ಮಾತ್- ಯಾರ್ ಬೇಕಾದರೆ ಕೊಡಬಹುದು, ಹೇಳಿಕೆ ಯಾರ್ ಬೇಕಾದರೂ ಕೊಡಬಹುದು. ಆದರೆ, ಕೊಟ್ಟ ಮಾತಿಗೆ ಬದ್ದರಾಗಿರೋರು, ನೀಡಿದ ಹೇಳಿಕೆಯಂತೆ ನಡೆದುಕೊಳ್ಳುವವರು ಕೆಲವೇ ಕೆಲವು ಮಂದಿ ಮಾತ್ರ. ಆ ಕೆಲವೇ ಕೆಲವರಲ್ಲಿ ಮೊದಲ ಸಾಲಿನಲ್ಲಿ ಚಾಲೆಂಜಿಂಗ್ಸ್ಟಾರ್ ದರ್ಶನ್ ನಿಲ್ತಾರೆ ಅಂದ್ರೆ ಬಹುಷಃ ತಪ್ಪಾಗಲಿಕ್ಕಿಲ್ಲ. ಈಗ ಯಾಕ್ ಈ ಮಾತು ಅಂತೀರಾ ಅದಕ್ಕೆ ಕಾರಣವಿದೆ. ಸ್ಯಾಂಡಲ್ವುಡ್ ಯಜಮಾನ ಕೊರೊನಾ ಲಾಕ್ಡೌನ್ ಸಮಯದಲ್ಲಿ ಒಂದು ತೀರ್ಮಾನಕ್ಕೆ ಬಂದರು. ಆದರೆ, ತಮ್ಮ ನಿರ್ಧಾರದ ಬಗ್ಗೆ ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಅದ್ಹೇಗೋ ಗೊತ್ತಿಲ್ಲ ಗಾಂಧಿನಗರಕ್ಕೆ ವಿಷ್ಯ ಗೊತ್ತಾಯ್ತು, ರ್ತುಂಬಾ ಸುದ್ದಿಯೂ ಆಯ್ತು. ಆ ಸುದ್ದಿಗೆ ಹೀಗೊಂದು ಬೆಲೆಬಂದಿದೆ. ಕಟೌಟ್ಗೆ ಬೆಲೆತಂದುಕೊಟ್ಟ ದಚ್ಚು ನಡೆ-ನುಡಿಯ ಬಗ್ಗೆ ಹೆಮ್ಮೆ ಎನಿಸುತ್ತಿದೆ. ಹಾಗಾದ್ರೆ, ದಾಸನ ಆ ನಿರ್ಧಾರ ಯಾವುದು? ಅದ್ಯಾವ ಹೇಳಿಕೆಗೆ ಅವರು ಬದ್ದರಾಗಿದ್ದರು? ಒಡೆಯನ ಶಪಥದ ಕಥನದ ಜೊತೆಗೆ ಕಣಕ್ಕಿಳಿಯೋ ಕಹಾನಿಯ ಕಿಕ್ಸ್ಟಾರ್ಟ್ ಸ್ಟೋರಿ ಇಲ್ಲಿದೆ.
ಇದು ಕಲಿಯುಗ ಕಣ್ರೀ, ಕೊಟ್ಟ ಮಾತಿಗೆ ತಲೆಬಾಗುವವರಿಗಿಂತ ತಲೆ ಅಲ್ಲಾಡಿಸುವವರೇ ಹೆಚ್ಚು. ತಾವುಗಳು ಕೊಟ್ಟ ಸ್ಟೇಟ್ಮೆಂಟ್ನೇ ನಂದಲ್ಲ, ಅದು ಹಂಗಲ್ಲ, ಹಿಂಗೆ ಅಂತ ಕ್ಲ್ಯಾರಿಟಿ ಕೊಡೋರೇ ಶ್ಯಾಣೆಮಂದಿಯಿದ್ದಾರೆ ಆ ಕಥೆ ಇಲ್ಲಿ ಬೇಡ. ಸದ್ಯಕ್ಕೆ, ಕೊಟ್ಟ ಮಾತಿಗೆ ಬದ್ದರಾಗಿರುವ ಚಕ್ರವರ್ತಿಯ ಹೆಮ್ಮೆಯ ಕಥೆ ನೋಡೋಣ. ಗಂಧದಗುಡಿಯ ಯಜಮಾನ, ಕೋಟ್ಯಾಂತರ ಅಭಿಮಾನಿಗಳ ಪಾಲಿನ ದಾಸ ದರ್ಶನ್ ಅವರು ಕೊರೊನಾ ಸಂಕಷ್ಟದ ಸಮಯದಲ್ಲಿ ಒಂದು ನಿರ್ಧಾರಕ್ಕೆ ಬರುತ್ತಾರೆ. ಇದನ್ನ ಬರೀ ತೀರ್ಮಾನ ಅನ್ನೋಕಾಗಲ್ಲ. ಇದು ದಾಸನ ಶಪಥ ಅಂದ್ರೆ ಅತಿಶಯೋಕ್ತಿ ಆಗಲ್ಲ.
ಚೀನಿ ಕ್ರಿಮಿ ಕೊರೊನಾದಿಂದ ಭೂಮಂಡಲ ನಡುಗಿದ್ದು, ಒಂದು ರೀತಿ ನರಕ ಅನುಭವಿಸಿದ್ದು ನಿಮ್ಮೆಲ್ಲರಿಗೂ ತಿಳಿದೇಯಿದೆ. ಇದಕ್ಕೆ ಚಿತ್ರೋದ್ಯಮವೂ ಹೊರತಾಗಿಲ್ಲ. ಕೊರೊನಾ ರಣಕೇಕೆಗೆ ಭೂಮಂಡಲ ಹೇಗೇ ನಡುಗಿತೋ, ಹಾಗೆಯೇ ಬಣ್ಣದ ಲೋಕವೂ ಶೇಕ್ ಆಯ್ತು. ಚಿತ್ರಮಂದಿರಗಳು ಮುಚ್ಚಿದವು, ಬೆಳ್ಳಿಪರದೆಗಳು ಬಣ್ಣ ಕಳೆದುಕೊಂಡವು, ಕಾರ್ಮಿಕರು ಕಣ್ಣೀರಾಕಿದರು, ಥಿಯೇಟರ್ ಮಾಲೀಕರು-ಪ್ರದರ್ಶಕರು-ವಿತರಕರು ಕಂಗಾಲಾದರು, ನಿರ್ಮಾಪಕರು ಆಕಾಶ ನೋಡಿದರು, ಕಲಾವಿದರು ಆತಂಕಕ್ಕೆ ಜಾರಿದರು. ಹೀಗೆ, ಸಿನಿಮಾವನ್ನೇ ನಂಬಿ ಬದುಕುತ್ತಿದ್ದವರು ಅಕ್ಷರಶಃ ಚಿಂತಾಕ್ರಾಂತರಾದರು. ಎರೆಡೆರಡು ಭಾರಿ ಕರುನಾಡು ಲಾಕ್ ಆಗಿ, ಅನ್ಲಾಕ್ ಆಯ್ತು. ಸರ್ಕಾರ ಒಂದಿಷ್ಟು ಸಡಿಲಿಕೆ ನೀಡ್ತು. ಮುನ್ನೆಚರಿಕೆ ಕ್ರಮಗಳೊಂದಿಗೆ ಚಿತ್ರೀಕರಣ ಮಾಡ್ಬೋದು, ಥಿಯೇಟರ್ ಓಪನ್ ಮಾಡ್ಕೊಳ್ಳಿ ಅಂತ ಅವಕಾಶ ಕೊಡ್ತು. ಈ ಹೊತ್ತಲ್ಲಿ ಕೆಲವು ಸ್ಟಾರ್ಸ್ ಗಳು ಶೂಟಿಂಗ್ ಅಖಾಡಕ್ಕೆ ಧುಮ್ಕಿದರು. ಇನ್ನೂ ಕೆಲವರು ತಮ್ಮ ತಮ್ಮ ಸಿನಿಮಾನ ರಿಲೀಸ್ ಕೂಡ ಮಾಡಿಕೊಂಡರು. ಆದರೆ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತ್ರ ಸೈಲೆಂಟಾಗಿ ಉಳಿದುಬಿಟ್ಟರು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೈಕೊಡವಿಕೊಂಡು ಅಖಾಡಕ್ಕೆ ಇಳಿಯದೇ ಇದ್ದಿದಕ್ಕೆ ಕಾರಣ ಚೀನಿ ಕ್ರಿಮಿ ಕೊರೊನಾ ಬಗೆಗಿನ ಆತಂಕವಲ್ಲ. ಬದಲಾಗಿ ಅನ್ನದಾತರ ಮೇಲಿರುವ ಕಾಳಜಿ. ಯಸ್, ಒಂದರ-ನಂತರ ಒಂದು ಸಿನಿಮಾ ಒಪ್ಪಿಕೊಳ್ಳಬಹುದಾಗಿತ್ತು, ಡೇ ಅಂಡ್ ನೈಟ್ ಶೂಟಿಂಗ್ ಮಾಡ್ಬೋದಾಗಿತ್ತು, ಎರಡ್ಮೂರು ತಿಂಗಳಲ್ಲಿ ಡಬ್ಬಿಂಗ್ ಮುಗಿಸಿ ಥಿಯೇಟರ್ಗೆ ರ್ಬೋದಾಗಿತ್ತು. ಆದರೆ, ಬರೋಬ್ಬರಿ ಎರಡು ವರ್ಷ ಕೊರೊನಾ ಕೊಟ್ಟ ಹೊಡೆತದಿಂದ ಅನ್ನದಾತರು ಚೇತರಿಸಿಕೊಂಡಿಲ್ಲದ ಕಾರಣಕ್ಕೆ, ಕೇವಲ ೫೦ ಪರ್ಸೆಂಟ್ ಅಕ್ಯೂಪೆನ್ಸಿಯಲ್ಲಿ ಸಿನಿಮಾ ರಿಲೀಸ್ ಮಾಡುವ ಪರಿಸ್ಥಿತಿ ಇದ್ದ ಕಾರಣಕ್ಕೆ ಸ್ಯಾಂಡಲ್ವುಡ್ ಯಜಮಾನರು ಶಪಥಗೈದಿದ್ದರು. ಸರ್ಕಾರ ೧೦೦ ಪರ್ಸೆಂಟ್ ಅಕ್ಯೂಪೆನ್ಸಿ ಕೊಡುವ ತನಕ ಬಣ್ಣ ಹಚ್ಚೋದು ಬೇಡ, ಶೂಟಿಂಗ್ ಹೋಗೋದು ಬೇಡವೆಂದು ನಿರ್ಧರಿಸಿದ್ದರು. ಅದರಂತೇ ಇಲ್ಲಿವರೆಗೂ ನಡೆದುಕೊಂಡಿದ್ದಾರೆ. ಹೊಸ ಸಿನಿಮಾ `ಕ್ರಾಂತಿ’ ಅನೌನ್ಸ್ ಆದರೂ ಕೂಡ ಶೂಟಿಂಗ್ ಹೋಗದೇ ಸರ್ಕಾರದ ಆದೇಶಕ್ಕಾಗಿ ಕಾದಿದ್ದರು. ಫೈನಲೀ, ಸೆ.೨೪ ರಂದು ಸರ್ಕಾರ ಚಿತ್ರಮಂದಿರದಲ್ಲಿ ಶೇಕಡ ನೂರರಷ್ಟು ಆಸನಭರ್ತಿಗೆ ಅವಕಾಶ ಕಲ್ಪಿಸಿಕೊಟ್ಟಿದೆ.
‘ಕ್ರಾಂತಿ'ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ನಟನೆಯ ಬಹುನಿರೀಕ್ಷೆಯ ಸಿನಿಮಾ. ಯಜಮಾನ ಟೀಮ್ ಮತ್ತೆ ಒಂದಾಗಿರುವ ಮಹಾಮೂವೀ.ಪ್ಯಾನ್ ಇಂಡಿಯಾ ಲೆವೆಲ್ನಲ್ಲಿ
`ಕ್ರಾಂತಿ’ ಮಾಡೋದಕ್ಕೆ ನಿರ್ದೇಶಕ ವಿ. ಹರಿಕೃಷ್ಣ ಹಾಗೂ ನಿರ್ಮಾಪಕಿ ಶೈಲಜಾ ನಾಗ್ ಮೇಡಂ ಸಕಲ ಸಿದ್ದತೆ ಮಾಡಿಕೊಂಡಿದ್ದಾರೆ. ಅಕ್ಟೋಬರ್ನಿಂದ ಅಖಾಡಕ್ಕೆ ಇಳಿಯೋದಕ್ಕೆ ಪ್ಲ್ಯಾನ್ ರೂಪಿಸುತ್ತಿದ್ದಾರೆ. ಇತ್ತ ದಚ್ಚು ಕೂಡ `೧೦೦’ ಅನುಮತಿಯಿಂದ ಖುಷಿಯಾಗಿದ್ದಾರೆ. ಸದಾ ಅನ್ನದಾತರ ನಟರಾಗಿರುವ ಸಾರಥಿ, ಆದಷ್ಟು ಬೇಗ ಮೈಕೊಡವಿಕೊಂಡು ಫೀಲ್ಡಿಗಿಳಿಯುತ್ತಾರೆ. ಒಡೆಯ ಅಖಾಡಕ್ಕೆ ಇಳಿಯೋದ್ರಿಂದ ಸಹಸ್ರಾರು ಮಂದಿಗೆ ಸಹಾಯವಾಗುತ್ತೆ. ದಿನಗೂಲಿ ಕಾರ್ಮಿಕರು ನಿಟ್ಟುಸಿರು ಬಿಡುವಂತಾಗುತ್ತೆ, ಸಣ್ಣ-ಪುಟ್ಟ ಕಲಾವಿದರು, ಪೋಷಕ ನಟರು, ತಂತ್ರಜ್ಞರು ಸೇರಿದಂತೆ ಬಣ್ಣ ನಂಬಿಕೊಂಡವರಿಗೆ ಯಜಮಾನರಿಂದ ಸಿಕ್ಕಾಪಟ್ಟೆ ಹೆಲ್ಪ್ ಆಗುತ್ತೆ.
ಸರ್ಕಾರದ ಹಂಡ್ರೆಂಡ್ ಪರ್ಸೆಂಟ್ ಅಕ್ಯೂಪೆನ್ಸಿ ಆದೇಶದಿಂದ ಚಿತ್ರೋದ್ಯಮದಲ್ಲಿ ಸಂತೋಷ-ಸಂಭ್ರಮ ಮನೆಮಾಡಿದೆ. ಕೊರೊನಾ ಕೊಟ್ಟ ಹೊಡೆತದಿಂದ ಚೇತರಿಸಿಕೊಳ್ಳೋದಕ್ಕೆ ೧೦೦ರಷ್ಟು ಅನುಮತಿಯಿಂದ ಆನೆಬಲ ಸಿಕ್ಕಂತಾಗಿದೆ. ಇನ್ನೇನಿದ್ರೂ ಬಿಡುಗಡೆಗೆ ಸಜ್ಜಾಗಿರುವ ಚಿತ್ರಗಳು ತೆರೆಗೆ ಅಪ್ಪಳಿಸುವ ಸಮಯ. ಬರೋಬ್ಬರಿ ೪೦೦ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ಗೆ ರೆಡಿಯಾಗಿವೆ. ಶಿವಣ್ಣ-ಸುದೀಪ್-ವಿಜಯ್ ನಟನೆಯ ಬಹುನಿರೀಕ್ಷೆಯ ಸಲಗ-ಕೋಟಿಗೊಬ್ಬ೩-ಭಜರಂಗಿ-೨ ಚಿತ್ರ ಅಖಾಡಕ್ಕೆ ಇಳಿಯುವ ಸಮಯ ಬಂದಾಗಿದೆ. ಕೊರೊನಾದಿಂದ ಉದ್ಯಮಕ್ಕಾದ ನಷ್ಟವನ್ನ ತುಂಬಿಕೊಡುವ ಜವಾಬ್ದಾರಿ ಸ್ಟಾರ್ನಟರುಗಳು ಸೇರಿದಂತೆ ಸ್ಯಾಂಡಲ್ವುಡ್ನ ಪ್ರತಿಯೊಬ್ಬ ಕಲಾವಿದರ ಮೇಲಿದೆ. ಆ ಜವಬ್ದಾರಿಯನ್ನು ಎಲ್ಲರು ನಿಭಾಯಿಸ್ತಾರೆ, ಕನ್ನಡ ಚಿತ್ರರಂಗವನ್ನು ಉಳಿಸಿಬೆಳೆಸಿಕೊಂಡು ಹೋಗ್ತಾರೆ ಅದರಲ್ಲಿ ನೋ ಡೌಟ್ ಅಬೌಟ್ ಇಟ್.
ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ