ಸರ್ಜಾ ಕುಟುಂಬದ ಕುಡಿ, ಯುವಸಾಮ್ರಾಟ ದಿವಗಂತ ಚಿರಂಜೀವಿ ಸರ್ಜಾರ ಪುತ್ರ, ಮೇಘನಾರ ಮುದ್ದಿನ ಮಗನ ನಾಮಕರಣಕ್ಕೆ ಸಕಲ ಸಿದ್ದತೆ ನಡೆಯುತ್ತಿದೆ. ಸರ್ಜಾ ಕುಟುಂಬದಲ್ಲಿ ಹಾಗೂ ಮೇಘನಾ ಮನೆಯಲ್ಲಿ ಸಂಭ್ರಮ-ಸಡಗರ ಮನೆಮಾಡಿದೆ. ವರ್ಷಗಳು ಕಳೆದ ಮೇಲೆ ಶುಭಕಾರ್ಯ ನಡೆಯುತ್ತಿದ್ದು, ಸೂತಕದ ಛಾಯೆ ಸರಿದು ಸಂತೋಷದ ದಿವ್ಯಕ್ಷಣಗಳು ಮರುಕಳಿಸುತ್ತಿವೆ. ನಾಳೆ ದಿವ್ಯಮುಹೂರ್ತದಲ್ಲಿ ಜೂನಿಯರ್ ಚಿರು ನೇಮಿಂಗ್ ಸೆರಮನಿ ಅದ್ಧೂರಿಯಾಗಿಯೇ ನಡೆಯಲಿದೆ.
ಇಲ್ಲಿವರೆಗೂ ಜೂನಿಯರ್ ಚಿರು, ಜೂನಿಯರ್ ಸಿಂಬ, ಚಿಂಟು, ಬರ್ಫಿ, ಮರಿ ಸಿಂಗ. ಪಾಪಕುಟ್ಟಿ, ಹೀಗೆ ವೆರೈಟಿ ಪೆಟ್ ನೇಮ್ಗಳಿಂದ ಕರೆಯುತ್ತಿದ್ದರು. ನಾಳೆಯಿಂದ ಈ ಪೆಟ್ ನೇಮ್ ಜೊತೆ ರಿಯಲ್ ನೇಮ್ ಸೇರಿಕೊಳ್ತಿದೆ.
ಚಿರು-ಮೇಘನಾರ ಮುದ್ದಿನ ಮಗನಿಗೆ ಏನೆಂದು ಹೆಸರಿಡಬಹುದು ಎನ್ನುವ ಕಾತುರಕ್ಕೆ ಬಿಗ್ ಬ್ರೇಕ್ ಬೀಳಲಿದೆ.
ಮರಿ ಯುವಸಾಮ್ರಾಟ್ ಚಿರುಗೆ ಹತ್ತು ತಿಂಗಳು ತುಂಬಿದೆ. ಮೇಘನಾ ಮಡಲಲ್ಲಿ ಆಡುತ್ತಾ, ಮಲಗುತ್ತಾ, ನಗುತ್ತಾ, ಅಳುತ್ತಾ, ಕುಣಿಯುತ್ತಾ
ಅಮ್ಮನಿಗೆ ಸಂತೋಷ ನೀಡುತ್ತಿರುವ ಮರಿ ಸಿಂಬ, ಅಮ್ಮನ ಅಜ್ಜ ಅಜ್ಜಿಯ ಮನೆಯಲ್ಲಿ ಬೆಳೆದು ದೊಡ್ಡವನಾಗ್ತಿದ್ದಾನೆ. ಸರ್ಜಾ ಕುಟುಂಬದಲ್ಲಿ ಬೆಳಕು ಮೂಡಿಸಿದ್ದಾನೆ.
ಇಂತಹ ಮುದ್ದುಮಗನ ನಾಮಕರಣಕ್ಕೆ ಎರಡು ಕುಟುಂಬ ಸಕಲ ತಯ್ಯಾರಿ ಮಾಡಿಕೊಂಡಿದೆ. ಕುಟುಂಬಸ್ಥರು ಆಪ್ತರ ಸಮ್ಮುಖದಲ್ಲಿ ನೇಮಿಂಗ್ ಸೆರಮನಿ ನಡೆಯಲಿದೆ. ಈ ವಿಚಾರವನ್ನ ಮೇಘನಾ, ಧ್ರುವ, ಅರ್ಜುನ್ ಸರ್ಜಾ ಸೇರಿದಂತೆ ಎಲ್ಲರೂ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇತ್ತ ಫ್ಯಾನ್ಸ್ ಫುಲ್ ಎಕ್ಸೈಟ್ ಆಗಿದ್ದಾರೆ. ಹೇಗಿರಲಿದೆ? ಏನಿರಲಿದೆ ಸರ್ಜಾ ಕುಟುಂಬ ಕುಡಿಯ ಹೆಸರು ವೇಯ್ಟ್ ಅಂಡ್ ಸೀ
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ