ಡ್ರೋಣ್ ಪ್ರಥಮ್ ಮೀಟ್ಸ್ ಡ್ರೋಣ್ ಪ್ರತಾಪ್ ; ಅಪೂರ್ವ ಸಂಗಮ ವಂತೆ ಮಾರಾಯ್ರೆ !

ಪ್ರತಾಪ್ ಹಾಗೂ ಪ್ರಥಮ್ ಸಮಾಗಮ ಅಪೂರ್ವ ಸಂಗಮವಂತೆ. ಹೀಗಂತ ಒಳ್ಳೆಹುಡುಗ ಪ್ರಥಮ್ ಬರೆದುಕೊಂಡಿದ್ದಾರೆ. ಮುಂದಿನ ವಾರದಿಂದ ಡ್ರೋಣ್ ಪ್ರಥಮ್ ಚಿತ್ರೀಕರಣವಂತೆ. ನಟನೆ ಜೊತೆಗೆ ನಿರ್ದೇಶನವೂ ಇವರದೇ

ಮೇಲ್ ಐಡಿ ಕೊಟ್ಟರೂ ಡ್ರೋಣ್ ಪ್ರಥಮ್ ಬಗ್ಗೆ ಹಿಂಟ್ ಬಿಟ್ಟುಕೊಡಲ್ಲ… ಬಿಟ್ಟು ಕೊಡಲ್ಲ… ಬಿಟ್ಟುಕೊಡಲ್ಲ…ಹೀಗಂತ ಪಟ್ಟಿಗೆ ಬಿದ್ದರೆ ಹಠಕ್ಕೆ ಬಿದ್ದು ಮತ್ತೇನು ಕೇಳೋದಕ್ಕೆ ಆಗುತ್ತೆ ಹೇಳಿ. ಆಯ್ತು ಬುಡು ಗುರು ನಿನಗೆ ಯಾವಾಗ ಹೇಳಬೇಕು ಅಂತ ಎನಿಸುತ್ತೋ ಆಗಲೇ ಹೇಳು ಅಂತ ಸುಮ್ಮನಾಗಿದ್ವಿ. ಇವತ್ತು, ದಿಢೀರ್ ಅಂತ ಡ್ರೋಣ್ ಪ್ರತಾಪ್ ನ ಮೀಟ್ ಮಾಡಿರುವ ಫೋಟೋಗಳನ್ನ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಡ್ರೋಣ್ ಪ್ರಥಮ್ ಸಿನಿಮಾ ಕುರಿತಾಗಿ ಹೇಳಿಕೊಂಡಿದ್ದಾರೆ.

Pick of the year…!
Drone pratham meats @droneprathap !
ಇನ್ಮೇಲೆ ಇವ್ನು ನನ್ನ ತಮ್ಮ!!
#ಅಪೂರ್ವಸಂಗಮ!!
ನನ್ನ ತಮ್ಮ ಸಿಕ್ಬಿಟ್ಟ!!🤗

Dronepratham shoot starts from next week…!!!

ಡ್ರೋಣ್ ಹೆಸರಲ್ಲಿ ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದಾಗಲೇ ಡ್ರೋಣ್ ಪ್ರತಾಪ್ ಕುರಿತಾದ ಕಥನ ಎನ್ನುವುದು ಬಹಿರಂಗವಾಗಿತ್ತು. ತೀರಾ ಇತ್ತೀಚಿಗೆ ಖಾಸಗಿ ಮಾಧ್ಯಮದ ಜೊತೆ ಮಾತನಾಡುತ್ತಾ ಡ್ರೋಣ್ ಪ್ರಥಮ್ ಟೈಟಲ್ ನಲ್ಲಿ ಮೂವೀ ಬರಲಿದೆ ಎನ್ನುವ ವಿಷ್ಯ ಹಂಚಿಕೊಂಡಿದ್ದರು. ಇದೀಗ ಕಲರ್ ಫುಲ್ ಡ್ರೋಣ್ ಹಾರಿಸಿದ ಮಂಡ್ಯದ ಹೈದ ಪ್ರತಾಪ್ ರನ್ನ ಭೇಟಿಮಾಡುವುದರ ಮೂಲಕ ‘ ಡ್ರೋಣ್ ಪ್ರಥಮ್ ‘ ಹೆಸರಿನ ಸಿನಿಮಾ ಡ್ರೋಣ್ ಪ್ರತಾಪ್ ಜೀವನ ಕುರಿತಾಗಿದ್ದೇ ಎನ್ನುವುದನ್ನು ಖಚಿತಪಡಿಸಿದ್ದಾರೆ.

ಪ್ರತಾಪ್ ಹಾಗೂ ಪ್ರಥಮ್ ಸಮಾಗಮ ಅಪೂರ್ವ ಸಂಗಮವಂತೆ. ಹೀಗಂತ ಒಳ್ಳೆಹುಡುಗ ಕಮ್ ಸೆನ್ಸೇಷನ್ ಸ್ಟಾರ್ ಪ್ರಥಮ್ ಅವರೇ ಬರೆದುಕೊಂಡಿದ್ದಾರೆ. ಮುಂದಿನ ವಾರದಿಂದ ಡ್ರೋಣ್ ಪ್ರಥಮ್ ಚಿತ್ರೀಕರಣಕ್ಕೆ ಧುಮುಕುವುದಾಗಿ ತಿಳಿಸಿದ್ದಾರೆ. ಪಾತ್ರಕ್ಕೋಸ್ಕರ 15 ಕೆಜಿ ತೂಕ ಇಳಿಸಿಕೊಳ್ತೀನಿ ಎಂದಿದ್ದರು. ಗೌರಿಗಣೇಶ, ಉಂಡುಹೋದ ಕೊಂಡುಹೋದ, ಯಾರಿಗೂ ಹೇಳಬೇಡ ಸಿನಿಮಾ ಶೈಲಿಯಲ್ಲಿ ಡ್ರೋಣ್ ಪ್ರಥಮ್ ಸಿನಿಮಾ ಮೂಡಿಬರುವುದಾಗಿ ಹೇಳಿಕೊಂಡಿದ್ದಾರೆ.ನಟನೆಯ ಜೊತೆಗೆ ನಿರ್ದೇಶನದ
ಹೊಣೆ ಕೂಡ ಹೊತ್ತಿದ್ದಾರೆ.

ದೇವ್ರಂತ ಮನುಷ್ಯ ಪ್ರಥಮ್ ಜೊತೆಗೆ ಡ್ರೋಣ್ ಹಾರ್ಸೋಕೆ ನೀಲಿ ಸುಂದರಿ ಬರುತ್ತಾರಂತೆ. ಮುಂಬೈ ಮತ್ತೊಬ್ಬ ನಟಿ ಪ್ರಥಮ್ ಗೆ ಜೋಡಿಯಾಗಲಿದ್ದಾರೆ. ಆ ಇಬ್ಬರು ತಾರೆಯರು ಯಾರು ಎನ್ನುವ ಸೀಕ್ರೇಟ್ ಇನ್ನೂ‌ ರಿವೀಲ್ ಆಗಿಲ್ಲ.‌ ಡ್ರೋಣ್ ಪ್ರತಾಪ್ ಕಥೆಯನ್ನ ಹಾಸ್ಯರೂಪದಲ್ಲಿ ಕಟ್ಟಿಕೊಡಬೇಕು ಎನ್ನುವ ಕನಸು ಕಂಡಿರುವ ಪ್ರಥಮ್, ಪ್ರಖ್ಯಾತ ರಾಜಕಾರಣಿಯೊಬ್ಬರಿಂದ ಲಾಂಚ್ ಮಾಡಿಸಬೇಕು ಎನ್ನುವ ಮಹದಾಸೆ ಹೊಂದಿದ್ದಾರೆ.

ಇಲ್ಲಿವರೆಗೂ ರಾಜಕೀಯ ಘಟಾನುಘಟಿ ನಾಯಕರಿಂದ ತಮ್ಮ ಸಿನಿಮಾ ಲಾಂಚ್ ಮಾಡಿಸಿರುವ ನಟ ಭಯಂಕರ ಪ್ರಥಮ್ ಅವರು, ಈ ಭಾರಿ ಡ್ರೋಣ್ ಹಾರ್ಸೋಕೆ ಯಾವ ರಾಜಕೀಯ ದಿಗ್ಗಜರನ್ನ ಕರೆತರುತ್ತಾರೆನ್ನುವ ಕೂತೂಹಲ ಇದ್ದೇ ಇದೆ. ಜೊತೆಗೆ ಯುವ ವಿಜ್ಞಾನಿ ಅಂತೆಲ್ಲಾ ಪುಕ್ಸಟ್ಟೆ ಖ್ಯಾತಿ ಪಡೆದ ಪ್ರತಾಪ್ ಈ ಚಿತ್ರದಲ್ಲೇನಾದರೂ ಪಾತ್ರ ಮಾಡುತ್ತಾರಾ ಎನ್ನುವ ಪ್ರಶ್ನೆ ಕೂಡ ಮೂಡಿದೆ. ಅದೆಲ್ಲದಕ್ಕೂ ಉತ್ತರ ಅತೀ ಶೀಘ್ರದಲ್ಲೇ ಸಿಗಲಿದೆ.

ವಿಶಾಲಾಕ್ಷಿ, ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!