ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಚಾತಿ ನಿರ್ದೇಶಕ ವಿಜಯ್ ಪ್ರಸಾದ್ ಅವರದ್ದು. ಅದರರ್ಥ, ಒಂದೇ ಶೆಡ್ಯೂಲ್ ನಲ್ಲಿಯೇ ಎರಡು ಸಿನಿಮಾ ಚಿತ್ರೀಕರಿಸಿಕೊಂಡು ಬರೋದು ಅಂತ. ಸದ್ಯಕ್ಕೀಗ ರಿಲೀಸ್ ಗೆ ರೆಡಿಯಾಗಿರುವ ʼತೋತಾಪುರಿʼ ಹಾಗೆ ಅಲ್ವಾ ಆಗಿದ್ದು? ಈಗದು ಎರಡು ಕಂತಗಳಲ್ಲಿ ತೆರೆಗೆ ಬರುತ್ತಿದೆ. ಮೊದಲ ಭಾಗದ ಚಿತ್ರೀಕರಣದ ಜತೆಗೆಯೇ ಸಿಕ್ವೇಲ್ ಕೂಡ ಶೂಟಿಂಗ್ ಮುಗಿಸಿದೆ. ಚಿತ್ರೀಕರಣದ ಒಂದೇ ಶೆಡ್ಯೂಲ್ ನಲ್ಲಿ ಎರಡು ಚಾಪ್ಟರ್ ಗಳ ಶೂಟಿಂಗ್ ಮುಗಿಸಿಕೊಂಡು ಬಂದಿದ್ದಾರೆ. ಈಗ ಎರಡು ಚಾಪ್ಟರ್ ಕೂಡ ರಿಲೀಸ್ ಗೆ ರೆಡಿ ಇವೆ. ಸದ್ಯಕ್ಕೆ ಅದರ ಪ್ರಚಾರದ ಹಂತದಲ್ಲಿ ಬ್ಯುಸಿ ಆಗಿರುವ ನಿರ್ದೇಶಕ ವಿಜಯ್ ಪ್ರಸಾದ್ ಈಗ ಒಂದೇ ದಿನ ಇಬ್ಬರು ಸ್ಟಾರ್ ಗಳನ್ನು ಪ್ರತ್ಯೇಕ ಜಾಗಗಳಲ್ಲಿ ಒಂದೇ ಉದ್ದೇಶಕ್ಕೆ ಭೇಟಿ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಇಬ್ಬರು ಸ್ಟಾರ್ ಭೇಟಿ ಮಾಡಿದ ಖುಷಿಯನ್ನು ಅವರೊಂದಿಗೆ ಕ್ಲಿಕ್ಕಿಸಿಕೊಂಡ ಸೆಲ್ಪಿಯನ್ನು ಸೋಷಲ್ ಮೀಡಿಯಾದಲ್ಲಿ ಹಾಕ್ಕೊಂಡು, ಅದಕ್ಕೆ ಕ್ಯಾಪ್ಸನ್ ಕೊಟ್ಟ ರೀತಿಯೇ ಮಜವಾಗಿದೆ.
ʼವಾಯು ವಿಹಾರದಲ್ಲಿ ಸಿದ್ಲಿಂಗು, ವಿಹಾರದಲ್ಲಿ ನಾರಾಯಣ್ ಪಿಳ್ಳೆ , ಒಂದೇ ದಿನ ಎರಡು ಭೇಟಿʼ ಅಂತ ಕಾಮೆಂಟ್ ಹಾಕಿದ್ದು ಮಾತ್ರವಲ್ಲ, ಅದರ ಜತೆಗೆ ಇದೊಂದು ʼಹೊಸ ಪ್ರಯಾಣʼ ಅಂತಲೂ ಹೇಳಿದ್ದಾರೆ. ಸಿನಿಮಾ ಮಂದಿ ಒಟ್ಟಿಗೆ ಸೇರ್ಕೊಂಡ್ ಹೊಸ ಪ್ರಯಾಣ ಅಂತ ಹಾಕಿದರೆ, ಇನ್ನೆಲ್ಲಿಗೋ ಪ್ರವಾಸ ಹೊರಟರು ಅಂತಲ್ಲ, ಇನ್ನಾವುದೋ ಹೊಸ ಪ್ರಾಜೆಕ್ಟ್ ಶುರು ಮಾಡ್ತಿದ್ದಾರೆ ಅಂತ ಅದೆಷ್ಟು ಮಂದಿ ತೋರಿಸಿಕೊಟ್ಟಿಲ್ಲಾ? ಬಹುಶಃ ಈ ಭೇಟಿಯ ಉದ್ದೇಶ ಕೂಡ ಹಾಗೆಯೇ ಇರಬೇಕು? ಸದ್ದಿಲ್ಲದೆ ಸುದ್ದಿ ಮಾಡದೆ ನಿರ್ದೇಶಕ ವಿಜಯ್ ಪ್ರಸಾದ್ ಇವರಿಬ್ಬರು ಸ್ಟಾರ್ ಇಟ್ಕೊಂಡೇ ಒಂದು ಹ್ಯೂಮಸರ್ ಕಥೆ ಮಾಡ್ಕೊಂಡು ಇಂದು ಅವರಿಬ್ಬರನ್ನು ವಾಯು ವಿಹಾರ ಮತ್ತು ವಿಹಾರದಲ್ಲಿ ಭೇಟಿ ಮಾಡಿದ ಹಾಗಿದೆ.
ಅಂದ ಹಾಗೆ ನಿರ್ದೇಶಕ ವಿಜಯ್ ಪ್ರಸಾದ್, ಇವತ್ತು ಅಂದ್ರೆ ಬುಧವಾರ ಭೇಟಿ ಮಾಡಿದ ಸ್ಟಾರ್ ಗಳಂದ್ರೆ ಲೂಸ್ ಮಾದ ಖ್ಯಾತಿಯ ಯೋಗೇಶ್ , ಹಾಗೂ ಡಾಲಿ ಖ್ಯಾತಿಯ ಧನಂಜಯ್. ನಿರ್ದೇಶಕ ವಿಜಯ್ ಪ್ರಸಾದ್ ಈಗ ಇಬ್ಬರಿಗೂ ಆಕ್ಷನ್ ಕಟ್ ಹೇಳಿದ್ದಾರೆ. ಸಿದ್ಲಿಂಗು ಚಿತ್ರದಲ್ಲಿ ಲೂಸ್ ಮಾದ ಯೋಗಿ ಜತೆಗೆ ಕೆಲಸ ಮಾಡಿರುವ ವಿಜಯ್ ಪ್ರಸಾದ್, ತೋತಾಪುರಿ ಚಿತ್ರದಲ್ಲಿನ ಸ್ಪೆಷಲ್ ಕ್ಯಾರೆಕ್ಟರ್ ವೊಂದಕ್ಕೆ ಡಾಲಿ ಧನಂಜಯ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಇಲ್ಲಿ ಡಾಲಿ ಮೂರು ಶೇಡ್ಸ್ ಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿನ ಅವರ ಕ್ಯಾರೆಕ್ಟರ್ ಹೆಸರು ನಾರಾಯಣ್ ಪಿಳ್ಳೆ.