ಈ ನಟಿಮಣಿಯ ಮನಸನ್ನು ಹಿಂಸಿಸುತ್ತಿದ್ದ ಆ ನೋವೇನು? ಆ ಸಂಕಟವೇನು? ಅದ್ಯಾವ ಘಟನೆ ಈ ನಟಿಮಣಿಯನ್ನು ಘಾಸಿಗೊಳಿಸ್ತು? ಅದ್ಯಾವ ಘಟನೆ ಈಕೆಯನ್ನು ಆಘಾತಕ್ಕೆ ದೂಡ್ತು? ಈ ಜೀವನಾನೇ ಬೇಡ ಅಂತ ಈ ನಟಿ ಅದ್ಯಾಕೆ ನಿರ್ಧರಿಸಿದರು? ಸಾಯೋದಕ್ಕೆ ಇಷ್ಟವಿಲ್ಲ ಆದರೂ ಸತ್ತೆ ಸಾಯ್ತೀನಿ ಅಂತ ಅದ್ಯಾಕೆ ಕೊರಳಿಗೆ ನೇಣು ಕುಣಿಕೆಯನ್ನು ಸರಿದುಕೊಂಡ್ರು? ಡೆತ್ನೋಟ್ ಬರೆಯೋದಕ್ಕೂ ಆಗ್ತಿಲ್ಲ, ಆಗ್ತಿಲ್ಲ ಎನ್ನುತ್ತಲೇ, ಮೆಂಟಲಿ ಕೊರಗುತ್ತಲೇ ಅದ್ಯಾಕೆ ನಾಲ್ಕು ಪುಟಗುಳುಳ್ಳ ಡೆತ್ನೋಟ್ನ ಬರೆದು ಮುಗಿಸಿದರು? ಸಾಯೋದಕ್ಕೆ ದೊಡ್ಡ ಮನಸ್ಸು ಮಾಡಿದ ಈ ನಟಿ ಅದ್ಯಾಕೆ ಬದುಕೋದಕ್ಕೆ ಬಂಡ ಧೈರ್ಯ ಮಾಡಲಿಲ್ಲ?
ಚೌಕಟ್ಟು ಹಾಗೂ ಫನ್ ಸಿನಿಮಾದ ನಾಯಕಿ ಸೌಜನ್ಯ ಅಲಿಯಾಸ್ ಸವಿಮಾದಪ್ಪ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರು ದಕ್ಷಿಣ ಭಾಗದ ದೊಡ್ಡಬೆಲೆಯಲ್ಲಿ ಘಟನೆ ನಡೆದಿದ್ದು, ಕುಂಬಳಗೋಡು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಡಗು ಜಿಲ್ಲೆ ಕುಶಾಲನಗರ ಮೂಲದವರಾದ ಸೌಜನ್ಯ ಬೆಂಗಳೂರಿನ ದೊಡ್ಡಬೆಲೆ ಗ್ರಾಮದ ಅಪಾರ್ಟ್ಮೆಂಟ್ವೊಂದರಲ್ಲಿ ನೆಲೆಸಿದ್ದರು. ಇಂದು ಬೆಳಗ್ಗೆ ಅಪಾರ್ಟ್ಮೆಂಟ್ನಲ್ಲಿ ಸೂಸೈಡ್ ಮಾಡಿಕೊಂಡು ಉಸಿರು ಚೆಲ್ಲಿದ್ದಾರೆ. ನಟಿಯ ಮೃತದೇಹದ ಬಳಿ ಡೆತ್ನೋಟ್ ಪತ್ತೆಯಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಸೌಜನ್ಯ ಅಲಿಯಾಸ್ ಸವಿಮಾದಪ್ಪ ಗೀಚಿಟ್ಟಿರುವ ಡೆತ್ನೋಟ್ ಎನ್ನಲಾದ ನಾಲ್ಕು ಪುಟಗಳುಳ್ಳ ಡೆತ್ನೋಟ್ನಿಂದ ಹಲವು ಅಂಶಗಳು ಬೆಳಕಿಗೆ ಬಂದಿವೆ. ಆತ್ಮಹತ್ಯೆ ಮಾಡಿಕೊಳ್ಳುವದಕ್ಕೆ ಮೂರು ದಿನದ ಮುಂಚಿತವಾಗಿಯೇ ಡೆತ್ನೋಟ್ ಬರೆಯಲು ಆರಂಭಿಸಿದ್ದರಂತೆ. ಮೊದಲ ಪುಟ ೨೭ರಂದು ಬರೆದಿದ್ದು, ಕೊನೆಯ ಪುಟವನ್ನು ಇಂದು ಬೆಳಗ್ಗೆ ಅಂದ್ರೆ ೩೦ನೇ ತಾರೀಖ್ನಂದು ಬರೆದಿದ್ದಾರಂತೆ.ನನ್ನ ಸಾವಿಗೆ ನಾನೇ ಕಾರಣ ಅಪ್ಪ-ಅಮ್ಮ ದಯವಿಟ್ಟು ಕ್ಷಮಿಸಿ ಬಿಡಿ ಎಂದಿರುವ ನಟಿ ಸವಿಮಾದಪ್ಪ, ಸಾಯೋದಕ್ಕೆ ಇಷ್ಟವಿಲ್ಲ ಹಾಗಂತ ಬದುಕೋದಕ್ಕೆ ಆಗ್ತಿಲ್ಲ. ಆರೋಗ್ಯ ಚೆನ್ನಾಗಿಲ್ಲ ಎನ್ನುವುದಕ್ಕಿಂತ ಜೀವನದಲ್ಲಿ ತೀರಾ ನೊಂದುಬಿಟ್ಟಿದ್ದೇನೆ. ಹೀಗಾಗಿ, ಬದುಕೋದಕ್ಕೆ ಕಷ್ಟವಾಗ್ತಿದೆ ಎಂದು ಡೆತ್ನೋಟ್ ಬರೆದಿಟ್ಟು ನೇಣಿಗೆ ಕೊರಳೊಡ್ಡಿದ್ದಾರೆ ಎನ್ನಲಾಗ್ತಿದೆ.
ಅಷ್ಟಕ್ಕೂ, ಪೊಲೀಸರ ಕೈಗೆ ಲಭ್ಯವಾಗಿರುವ ಈ ಡೆತ್ನೋಟ್ ನಿಜಕ್ಕೂ ನಟಿ ಸವಿಮಾದಪ್ಪ ಅವರೇ ಬರೆದಿದ್ದಾ ಅಥವಾ ಈ ನಟಿಯ ಆತ್ಮಹತ್ಯೆಯ ಹಿಂದೆ ಯಾರದ್ದಾದರೂ ಕೈವಾಡವಿದೆಯಾ ಗೊತ್ತಿಲ್ಲ? ಈಗಷ್ಟೇ ಪೊಲೀಸರ ತನಿಖೆ ಆರಂಭಗೊಂಡಿದೆ. ನಟಿಯ ಪೋಷಕರು ಈಕೆಯ ಬರವಣಿಗೆಯ ಅಕ್ಷರಗಳನ್ನು ಐಡೆಂಟಿಫೈ ಮಾಡಿದರೆ, ಅಥವಾ ನಟಿ ಈ ಹಿಂದೆ ಯಾವುದಾದರೂ ಪುಸ್ತಕದಲ್ಲಿ ಅಕ್ಷರಗಳನ್ನು ಗೀಚಿಟ್ಟಿದ್ದರೆ ಫೈಂಡ್ಔಟ್ ಮಾಡೋದಕ್ಕೆ ಈಸಿಯಾಗುತ್ತದೆ ಅದೇ ಹಾದಿಯಲ್ಲಿ ಖಾಕಿ ಪಡೆಯ ತನಿಖೆ ಸಾಗುತ್ತಿದೆ.
ಅಚ್ಚರಿ ಅಂದ್ರೆ ಕಳೆದ ಎರಡು ದಿನಗಳ ಹಿಂದೆ ನಟಿ ಸವಿಮಾದಪ್ಪ ಅವರು ಇನ್ಸ್ ಟಾಗ್ರಾಮ್ನಲ್ಲಿ ಕೆಲವೊಂದು ಪೋಸ್ಟ್ಗಳನ್ನು ಹಾಕಿದ್ದಾರೆ. ಅದರಲ್ಲಿ, ಇದೊಂದು ಪೋಸ್ಟ್ ನೋಡುಗರನ್ನು ಬಹುವಾಗಿ ಕಾಡುತ್ತೆ. ಹೌದು, `ನೆವರ್ ಅಂಡರೆಸ್ಟಿಮೇಟ್ ಎನಿವನ್’ ಯಾಕಂದ್ರೆ, ಫನ್ನಿ ಎನಿಸುವ ವ್ಯಕ್ತಿಗಳ ಜೀವನದಲ್ಲೂ ನೋವಿನ ಕಥೆ ಇರುತ್ತೆ ಅದು ಯಾರಿಗೂ ಗೊತ್ತಿರುವುದಿಲ್ಲ ಅಷ್ಟೇ. ಹೀಗಂತ ಬರೆದು ಕೆಫೆ ಕಾಫಿ ಡೇ ಮುಂದೆ ನಿಂತು ಕ್ಲಿಕಿಸಿಕೊಂಡಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡಿದ್ದಾರೆ. ನಟಿ ಸವಿಯವರ ಈ ಟ್ವೀಟ್ ಗಮನಿಸಿದರೆ ಇವರ ಜೀವನದಲ್ಲೂ ಯಾರಿಗೂ ಹೇಳಿಕೊಳ್ಳದಂತಹ, ಯಾರಿಗೂ ತಿಳಿಯದಂತಹ ನೋವು ಮನಸ್ಸನ್ನು ಹಿಂಡಿ ಹಿಂಸೆ ಮಾಡುತ್ತಿತ್ತು ಎನಿಸುತ್ತೆ.
ಅಷ್ಟಕ್ಕೂ, ಈ ನಟಿಮಣಿಯ ಮನಸನ್ನು ಹಿಂಸಿಸುತ್ತಿದ್ದ ಆ ನೋವೇನು? ಆ ಸಂಕಟವೇನು? ಅದ್ಯಾವ ಘಟನೆ ಈ ನಟಿಮಣಿಯನ್ನು ಘಾಸಿಗೊಳಿಸ್ತು? ಅದ್ಯಾವ ಘಟನೆ ಈಕೆಯನ್ನು ಆಘಾತಕ್ಕೆ ದೂಡ್ತು? ಈ ಜೀವನಾನೇ ಬೇಡ ಅಂತ ಈ ನಟಿ ಅದ್ಯಾಕೆ ನಿರ್ಧರಿಸಿದರು? ಸಾಯೋದಕ್ಕೆ ಇಷ್ಟವಿಲ್ಲ ಆದರೂ ಸತ್ತೆ ಸಾಯ್ತೀನಿ ಅಂತ ಅದ್ಯಾಕೆ ಕೊರಳಿನೆ ನೇಣು ಕುಣಿಕೆಯನ್ನು ಸರಿದುಕೊಂಡ್ರು? ಡೆತ್ನೋಟ್ ಬರೆಯೋದಕ್ಕೂ ಆಗ್ತಿಲ್ಲ, ಆಗ್ತಿಲ್ಲ ಎನ್ನುತ್ತಲೇ, ಮೆಂಟಲಿ ಕೊರಗುತ್ತಲೇ ಅದ್ಯಾಕೆ ನಾಲ್ಕು ಪುಟಗುಳುಳ್ಳ ಡೆತ್ನೋಟ್ನ ಬರೆದು ಮುಗಿಸಿದರು? ಸಾಯೋದಕ್ಕೆ ದೊಡ್ಡ ಮನಸ್ಸು ಮಾಡಿದ ಈ ನಟಿ ಅದ್ಯಾಕೆ ಬದುಕೋದಕ್ಕೆ ಬಂಡ ಧೈರ್ಯ ಮಾಡಲಿಲ್ಲ? ಈ ಯಾವ ಪ್ರಶ್ನೆಗೂ ಸದ್ಯಕ್ಕೆ ಉತ್ತರವಿಲ್ಲ. ಪೊಲೀಸ್ ತನಿಖೆ ಆಗ್ಬಹುದು? ಕಾರಣ ಇದೇ ಅಂತ ಷರಾ ಬರೆದು ಪತ್ರದ ಮೂಲಕ ತಿಳಿಸಬಹುದು. ಆದರೆ, ಉಸಿರು ಚೆಲ್ಲಿದ ನಟಿ ಮತ್ತೆ ಬರುವುದಿಲ್ಲ, ಹೆತ್ತವರ ಕ್ಷಣಕ್ಷಣಕ್ಕೂ ಹೊಟ್ಟಗೆ ಬೆಂಕಿ ಹಾಕಿಕೊಂಡು ಮರುಗುವುದು ನಿಲ್ಲಲ್ಲ. ಆದರೂ, ಪೊಲೀಸ್ ತನಿಖೆಯಿಂದ ಯಾವ ಮಾಹಿತಿ ಹೊರಬೀಳುತ್ತೋ ಕಾದುನೋಡಬೇಕು.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ