ಆರು ತಿಂಗಳ ವಿಶೇಷ; ಹಾರ್ಟ್ ಹಂಚಿಕೊಂಡು ಖುಷಿಪಟ್ಟರಲ್ಲ ಅರವಿಂದ್- ದಿವ್ಯಾ !

ಹೊಡಿರೀ‌ ಹಲಗಿ ಎನ್ನಬೇಕೋ? ಹಚ್ಚಿ ಪಟಾಕಿ ಅಂತ ಹೇಳಬೇಕೋ ಗೊತ್ತಿಲ್ಲ, ಆದರೆ ‘ಅರ್ವಿಯಾ’ ಹಂಚಿಕೊಂಡಿರುವ ಈ ವಿಶೇಷ ಸುದ್ದಿಯನ್ನ ನಿಮ್ಮೊಟ್ಟಿಗೆ ಹಂಚಿಕೊಳ್ಳಲೆಬೇಕು.‌ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಗಳು, ಕ್ಯೂಟ್ ಜೋಡಿಯಾಗಿ ಕರುನಾಡಿನ ಅಂಗಳದಲ್ಲಿ ಮೆರವಣಿಗೆ ಹೊರಟವರು, ಅಭಿಮಾನಿ ದೇವರುಗಳಿಂದ ‘ಅರ್ವಿಯಾ ‘ ಅಂತ‌ ನಾಮಕರಣ ಮಾಡಿಸಿಕೊಂಡವರು ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ.

ಬಿಗ್ ಬಾಸ್ ಅಂಗಳಕ್ಕೆ ಕಾಲಿಡುವಾಗ ಅಪರಿಚಿತರಾಗಿದ್ದರು. ಅದೇ ದೊಡ್ಮನೆಯಿಂದ ಹೊರಬರುವಷ್ಟರಲ್ಲಿ ಒಬ್ಬರಿಗೊಬ್ಬರು ಬಿಟ್ಟಿರಲಾರದಷ್ಟು ಹತ್ತಿರವಾದರು.ಕೆಲವರ ಕಣ್ಣಲ್ಲಿ ಬೆಸ್ಟ್ ಫ್ರೆಂಡ್ಸ್ ನಂತೆ ಸುಳಿದಾಡಿದರು.ಇನ್ನೂ ಕೆಲವರ ಕಣ್ಣಲ್ಲಿ ಪ್ರಣಯ ಪಕ್ಷಿಗಳಂತೆ ನಲಿದಾಡಿದರು. ಹೀಗಾಗಿ, ಇವರಿಬ್ಬರ ನಡುವಿರುವುದು ಸ್ನೇಹಾನೋ ಪ್ರೀತಿನೋ ಎನ್ನುವುದಕ್ಕೆ ಇನ್ನೂ ಕ್ಲ್ಯಾರಿಟಿ ಸಿಕ್ಕಿಲ್ಲ. ಅಷ್ಟರಲ್ಲಿ ಈ ಜೋಡಿ ಬಿಗ್ ಬಾಸ್ ಪಯಣ ಶುರು ಮಾಡಿ ಆರು ತಿಂಗಳು ಉರುಳಿವೆ. ಆ ಖುಷಿ ಹಾಗೂ ಸಂತೋಷವನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಬಿಗ್ ಬಾಸ್ ರನ್ನರ್ ಅಪ್ಅರವಿಂದ್ ಕೆಪಿ ಸ್ಪೆಷಲ್ ಸಿಕ್ಸ್ ಅಂತ ಬರೆದುಕೊಂಡು ಮೂರು ಯೆಲ್ಲೋ, ಮೂರು ಬ್ಲಾಕ್ ಹಾರ್ಟ್‌ ಸಿಂಬಲ್ ಹಾಕಿಕೊಂಡಿದ್ದಾರೆ. ಇನ್ನೂ ದಿವ್ಯಾ ಉರುಡುಗ ಕೂಡ ಟ್ವೀಟ್ ಮಾಡಿದ್ದು ಆರು ತಿಂಗಳು ಹಂಗೇ ಕಳೆದೋಗಿದೆ ಇನ್ನೂ ಬಹುದೂರ ಹೋಗಬೇಕಿದೆ.ಪ್ರೀತಿಯಿರಲಿ ಎಂದಿದ್ದಾರೆ. ಕ್ಯೂಟಿ ಪೈ ದಿವ್ಯಾ ಒಂದು ಯೆಲ್ಲೋ ಹಾಗೂ ಒಂದು ಬ್ಲಾಕ್ ಹಾರ್ಟ್ ಕೊಟ್ಟಿದ್ದಾರೆ. ಅರವಿಂದ್ ಗಿಂತ ಕಮ್ಮಿ ಹಾರ್ಟ್ ಹಾಕಿ ಕಂಜೂಸ್ ಮಾಡಿದ್ದಾರೆ ದಿವ್ಯಾ ಮೇಡಂ.

ಅರ್ವಿಯಾ ಜೋಡಿಯ ಈ ಆರು ತಿಂಗಳ ಪಯಣವನ್ನ ಬರೀ ಅರವಿಂದ್ ಹಾಗೂ ದಿವ್ಯಾ ಮಾತ್ರ ಸಂಭ್ರಮಿಸಿಲ್ಲ, ಬದಲಾಗಿ ಇವರಿಬ್ಬರ ಫ್ಯಾನ್ಸ್ ಕೂಡ ಹಬ್ಬದಂತೆ ಸಂಭ್ರಮಿಸಿದ್ದಾರೆ. ಕಾಮನ್ ಡಿಪಿ‌ ರಿಲೀಸ್ ಮಾಡಿ ತಮ್ಮ ಫೀಲಿಂಗ್ಸ್ ನ ಶೇರ್ ಮಾಡಿಕೊಂಡು ಅರ್ವಿಯಾ ಜೋಡಿನಾ ಸೋಷಿಯಲ್ ಲೋಕದಲ್ಲಿ ಹೊತ್ತು ಮೆರೆಸುತ್ತಿದ್ದಾರೆ. ಅರ್ವಿಯಾ ಕೇವಲ ಹೆಸರಲ್ಲ , ಅದೊಂದು ಎಮೋಷನ್ಸ್ ಅಂತೆಲ್ಲಾ ಭಾವುಕರಾಗಿ ಗೀಚುತ್ತಿದ್ದಾರೆ.

ಫ್ಯಾನ್ಸ್ ಸಮೂಹದಲ್ಲಿ ಕೆಲವರು ಅರ್ವಿಯಾ ಜೋಡಿ ಫ್ರೆಂಡ್ಸಾಗಿರಲಿ ಅಂತ ಹೇಳಿಕೊಂಡ್ರೆ, ಇನ್ನೂ ಕೆಲವರು ರಿಯಲ್ ಲೈಫ್ ನಲ್ಲಿ ಇವರಿಬ್ಬರು ಒಂದಾಗಬೇಕು ಅಂತ ಆಸೆಪಡ್ತಿದ್ದಾರೆ. ಅರ್ಧವರ್ಷ ಬಿಗ್ ಬಾಸ್ ಜರ್ನಿ ಕಂಪ್ಲೀಟ್ ಮಾಡಿರುವ ಅರವಿಂದ್ ಹಾಗೂ ದಿವ್ಯಾ ಜೀವನಪೂರ್ತಿ ಜೊತೆಯಾಗಿ ಬದುಕಬೇಕು ಅಂತ ಇಂಗಿತ ವ್ಯಕ್ತಪಡಿಸ್ತಿದ್ದಾರೆ. ಅಷ್ಟಕ್ಕೂ ಅರ್ವಿಯಾ ಜೋಡಿ ನಡುವೆ ಇರುವುದು ಸ್ನೇಹಾನೋ- ಪ್ರೀತಿನೋ ಗೊತ್ತಿಲ್ಲದೇ ಇರೋದ್ರಿಂದ ಅರವಿಂದ್ ಹಾಗೂ ದಿವ್ಯಾ ಉರುಡುಗ ಅವರಿಗೆ ಯಾವಾಗ ಫ್ಯಾನ್ಸ್ ಆಸೆ ಈಡೇರಿಸ್ತೀರಾ ಅಂತ ಕೇಳೋದು‌ ಕಷ್ಟ. ಹೀಗಾಗಿ, ಅವರಿಬ್ಬರೇ ಅನೌನ್ಸ್ ಮಾಡುವರೆಗೆ ಕಾಯಬೇಕು.ಅಲ್ಲಿವರೆಗೂ ಬೊಂಬಾಟ್ ಜೋಡಿಯ ಬಿಗ್ ಬಾಸ್ ಕ್ಲಿಪಿಂಗ್ಸ್ ನೋಡಿಕೊಂಡು ಎಂಜಾಯ್ ಮಾಡಿ

  • ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!