ಶ್ರೀಮುರಳಿ ಮತ್ತು ಮಹೇಶ್ ಕಾಂಬಿನೇಷನ್ನ ಮೊದಲ ಸಿನಿಮಾ. ಇನ್ನು, ಉಮಾಪತಿ ನಿರ್ಮಾಣದ ಸಿನಿಮಾ ಅಂದಮೇಲೆ, ಭರ್ಜರಿಯಾಗಿಯೇ ಇರುತ್ತೆ. ನಿರ್ದೇಶಕ ಮಹೇಶ್ ತಮ್ಮ ಮೊದಲ ಸಿನಿಮಾ “ಆಯೋಗ್ಯ”ದಲ್ಲೇ ಭರ್ಜರಿ ಸಕ್ಸಸ್ ಕಂಡವರು. ಅದೇ ಸಕ್ಸಸ್ ಉಳಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ “ಮದಗಜ” ಚಿತ್ರಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಒಂದೊಳ್ಳೆಯ ತಂಡ ಕಟ್ಟಿಕೊಂಡು ತಾವು ಅಂದುಕೊಂಡಂತೆಯೇ ಸಿನಿಮಾ ಮಾಡಿ ಮುಗಿಸಿದ್ದಾರೆ
ಮದಗಜ ಸದ್ಯದ ಮಟ್ಟಿಗೆ ಬಹು ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಈ ಚಿತ್ರ ಶೀರ್ಷಿಕೆ ಅನಾವರಣದಿಂದಲೇ ಸಾಕಷ್ಟು ಕುತೂಹಲ ಕೆರಳಿಸಿತ್ತು. ಚಿತ್ರೀಕರಣ ನಡೆಯುವ ಸಂದರ್ಭದಲ್ಲೂ ಆ ಕುತೂಹಲ ಉಳಿಸಿಕೊಂಡಿದ್ದು ಸುಳ್ಳಲ್ಲ. ಇತ್ತೀಚೆಗಷ್ಟೇ ಚಿತ್ರೀಕರಣ ಮುಕ್ತಾಯಗೊಂಡಿದೆ. ಈಗ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗುತ್ತಿದೆ. ಹೌದು, ಶ್ರೀಮುರಳಿ ಅವರ ಮತ್ತೊಂದು ನಿರೀಕ್ಷಿತ ಸಿನಿಮಾ ಇದು. ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಬಿಡುಗಡೆಯ ತಯಾರಿ ನಡೆಸುತ್ತಿದೆ.
ನಿರ್ದೇಶಕ ಮಹೇಶ್ ಅವರು, “ಮದಗಜ” ಚಿತ್ರಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದ್ದರು. ಅದರಂತೆಯೇ ಅವರು ಯಶಸ್ವಿಯಾಗಿಯೇ ಚಿತ್ರೀಕರಣ ಮಾಡಿದ್ದಾರೆ. ಕನ್ನಡದಲ್ಲಿ ಮತ್ತೊಂದು ಅದ್ಧೂರಿ ಸಿನಿಮಾ ಇದು. ಅದರಲ್ಲೂ ಶ್ರೀಮುರಳಿ ಮತ್ತು ಮಹೇಶ್ ಕಾಂಬಿನೇಷನ್ನ ಮೊದಲ ಸಿನಿಮಾ. ಇನ್ನು, ಉಮಾಪತಿ ನಿರ್ಮಾಣದ ಸಿನಿಮಾ ಅಂದಮೇಲೆ, ಭರ್ಜರಿಯಾಗಿಯೇ ಇರುತ್ತೆ. ನಿರ್ದೇಶಕ ಮಹೇಶ್ ಅವರು ತಮ್ಮ ಮೊದಲ ಸಿನಿಮಾ “ಆಯೋಗ್ಯ”ದಲ್ಲೇ ಭರ್ಜರಿ ಸಕ್ಸಸ್ ಕಂಡವರು. ಅದೇ ಸಕ್ಸಸ್ ಉಳಿಸಿಕೊಂಡು ಹೋಗಬೇಕು ಎಂಬ ಉದ್ದೇಶದಿಂದ “ಮದಗಜ” ಚಿತ್ರಕ್ಕೆ ಹಗಲಿರುಳು ಶ್ರಮಿಸಿದ್ದಾರೆ. ಒಂದೊಳ್ಳೆಯ ತಂಡ ಕಟ್ಟಿಕೊಂಡು ತಾವು ಅಂದುಕೊಂಡಂತೆಯೇ ಸಿನಿಮಾ ಮಾಡಿ ಮುಗಿಸಿದ್ದಾರೆ.
ಈಗ “ಮದಗಜ” ಜೋರು ಸದ್ದು ಮಾಡಾಗಿದೆ. ಪ್ರೇಕ್ಷಕರ ಮುಂದೆ ಬರುವುದಕ್ಕೂ ತಯಾರಿ ನಡೆಸುತ್ತಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ, “ಮದಗಜ” ಡಿಸೆಂಬರ್ನಲ್ಲಿ ದರ್ಶನ ನೀಡಲಿದ್ದಾನೆ. ಅದಕ್ಕಾಗಿ ಚಿತ್ರತಂಡ ಪ್ಲ್ಯಾನ್ ಮಾಡುತ್ತಿದೆ. ಈಗಾಗಲೇ ಒಂದು ಸುತ್ತಿನ ಚರ್ಚೆ ಕೂಡ ನಡೆಸಿರುವ ಚಿತ್ರತಂಡ, ಡಿಸೆಂಬರ್ ವೇಳೆಗೆ “ಮದಗಜ”ನನ್ನು ಪ್ರೇಕ್ಷಕರ ಮುಂದೆ ತರಬೇಕು ಎಂಬ ಮಾತುಕತೆ ನಡೆದಿದೆ. ಈ ಕಾರಣದಿಂದಲೇ ನಿರ್ದೇಶಕ ಮಹೇಶ್ ಅವರು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸದ್ಯ ಇದೊಂದು ಭರ್ಜರಿ ಬಜೆಟ್ ಸಿನಿಮಾ. ಅಷ್ಟೇ ಮಾಸ್ ಎಲಿಮೆಂಟ್ಸ್ ಕೂಡ ಇಲ್ಲಿರಲಿವೆ.
ಶ್ರೀಮುರಳಿ ಅವರಿಗೆ ಜೋಡಿಯಾಗಿ ಆಶಿಕಾ ರಂಗನಾಥ್ ಕಾಣಿಸಿಕೊಂಡಿದ್ದಾರೆ. ಶ್ರೀಮುರಳಿ ಅವರೊಂದಿಗೆ ಮೊದಲ ಸಲ ತೆರೆ ಹಂಚಿಕೊಳ್ಳುತ್ತಿದ್ದಾರೆ ಆಶಿಕಾ. ಸದ್ಯ ಆಶಿಕಾ ಅವರ ಎರಡು ಲುಕ್ ಬಿಡುಗಡೆಯಾಗಿದ್ದು, ಅದೊಂದು ಹಳ್ಳಿ ಹುಡುಗಿಯ ಪಾತ್ರ ಎಂಬುದನ್ನು ಪೋಸ್ಟರ್ ಹೇಳಿದೆ. ಇನ್ನೊಂದು ಪೋಸ್ಟರ್ ಕೂಡ ಮಾಸ್ ಲುಕ್ನಲ್ಲಿದೆ. ಅದರಲ್ಲೂ ಆಶಿಕಾ ಅವರು ಕೈಯಲ್ಲಿ ಸಿಗರೇಟ್ ಹಿಡಿದು ಧಮ್ ಹೊಡಿತಿರೋ ಪೋಸ್ಟರ್ ಕೂಡ ಸಾಕಷ್ಟು ಕುತೂಹಲ ಕೆರಳಿಸಿತ್ತು.
ಚಿತ್ರದ ಮತ್ತೊಂದು ವಿಶೇಷತೆ ಏನೆಂದರೆ, ತೆಲುಗಿನ ಜಗಪತಿ ಬಾಬು ಅವರಿಲ್ಲಿ ವಿಲನ್ ಆಗಿ ನಟಿಸಿದ್ದಾರೆ. ಅವರ ಪಾತ್ರದ ಕುರಿತ ಒಂದು ಟೀಸರ್ ಕೂಡ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ಪಡೆದಿದೆ. ಮತ್ತೊಂದು ವಿಶೇಷವೆಂದರೆ,
ದಕ್ಷಿಣ ಭಾರತದ ಖ್ಯಾತ ನಟಿ ದೇವಯಾನಿ ‘ಮದಗಜ’ ಚಿತ್ರದ ಮೂಲಕ ಎರಡು ದಶಕದ ಬಳಿಕ ಎಂಟಿರಯಾಗಿದ್ದಾರೆ.