿಯಾಗೋದು ನಯಾ ಇತಿಹಾಸ. ಇಂತಹದ್ದೊಂದು ಹಿಸ್ಟ್ರಿಯ ಸೃಷ್ಟಿಗೆ ಕನ್ನಡದ ಹೆಮ್ಮೆಯ ಲಹರಿ ಮ್ಯೂಸಿಕ್ ಸಂಸ್ಥೆ ಕಾರಣವಾಗಿದೆ. ಇಡೀ ಭಾರತದಲ್ಲಿ ಇಲ್ಲಿವರೆಗೂ ಯಾರೂ ಕೆತ್ತದ ಹಿಸ್ಟ್ರಿಯನ್ನು ಕೆತ್ತಿ, ಕನ್ನಡಿಗರು ಎದೆಯುಬ್ಬಿಸುವಂತೆ ಮಾಡಿದೆ. ಹಾಗಾದ್ರೆ ಮತ್ಯಾಕ್ ತಡ `ಲಹರಿ’ ಕಂಪೆನಿಯ ನಯಾ ಇತಿಹಾಸ ನಿಮ್ಮ ಮುಂದೆ ನೋಡಿ
ಕಳೆದ ನಾಲ್ಕುವರೆ ದಶಕಗಳ ಸಂಗೀತ ಸೇವೆಯಲ್ಲಿರುವ ಈ ಲಹರಿ ಸಂಸ್ಥೆ, ಕರುನಾಡಿನ ಆರೂವರೆ ಕೋಟಿ ಕನ್ನಡಿಗರ ನಾಡಿಮಿಡಿತ. ಕನ್ನಡ ನಾಡು-ನುಡಿ-ನೆಲ-ಜಲ ಹೇಗೆ ಕನ್ನಡಿಗರ ಪ್ರಾಣವೋ, ಹಾಗೆಯೇ ಲಹರಿ' ಮ್ಯೂಸಿಕ್ ಸಂಸ್ಥೆ ಕನ್ನಡಿಗರ ಉಸಿರು ಜೊತೆಗೆ ಹೃದಯಕ್ಕೆ ಹತ್ತಿರವಾಗಿರುವ, ಭಾವನೆಗಳೊಟ್ಟಿಗೆ ಬೆಸೆದುಕೊಂಡಿರುವ ಆಡಿಯೋ ಸಂಸ್ಥೆ. ಅಂದ್ಹಾಗೇ, ಈ ಸಂಸ್ಥೆ ಇವತ್ತು ಇಡೀ ಜಗತ್ತು ಹಿಂತಿರುಗಿ ನೋಡುವಂತೆ ಬೆಳೆದಿದೆ. ಇಂತಹ ಅತ್ಯದ್ಬುತ- ಅಮೋಘ-ಅವಿಸ್ಮರಣೀಯ ಸಾಧನೆಗೆ ಕರುನಾಡಿನ ಆರೂವರೆ ಕೋಟಿಯ ಜನತೆಯ ಪ್ರೀತಿ-ಪ್ರೋತ್ಸಾಹ-ಆಶೀರ್ವಾದ ಮತ್ತು ಹಾರೈಕೆಯೇ ಕಾರಣ ಅಂತ ಹೆಮ್ಮೆಯಿಂದ ಹೇಳಿಕೊಳ್ತಾರೆ
ಲಹರಿ’ ಸಂಸ್ಥೆಯ ಸಂಸ್ಥಾಪಕರಾದ ಲಹರಿ ವೇಲು ಮತ್ತು ಅವರ ಸಹೋದರ ಮನೋಹರ ನಾಯ್ಡು.
ಲಹರಿ' ದಕ್ಷಿಣ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಮಾಡಿರುವಂತಹ ಸಂಗೀತ ಸಂಸ್ಥೆ. ಸಿನಿಮಾ ಸಂಗೀತ ಮಾತ್ರವಲ್ಲದೇ ಭಾವಗೀತೆ-ಜಾನಪದಗೀತೆಗಳ ಆಡಿಯೋದ ಮೂಲಕ ಮ್ಯೂಸಿಕ್ ಲೋಕದಲ್ಲಿ ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದೆ.
ಲಹರಿ’ ಮ್ಯೂಸಿಕ್ ಕನ್ನಡಿಗರನ್ನು ಮಾತ್ರವಲ್ಲ ಜಗತ್ತಿನಾದ್ಯಂತ ಕೋಟಿ ಕೋಟಿ ಮಂದಿಯ ಹೃದಯ ತಲುಪಿರುವುದು ಒಂದು ರೀತಿಯ ಮೈಲುಗಲ್ಲೇ ಸರೀ. ಇತ್ತೀಚೆಗಷ್ಟೇ, ಲಹರಿ ಮುಡಿಗೆ ಯೂಟ್ಯೂಬ್ ಲೋಕ ವಜ್ರದ ಕಿರೀಟವನ್ನೇ ತೊಡಿಸಿ ಸಂಭ್ರಮಿಸಿತ್ತು. ಒಂದು ಕೋಟಿ 18 ಲಕ್ಷ ಚಂದದಾರರನ್ನು ಸಂಪಾದಿಸುವ ಮೂಲಕ ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್' ಹೊಸ ದಾಖಲೆಯನ್ನು ಬರೆದಿತ್ತು. ಇದೀಗ ಮಗದೊಂದು ಮೈಲ್‌ಸ್ಟೋನ್‌ಗೆ
ಲಹರಿ ಯೂಟ್ಯೂಬ್ ಲೋಕ’ ಕಾರಣವಾಗಿದೆ.
ಲಹರಿ ಮ್ಯೂಸಿಕ್ ಯೂಟ್ಯೂಬ್ ಚಾನೆಲ್' ಜೊತೆಗೆ
ಲಹರಿ ಭಾವಗೀತೆಗಳು ಅಂಡ್ ಫೋಕ್’ ಯೂಟ್ಯೂಬ್ ಚಾನೆಲ್ ಕೂಡ ನಡೆಸುತ್ತಿದ್ದಾರೆ. ಚಿತ್ರಗೀತೆಗಳಿಗೆ ಸೀಮಿತವಾಗದೇ ಕನ್ನಡದ ಭಾವಗೀತೆಗಳು ಹಾಗೂ ಜಾನಪದ ಗೀತೆಗಳನ್ನು ಜನಮನಕ್ಕೆ ತಲುಪಿಸಿ ಕನ್ನಡದ ಕಲೆ ಮತ್ತು ಸಂಗೀತವನ್ನು ಉಳಿಸಿಕೊಂಡು ಹಾಗೂ ಬೆಳೆಸಿಕೊಂಡು ಹೋಗುವಂತಹ ಕೆಲಸವನ್ನು ಲಹರಿ' ಆಡಿಯೋ ಕಂಪೆನಿ ಮಾಡ್ತಿದೆ.
ಕನ್ನಡದ ಹಿರಿಮೆ ಹಾಗೂ ಗರಿಮೆಯನ್ನು ಹೆಚ್ಚಾಗುವಂತೆ ಮಾಡ್ತಿರುವ ಲಹರಿ ಸಂಸ್ಥೆಯ ಈ ಕಾರ್ಯಕ್ಕೆ ದೇಶಿ ಹಾಗೂ ವಿದೇಶಿ ಕನ್ನಡಿಗರು ಕೂಡ ಸಪೋರ್ಟ್ ಮಾಡ್ತಿದ್ದಾರೆ.
ಲಹರಿ ಭಾವಗೀತೆಗಳು ಅಂಡ್ ಫೋಕ್’ ಯೂಟ್ಯೂಬ್ ಚಾನೆಲ್‌ಗೆ ವಿಸಿಟ್ ಮಾಡಿ ಹಾಡುಗಳನ್ನು ಕೇಳೋದಲ್ಲದೇ ಸಬ್‌ಸ್ಕ್ರೈಬ್ ಕೂಡ ಮಾಡ್ತಿದ್ದಾರೆ. ಹೀಗಾಗಿಯೇ, ಚಂದದಾರರ ಸಂಖ್ಯೆ ಹೆಚ್ಚಾಗ್ತಿದೆ, ಇಲ್ಲಿಗೆ ೧೦ ಲಕ್ಷ ಜನ ಸಬ್‌ಸ್ಕ್ರೈಬ್ ಮಾಡಿದ್ದಾರೆ. ಯೂಟ್ಯೂಬ್ ಕಡೆಯಿಂದ ಚಿನ್ನದ ಹಾರ ಬರುವಂತೆ ಮಾಡಿದ್ದಾರೆ.
ಎಲ್ಲರಿಗೂ ನಾವು ಚಿರಋಣಿ
ಹೌದು, ಲಹರಿ ಭಾವಗೀತೆಗಳು ಅಂಡ್ ಫೋಕ್' ಯೂಟ್ಯೂಬ್ ಚಾನೆಲ್‌ಗೆ 10 ಲಕ್ಷ ಜನ ಸಬ್‌ಸ್ಕ್ರೈಬರ್ಸ್ ಆಗಿರುವ ಹಿನ್ನಲೆಯಲ್ಲಿ ಯೂಟ್ಯೂಬ್ ಕಡೆಯಿಂದ ಚಿನ್ನದ ಕಿರೀಟ ಸಿಗುತ್ತಿದೆ. ಕನ್ನಡ ರಾಜ್ಯೋತ್ಸವದಂದು ಚಿನ್ನದ ಅವಾರ್ಡ್ ಕೊಡಲಿಕ್ಕೆ ಯೂಟ್ಯೂಬ್ ಲೋಕ ಕೂಡ ಸಕಲ ತಯ್ಯಾರಿ ಮಾಡಿಕೊಂಡಿದೆ. ಈ ಖುಷಿಯ ಸಂಗತಿಯ ಬಗ್ಗೆ
ಸಿನಿಲಹರಿ’ ಜೊತೆ ಮಾಹಿತಿ ಹಂಚಿಕೊಂಡ ಲಹರಿ' ಸಂಸ್ಥೆಯ ಮಾಲೀಕರಾದ ವೇಲು ಅವರು, ಯೂಟ್ಯೂಬ್ ಕಡೆಯಿಂದ ಚಿನ್ನದ ಅವಾರ್ಡ್ ಸಿಕ್ತಿರುವುದು ಕನ್ನಡಿಗರಿಂದ, ಹೀಗಾಗಿ ನಾವು ಅದನ್ನು
ಕರ್ನಾಟಕದ ಹೆಮ್ಮೆಯ ಪ್ರಶಸ್ತಿ’ ಅಂತ ಕರೆಯಲಿಕ್ಕೆ ಇಷ್ಟಪಡುತ್ತೇವೆ ಎಂದರು.
45 ವರ್ಷಗಳ ಪರಿಶ್ರಮಕ್ಕೆ ಕೊನೆಗೂ ಸಾರ್ಥಕತೆ ಸಿಗ್ತು. ಈ ಸಂದರ್ಭದಲ್ಲಿ, ಕುವೆಂಪು, ದ.ರಾ ಬೇಂದ್ರೆ, ನಿಸಾರ್ ಅಹಮ್ಮದ್, ದಿವಂಗತ ಕಾಳಿಂಗರಾಯರು, ದಿವಂಗತ ಅನಂತ್‌ಸ್ವಾಮಿಯವರು, ದಿವಂಗತ ಸಿ ಅಶ್ವತ್ಥ್, ರತ್ನಮಾಲ ಪ್ರಕಾಶ್, ಬಿ.ಕೆ ಸುಮಿತ್ರ, ಬಿ, ಆರ್ ಛಾಯ, ಎಂ.ಡಿ ಪಲ್ಲವಿ, ಅರ್ಚನ ಉಡುಪ, ನರಸಿಂಹ ನಾಯಕ್, ಯಶ್ವಂತ್ ಹಳಿಬಂಡಿ, ಅಬ್ಬಗೆರೆ ತಿಮ್ಮರಾಜು , ಪಿಚ್ಚಳ್ಳಿ ಶ್ರೀನಿವಾಸ್, ಮಂಜುಳ ಗುರುರಾಜ್, ಬಿಕೆ ಸುಮಿತ್ರ, ಗುರುರಾಜ್ ಹೊಸಕೋಟೆ, ಬಿ.ವಿ ಶ್ರೀನಿವಾಸ್ ಸೇರಿದಂತೆ ಕನ್ನಡಕ್ಕಾಗಿ ಶ್ರಮಿಸಿದ ಎಲ್ಲಾ ಕವಿಗಳು-ಕಾದಂಬರಿಕಾರರು-ಸಾಹಿತಿಗಳು-ಸಂಗೀತ ನಿರ್ದೇಶಕರು-ಗಾಯಕ-ಗಾಯಕಿಯರು ಎಲ್ಲರನ್ನೂ ನೆನೆಯುತ್ತೇವೆ, ಚಿರಋಣಿಯಾಗಿರುತ್ತೇವೆ ಎಂದರು.
ಇದು ಭಾರತದಲ್ಲೇ ದಾಖಲೆ!
ಅಚ್ಚರಿ ಅಂದರೆ, ಕನ್ನಡದ ಭಾವಗೀತೆ ಮತ್ತು ಜಾನಪದ ಗೀತೆಗಳ ಇತಿಹಾಸದಲ್ಲಿ ಯೂಟ್ಯೂಬ್‌ಗೆ 10 ಲಕ್ಷ ಸಬ್‌ಸ್ಕ್ರೈಬ್ ಆಗಿರುವುದು ಇಡೀ ಭಾರತದ ದೇಶದಲ್ಲೇ ಇದೇ ಮೊದಲು. ಪ್ರಾದೇಶಿಕ ಭಾಷೆಯಲ್ಲಿ ಈ ತರಹದ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ಯಾವ ಯೂಟ್ಯೂಬ್‌ಗೂ ಕೂಡ ೧೦ ಲಕ್ಷ ಮಂದಿ ಚಂದದಾರರಿಲ್ಲ. ಆದರೆ, ನಮ್ಮ ಕನ್ನಡ ಭಾಷೆಯ ಜಾನಪದ ಹಾಗೂ ಭಾವಗೀತೆಯನ್ನು ಪ್ರಸಾರ ಮಾಡುವ ಲಹರಿ' ಯೂಟ್ಯೂಬ್‌ಗೆ 10 ಲಕ್ಷ ಮಂದಿ ಸಬ್‌ಸ್ಕ್ರೈಬ್ ಆಗಿದ್ದಾರೆ. ಅಂದ್ಹಾಗೇ ಇದು ರಾತ್ರಿ ಕಳೆದು ಬೆಳಗಾಗುವುದರೊಳಗೆ ಆದಂತಹ ಸಾಧನೆ ಅಲ್ಲ. ಯೂಟ್ಯೂಬ್ ಲೋಕಕ್ಕಾಗಿ
ಲಹರಿ’ ತಂಡ ಬರೋಬ್ಬರಿ ಹತ್ತು ವರ್ಷಗಳ ಕಾಲ ಬೆವರು ಸುರಿಸಿ ದುಡಿದಿದೆ.
ನಿದ್ದೆಗೆ ಚಟ್ಟಕಟ್ಟಿ ಕೆಲಸ ಮಾಡಿದ್ದರಿಂದಲೇ ಇಂತಹ ಪ್ರತಿಫಲ ಸಿಕ್ಕಿದೆ. ಆರುವರೆ ಕೋಟಿ ಕನ್ನಡಿಗರು ಲಹರಿ' ಆಡಿಯೋ ಕಂಪೆನಿಯನ್ನು ಎತ್ತಿಹಿಡಿದಿದ್ದಾರೆ. ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಇಲ್ಲಿಯವರೆಗೆ 36 ಕೋಟಿ ಜನ ಕೇಳಿದ್ದಾರೆ. ಇಷ್ಟು ದೊಡ್ಡ ಮಟ್ಟದ ವೀವರ್‌ಶಿಪ್ ಪ್ರೀತಿ ಮತ್ತು ಪ್ರೋತ್ಸಾಹದಿಂದ ಹೊಸ ಹುರುಪು ಸಿಕ್ಕಿದೆ. ಮತ್ತಷ್ಟು ಸಾಧನೆಗೆ ದಾರಿಯಾಗಿದೆ ಎಂದರು ಲಹರಿ ಮಾಲೀಕರಾದ ವೇಲು ಅವರು. ಎನಿವೇ, ಈ ಜಗತ್ತಿನಲ್ಲಿ ಹಿಸ್ಟ್ರಿನಾ ಫಾಲೋ ಮಾಡೋರು ಇದ್ದಾರೆ, ಹಿಸ್ಟ್ರಿನಾ ಬ್ರೇಕ್ ಮಾಡೋರು ಇದ್ದಾರೆ, ಹಿಸ್ಟ್ರಿನಾ ಸೃಷ್ಟಿ ಮಾಡೋರು ಇದ್ದಾರೆ. ಇವರುಗಳ ಪೈಕಿ
ಲಹರಿ’ ಆಡಿಯೋ ಕಂಪೆನಿಯವರು ಹೊಸ ಹೊಸ ಹಿಸ್ಟ್ರಿಯ ಸೃಷ್ಟಿಕರ್ತರು. ಅವರುಗಳ ಸಾಧನೆ ಹಿಂಗೆ ಮುಂದುವರೆಯಲಿ ಅನ್ನೋದು “ಸಿನಿಲಹರಿ” ಅಶಯ.
ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ