ದಸರಾಗೆ ಶ್ರೀ ಕೃಷ್ಣ ಜೀ ಮೇಲ್ ಡಾಟ್‌ ಕಾಮ್‌!

ನಾಗಶೇಖರ್‌ ನಿರ್ದೇಶನದ ಚಿತ್ರವೊಂದು ಈಗ ಸದ್ದಿಲ್ಲದೆಯೇ ಬಿಡುಗಡೆಗೆ ಸಜ್ಜಾಗಿದೆ. ಹೌದು, ಸಂದೇಶ್‌ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣವಾಗಿರುವ ಡಾರ್ಲಿಂಗ್‌ ಕೃಷ್ಣ ಹೀರೋ ಆಗಿರುವ [email protected]ಸಿನಿಮಾ ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ವಿಜಯದ ದಶಮಿ ಹಬ್ಬದಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆ ಮಾಡಲು ಸಿನಿಮಾತಂಡ ತಯಾರು ಮಾಡಿಕೊಂಡಿದೆ. ಕನ್ನಡದಲ್ಲಿ ಈಗಾಗಲೇ ಹಲವು ಯಶಸ್ವಿ ಚಿತ್ರಗಳನ್ನು ನೀಡಿರುವ ಸಂದೇಶ್ ನಾಗರಾಜ್‌, ಈಗ ಮತ್ತೊಂದು ಮಜವಾದ ಸಿನಿಮಾ ಮಾಡಿ, ಅದನ್ನು ದಸರಾ ಹಬ್ಬಕ್ಕೆ ರಿಲೀಸ್‌ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಚಿತ್ರಕ್ಕೆ ಬೃಂದಾ ಎನ್ ಜಯರಾಂ ಅವರ ಸಹ ನಿರ್ಮಾಣವಿದೆ.


ನಾಗಶೇಖರ್‌ ಅವರೇ ನಿರ್ದೇಶನದ ಜೊತೆಗೆ ಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಚಿತ್ರಕಥೆಗೆ ನಾಗಶೇಖರ್‌ ಜೊತೆಯಲ್ಲಿ ಪ್ರೀತಂ ಗುಬ್ಬಿ ಸಾಥ್‌ ನೀಡಿದ್ದಾರೆ. ಇನ್ನು, ಹೀರೋ ಡಾರ್ಲಿಂಗ್‌ ಕೃಷ್ಣ ಅವರ ಜೊತೆಗೆ ಭಾವನಾ ಮೆನನ್‌ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಂದನ್ ಗೌಡ ಕೂಡ ಇಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಅತಿಥಿ ಪಾತ್ರದಲ್ಲಿ ರಿಷಬ್ ಶೆಟ್ಟಿ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ದತ್ತಣ್ಣ, ಸಾಧು ಕೋಕಿಲ, ಅಚ್ಯುತರಾವ್, ಸಾತ್ವಿಕ್ (ಕಾರ್ಪೊರೇಟರ್), ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇತರರು ನಟಿಸಿದ್ದಾರೆ.

ಈ ಹಿಂದೆ ಸಂದೇಶ್ ಪ್ರೊಡಕ್ಷನ್ಸ್ ಮೂಲಕ ನಿರ್ಮಾಣವಾಗಿದ್ದ “ಅಮರ್” ಚಿತ್ರಕ್ಕೂ ನಾಗಶೇಖರ್‌ ಅವರೇ ನಿರ್ದೇಶಕರಾಗಿದ್ದರು. ಈಗ ಹೊಸ ಸಿನಿಮಾಗೂ ಅವರ ನಿರ್ದೇಶನವಿದೆ. ಚಿತ್ರದ ಐದು ಹಾಡುಗಳಿಗೆ ಕವಿರಾಜ್ ಗೀತಸಾಹಿತ್ಯವಿದೆ. ಸತ್ಯ ಹೆಗಡೆ ಕ್ಯಾಮೆರಾ ಹಿಡಿದಿದ್ದಾರೆ. ಇನ್ನುಳಿದಂತೆ ಚಿತ್ರಕ್ಕೆ ದೀಪು ಎಸ್. ಕುಮಾರ್ ಸಂಕಲನವಿದೆ. ಅರುಣ್ ಸಾಗರ್ ಕಲಾ ನಿರ್ದೇಶನವಿದೆ.

Related Posts

error: Content is protected !!