ಕಿಚ್ಚನ ಮೇಲಿನ ಅಭಿಮಾನ- ಅಭಿಮಾನಿಯ ಸ್ಟ್ಯಾಂಪ್‌ ಗಿಫ್ಟ್!

ಸುದೀಪ್‌ ಅವರಿಗೆ ದೇಶ ವಿದೇಶಗಳಿಂದಲೂ ಗೌರವ ಸಿಕ್ಕಿದೆ. ಇಡೀ ಭಾರತೀಯ ಚಿತ್ರರಂಗವೇ ಕಿಚ್ಚನ ನಟನೆಯನ್ನು ಕೊಂಡಾಡಿದೆ. ನಟನೆ ಮಾತ್ರವಲ್ಲ, ಮಾನವೀಯತೆ ಗುಣದಲ್ಲೂ ಸೈ ಎನಿಸಿಕೊಂಡಿರುವ ಸುದೀಪ್‌, ತಮ್ಮ ಬಣ್ಣದ ಲೋಕದ ಜೊತೆ ಜೊತೆಯಲ್ಲಿ ಅವರು ಸಾಮಾಜಿಕ ಕೆಲಸವನ್ನೂ ಮಾಡಿಕೊಂಡು ಬಂದವರು. ಈಗಾಗಲೇ ಸರ್ಕಾರ ಹಾಗೂ ಹಲವು ಸಂಘ-ಸಂಸ್ಥೆಗಳು ಅವರನ್ನು ಗೌರವಿಸಿ, ಸತ್ಕರಿಸಿವೆ. ಈಗ ಇನ್ನೂ ಒಂದು ಗೌರವ ಸಂದಿದೆ. ಅದು ಅವರ ಪ್ರೀತಿಯ ಅಭಿಮಾನಿಯಿಂದ ಹೌದು, ಸುದೀಪ್‌ ಅಭಿಮಾನಿಯೊಬ್ಬ, ಭಾರತೀಯ ಅಂಚೆ ಇಲಾಖೆಯ ಅಂಚೆ ಚೀಟಿಯಲ್ಲಿ ಸುದೀಪ್‌ ಚಿತ್ರವನ್ನು ಮುದ್ರಿಸಿ, ಸ್ಟ್ಯಾಂಪ್‌ ಬಿಡುಗಡೆ ಮಾಡಿ ಅಭಿಮಾನ ತೋರಿದ್ದಾನೆ.‌


ಹೌದು, ಸುದೀಪ್‌ ಈಗ ಮತ್ತಷ್ಟು ಪ್ರೀತಿಗೆ ಪಾತ್ರರಾಗಿದ್ದಾರೆ. ಸುದೀಪ್‌ ಅವರ ನಟನೆ, ಸಾಮಾಜಿಕ ಕೆಲಸ ಎಲ್ಲವನ್ನೂ ನೋಡಿದ ಭಾರತೀಯ ಅಂಚೆ ಇಲಾಖೆ, ಅವರ ಭಾವಚಿತ್ರ ಇರುವ ಸ್ಟ್ಯಾಂಪ್‌ ಬಿಡುಗಡೆ ಮಾಡಿರುವುದು ವಿಶೇಷ. ಇದು ಅವರಿಗೆ ಸಂದ ಗೌರವ. ಅಂದಹಾಗೆ, ಸುದೀಪ್‌ ಅವರ ಅಭಿಮಾನಿಯೊಬ್ಬ ಸುದೀಪ್‌ ಅವರ ಹೆಸರಲ್ಲಿ ಭಾರತೀಯ ಅಂಚೆ ಇಲಾಖೆಯ “ಮೈ ಸ್ಟ್ಯಾಂಪ್‌ ಸರ್ವೀಸ್‌: ಬಳಸಿ ಸ್ಟ್ಯಾಂಪ್‌ ಮೇಲೆ ಸುದೀಪ್‌ ಚಿತ್ರ ಮುದ್ರಿಸಿ ಅವರಿಗೆ ಉಡುಗೊರೆಯಾಗಿ ನೀಡಿದ್ದಾನೆ.

ಅಂಚೆ ಇಲಾಖೆಯಲ್ಲಿ ಕೆಲಸ ಮಾಡುವ ರವಿ ಎಂಬುವವರು ಸುದೀಪ್‌ ಅವರ ಅಭಿಮಾನಿ. ಅವರು ಭಾರತೀಯ ಅಂಚೆ ಇಲಾಖೆ ನೀಡುವ ಮೈ ಸ್ಟ್ಯಾಂಪ್‌ ಸೇವೆ ಬಳಸಿಕೊಂಡು ಸ್ಟ್ಯಾಂಪ್‌ ಮೇಲೆ ಸುದೀಪ್‌ ಅವರ ಭಾವಚಿತ್ರ ಮುದ್ರಣಗೊಳ್ಳುವಂತೆ ಮಾಡಿದ್ದಾರೆ. ಅವರು ನೂರಕ್ಕೂ ಹೆಚ್ಚು ಸ್ಟ್ಯಾಂಪ್‌ಗಳನ್ನು ಮುದ್ರಿಸಿ ಅವರನ್ನು ನಟ ಸುದೀಪ್‌ ಅವರಿಗೆ ಉಡುಗೊರೆಯಾಗಿ ರವಿ ನೀಡಿದ್ದಾರೆ.
ಸುದೀಪ್‌ ಸದಾ ಹೊಸ ಪ್ರತಿಭೆಗಳನ್ನೂ ಪ್ರೋತ್ಸಾಹಿಸುತ್ತಲೇ ಬಂದವರು. ಇತ್ತೀಚೆಗಷ್ಟೇ ಅವರು ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಆ ಖುಷಿಗೆ ಅಭಿಮಾನಿ ಈ ಸ್ಟ್ಯಾಂಪ್‌ ನೀಡಿದ್ದಾನೆ.

Related Posts

error: Content is protected !!