ಲಾಂಗ್ ಹಿಡಿದು ಎಂಟ್ರಿಕೊಟ್ಟ `ರಾಣ’ ; ಕೆ.ಮಂಜು ಮಗನ ಬಗ್ಗೆ ಹೀಗಂದ್ರು ಉಪ್ಪಿ !?

ಲಾಂಗ್ ತಯಾರಾದ್ಮೇಲೆ ನಾನ್ ಕೊಟ್ಟೆ ನೀನ್ ಕೊಟ್ಟೆ ನಾನ್ ಹಿಡ್ದೆ ನೀನ್ ಹಿಡ್ದೆ ಅಲ್ಲ. ಲಾಂಗ್‌ನ ಬಿಸಿ ಕುಲುಮೆಯಲ್ಲಿ ಹಾಕಿ ತಯಾರ್ ಮಾಡಿದ್ದನ್ನ ಯಾರು ಮರೆತಿಲ್ಲ. ನೋ ಎಕ್ಸ್ ಕ್ಯೂಸ್ ಮೀ ಪ್ಲೀಸ್, ಎಲ್ಲರ ಕಾಳ್ ಎಳೀತದೆ ಕಾಲ..ಇದು ಉಪ್ಪಿ-2 ಚಿತ್ರದ ಕೆಂಡದಂತಹ ಡೈಲಾಗ್. ರಿಯಲ್‌ಸ್ಟಾರ್ ಉಪ್ಪಿಯವರ ಈ ಜಬರ್ದಸ್ತ್ ಡೈಲಾಗ್‌ನ ಅವರ ಫ್ಯಾನ್ಸ್ ಮಾತ್ರವಲ್ಲ ಇಂಡಸ್ಟಿçಯ ಮಂದಿಯೂ ಮರೆಯೋ ಹಂಗಿಲ್ಲ ಬಿಡಿ

ಲಾಂಗ್' ಬಗ್ಗೆ ಮಾತನಾಡುವಾಗ ರಿಯಲ್‌ಸ್ಟಾರ್ ಉಪ್ಪಿನಾ ಹಾಗೂ ಶಿವಣ್ಣನ್ನ ಕಣ್ತುಂಬಿಕೊಳ್ಳಲೆಬೇಕು. ಯಾಕಂದ್ರೆ, ಮಾಯಬಜಾರ್‌ನಲ್ಲಿಲಾಂಗ್’ ಮೂಲಕ ಓಂಕಾರ ಬರೆದವರು ಈ ಇಬ್ಬರು ಧ್ರುವತಾರೆಗಳು. ಇವತ್ತಿಗೂ ಲಾಂಗ್ ಹಿಡ್ಕೊಂಡು ಫೀಲ್ಡ್ ಗೆ ಎಂಟ್ರಿಕೊಡುವವರು ಶಿವಣ್ಣ ಹಾಗೂ ಉಪ್ಪಿಯವರ ಸಜೆಷನ್ ತಗೋತ್ತಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಹೆಸರಾಂತ ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್ ಮಂಜುಗೆ ಶಿವಣ್ಣ ಲಾಂಗ್ ಹಿಡಿಯೋದನ್ನ ಹೇಳಿಕೊಟ್ಟಿದ್ದರು. ಸೆಂಚುರಿಸ್ಟಾರ್ ಕೈನಿಂದ ಲಾಂಗ್ ಹಿಡಿಯೋ ವಿದ್ಯೆ ಕಲಿತ ಶ್ರೇಯಸ್ `ರಾಣ’ ಅಖಾಡಕ್ಕೆ ಧುಮ್ಕಿದ್ದರು.

ರಾಣ' ಶ್ರೇಯಸ್ ಮಂಜು ಅಭಿನಯದ ಹೈವೋಲ್ಟೇಜ್ ಸಿನಿಮಾ. ಟೈಟಲ್‌ನಿಂದಲೇ ಸಂಚಲನ ಸೃಷ್ಟಿಸಿರುವರಾಣ’ ಚಿತ್ರ ಈಗ ಫಸ್ಟ್ ಲುಕ್ ಟೀಸರ್ ಮೂಲಕ ಹವಾ ಎಬ್ಬಿಸಿದೆ. ದೊಡ್ಮನೆ ಯುವರಾಜನಿಂದ ಲಾಂಗ್ ಹಿಡಿಯೋದನ್ನ ಹೇಳಿಸಿಕೊಂಡು ರಾಣ' ಶೂಟಿಂಗ್ ಸೆಟ್‌ಗೆ ಎಂಟ್ರಿಕೊಟ್ಟಿದ್ದ ನಟ ಶ್ರೇಯಸ್, ಟೀಸರ್‌ನಲ್ಲಿ ಲಾಂಗ್ ಹಿಡಿದುಕೊಂಡೇ ದರ್ಶನ ನೀಡಿದ್ದಾರೆ. ಮೈಹುರಿಗೊಳಿಸಿಕೊಂಡು, ಕಣ್ಣಲ್ಲಿ ಬೆಂಕಿನೋಟ ಇಟ್ಟುಕೊಂಡು, ಶ್ರೇಯಸ್ರಾಣ’ನಾಗಿ ಧಗಧಗಿಸ್ತಿರುವುದನ್ನ ನೋಡಿ, ಪಡ್ಡೆಹುಲಿ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. `ರೊಚ್ಚಿಗೆದ್ದ ಸಿಂಹ ಇವನು. ಚಂಡಪ್ರಚಂಡ ಇವನು. ಬೆಚ್ಚಿಬೀಳಿಸೋ ಸಿಂಹ ಇವನು ದೂರ ನಿಲ್ಲಲೆ. ರ‍್ಯಾಪರ್ ಚಂದನ್ ಶೆಟ್ಟಿ ಟ್ಯೂನ್ ಹಾಕಿರೋ ಲಿರಿಕ್ಸ್ ನ ಶ್ರೇಯಸ್ ಫ್ಯಾನ್ಸ್ ಹಮ್ಮಿಂಗ್ ಮಾಡ್ತಿದ್ದಾರೆ.

ರಿಯಲ್‌ಸ್ಟಾರ್ ಉಪೇಂದ್ರ ಅವರು ರಾಣ' ಫಸ್ಟ್ ಲುಕ್ ಟೀಸರ್‌ನ ರಿಲೀಸ್ ಮಾಡಿಕೊಟ್ಟಿದ್ದಾರೆ. ಶ್ರೇಯಸ್ ಇನ್ನೋಸೆಂಟ್ ಫೇಸ್‌ನಲ್ಲಿ ವೈಲೆಂಟ್ ಲುಕ್ ತೋರಿಸಿದ್ದೀರಿ ನಿರ್ದೇಶಕರೇ ಗುಡ್‌ಜಾಬ್ ಅಂತ ಡೈರೆಕ್ಟರ್ ನಂದಕಿಶೋರ್‌ಗೆ ಕಾಂಪ್ಲಿಮೆಂಟ್ ಕೊಟ್ಟರು. ಪಡ್ಡೆಹುಲಿ ಹಾಗೂ ವಿಷ್ಣುಪ್ರಿಯ ಎರಡು ಸಿನಿಮಾಗಿಂತರಾಣ’ ಚಿತ್ರಕ್ಕೆ ತುಂಬಾ ಹಾರ್ಡ್ ವರ್ಕ್ ಮಾಡಿದ್ದೀಯಾ ಅದು ಸ್ಕ್ರೀನ್ ಮೇಲೆ ಕಾಣುತ್ತಿದೆ ಒಳ್ಳೆಯದಾಗಲಿ ಹೀರೋ ಅಂತ ಶ್ರೇಯಸ್‌ಗೆ ಉಪ್ಪಿ ವಿಶ್ ಮಾಡಿದ್ರು. ಸೂಪರ್‌ರಂಗ ಸಿನಿಮಾದಿಂದ ನಾನು ನಿಮ್ಮ ದೊಡ್ಡ ಅಭಿಮಾನಿ. ನಿಮ್ಮ ಎ' ಸಿನಿಮಾನ ನನ್ನೆಲ್ಲಾ ಟಾಲಿವುಡ್ ಫ್ರೆಂಡ್ಸ್ ಗೆ ತೋರಿಸಿದ್ದೆ ಹಾಗೂಸೂಪರ್’ ಚಿತ್ರಕ್ಕೆ ಇಡೀ ಕ್ಲಾಸ್‌ಮೆಟ್ಸ್ ಎಲ್ಲಾ ಹೋಗಿದ್ವಿ ಎಂದು ನೆನಪು ಮಾಡಿಕೊಂಡರು.

ನಿರ್ಮಾಪಕ ಗುಜ್ಜಾಲ್ ಜೊತೆ ಸೇರಿ ಮಗನ ರಾಣ' ಚಿತ್ರಕ್ಕೆ ಕೆ. ಮಂಜು ಕೂಡ ಬಂಡವಾಳ ಹೂಡಿದ್ದಾರೆ. ಫಸ್ಟ್ ಲುಕ್ ಟೀಸರ್ ಸಂದರ್ಭದಲ್ಲಿ ಹಾಜರಿದ್ದ ನಿರ್ಮಾಪಕರಾದ ಕೆ.ಮಂಜು, ರಿಯಲ್‌ಸ್ಟಾರ್ ಗೆ ಕೃತಜ್ಞತೆ ಸಲ್ಲಿಸಿದರು.ರಾಣ’ ಚಿತ್ರದ ಮುಹೂರ್ತಕ್ಕೆ ಕರೆದ್ವಿ ಬಂದರು. ಈಗ ಟೀಸರ್ ರಿಲೀಸ್‌ಗೆ ಬಂದು ಶುಭಹಾರೈಸಿದ್ದಾರೆ. ಸಿನಿಮಾಗೋಸ್ಕರ ಕಷ್ಟಪಟ್ಟಿದ್ದೇನೆ ಅಂತ ಶ್ರೇಯಸ್ ಹೇಳ್ತಿದ್ದಾನೆ ಆದರೆ ಉಪ್ಪಿ ಸಿಕ್ಕಾಪಟ್ಟೆ ಕಷ್ಟಪಟ್ಟಿರುವುದನ್ನ ನಾನು ನೋಡಿದ್ದೇನೆ. ಆಗೆಲ್ಲಾ ಜಿಮ್ ಇಲ್ಲ ಏನು ಇಲ್ಲ ಅಂತಹ ಹೊತ್ತಲ್ಲೇ ಫಿಟ್ ಆಗಿರುವುದಕ್ಕೆ ಸಾಕಷ್ಟು ಕಸರತ್ತು ನಡೆಸಿದ್ದಾರೆ ಎಂದರು.

ರಾಣ' ಔಟ್ ಅಂಡ್ ಔಟ್ ಮಾಸ್ ಸಿನಿಮಾ. ಪವರ್‌ಪ್ಯಾಕ್ಡ್ ಆಕ್ಷನ್ ಸೀಕ್ವೆನ್ಸ್ ಗಳನ್ನೊಳಗೊಂಡಿರುವರಾಣ’ ಚಿತ್ರಕ್ಕೆ ಪೊಗರು ಡೈರೆಕ್ಟರ್ ಆಕ್ಷನ್ ಕಟ್ ಹೇಳಿದ್ದಾರೆ. ಪಡ್ಡೆಹುಲಿ ಹೀರೋ ಪೊಗದಸ್ತಾದ ಬಾಡಿಬಿಲ್ಡ್ ಮಾಡಿದ್ದಾರೆ. ನಾಯಕ ಶ್ರೇಯಸ್‌ಗೆ ರೀಷ್ಮಾ ನಾಣಯ್ಯ- ರಜಿನಿ ಭಾರದ್ವಾಜ್ ಜೊತೆಯಾಗಿದ್ದಾರೆ. ಶೇಖರ್ ಚಂದ್ರ ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ ಚಿತ್ರಕ್ಕಿದೆ. ಪೊಗರು ಚಿತ್ರದ ಟೆಕ್ನಿಷಿಯನ್ಸ್ ರಾಣ ಚಿತ್ರಕ್ಕೆ ಬೆವರು ಸುರಿಸುತ್ತಿದ್ದು ಮೂವೀ ಅದ್ದೂರಿಯಾಗಿ ಮೂಡಿಬರಲಿದೆ.

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!