ಧಗ ಧಗಿಸಲು ರೆಡಿಯಾಯ್ತು ಚಿತ್ರರಂಗ-ಅಕ್ಟೋಬರ್‌ 29 ಕ್ಕೆ ‘ಭಜರಂಗಿ 2’ ಅಬ್ಬರ !

ಚಿತ್ರ ರಂಗ ಎದ್ದು ಕುಳಿತಿದೆ. ಸಿನಿಮಾ ಚಟುವಟಿಕೆಗಳು ಗರಿಗೆದರಿವೆ. ಅಕ್ಟೋಬರ್‌ ತಿಂಗಳಿನಿಂದಲೇ ಸಿನಿಮಾ ಪ್ರೇಕ್ಷಕರಿಗೆ ಹಬ್ಬದ ದೂಟ ಕಾಯಂ ಆಗಿದೆ. ಬಾಕಿ ಇರೋದು ಯಾರೆಲ್ಲ ಸ್ಟಾರ್‌ ಸಿನಿಮಾಗಳು, ಯಾವಾಗ ಬರುತ್ತವೆ ಅನ್ನೋದು. ಸದ್ಯಕ್ಕೆ ಭಜರಂಗಿ2 ತೆರೆಗೆ ಅಪ್ಪಳಿಸೋದಿಕ್ಕೆ ಡೇಟ್‌ ಫಿಕ್ಸ್‌ ಆಗಿದೆ.

ಚಿತ್ರಮಂದಿರಗಳಲ್ಲಿ 100 ರಷ್ಟು ಸೀಟು ಭರ್ತಿಗೆ ಅವಕಾಶ ಸಿಗುತ್ತಿದ್ದಂತೆ ಚಿತ್ರರಂಗ ಧಗ ಧಗಿಸಲು ಸಜ್ಜಾಗಿದೆ. ಸ್ಟಾರ್ ಸಿನಿಮಾಗಳ ಪೈಕಿ ಮುಂಚೆಯೇ ಬರುವ ಸಿನಿಮಾ ಯಾವುದು ಎನ್ನುವ ಸಿನಿಮಾ ಪ್ರೇಕ್ಷಕರ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಭಜರಂಗಿ 2’ ರಿಲೀಸ್ಗೆ ದಿನಾಂಕ ಫಿಕ್ಸ್ ಆಗಿದೆ. ಅಕ್ಟೋಬರ್ 29ಕ್ಕೆ ಶಿವರಾಜ್ ಕುಮಾರ್ ಭಜರಂಗಿ ಆಗಿ ಅಭಿಮಾನಿಗಳಿಗೆ ದರ್ಶನ ನೀಡುವುದು ಕನ್ ಫರ್ಮ್ ಆಗಿದೆ.

ಸ್ಯಾಂಡಲ್ ವುಡ್ ಮಟ್ಟಿಗೆ ಇದು ಸಾಕಷ್ಟು ನಿರೀಕ್ಷೆ ಹುಟ್ಟಿಸಿದ ಸಿನಿಮಾ. ಭಜರಂಗಿ ಸಕ್ಸಸ್ ಬೆನ್ನಲೇ ನಿರ್ದೇಶಕ ಹರ್ಷ ಹಾಗೂ ಸೆಂಚುರಿ ಸ್ಟಾರ್ ಶಿವಣ್ಣ ಇಲ್ಲಿ ಮತ್ತೆ ಒಂದಾದರು ಎನ್ನುವುದಷ್ಟೇ ಅಲ್ಲ ಜಯಣ್ಣ ಕಂಬೈನ್ಸ್ ನಂತಹಬಿಗ್ ಬ್ಯಾನರ್ ಸಿನಿಮಾ ಎನ್ನುವುದು ಕೂಡ ಆ ಕುತೂಹಲದ ಒಂದು ಭಾಗವೇ. ಅದರ ಜತೆಗೆ ಸದ್ಯದ ಟ್ರೆಂಡ್ ಗೆ ತಕ್ಕಂತೆ ನಿರ್ದೇಶಕ ಎ. ಹರ್ಷ ಗಟ್ಟಿ ಕಥೆಯ ಮೂಲಕ ಹೊಸತನ್ನು ಹೇಳಿ ಹೇಳುತ್ತಾರೆನ್ನುವ ಕೌತುಕ. ಅದರ ಜತೆಗೆ ಭಜರಂಗಿ ಮೊದಲ‌ಭಾಗಕ್ಕೆ ದೊಡ್ಡ ಗೆಲುವು ಸಿಕ್ಕಿದ್ದು.

ಭಜರಂಗಿ ೩ ನಿರೀಕ್ಷೆಯ ಬಗ್ಗೆ ಹೀಗೆ ಹೇಳುತ್ತಾ ಹೊದರೆ ಇಲ್ಲಿಸಾಕಷ್ಟುಕಾರಣಗಳನ್ನು ಕೊಡಬಹುದು. ದೊಡ್ಡ ತಾರಾಗಣವೂ ಕೂಡ ಈಸಿನಿಮಾ ಮತ್ತೊಂದು ವಿಶೇಷವೇ. ಇವೆಲ್ಲ ಕುತೂಹಲ , ನಿರೀಕ್ಷೆಗಳಿಗೆ ಫೈನಲಿ ತೆರೆ ಬೀಳುವ ಕಾಲ ಸನಿಹಿತವಾಗಿದೆ. ಅಕ್ಟೋಬರ್ 29ಕ್ಕೆ ಬೆಳ್ಳಿ ತೆರೆಯ ಮೇಲೆ ಭಜರಂಗಿಯ ಮಯಲೋಕ ತೆರೆದುಕೊಳ್ಳಲಿದೆ. ಅಲ್ಲಿ ನಿರ್ದೇಶಕ ಹರ್ಷ ಅವರ ಮ್ಯಾಜಿಕ್ ಏನು ಅಂತ ರಿವೀಲ್ ಆಗಲಿದೆ. ಸದ್ಯಕ್ಕೆ ಅಲ್ಲಿ ತನಕ ಕಾಯೋಣ ಅಂತಂದರೂ, ಈ ಸಮಯಕ್ಕಾಗಿ ಕಾದಿದ್ದೊ ಒಂದ, ಎರಡ ದಿನಗಳಾ?

ಹೆಚ್ಚು ಕಡಿಮೆ ಒಂದು ಒಂದೂವರೆ ವರ್ಷ. 2020 ಮಾರ್ಚ್ ತಿಂಗಳಲ್ಲಿ ಕೊರೋನ ಕಾರಣಕ್ಕೆ ಬಂದ್ ಆದ ಚಿತ್ರರಂಗ ಇಲ್ಲಿ ತನಕ ಅನುಭವಿಸಿದ್ದ ಯಮಾ ಯಾತನೆ. ಅದೆಷ್ಟೋ ಜನರುಉದ್ಯೋಗ ಇಲ್ಲದೆ ಪರದಾಡಿ ಹೋದರು.ಸಿನಿಮಾ ನಿರ್ಮಾಣಗಳಿಗೆ ದುಡ್ಡು ಹಾಕಿದನಿರ್ಮಾಪಕರು ಮುಂದೇನು ಗತಿ ಅಂತ ಮುಗಿಲು ಕಡೆ ಮುಖ ಹಾಕಿ ಕುಳಿತರು. ಕೆಲಸ ಇಲ್ಲದ ನಿರ್ದೇಶಕರು ಬದುಕಿಗೆ ದೇವರೇ ಗತಿ ಎಂದರು.ಚಿತ್ರಮಂದಿರಗಳನ್ನೇ ನಂಬಿಕೊಂಡ ಜನರು ಬಾಗಿಲುಮುಚ್ಚಿ ಬಿಡೋಣ ಅಂದರು. ಆ ಸಂಕಷ್ಟದ ಕಾಲದ ಪರದೆ ಕೊನೆಗೆ ಸರಿಯುತ್ತಿದೆ. ಪಾಸಿಟಿವಿಟಿ ದರ ಕಡಿಮೆ ಇರುವ ಜಿಲ್ಲೆಗಳಲ್ಲಿ100 ರಷ್ಟು ಅನುಮತಿ ದೊರೆಯುವ ಮೂಲಕ ಚಿತ್ರರಂಗದಲ್ಲಿ ಮತ್ತೆ ಆಶಾಭಾವನೆ ಮೂಡಿದೆ.
– ಎಂಟರ್‌ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!