ಕಿಚ್ಚನ ಗೋಲ್ಡನ್ ಜ್ಯೂಬ್ಲಿಗೆ ಡೈಮೆಂಡ್ ಸಪ್ರೈಸ್‌ : ಫ್ಯಾನ್ಸ್‌ ತಯಾರಿ ಹೇಗಿದೆ ಗೊತ್ತಾ?

ಗುಂಪು ಸೇರೋ ಹಾಗಿಲ್ಲ, ಕೇಕ್‌ ಕಟ್‌ ಮಾಡೋ ಹಾಗಿಲ್ಲ, ಹಾರ- ತುರಾಯಿ ಹಾಕೋ ಹಾಗಿಲ್ಲ, ಇಷ್ಟಾಗಿಯೂ ಕಿಚ್ಚನ ಫ್ಯಾನ್ಸ್‌ ಅದ್ದೂರಿ ಬರ್ತ್‌ ಡೇ ಆಚರಣೆಗೆ ಮುಂದಾಗಿದ್ದಾರೆ. ಹಾಗಾದ್ರೆ ಹೇಗೆ, ಈ ಸ್ಟೋರಿ ನೋಡಿ…

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗೋಲ್ಡನ್ ಜ್ಯೂಬ್ಲಿ ಸೆಲಬ್ರೇಷನ್‌ಗೆ ಕೌಂಟ್‌ಡೌನ್ ಶುರುವಾಗಿದೆ. ಬಾದ್ ಷಾ ಬರ್ತ್‌ ಡೇನಾ ಅದ್ದೂರಿಯಾಗಿ ಆಚರಣೆ ಮಾಡೋದಕ್ಕೆ ಫ್ಯಾನ್ಸ್ ಸಕಲ ತಯಾರಿ ಮಾಡಿಕೊಂಡಿದ್ದಾರೆ. ಪ್ರತಿವರ್ಷದಂತೆ ಶಾಂತಿನಿವಾಸದ ಮುಂದೆ ಸಾಗರೋಪಾದಿಯಲ್ಲಿ ಫ್ಯಾನ್ಸ್ ಸೇರುವುದಿಲ್ಲ. ಕೇಕ್ ಕಟ್ ಮಾಡಿ ಕೇಕೆ ಹಾಕುವುದಕ್ಕೆ- ಹಾರ-ತುರಾಯಿ ಹಾಕಿ ಕುಣಿದು ಕುಪ್ಪಳಿಸುವುದಕ್ಕೆ ಕೊರೊನಾ ಅಡ್ಡಿಯಾಗಿದೆ. ಹೀಗಾಗಿ, ಕಿಚ್ಚ ತಾವುಗಳು ಇದ್ದಲಿಂದಲೇ ಶುಭಾಶಯ ತಿಳಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಮಾಣಿಕ್ಯನ ಮಹದಾಸೆಯಂತೆ ಸುದೀಪಿಯನ್ಸ್ ತಾವಿರುವ ಜಾಗದಿಂದಲೇ ವಿಷಸ್‌ನ ಕಳುಹಿಸಿಕೊಡ್ತಿದ್ದಾರೆ. ಅಟ್ ದಿ ಸೇಮ್ ಟೈಮ್ ಆಲ್ ಇಂಡಿಯಾ ಕಟೌಟ್‌ನ ಡೈಹಾರ್ಡ್ ಅಭಿಮಾನಿಗಳು ತಾವಿರುವ ಜಾಗದಲ್ಲೇ ಭರ್ಜರಿಯಾಗಿ ಕಿಚ್ಚನ ಬರ್ತ್ಡೇನಾ ಸೆಲೆಬ್ರೇಟ್ ಮಾಡೋದಕ್ಕೆ ಪ್ಲ್ಯಾನ್‌ ಮಾಡಿಕೊಂಡಿದ್ದಾರೆ.

ಕಳೆದ ವರ್ಷವಂತೂ ಕೊರೊನಾದಿಂದ ಕಿಚ್ಚನ ಹುಟ್ಟುಹಬ್ಬ ಆಚರಣೆ ಮಾಡೋದಕ್ಕೆ ಆಗಲಿಲ್ಲ. ಈ ವರ್ಷವಾದರೂ ಶಾಂತಿನಿವಾಸದ ಮುಂದೆ ಹಬ್ಬ ಮಾಡಬೇಕು ಎಂದು ಕಿಚ್ಚನ ಎಲ್ಲಾ ಫ್ಯಾನ್ಸ್ ಫಿಕ್ಸಾಗಿದ್ದರು. ಆದರೆ. ಕೊರಾನಾತಂಕ ಮುಂದುವರೆದಿರುವುದರಿಂದ ಈ ವರ್ಷವೂ ಕೋಟಿಗೊಬ್ಬ ಹುಟ್ಟುಹಬ್ಬ ಆಚರಣೆ ಬೇಡ ಎಂದಿದ್ದಾರೆ. ಇದರಿಂದ ಸಹಜವಾಗಿ ಫ್ಯಾನ್ಸ್ ಗೆ ಕೊಂಚ ಬೇಜಾರಾಗಿದೆ. ಹೀಗೆ ಅಪ್‌ಸೆಟ್ ಆಗಿರುವ ಫ್ಯಾನ್ಸ್‌ ಗೆ ಸುದೀಪ್ ಬಿಗ್ ಸಪ್ರೈಸ್‌ ಕೊಡ್ತಿದ್ದಾರೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬಕ್ಕೆ ವಿಶೇಷವಾಗಿ `ವಿಕ್ರಾಂತ್ ರೋಣ’ ಚಿತ್ರದ ಫಸ್ಟ್ ಗ್ಲಿಂಪ್ಸ್ ಬಿಡುಗಡೆಯಾಗ್ತಿದೆ. ಹೊಸ ಪೋಸ್ಟರ್ ಬಿಡುವ ಮೂಲಕ ನಿರ್ದೇಶಕ ಅನುಪ್ ಭಂಡಾರಿ ವಿಷಯ ತಿಳಿಸಿದ್ದಾರೆ. ವಿಕ್ರಾಂತ್ ರೋಣನ ನಯಾ ಸಮಾಚಾರ ಕೇಳಿ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ.

ನಟ ಕಿಚ್ಚ ಸುದೀಪ್ ಅವರಿಗೆ ಈ ವರ್ಷದ ಬರ್ತ್‌ ಡೇ ತುಂಬಾ ಸ್ಪೆಷಲ್. ಭರ್ತಿ ೫೦ನೇ ವರ್ಷಕ್ಕೆ ಕಾಲಿಡುತ್ತಿರುವ ಕಿಚ್ಚನ ಗೋಲ್ಡನ್ ಜ್ಯೂಬಿಲಿ ಸೆಲಬ್ರೇಟ್ ಮಾಡೋದಕ್ಕೆ ಫ್ಯಾನ್ಸ್ ಜೊತೆಗೆ ಅವರ ಕುಟುಂಬಸ್ಥರು ಹಾಗೂ ಆಪ್ತರು ಜೋರಾಗಿಯೇ ತಯಾರಿ ಮಾಡಿಕೊಂಡಿದ್ದಾರೆ. ಸ್ಯಾಂಡಲ್‌ವುಡ್ ರನ್ನನಿಗೆ ಡೈಮೆಂಡ್ ರೀತಿಯ ಸಪ್ರೈಸ್‌ ಗಳನ್ನು ಕೊಡೋದಕ್ಕೆ ಚಿತ್ರತಂಡಗಳು ಕೂಡ ಪ್ಲ್ಯಾನ್ ಮಾಡಿಕೊಂಡಿವೆ. ವಿಕ್ರಾಂತ್ ರೋಣ ಜೊತೆಗೆ ಕೋಟಿಗೊಬ್ಬ-೩ ಟೀಮ್, ಕಬ್ಜಾ ಫಿಲ್ಮ್ ಟೀಮ್ ಕಡೆಯಿಂದ ಫಸ್ಟ್ ಲುಕ್ ಹಾಗೂ ಪೋಸ್ಟರ್- ಟೀಸರ್‌ಗಳನ್ನ ಫ್ಯಾನ್ಸ್ ನಿರೀಕ್ಷೆ ಮಾಡ್ತಿದ್ದಾರೆ. ಆಲ್ ಇಂಡಿಯಾ ಕಟೌಟ್‌ಗೆ ಯಾವ್ ರೀತಿಯ ಗಿಫ್ಟ್‌ ಗಳು ಹರಿದುಬರಲಿವೆ ವೇಯ್ಟ್ ಅಂಡ್ ಸೀ..

  • ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!