ಹೊಟ್ಟೆಗೆ ಬೆಂಕಿಹಾಕಿಕೊಂಡು ಕಣ್ಣಕ್ಕಿಳಿದ ಗೌರಮ್ಮ; ಮೋಹಕತಾರೆನಾ ಮೆಚ್ಚಲೆಬೇಕು ಕಣ್ರೀ !?

ಮೋಹಕ ತಾರೆ ರಮ್ಯಾ ಸಿಟ್ಟಾಗಿದ್ದಾರೆ. ಮೈಸೂರು ಘಟನೆಯ ಸುದ್ದಿ ಕೇಳಿ ಹೊಟ್ಟೆಗೆ ಬೆಂಕಿಹಾಕಿಕೊಂಡು ಕಣ್ಣು ಕೆಂಪಗೆ ಮಾಡಿಕೊಂಡಿದ್ದಾರೆ. ಮಹಿಳೆ ಮೇಲೆ ಎಷ್ಟು ದಿನ ಈ ದಬ್ಬಾಳಿಕೆ, ದೌರ್ಜನ್ಯ ಅಂತ ಒಂದೇ ಸಮನೆ ಕಿಡಿಕಾರಿದ್ದಾರೆ. ಹಾಗಾದ್ರೆ ರಮ್ಯಾ ಅವರು ಹೇಳಿದ್ದೇನು ಅಂತ ಇಲ್ಲಿದೆ ನೋಡಿ.

ಸ್ಯಾಂಡಲ್‌ವುಡ್‌ನ ಮೋಹಕತಾರೆ, ರಾಜ್ಯ ರಾಜಕೀಯದ ದಿಲ್ಲಿ ಮೇಡಂಗೆ ಒಂದು ಸೆಲ್ಯೂಟ್ ಹೊಡಿಯಲೇಬೇಕು. ಅದೆಲ್ಲೋ ಫಾರಿನ್‌ನಲ್ಲಿ ಸೆಟಲ್ ಆಗಿ ಐಷರಾಮಿ ಲೈಫ್‌ ಲೀಡ್ ಮಾಡ್ತಿರುವ ಚಂದನವನದ ಗೌರಮ್ಮ ಕಣ್ಮುಚ್ಚಿಕೊಂಡು ಕೂರದೇ ಕರುನಾಡಿನಲ್ಲಿ ಆದಂತಹ ಕ್ರೂರಕೃತ್ಯವನ್ನು ಖಂಡಿಸಿದ್ದಾರೆ. ಸುದ್ದಿ ಕೇಳಿ ಹೊಟ್ಟೆಗೆ ಬೆಂಕಿಹಾಕಿಕೊಂಡ ದಿಲ್ಲಿ ಮೇಡಂ ಕಣ್ಣುಕೆಂಪಗೆ ಮಾಡಿಕೊಂಡು ಫೀಲ್ಡಿಗಿಳಿದಿದ್ದಾರೆ. ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯ-ದಬ್ಬಾಳಿಕೆ-ನಿಂದನೆಯನ್ನು ಕುರಿತು ಪ್ರಶ್ನೆ ಮಾಡಿದ್ದಾರೆ.

ಸಿನಿಮಾರಂಗ ಹಾಗೂ ರಾಜಕೀಯ ರಂಗದಿಂದ ದೂರ ಉಳಿದಿರುವ ಮೋಹಕತಾರೆ ರಮ್ಯಾ ಮೇಡಂ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಅಖಾಡಕ್ಕೆ ಧುಮ್ಕುತ್ತಾರೆ. ಒಳ್ಳೆಯದ್ದನ್ನು ಪ್ರೋತ್ಸಾಹಿಸುತ್ತಾರೆ ಕೆಟ್ಟದನ್ನು ಪ್ರಶ್ನೆಮಾಡ್ತಾರೆ. ಸಮಾಜಕ್ಕೊಂದು ಸಂದೇಶ ಹಾಗೂ ಜಾಗೃತಿ ಮೂಡಿಸುವ ಕೆಲಸಗಳನ್ನು ಮಾಡಿಕೊಂಡು ಮುನ್ನಡೆಯುತ್ತಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದಂತಹ ಸಾಮೂಹಿಕ ಅತ್ಯಾಚಾರದ ಸುದ್ದಿ ಕೇಳಿ ಬೇಸರಗೊಂಡ ಮೋಹಕತಾರೆ ಹೀನಕೃತ್ಯದ ವಿರುದ್ದ ಧ್ವನಿಎತ್ತಿದ್ದಾರೆ. ಗಂಡಸರು ಏನೇ ತಪ್ಪು ಮಾಡಿದರೂ ಕೊನೆಗೆ ಅದನ್ನು ತಂದು ಹೆಣ್ಣುಮಕ್ಕಳ ತಲೆಗೆ ಕಟ್ಟುವ ಕೆಟ್ಟಪದ್ದತಿ ಹಾಗೂ ಸೊಸೈಟಿ ವಿರುದ್ದ ಪದ್ಮಾವತಿ ತಿರುಗಿ ಬಿದ್ದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಸುಧೀರ್ಘ ಪೋಸ್ಟ್ ಹಾಕುವುದರ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪುರುಷರು ಏನೇ ತಪ್ಪು ಮಾಡಲಿ ಕೊನೆಗೆ ಅದು ಮಹಿಳೆಯರ ಮೇಲೆ ಬರುತ್ತೆ. ಅತ್ಯಾಚಾರ-ದೈಹಿಕ ಹಲ್ಲೆ-ಮಾನಸಿಕ ಹಿಂಸೆ ಹೀಗೆ ಯಾವುದೇ ಇರಲಿ ಪುರುಷರು ಮಾಡುವ ಈ ಘನಕಾರ್ಯಕ್ಕೆ ಮಹಿಳೆಯರು ನಿಂದನೆಗೊಳಗಾಗಬೇಕಾದ ಪರಿಸ್ಥಿತಿ. ಈಗ ಅತ್ಯಾಚಾರಕ್ಕೊಳಗಾಗಿರುವ ಮೈಸೂರಿನ ವಿಧ್ಯಾರ್ಥಿನಿಯ ಪರಿಸ್ಥಿತಿಯೂ ಇದೇ ಆಗಿದೆ. ರಾತ್ರಿ ವೇಳೆ ಚಾಮುಂಡಿ ಬೆಟ್ಟದ ತಪ್ಪಲಿಗ್ಯಾಕೆ ಹೋಗಬೇಕಾಗಿತ್ತು ಅಂತ ಕೆಲವರು ಪ್ರಶ್ನೆ ಮಾಡುತ್ತಿದ್ದಾರೆ. ಈ ರೀತಿ ಪ್ರಶ್ನೆ ಮಾಡುವವರ ವಿರುದ್ದ ಕಿಡಿಕಾರಿರುವ ರಮ್ಯ ಮೇಡಂ, ನಿಂದೇ ತಪ್ಪು, ಹೊರಗಡೆ ಹೋಗಬಾರದಿತ್ತು, ನೀನು ಹಂಗೆ ಮಾಡಬಾರದಿತ್ತು, ಹಂಗೆ ಹೇಳಬಾರದಿತ್ತು, ಆ ರೀತಿ ಬಟ್ಟೆ ಧರಿಸಬಾರದಿತ್ತು, ಅದು ತುಂಬಾ ಟೈಟಾಗಿತ್ತು, ಅದು ತುಂಬಾ ಶಾರ್ಟ್ ಆಗಿತ್ತು, ತೀರಾ ಎಕ್ಸ್ಪೋಸಿಂಗ್ ಆಗಿತ್ತು, ಮೇಕಪ್ ಹೆವಿಯಾಗಿತ್ತು, ರೆಡ್‌ ಲಿಪ್‌ಸ್ಟಿಕ್ ಹಚ್ಚಬಾರದಿತ್ತು, ಕಣ್ಣು ಹೊಡೆಯಬಾರದಿತ್ತು, ಹೀಗೆ ಎಲ್ಲದಕ್ಕೂ ಹೆಣ್ಣುಮಕ್ಕಳನ್ನೇ ದೂಷಿಸುತ್ತಾರೆ, ಟಾರ್ಗೆಟ್ ಮಾಡಿ ಮಾತನಾಡುತ್ತಾರೆ.

ಯಾಕಂದ್ರೆ, ಪುರುಷರು ಪುರುಷರಾಗಿಯೇ ಇರುತ್ತಾರೆ. ನಾವು ಮಾತ್ರ ಬದಲಾಗಬೇಕು. ನಾವು ಮಾತ್ರ ಕಾಂಪ್ರಮೈಸ್ ಆಗಬೇಕು. ನಾವು ಮಾತ್ರ ಅಡ್ಜಸ್ಟ್ ಮಾಡಿಕೊಳ್ಳಬೇಕು. ನಾವು ಎಲ್ಲವನ್ನೂ ಸಹಿಸಿಕೊಳ್ಳಬೇಕು. ಇಲ್ಲ… ಇನ್ನಾಗಲ್ಲ ಈ ನಾನ್‌ಸೆನ್ಸ್ಗೆ ಫುಲ್‌ಸ್ಟಾಪ್ ಬೀಳಲೆಬೇಕು. ಹೀಗಂತ ಟ್ವೀಟ್ ಮಾಡಿ ಮಹಿಳೆಯರ ಪರವಾಗಿ ಧ್ವನಿಎತ್ತಿರುವ ರಮ್ಯಾ ಮೇಡಂ `ಮಹಿಳೆಯರ ಮೇಲಿ ಅಪರಾಧಗಳ ಬಗ್ಗೆ ಕಣ್ಣಿದ್ದು ಕುರುಡರಾಗಬೇಡಿ, ಇನ್ನಾದ್ರೂ ಧ್ವನಿಯೆತ್ತಿ ಎಂದು ಕೋರಿಕೊಂಡಿದ್ದಾರೆ. ಹೀಗೆ ದಿಲ್ಲಿ ಮೇಡಂ ತಮ್ಮ ಆಕ್ರೋಶವನ್ನ ಹೊರಹಾಕ್ತಿದ್ದಂತೆ ಸಕಲ ಹೆಣೈಕ್ಳ ಬಳಗ ಪದ್ಮಾವತಿಗೆ ಉಘೇ ಉಘೇ ಎನ್ನುತ್ತಿದ್ದಾರೆ. ದುರಂತ ಅಂದ್ರೆ ಮೈಸೂರು ಘಟನೆಯ ಬೆನ್ನಲೇ ತುಮಕೂರು ಹಾಗೂ ಬೆಳಗಾವಿಯಲ್ಲೂ ಗ್ಯಾಂಗ್‌ ರೇಪ್‌ ಪ್ರಕರಣ ಬೆಳಕಿಗೆ ಬಂದಿದೆ. ಇದು ಕರುನಾಡೇ ಬೆಚ್ಚಿ ಬೀಳುವಂತೆ ಮಾಡಿದೆ. ಆದರೆ ಗೃಹ ಸಚಿವರು ಮಾತ್ರ, ವಿದ್ಯಾರ್ಥಿನಿಯರು ಅಲ್ಲಿಗೇಕೆ ಹೋಗಬೇಕಿತ್ತು ಎನ್ನುವ ಬೇಜವಾಬ್ದಾರಿ ಹೇಳಿಕೆ ನೀಡಿ, ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ಕೀಚಕರನ್ನು ಬಲಿ ಹಾಕಲಿ.

  • ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!