32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ. ಕೈಯಲ್ಲಿ ಸಿಗಾರ್ ಹಿಡಿದು
ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.
ಚಂದನವನ ಕಂಡ ಚೆಂದದ ಚೆಲುವೆ ನಟಿ ಶ್ರುತಿ ಬರ್ತ್ ಡೇ ಸಂಭ್ರಮದಲ್ಲಿದ್ದಾರೆ. 45 ನೇ ವಸಂತಕ್ಕೆ ಕಾಲಿಟ್ಟಿರುವ ಶ್ರುತಿ, ಕುಟುಂಬದ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಅಭಿಮಾನಿಗಳು, ಸ್ನೇಹಿತರು,ಹಿತೈಷಿಗಳು ಸೇರಿದಂತೆ ಎಲ್ಲರಿಂದ ನಟಿ ಶ್ರುತಿಗೆ ಶುಭಾಶಯಗಳ ಮಹಾಪೂರ ಹರಿದುಬರ್ತಿದೆ.
32 ವರ್ಷಗಳ ಸಿನಿಜರ್ನಿಯಲ್ಲಿ ಇದೇ ಮೊದಲ ಭಾರಿಗೆ ಹಿಂದೆಂದೂ ಎತ್ತಿರದ ಅವತಾರ ಎತ್ತಿದ್ದಾರೆ. ಬಹುನಿರೀಕ್ಷೆಯ ಭಜರಂಗಿ 2 ಚಿತ್ರದಲ್ಲಿ ಖಡಕ್ಕಾಗಿ ಕಾಣಿಸಿಕೊಂಡಿದ್ದಾರೆ.
ಕೈಯಲ್ಲಿ ಸಿಗಾರ್ ಹಿಡಿದು ಲುಕ್ ಕೊಟ್ಟಿರುವ ಪೋಸ್ಟರ್ ಈಗಾಗಲೇ ರಿಲೀಸ್ ಆಗಿ ಹವಾ ಎಬ್ಬಿಸಿತ್ತು. ಈಗ ಬರ್ತ್ ಡೇ ಗೆ ಬಿಡುಗಡೆಯಾಗಿರುವ ಮಗದೊಂದು ಲುಕ್ ಧಮ್ ಗಿಂತ ಹೆಚ್ಚೇ ಹುಚ್ಚೆಬ್ಬಿಸಿದೆ.
ಶ್ರುತಿಯವರ ಲುಕ್-ಗೆಟಪ್ ಖಡಕ್ ಖಳನಾಯಕಿ ಅನ್ನೋದು ಮೇಲ್ನೋಟಕ್ಕೆ ಗೊತ್ತಾಗುತ್ತೆ. ಕಾಟನ್ ಸೀರೆ,ಹಣೆಗೆ ಚಂದಿರನಂತಹ ಬಿಂದಿ, ಕೈ ಬೆರಳಿಗೆ ಸಿಲ್ವರ್ ಉಂಗುರ, ಕೈ ಖಡಗ ತೊಟ್ಟು ಸುರಳಿ ಕೂದಲ ಬಿಟ್ಟುಕೊಂಡು ಖಡಕ್ಕಾಗಿಯೇ ಪೋಸ್ ಕೊಟ್ಟಿದ್ದಾರೆ. ನಟಿ ಶ್ರುತಿ ಫ್ಯಾನ್ಸ್ ಮಾತ್ರವಲ್ಲ ಚಿತ್ರಪ್ರೇಮಿಗಳೆಲ್ಲ ಕಾತುರರಾಗಿದ್ದಾರೆ.
ಭಜರಂಗಿ ಅಖಾಡಲ್ಲಿ ಹೇಗಿರಲಿದೆ ನಟಿ ಶ್ರುತಿಯ ಅಬ್ಬರ ಆರ್ಭಟ ಜಸ್ಟ್ ವೇಯ್ಟ್ ಅಂಡ್ ವಾಚ್. ಅತೀ ಶೀಘ್ರದಲ್ಲೇ ಭಜರಂಗಿ 2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಲಿದೆ.