ನಟ ದರ್ಶನ್ “ರಾಬರ್ಟ್ ಬಳಿಕ “ಕ್ರಾಂತಿ” ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಎಲ್ಲರಿಗೂ ಗೊತ್ತಿದೆ. ಆದರೆ, ಆ ಚಿತ್ರಕ್ಕೆ ಮುಹೂರ್ತ ಯಾವಾಗ ಅಂತ ಗೊತ್ತಿರಲಿಲ್ಲ. ಮೂಲಗಳ ಪ್ರಕಾರ ದರ್ಶನ್ ಅಭಿನಯದ “ಕ್ರಾಂತಿ” ಚಿತ್ರದ ಮುಹೂರ್ತ ದಸರಾ ಹಬ್ಬದಂದು ನಡೆಯಲಿದೆ ಎನ್ನಲಾಗಿದೆ. ಅಕ್ಟೋಬರ್ ೧೫ರಂದು “ಕ್ರಾಂತಿ” ಚಿತ್ರಕ್ಕೆ ಮುಹೂರ್ತ ನೆರವೇರಿಸಲು ಚಿತ್ರತಂಡ ನಿರ್ಧರಿಸಿದೆ ಎನ್ನಲಾಗಿದೆ.
ಈ ಹಿಂದೆ ದರ್ಶನ್ ಅವರಿಗೆ “ಯಜಮಾನ” ಚಿತ್ರವನ್ನು ನಿರ್ಮಿಸಿದ್ದ ಶೈಲಜಾ ನಾಗ್ ಅವರೇ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂತೆಯೇ, ಆ ಚಿತ್ರವನ್ನು ನಿರ್ದೇಶಿಸಿದ್ದ ವಿ.ಹರಿಕೃಷ್ಣ ಅವರೇ ಈ ಚಿತ್ರಕ್ಕೂ ನಿರ್ದೇಶನ ಮಾಡುತ್ತಿದ್ದಾರೆ. ವಿಶೇಷವೆಂದರೆ, ಶೈಲಜಾನಾಗ್ ಅವರ ನಿರ್ಮಾಣದ ಎರಡನೇ ಪ್ರಾಜೆಕ್ಟ್ ಇದಾಗಿದ್ದು, ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಹಾಗು ಹಿಂದಿಯಲ್ಲೂ ಡಬ್ ಆಗಲಿದೆ.
ಶೈಲಜಾನಾಗ್, ನಿರ್ಮಾಪಕಿ
ಅಂದಹಾಗೆ, ಈ ಹಿಂದೆ “ಯಜಮಾನ” ಬಾಕ್ಸಾಫೀಸ್‌ನಲ್ಲಿ ದೊಡ್ಡ ಹವಾ ಸೃಷ್ಠಿಸಿತ್ತು. ಎಲ್ಲೆಡೆಯಿಂದಲೂ ಒಳ್ಳೆಯ ರೆಸ್ಪಾನ್ಸ್ ಬಂದಿತ್ತು. ಅದೇ ಜೋಡಿ ಈಗ “ಕ್ರಾಂತಿ”ಯ ಹಿಂದೆ ನಿಂತಿದೆ. ಚಿತ್ರದ ಶೀರ್ಷಿಕೆಯೇ ಇಲ್ಲಿ ಫೋರ್ಸ್ ಆಗಿದೆ.
ಚಿತ್ರದ ಕಥೆ ಕೂಡ ಅಷ್ಟೇ ಫೋರ್ಸ್ ಆಗಿರಲಿದೆ ಎನ್ನುವುದರಲ್ಲಿ ಅನುಮಾನವಿಲ್ಲ. ಸದ್ಯ ಈ ಚಿತ್ರದಲ್ಲಿ ದರ್ಶನ್ ಹೀರೋ. ಅವರಿಗೆ ನಾಯಕಿ ಯಾರು, ಇನ್ನುಳಿದಂತೆ ಚಿತ್ರದಲ್ಲಿ ಯಾರೆಲ್ಲಾ ಇರ್ತಾರೆ ಎಂಬಿತ್ಯಾದಿ ಪ್ರಶ್ನೆಗಳಿಗೆ ಸದ್ಯಕ್ಕೆ ಉತ್ತರವಿಲ್ಲ.