ಅನಿಮಲ್ ಬೋರ್ಡ್ ಪರ್ಮಿಷನ್ ತೆಗೆದುಕೊಳ್ಳುವುದಕ್ಕೆ ಹರಿಯಾಣಕ್ಕೆ ಹೋಗಬೇಕು, ಪ್ರತಿ ಚಿತ್ರತಂಡ ಅಲ್ಲಿಗೆ ಹೋಗಿಯೇ ಅನುಮತಿ ಪಡೆಯುವುದಕ್ಕೆ ಕೊಂಚ ಕಷ್ಟವಾಗ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಫೀಸ್ ಮಾಡಿಕೊಟ್ಟು ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಲಾಗಿದೆ
ಚಂದನವನ ಚಿಕ್ಕದ್ದು, ಸ್ಯಾಂಡಲ್ ವುಡ್ ಸಿನಿಮಾಗಳಿಗೆ ಮಾರುಕಟ್ಟೆ ಇಲ್ಲ, ಹೊರ ರಾಜ್ಯದ ಅಂಗಳದಲ್ಲಿ ಕಮಾಯಿ ಮಾಡಿಲ್ಲ, ಹೀಗೆ ಮಾತನಾಡುತ್ತಿದ್ದವರು ಎಲ್ಲಾ ಗಂಧದಗುಡಿಯನ್ನು ಬೆರಗುಗಣ್ಣಿನಿಂದ ನೋಡ್ತಿದ್ದಾರೆ. ಇಡೀ ಇಂಡ್ಯಾ ಇವತ್ತು ಕನ್ನಡ ಚಿತ್ರರಂಗದತ್ತ ಕಣ್ಣುಹಾಯಿಸಿದೆ ಮತ್ತು ಕೊಂಡಾಡುತ್ತಿದೆ. ಇಷ್ಟರ ಮಟ್ಟಿಗೆ ಹವಾ ಕ್ರಿಯೇಟ್ ಮಾಡಿರುವ ಸ್ಯಾಂಡಲ್ ವುಡ್ ಸಿನಿಮಾಗಳು, ಸೆನ್ಸಾರ್ ಮಂಡಳಿ ಹಾಗೂ ಅನಿಮಲ್ ಬೋರ್ಡ್ ಅಂಗಳಕ್ಕೆ ಹೋದಾಗ ಕೆಲವೊಂದು ಸಮಸ್ಯೆಗಳನ್ನು ಎದುರಿಸ್ತಿವೆ. ಹೀಗಾಗಿ, ಆ ಎಲ್ಲಾ ಸಮಸ್ಯೆಗಳನ್ನು
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರ ಗಮನಕ್ಕೆ ತರುವ ಕೆಲಸವನ್ನು ಫಿಲ್ಮ್ ಚೇಂಬರ್ ಮಾಡಿಮುಗಿಸಿದೆ.
ಹೌದು,ಕನ್ನಡ ಚಿತ್ರರಂಗದ ಪಾಲಿಗೆ ಮಾತೃ ಸಂಸ್ಥೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಇವತ್ತು
ಸುದ್ದಿಗೋಷ್ಠಿಯನ್ನು ಕರೆದಿತ್ತು. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ಡಾ. ಎಲ್. ಮುರುಗನ್ ಗೆ ಆಹ್ವಾನ ನೀಡಲಾಗಿತ್ತು. ಇದೇ ಮೊದಲ ಭಾರಿಗೆ ವಾಣಿಜ್ಯ ಮಂಡಳಿಗೆ ಆಗಮಿಸಿ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಕನ್ನಡ ಚಿತ್ರರಂಗದ ಲೀಡರ್ ಹ್ಯಾಟ್ರಿಕ್ ಹೀರೋ ಶಿವಣ್ಣ ಸಮ್ಮುಖದಲ್ಲಿ ಸಭೆ ನಡೀತು.ಈ ವೇಳೆ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದ ವಾಣಿಜ್ಯ ಮಂಡಳಿಯ ಸಭಾಸದಸ್ಯರು ಸೆಂಟ್ರಲ್ ಮಿನಿಸ್ಟರ್ ಡಾ. ಎಲ್. ಮುರುಗನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಅಂದ್ಹಾಗೇ, ಮನವಿ ಪತ್ರದಲ್ಲಿ ಹಿಂದಿಗೆ ಡಬ್ ಆಗುವ ಕನ್ನಡ ಸಿನಿಮಾಗಳ ಸೆನ್ಸಾರ್ ಬೆಂಗಳೂರಿನಲ್ಲೇ ಆಗುವಂತೆ ವ್ಯವಸ್ಥೆ ಮಾಡಿಕೊಡಿ. ಯಾಕಂದ್ರೆ, ಕನ್ನಡ ಚಿತ್ರರಂಗದಲ್ಲಿ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಹಳಷ್ಟು ಚಿತ್ರಗಳು ತಯ್ಯಾರಾಗುತ್ತಿವೆ. ಸೆನ್ಸಾರ್ ಗೆ ಮುಂಬೈಗೆ ಹೋಗಬೇಕಾದ ಪರಿಸ್ಥಿತಿ ಇದೆ, ಅಲ್ಲಿ ಸೆನ್ಸಾರ್ ಆಗುವುದು ತಡವಾಗ್ತಿದೆ. ಇದರಿಂದ ಕನ್ನಡ ಚಿತ್ರರಂಗದಲ್ಲಿ ತಯ್ಯಾರಾಗುವ ಚಿತ್ರಗಳಿಗೆ ಪೆಟ್ಟು ಬೀಳ್ತಿರುವುದಾಗಿ ನಮೂದಿಸಿದ್ದಾರೆ. ಅದರಂತೇ, ಅನಿಮಲ್ ಬೋರ್ಡ್ ಪರ್ಮಿಷನ್ ತೆಗೆದುಕೊಳ್ಳುವುದಕ್ಕೆ ಹರಿಯಾಣಕ್ಕೆ ಹೋಗಬೇಕು, ಪ್ರತಿ ಚಿತ್ರತಂಡ ಅಲ್ಲಿಗೆ ಹೋಗಿಯೇ ಅನುಮತಿ ಪಡೆಯುವುದಕ್ಕೆ ಕೊಂಚ ಕಷ್ಟವಾಗ್ತಿದೆ. ಹೀಗಾಗಿ ಬೆಂಗಳೂರಿನಲ್ಲಿ ಆಫೀಸ್ ಮಾಡಿಕೊಟ್ಟು ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಪತ್ರದಲ್ಲಿ ನಮೂದಿಸಿದ್ದಾರೆ. ದೂರದರ್ಶನದಲ್ಲಿ ಅವಾರ್ಡ್ ಮೂವೀಗಳು ಮಾತ್ರ ಟೆಲಿಕಾಸ್ಟ್ ಆಗುತ್ತಿವೆ, ಮುಂದಿನ ದಿನಗಳಲ್ಲಿ ಕಮರ್ಷಿಯಲ್ ಚಿತ್ರಗಳು ಕೂಡ ಪ್ರಸಾರವಾಗುವುದಕ್ಕೆ ಅವಕಾಶ ಮಾಡಿಕೊಟ್ಟರೆ ನಿರ್ಮಾಪಕರು ಉಳಿಯುತ್ತಾರೆ ಎಂದು ಮನವಿ ಮಾಡಿಕೊಂಡಿದ್ದಾರೆ.
ಇದೇ ಮೊದಲ ಬಾರಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಭೇಟಿಕೊಟ್ಟು,
ಕನ್ನಡ ಚಿತ್ರರಂಗದ ಸಮಸ್ಯೆಗಳನ್ನು ಆಲಿಸಿದ
ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆ ಸಚಿವರಾದ ಡಾ. ಎಲ್. ಮುರುಗನ್ ಅವರು ಕನ್ನಡ ಸಿನಿಮಾರಂಗದಲ್ಲಿನ ಸಮಸ್ಯೆಗೆ ಆದಷ್ಟು ಬೇಗ ಪರಿಹಾರ ಒದಗಿಸುವುದಾಗಿ ಭರವಸೆ ಕೊಟ್ಟಿದ್ದಾರೆ. ಮುರುಗ ಅಂದ್ರೇನೇ ಕೈಬಿಡಲ್ಲ ಎನ್ನುವ ಮಾತಿದೆ ಹೀಗಾಗಿ ಮುರುಗನ್ ಸಾಹೇಬ್ರು ಕನ್ನಡ ಚಿತ್ರರಂಗವನ್ನು ಕೈಬಿಡಲ್ಲ ಎಂದು ನಂಬಿರುವುದಾಗಿ ಶಿವಣ್ಣ ಸುದ್ದಿಗೋಷ್ಠಿಯಲ್ಲೇ ಹೇಳಿದರು.
ಜಿಎಸ್ ಟಿ ಸಮಸ್ಯೆ ಬಗೆಹರಿಸುವಂತೆ ಕೇಳಿಕೊಂಡರು.ಸೆಂಟ್ರಲ್ ಮಿನಿಸ್ಟರ್ ದಕ್ಷಿಣ ಭಾರತದವರೇ ಆಗಿರೋದ್ರಿಂದ ನಮ್ಮ ಕಷ್ಟ ಅವರಿಗೆ ಅರ್ಥವಾಗಿರುತ್ತೆ, ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಡ್ತಾರೆನ್ನುವ ನಂಬಿಕೆ ಇದೆಯೆಂದು ಸೆಂಚುರಿ ಸ್ಟಾರ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು. ಬಿಜೆಪಿ ಗವರ್ನಮೆಂಟ್ ಎಲ್ಲಾ ಇಂಡಸ್ಟ್ರಿಗೂ ಫ್ರೆಂಡ್ಲಿ ಆಗಿದೆ. ಆದಷ್ಟು ಬೇಗ ಸಮಸ್ಯೆಗೆ ಬಗೆಹರಿಸಿ ಕೊಡುವುದಾಗಿ ಸೆಂಟ್ರಲ್ ಮಿನಿಸ್ಟರ್ ಮುರುಗನ್ ಮಾತುಕೊಟ್ಟಿದ್ದಾರೆ. ಮುಂದಿನ ದಿನಗಳಲ್ಲಿ ಯಾವ ರೀತಿ ಸಹಾಯ ಆಗುತ್ತೆ, ಯಾವುದು ಅಸ್ತಿತ್ವಕ್ಕೆ ಬರುತ್ತೆ ಕಾದುನೋಡಬೇಕಿದೆ.
ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ