ಚಾಲೆಂಜಿಂಗ್ ಸ್ಟಾರ್ ದರ್ಶನ್ ಯಜಮಾನ ಚಿತ್ರಕ್ಕೆ ಸೈಮಾ ಪ್ರಶಸ್ತಿ ಸಿಕ್ಕಿದೆ. ಒಡೆಯನ ಅನುಪಸ್ಥಿತಿಯಲ್ಲಿ ಅತ್ಯುತ್ತಮ ನಾಯಕ ನಟ ಪ್ರಶಸ್ತಿಯನ್ನು ಯಜಮಾನ ಚಿತ್ರದ ನಿರ್ಮಾಪಕಿ ಶೈಲಜಾ ನಾಗ್ ಅವರು ಸ್ವೀಕರಿಸಿದ್ದರು. ಹೈದ್ರಾಬಾದ್ ನಿಂದ ಮರಳಿದ ಬೆನ್ನಲ್ಲೇ ಸೈಮಾ ಅವಾರ್ಡ್ ನ ಚಕ್ರವರ್ತಿಗೆ ತಲುಪಿಸಿದ್ದಾರೆ. ಖುಷಿ ಖುಷಿಯಾಗಿ ಕ್ಯಾಮೆರಾಗೆ ಒಂದು ಪೋಸ್ ಕೊಟ್ಟಿದ್ದಾರೆ. ಆ ಸಂತೋಷದ ಗಳಿಗೆಯ ಪಿಕ್ಚರ್ ಇದು.
ಅಂದ್ಹಾಗೇ,2021ರ ಸೈಮಾ ಅವಾರ್ಡ್ ಹೈದ್ರಾಬಾದ್ ಅಖಾಡದಲ್ಲಿ ಅದ್ದೂರಿಯಾಗಿ ತೆರೆಬಿದ್ದಿದೆ. ಯಾವತ್ತೂ ಕೂಡ ಸಿನಿಮಾ ಚಿತ್ರೋತ್ಸವದಲ್ಲಿ ಚಕ್ರವರ್ತಿ ಭಾಗಿಯಾಗಲ್ಲ. ಅದಕ್ಕೆ ಬಲವಾದ ಕಾರಣ ಇದೆ.
ಗುಂಪಲ್ಲಿ ಗೋವಿಂದ ಅಂತ ಎದ್ದುಬರುವ ಜಾಯಮಾನ ಗಂಧದಗುಡಿಯ ಮಂದಿಯ ಕಲಾವಿದರದ್ದಲ್ಲ ಬಿಡಿ.ಯಾವತ್ತು ಕನ್ನಡ ಚಿತ್ರರಂಗದ ಸಿನಿಮಾ ಮಂದಿಗೆ ಫ್ರಂಟ್ ರೋ ನಲ್ಲಿ ಕೂರೋದಕ್ಕೆ ಅವಕಾಶ ಸಿಗುತ್ತೋ, ಅವತ್ತು ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾಗಿಯಾಗ್ತೇನೆ. ಅಲ್ಲಿವರೆಗೂ, ಯಾವುದೇ ಕಾರಣಕ್ಕೆ ಚಿತ್ರೋತ್ಸವಕ್ಕೆ ಬಂದು ಹಿಂದೆ ಎಲ್ಲೋ ಮೂಲೆಯಲ್ಲಿ ಕನ್ನಡದ ಕಲಾವಿದರೆಲ್ಲ ಕೂರೋದಕ್ಕೆ ನಂಗೆ ಇಷ್ಟವಿಲ್ಲ.
ಹೀಗಾಗಿ, ನಾನು ಬರುವುದಿಲ್ಲ ಎನ್ನುವ ತೀರ್ಮಾನ ಡಿಬಾಸ್ ದರ್ಶನ್ ರದ್ದು. ಅವರ ನಿರ್ಧಾರ ಸರಿಯಾಗಿದೆ ಬಿಡ್ರಿ. ಯಾವತ್ತು ಕನ್ನಡ ಚಿತ್ರರಂಗದ ಸಾಧಕರನ್ನ ಫಿಲ್ಮ್ ಫೆಸ್ಟಿವಲ್ ನಲ್ಲಿ ಮೊದಲ ಸಾಲಿನಲ್ಲಿ ಕೂರಿಸುವ ತೀರ್ಮಾನಕ್ಕೆ ಚಿತ್ರೋತ್ಸವದ ಮಂದಿ ಬರ್ತಾರೋ, ಅಂದೇ ಬಾಕ್ಸ್ ಆಫೀಸ್ ಸುಲ್ತಾನ್ ಹೋಗಲಿ ಅಲ್ಲವೇ.