ಹಂಗಾದ್ರೆ ಇಲ್ಲಿ ಹೆಣ್ಮಕ್ಕಳು ಹುಟ್ಲೇಬಾರ್ದಾ ; ನಟಿ ಮೇಘಶ್ರೀ ಹೀಗೆ ಸಿಟ್ಟಿನಲ್ಲಿ ಪ್ರಶ್ನಿಸಿದ್ದೇಕೆ ಗೊತ್ತಾ

ನಂಗೆ ಬಾಯಲ್ಲಿ ಒಂದಷ್ಟು ಪದ ಬರ್ತವೆ ಆದ್ರೆ, ಅದೆಲ್ಲ ಹೇಳೋದಿಕ್ಕೆ ಆಗೋದಿಲ್ಲ. ವ್ಯವಸ್ಥೆ ಬಗ್ಗೆ ಅಷ್ಟು ಸಿಟ್ಟು ಬರುತ್ತೆ….!


ಬಿಗ್ ಬಾಸ್ ಖ್ಯಾತಿಯ ನಟಿ ಮೇಘಶ್ರೀ ಹೀಗೆ ಆಕ್ರೋಶ ವ್ಯಕ್ತಪಡಿಸಿದ್ದು ಮೈಸೂರು ಘಟನೆಯ ವಿರುದ್ಧ. ಹೌದು, ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸ್ಯಾಂಡಲ್ ವುಡ್ ಕೂಡ ಬೆಚ್ಚಿ ಬಿದ್ದಿದೆ. ಒಂದೆಡೆ ಗ್ಯಾಂಗ್ ರೇಪ್ ಪ್ರಕರಣದ ಬೆನ್ನಲೇ ಮೈಸೂರು ವಿಶ್ವ ವಿದ್ಯಾಲಯವೂ ವಿವಿ ಆವರಣದಲ್ಲಿ ವಿದ್ಯಾರ್ಥಿನಿಯರು ಸಂಜೆ 6.30 ರ ನಂತರ ಹೊರಗಡೆ ತಿರುಗಾಡುವಂತಿಲ್ಲ ಎಂದು ಆದೇಶಹೊರಡಿಸಿದ್ದು, ಇದು ಭಾರೀ ವಿರೋಧಕ್ಕೆ ಮಾಡಿಕೊಟ್ಟಿದೆ. ಅತ್ಯಾಚಾರ ನಡೆಯುತ್ತೆ, ಹೊರಗೆ ಹೋಗ್ಬೇಡಿ ಅಂತ ರೂಲ್ಸ್ ಮಾಡುವ ಮಹಿಳೆಯನ್ನು ಕಟ್ಟಿ ಹಾಕುವ ಹುನ್ನಾರ ನಡೆದಿದೆ. ಇದು ಖಂಡನೀಯ ಎಂದು ಹಲವು ನಟಿಯರು ರಿಯಾಕ್ಟ್ ಮಾಡಿದ್ದಾರೆ. ಅದೇ ರೀತಿ ನಟಿ ಮೇಘಶ್ರೀ ‘ಸಿನಿಲಹರಿ’ಯೊಂ ದಿಗೆ ಮಾತನಾಡುತ್ತಾ, ಮೈಸೂರು ಘಟನೆಯ ವಿರುದ್ಧ ಕೆಂಡಕಾರಿದರು. ಇಂತಹ ಕ್ರೂರಿಗಳಿಗೆ ಕಠಿಣ ಶೀಕ್ಷೆ ಆಗಬೇಕೆಂದು ಆಗ್ರಹಿಸಿದರು. ಹಾಗೆಯೇ ಮೈಸೂರು ವಿಶ್ವ ವಿದ್ಯಾಲಯದ ಆದೇಶದ ವಿರುದ್ಧವೂ ಹರಿಹಾಯ್ದರು.

‘ಹೆಣ್ಣು ಮಕ್ಕಳಿಗೆ ಒಂದು ಮಾತು ಹೇಳೋದಿಕ್ಕೆ ಇಷ್ಟ ಪಡುತ್ತೇನೆ, ದಯವಿಟ್ಟು ನೀವು ಸೇಪ್ ಆಗಿರಿ. ಯಾಕಂದ್ರೆ ಇಂಡಿಯಾದಲ್ಲಿ ಹೆಣ್ಮುಕ್ಕಳು ಸೇಪ್ ಇಲ್ಲ. ಅಟ್ ದ ಸೇಮ್ ಟೈಮ್, ರೇಪಿಸ್ಟ್ ಗಳಿಗೂ ಇಲ್ಲಿ ಸರಿಯಾದ ಶಿಕ್ಷೆ ಇಲ್ಲ. ಕಠಿಣ ಶಿಕ್ಷೆ ಇದಿದ್ದರೆ, ಇದೆಲ್ಲ ಆಗ್ತಿರಲಿಲ್ಲ. ನೀವೇ ನೋಡಿ, ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ಒಂದು ಘಟನೆ ನಡೆಯಿತು. ಸಿಟಿ ಬಸ್ ನಲ್ಲಿಯೇ ಒಂದು ಹುಡುಗಿ ಮೇಲೆ ರೇಪ್ ನಡೆಯಿತು. ಆದಾದ ಮೇಲೆ ಏನಾಯ್ತು, ಈ ಪ್ರಕರಣ ದೊಡ್ಡಾಗಿ ಸುದ್ದಿ ಆಯ್ತು, ದೇಶದಲ್ಲಿ ಪ್ರತಿಭಟನೆ ನಡೆದವು. ಅದಕ್ಕೋಸ್ಕರ ಕೆಲವರನ್ನು ಹಿಡಿದ್ರು. ಅಲ್ಲಿಂದ ಅವರನ್ನು ಒಂದಷ್ಟು ವರ್ಷಗಳ ಕಾಲ ಅತ್ಯಾಚಾರ ಮಾಡಿದವರನ್ನು ಜೈಲಿಗೆ ಕಳುಹಿಸಿ, ಒಂದಷ್ಟು ಅವರಿಗೆ ಸೌಲಭ್ಯ ಕೊಟ್ಟು, ಒಂದಷ್ಟು ಸಾರ್ವಜನಿಕರ ಹಣ ಖರ್ಚು ಮಾಡಿ ಕೊನೆಗೆ ಗಲ್ಲಿಗೆ ಹಾಕಿದ್ರು. ಇಷ್ಟು ನಿಧಾನಗತಿಯ ಪ್ರಕ್ರಿಯೆಯವೇ ಇಷ್ಟೆಲ್ಲ ಅವಾಂತರಕ್ಕೆ ಕಾರಣ. ಕ್ರೂರಿಗಳಿಗೆ ಕಠಿಣ ಶಿಕ್ಷೆ ಅಂತ ಇದಿದ್ದರೆ, ಮಹಿಳೆಯರ ಮೇಲೆ ಇಂತಹ ಅಮಾನುಷ ಘಟನೆಗಳು ನಡೆಯುತ್ತಿರಲಿಲ್ಲ ಎಂದರು ನಟಿ ಮೇಘಶ್ರೀ.

ಆರು ಗಂಟೆಯ ಮೇಲೆ ವಿದ್ಯಾರ್ಥಿನಿಯರು 6.30 ಮೇಲೆ ಹೊರಗಡೆ ಹೋಗಬಾರದು ಅಂದ್ರೆ ಅದರರ್ಥ ಏನು? ಇವ್ರೆಲ್ಲ ಯಾವ್ ಥರ ಯೋಚ್ನೆ ಮಾಡುತ್ತಾರೋ ನಂಗೆ ಅರ್ಥವೇ ಆಗುತ್ತಿಲ್ಲ. ನಿಮ್ಮ ಪ್ರಕಾರ ಬೆಳಗ್ಗೆ ಹೊತ್ತು ಹುಡುಗಿಯರಮೇಲೆ ರೇಪ್ ಕೇಸ್ ನಡೆದಿಲ್ಲವೇ? ಚಿಕ್ಕ ಚಿಕ್ಕ ಮಕ್ಕಳ ಮೇಲೆಯೇ ರೇಪ್ ಆಗಿದೆ. ಹಂಗಂದ್ರೆ ಹೆಣ್ಣು ಮಕ್ಕಳು ಎಲ್ಲಿಗೂ ಹೋಗಬಾರದು ಅಂತನಾ? ನೀವೆಲ್ಲ ಯಾವ ಥರ ಯೋಚ್ನೆ ಮಾಡ್ತಿರೋ ಅರ್ಥ ಆಗ್ತಿಲ್ಲ. ನಂಗೆ ಬಾಯಲ್ಲಿ ಒಂದಷ್ಟು ಪದ ಬರ್ತವೆ ಆದ್ರೆ ಅದೆಲ್ಲ ಹೇಳಿದ್ರೆ ನಾವೇ ಸಣ್ಣವರಾಗ್ತೀವಿ, ಅದಿಲ್ಲ ಬೇಡ, ಮಹಿಳೆಯನ್ನು ರಕ್ಷಣೆ ಮಾಡಬೇಕಾದವರು ನೀವು, ನೀವು ಜವಾಬ್ದಾರಿಗಳನ್ನು ಮರೆತು ಹೆಣ್ಣು ಮಕ್ಕಳದ್ದೇ ತಪ್ಪು, ಅವರು ಎಲ್ಲಿಗೂ ಹೋಗಬಾರದು ಅಂತೆಲ್ಲ ಮಾತನಾಡುತ್ತಾ ಹೊರಟರೆ ಮಹಿಳೆಯರನ್ನು ಇದು ಕಟ್ಟಿ ಹಾಕುವ ಹುನ್ನಾರವೇ ಅಲ್ಲವೇ? ಹೆಣ್ಣು ಮಕ್ಕಳು ಎಲ್ಲಿಗೆ ಹೋಗಬಾರದು ಅಂತ ಹೇಳ್ತಾರೆ ಅಂದ್ರೆ, ಅವರು ಹೋದ್ರೆ ರೇಪ್ ಆಗುತ್ತೆ ಅಂತನಾ? ಹಾಗೆ ಅಲ್ವಾ ಇವ್ರ ಮಾತು? ಎನ್ನುತ್ತಾ ಖಾರವಾಗಿ ಪ್ರಶ್ನಿಸಿದರು ನಟಿ ಮೇಘಶ್ರೀ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!