ಶ್ರುತಿ ಹರಿಹರನ್‌ ಮತ್ತೆ ಬಂದ್ರು! ಹೆಡ್‌ಬುಷ್‌ ಸಿನ್ಮಾದಲ್ಲಿ ಪ್ರಮುಖ ಪಾತ್ರ!!


ಮೊನ್ನೆಯಷ್ಟೇ “ಹೆಡ್‌ ಬುಷ್‌” ಸಿನಿಮಾಗೆ ಚಿಟ್ಟೆ ಎಂಟ್ರಿಯಾಗಿದ್ದು ಗೊತ್ತೇ ಇದೆ. ಈಗ ಮತ್ತೊಂದು ಸುದ್ದಿ ಚಿತ್ರತಂಡೆದಿಂದ ಹೊರಬಿದ್ದಿದೆ. ಹೌದು, “ಹೆಡ್‌‌ ಬುಷ್” ಸಿನಿಮಾದಲ್ಲಿ ಶ್ರುತಿಹರಿಹರನ್‌ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದಲ್ಲಿ ಶ್ರುತಿಹರಿಹರನ್‌ ಅವರದು ಯಾವ ಪಾತ್ರ, ಆ ಪಾತ್ರ ಹೇಗಿರುತ್ತೆ ಅನ್ನೋದು ಸಸ್ಪೆನ್ಸ್.‌ ಅಗ್ನಿ ಶ್ರೀಧರ್‌ ಅವರ ಚಿತ್ರಕಥೆ ಈ ಚಿತ್ರಕ್ಕಿದೆ. ಹಾಗಾಗಿ, ಇಲ್ಲಿ ಬರುವ ಪ್ರತಿ ಪಾತ್ರಗಳು ವಿಭಿನ್ನವಾಗಿರುತ್ತವೆ ಎಂಬುದನ್ನಿಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ ಬಿಡಿ. ಶ್ರುತಿಹರಿಹರನ್‌ ಅವರು ಕಳೆದ ಎರಡು ವರ್ಷಗಳ ಹಿಂದೆ ಮೀಟು ಪ್ರಕರಣದಿಂದಾಗಿ ಜೋರು ಸದ್ದು ಮಾಡಿದ್ದರು. ಆದಾದ ಬಳಿಕ ಅವರು ಇಂಡಸ್ಟ್ರಿಯಿಂದಲೇ ದೂರ ಉಳಿದಿದ್ದರು. ಬಹುತೇಕ ಜನ ಶ್ರುತಿಹರಿಹರನ್‌ ಇನ್ಮುಂದೆ ಗಾಂಧಿನಗರದ ಕಡೆ ಮುಖ ಮಾಡೋದಿಲ್ಲ ಅನ್ನುತ್ತಿದ್ದರು. ಅದಕ್ಕೆ ಕಾರಣಗಳೂ ಕೂಡ ಹಲವಾರು ಇದ್ದವು.

ಈಗ ದಿಢೀರನೇ ಶ್ರುತಿಹರಿಹರನ್‌ ಅವ್ರು “ಹೆಡ್‌ ಬುಷ್”‌ ಸಿನಿಮಾಗೆ ಎಂಟ್ರಿಯಾಗುತ್ತಿದ್ದಾರೆ. ಹಾಗಂತ, ಇಲ್ಲಿ ಅವರು ಮರಸುತ್ತುವ ನಾಯಕಿ ಅಂದುಕೊಳ್ಳುವಂತಿಲ್ಲ. ಅಂತಹ ಸೀನ್‌ ಕೂಡ ಇಲ್ಲಿ ಇರಲು ಸಾಧ್ಯವೇ ಇಲ್ಲ. ಯಾಕೆಂದರೆ, ಅಗ್ನಿಶ್ರೀಧರ್‌ ಅವರ ಬರಹ ಇಲ್ಲಿರುವುದರಿಂದ ಪ್ರತಿ ಪಾತ್ರಗಳಲ್ಲೂ ಒಂದು ರೀತಿ ರಗಡ್‌ ಆಗಿರುತ್ತೆ. ಶ್ರುತಿಹರಿಹರನ್‌ ಇಲ್ಲಿ ಯಾವ ಪಾತ್ರ ಮಾಡುತ್ತಾರೆ ಅನ್ನುವುದಕ್ಕೆ ಸಿನಿಮಾ ಬಂದ ಮೇಲಷ್ಟೇ ಗೊತ್ತಾಗಲಿದೆ.


ಅಂದಹಾಗೆ, ಡಾಲಿ ಪಿಕ್ಚರ್ಸ್‌ ಮತ್ತು ಸೋಮಣ್ಣ ಟಾಕೀಸ್‌ ಬ್ಯಾನರ್‌ನಲ್ಲಿ ಡಾಲಿ ಧನಂಜಯ ಹಾಗೂ ರಾಮ್ಕೋ ಸೋಮಣ್ಣ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಶೂನ್ಯ ಅವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಜೋರಾಗಿಯೇ ನಡೆಯುತ್ತಿದೆ. ಇತ್ತೀಚೆಗೆ ಕಂಠೀರವ ಸ್ಟುಡಿಯೋದಲ್ಲಿ ಯೋಗಿ ಮತ್ತು ಡಾಲಿ ಧನಂಜಯ್‌ ಕಾಂಬಿನೇಷನ್‌ನಲ್ಲಿ ಚಿತ್ರೀಕರನ ನಡೆದಿದೆ. ಅದೇನೆ ಇರಲಿ, “ಹೆಡ್‌ ಬುಷ್‌” ಆಡೋಕೆ ಇನ್ನು ಯಾರೆಲ್ಲ ಬರ್ತಾರೋ ಅದನ್ನು ಕಾದು ನೋಡಬೇಕಿದೆ.

Related Posts

error: Content is protected !!