ಕಿರಾತಕ-2 ಲೆಕ್ಕ ಚುಪ್ತ ಮಾಡಿದ್ರಂತೆ ಯಶ್ ! ಬಡ್ಡಿ ಸಮೇತ 13 ಕೋಟಿ ಸೆಟ್ಲ್ ಮೆಂಟ್ ಮಾಡಿದ್ದು ನಿಜವೇನು ?

ಸಾಮಾಜಿಕ ಜಾಲತಾಣದಲ್ಲಿ ಕಿರಾತಕ 2 ಸೆಟಲ್ ಮೆಂಟ್ ವಿಚಾರವಾಗಿ ಚರ್ಚೆಗಳಾಗ್ತಿದೆ. ಕೆಲವರು ಈ‌ ಸುದ್ದಿ ನಿಜ ಅಂತ ಒಪ್ಕೊಂಡ್ರೆ, ಇನ್ನೂ ಕೆಲವರು ಫೇಕ್ ನ್ಯೂಸ್ ಬಿಟ್ಟಾಕ್ರಿ ಅಂತಿದ್ದಾರೆ. ನಿಜಕ್ಕೂ ರಾಕಿಭಾಯ್ ಸೆಟಲ್ ಮೆಂಟ್ ಮಾಡಿದ್ರಾ ? ಮೈ ನೇಮ್ ಈಸ್ ಕಿರಾತಕ ಚಿತ್ರದ ಅನ್ನದಾತನಿಗೆ ಬಡ್ಡಿ ಸಮೇತ 13 ಕೋಟಿ ಕೊಟ್ಟರಾ? ಆ ಬಡಾ ಖಬರ್ ಸ್ಟೋರಿ ಇಲ್ಲಿದೆ

ಕೆಜಿಎಫ್.. ಕೆಜಿಎಫ್..ಕೆಜಿಎಫ್ ಈ ಮೂರಕ್ಷರದ ಮಹಾ ಸಿನಿಮಾದ ಅಬ್ಬರ ಆರ್ಭಟದ ನಡುವೆ ಕಿರಾತಕ 2 ಚಿತ್ರದ ಸುದ್ದಿಯೊಂದು ಸಲಾಂ ರಾಕಿಭಾಯ್ ಎನ್ನುತ್ತಿದೆ. ಸೆಲ್ಫ್ ಮೇಡ್ ಷೆಹಜಾದನನ್ನ ತಲೆ ಮೇಲೆ ಹೊತ್ತು ಕುಣಿಯುತ್ತಿದೆ. ಅನ್ನದಾತನಿಗೆ ಬಡ್ಡಿ ಸಮೇತ ಕೊಟ್ಟರೆನ್ನುವ ಬಡಾಬ್ರೇಕಿಂಗ್ ನ್ಯೂಸು ಸೆನ್ಸೇಷನ್ ಸೃಷ್ಟಿಸಿದೆ. ಅಣ್ತಮ್ಮನ ಫ್ಯಾನ್ಸ್ ಕಾಲರ್ ಪಟ್ಟಿ ಎಗರಿಸುವಂತೆ ಮಾಡಿದೆ.

ಕೆಜಿಎಫ್‌ ಚಿತ್ರ ತೆರೆಕಂಡಾಗಿನಿಂದಲೂ ಅಣ್ತಮ್ಮನ ಫ್ಯಾನ್ಸ್ ಕಾಲರ್ ಪಟ್ಟಿ ಟೈಟ್ ಮಾಡಿಕೊಳ್ಳುತ್ತಲೇ ಇದ್ದಾರೆ. ಅಪ್‌ಕೋರ್ಸ್ ಮಾಡಿಕೊಳ್ಳಲೆಬೇಕು. ಇದೀಗ ಮತ್ತೊಮ್ಮೆ ರಾಕಿಂಗ್ ಭಕ್ತರು ಕಣ್ಣುಬ್ಬು ಎಗರಿಸುತ್ತಾ ಸೀಟಿ ಹೊಡೆಯೋದಕ್ಕೆ ಕಾರಣ
‘ಮೈ ನೇಮ್ ಈಸ್ ಕಿರಾತಕ’ ಚಿತ್ರದ ಅನ್ನದಾತ ಜಯ್ಯಣ್ಣ ಅವರಿಗೆ ಯಶ್ 13 ಕೋಟಿ‌ ಸೆಟಲ್ ಮೆಂಟ್ ಮಾಡಿರುವುದು.

‘ಮೈ ನೇಮ್ ಈಸ್ ಕಿರಾತಕ’ ಅಣ್ತಮ್ಮ ಯಶ್ ಅಭಿನಯಿಸಬೇಕಿದ್ದ ಚಿತ್ರ. ಕೆಜಿಎಫ್ ಪಾರ್ಟ್ 1 ರಿಲೀಸ್ ಟೈಮ್ ನಲ್ಲಿ ‘ ಮೈ ನೇಮ್ ಈಸ್’ ಕಿರಾತಕ ಚಿತ್ರ ಸೆಟ್ಟೇರಿತ್ತು. ಗಡ್ಡ- ಮೀಸೆಗೆ ಕತ್ತರಿ ಹಾಕಿಸಿಕೊಂಡು ಸ್ಟೈಲಿಷ್ ಹೇರ್ ಸ್ಟೈಲ್ ಮಾಡಿಸಿಕೊಂಡು ಪಂಕಾಗಿ ಯಶ್ ಕ್ಯಾಮೆರಾ ಮುಂದೆ ಬಂದಿದ್ದರು. ವೈಟ್ ವೈಟ್ ಪಂಚೆ ತೊಟ್ಟು ಬ್ಲೂ ಕಲರ್ ಶರ್ಟ್ ನಲ್ಲಿ ಅಣ್ತಮ್ಮನ ‘ ಮೈ ನೇಮ್ ಈಸ್’ ಕಿರಾತಕ ಫೋಟೋಶೂಟ್ ಕೂಡ ನಡೆದಿತ್ತು. ಈ ಮಧ್ಯೆ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ರಾಜ್ಯದ ಗಡಿ ದಾಟುವುದಲ್ಲದೇ ರಾಷ್ಟ್ರವನ್ನ ದಾಟಿತು. ರಾಕಿಂಗ್ ಸ್ಟಾರ್ ಗೆ ನ್ಯಾಷನಲ್ ಸ್ಟಾರ್ ಕಿರೀಟಮುಡಿಗೇರಿತು. ನೋಡ ನೋಡುತ್ತಲೇ ಯಶ್ ಇಮೇಜ್ ಏಕ್ದಮ್ ನರಾಚಿ ಲೋಕ ದಾಟಿ ಚಿನ್ನದ ಸಾಮ್ರಾಜ್ಯ ಅಲಂಕರಿಸಿತ್ತು.ಕೆಜಿಎಫ್ ಚಾಪ್ಟರ್ 2 ಗಾಗಿ ಬೇಡಿಕೆ ಹೆಚ್ಚಾಯ್ತು.

ಮೈ ನೇಮ್ ಈಸ್ ಕಿರಾತಕ ಆರಂಭಿಸುವ ಹೊತ್ತಲ್ಲಿ ಕೆಜಿಎಫ್‌ ಸಿನಿಮಾನ‌ ಎರಡು ಚಾಪ್ಟರ್ ನಲ್ಲಿ ತೆರೆಗೆ ತರಬೇಕು ಎನ್ನುವ ಪ್ಲ್ಯಾನ್ ಆಗಿತ್ತೋ ಇಲ್ಲವೋ ನಮಗೆ ಗೊತ್ತಿಲ್ಲ. ಕೆಜಿಎಫ್ ಬಿಡುಗಡೆಗೆ ಮೊದಲೇ ‘ ಮೈ ನೇಮ್ ಈಸ್’ ಕಿರಾತಕ ಚಿತ್ರಕ್ಕೆ ಚಾಲನೆ‌ ಕೊಡಲಾಗಿತ್ತು. ಫೋಟೋಶೂಟ್ ನಂತರ ಕೆಜಿಎಫ್ ಪ್ರಮೋಷನ್ ನಲ್ಲಿ ಯಶ್ ಬ್ಯುಸಿಯಾದ ಕಾರಣಕ್ಕೆ ಕಿರಾತಕ 2 ಗೆ ಬ್ರೇಕ್ ಹಾಕಿದರು. ಕೆಜಿಎಫ್ ಬಿಡುಗಡೆಗೊಂಡು ಸುನಾಮಿ ಎಬ್ಬಿಸಿದಾಗ ಸ್ವತಃ ಯಶ್ ಕಿರಾತಕ 2 ಚಿತ್ರ ಮಾಡುವುದಾಗಿ ಹೇಳಿಕೊಂಡರಾದರೂ ಕೆಜಿಎಫ್ ಚಾಪ್ಟರ್ 2 ಸುನಾಮಿಯ ನಡುವೆ ಮೈ ನೇಮ್ ಈಸ್ ಕಿರಾತಕ ಸಿನಿಮಾ ಸೈಲೆಂಟ್ ಆಯ್ತು. ಇದೀಗ ಸೆಟ್ಲ್ ಮೆಂಟ್ ಸುದ್ದಿ ಕಿರಾತಕ 2 ಚಿತ್ರಕ್ಕೆ ಫುಲ್ ಸ್ಟಾಪ್ ಹಾಕ್ತಿದೆ.

ಹೌದು, ‘ಮೈ ನೇಮ್ ಈಸ್ ಕಿರಾತಕ’ ಚಿತ್ರಕ್ಕೆ ಯಶ್ ಬಣ್ಣ ಹಚ್ಚೋದು ಇನ್ನೂ ಕನಸಿನ ಮಾತಾ? ಗೊತ್ತಿಲ್ಲ ಕಣ್ರೀ. ಆದರೆ, ಶೂಟಿಂಗ್ ಗೆ 3 ಕೋಟಿ ಖರ್ಚಾಗಿತ್ತಂತೆ. ನಿರ್ಮಾಪಕರಾದ ಜಯ್ಯಣ್ಣ ಯಶ್ ಗೆ ಅಡ್ವಾನ್ಸ್ ಕೂಡ ಕೊಟ್ಟಿದ್ದರಂತೆ. ಚಿತ್ರೀಕರಣಕ್ಕೆ ಖರ್ಚಾದ ಮೂರು ಕೋಟಿ ಹಾಗೂ ಅಡ್ವಾನ್ಸ್ ಆಗಿ ತೆಗೆದುಕೊಂಡ ಹಣ ಎಲ್ಲದಕ್ಕೂ ಶೇಕಡ 3 ರಷ್ಟು ಬಡ್ಡಿ ಸೇರಿಸಿ ಒಟ್ಟು 13 ಕೋಟಿ ಹಣವನ್ನ ಅನ್ನದಾತ ಜಯ್ಯಣ್ಣ ಅವರಿಗೆ ಯಶ್ ವಾಪಾಸ್ ನೀಡಿದ್ದಾರಂತೆ. ಹೀಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸುದ್ದಿ ಮಾಡ್ತಿದೆ.

ಹೀಗೆ ಹರಿದಾಡ್ತಿರುವ ಸುದ್ದಿ ನಿಜಾನೋ? ಸುಳ್ಳೋ ? ಗೊತ್ತಿಲ್ಲ. ಆದರೆ, ಬೆಂಕಿ ಇಲ್ಲದೇ ಹೊಗೆ ಆಡಲ್ಲ ಅಲ್ಲವೇ.‌ಎನಿವೇ, ಇಂತಹದ್ದೊಂದು ಬೆಳವಣಿಗೆ ಆಗಿದ್ದರೆ ನಿಜಕ್ಕೂ ಒಳ್ಳೆಯದೇ. ಅನ್ನದಾತರ ಕಣ್ಣೀರು ಒರೆಸಿದಂತಾಗುತ್ತೆ, ಕೈಹಿಡಿದಂತಾಗುತ್ತೆ. ಕಲಾವಿದರು ಯಾರೇ ಇರಲಿ ಸಿನಿಮಾ ಮಾಡೋದಕ್ಕೆ ಇಷ್ಟ ಇಲ್ಲ ಅಂದರೆ, ಡೇಟ್ ಕ್ಲ್ಯಾಷ್ ಆಗ್ತಿದೆ ಅಂದರೆ, ಚಿತ್ರತಂಡದಿಂದ ಹೊರಬರುವ ನಿರ್ಧಾರ ತೆಗೆದುಕೊಂಡರೆ, ಅಟ್ ಲೀಸ್ಟ್ ಅಡ್ವಾನ್ಸ್ ಹಣವನ್ನಾದರೂ ವಾಪಾಸ್ ಮಾಡುವ ಪ್ರವೃತ್ತಿಯನ್ನ ಬೆಳೆಸಿಕೊಳ್ಳುವುದಕ್ಕೆ ರಾಕಿಭಾಯ್ ಪ್ರೇರಣೆಯಾಗ್ತಾರೆ. ಮೈ ನೇಮ್ ಈಸ್ ಕಿರಾತಕ ಕೈಬಿಟ್ಟಿದ್ದು ನಿಜವೇ ಆದರೆ
ಅದಕ್ಕೆ ಕಾರಣ ನ್ಯಾಷನಲ್ ಸ್ಟಾರ್ ಕಿರೀಟವಾ? ಅಥವಾ ಇಂಟರ್ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರುವ ಹೊತ್ತಲ್ಲಿ ಹಳ್ಳಿ ಸೊಗಡಿನ ಚಿತ್ರ ಮಾಡಬಾರದು ಎನ್ನುವ ನಿರ್ಧಾರವಾ ?ಸ್ವತಃ ಅಣ್ತಮ್ಮನೇ ಸತ್ಯವನ್ನ ಕ್ಯಾಮರಾ ಮುಂದೆ ಹೇಳೋವರೆಗೂ ಕಾಯಬೇಕು ಕಾಯೋಣ ಅಲ್ಲವೇ.

ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!