ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರು ಮಾತ್ರವಲ್ಲ ನಟರು ಇದ್ದಾರೆ ಅಂತ ಕಳೆದ ವರ್ಷವೇ ಹೇಳಿದ್ದೆ ಈಗಲೂ ಹೇಳ್ತೀನಿ. ಶುಕ್ರವಾರ-ಶನಿವಾರ-ಭಾನುವಾರ ಪೇಜ್ ತ್ರಿ ಪಾರ್ಟಿ ಮಾಡ್ತಾರೆ. ಫಾರ್ಮ್ ಹೌಸ್ ಗಳಲ್ಲಿಮಿಡ್‌ನೈಟ್ ಅಲ್ಲ ಬೆಳಗಿನ ಜಾವದವರೆಗೂ ಮತ್ತಲ್ಲಿ ತೇಲುತ್ತಾರೆಿ.ಇದು ಪ್ರಶಾಂತ್ ಸಂಬರಗಿ ಬಿಚ್ಚಿಟ್ಟ ರೋಚಕ ಕಥೆ
ಸ್ಯಾಂಡಲ್‌ವುಡ್‌ಗೆ ಸ್ಯಾಂಡಲ್‌ವುಡ್ಡೇ ಬೆಚ್ಚುವಂತಹ ಬೆಳವಣಿಗೆಗಳು ಆಗುತ್ತಿವೆ. ಸಂಜನಾ-ರಾಗಿಣಿ ಡ್ರಗ್ಸ್ ಸೇವನೆ ದೃಢಪಟ್ಟ ಬೆನ್ನಲ್ಲೇ ಸಾಮಾಜಿಕ ಕಾರ್ಯಕರ್ತರಾದ ಪ್ರಶಾಂತ್ ಸಂಬರ್ಗಿ ಮತ್ತೊಂದು ಅಚ್ಚರಿಯ ಹೇಳಿಕೆ ಕೊಟ್ಟಿದ್ದಾರೆ. ಸ್ಯಾಂಡಲ್‌ವುಡ್ ಅಂಗಳದಲ್ಲಿ ನಟಿಮಣಿಯರು ಮಾತ್ರ ಡ್ರಗ್ಸ್ ವ್ಯಸನಿಗಳಾಗಿದ್ದಾರೆಂದು ತಿಳಿದುಕೊಳ್ಳಬೇಡಿ, ನಟರುಗಳು ಕೂಡ ಮಾದಕ ದ್ರವ್ಯಕ್ಕೆ ಮಾರುಹೋಗಿದ್ದಾರೆ. ಮತ್ತಿನ ಮತ್ತಲ್ಲಿ ತೇಲಾಡುತ್ತಾ, ಕೂಗಾಡುತ್ತಾ, ಕಿರುಚಾಡುತ್ತಾ, ಅರಚಾಡುತ್ತಾ, ಸುಮ್ ಸುಮ್ಮನೇ ನಗುತ್ತಾ, ಆವೇಶಭರಿತ ಮಾತುಗಳನ್ನಾಡುತ್ತಾ, ಸಮ್ ಟೈಮ್ಸ್ ಸಪ್ಪೇ ಮೋರೆ ಹಾಕಿಕೊಳ್ಳುತ್ತಾ, ಸಮ್ ಟೈಮ್ಸ್ ಖುಷಿ ಖುಷಿಯಿಂದ ಜಿಗಿದಾಡುತ್ತಾ ಮಾದಕಲೋಕದಲ್ಲಿ ಮೆರೆಯುವ ನಟರುಗಳು ನಮ್ಮಲ್ಲಿದ್ದಾರೆ. ಅವರೆಲ್ಲರ ಅಸಲಿಯತ್ತು ಒಂದಲ್ಲಾ ಒಂದು ದಿನ ಬಟಾಬಯಲಾಗುತ್ತೆ ಎನ್ನುವ ಪ್ರಶಾಂತ್ ಸಂಬರ್ಗಿ, ಸಿನಿಲಹರಿ ಜೊತೆ ಮಾತನಾಡುತ್ತಾ ತೂಕ ಹೆಚ್ಚಿಸಿಕೊಂಡಿರುವ ನಟರುಗಳಿಗೂ- ಡ್ರಗ್ಸ್ ಗೂ ಇರುವ ನಂಟೇನು ಅನ್ನೋದನ್ನ ಬಿಚ್ಚಿಟ್ಟಿದ್ದಾರೆ.
ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ನಟಿಯರು ಮಾತ್ರವಲ್ಲ ನಟರು ಇದ್ದಾರೆ ಅಂತ ಕಳೆದ ವರ್ಷವೇ ಹೇಳಿದ್ದೆ ಈಗಲೂ ಹೇಳ್ತೀನಿ. ಶುಕ್ರವಾರ-ಶನಿವಾರ-ಭಾನುವಾರ ಪೇಜ್ ತ್ರಿ ಪಾರ್ಟಿ ಮಾಡ್ತಾರೆ. ಫಾರ್ಮ್ ಹೌಸ್ ಗಳಲ್ಲಿಮಿಡ್‌ನೈಟ್ ಅಲ್ಲ ಬೆಳಗಿನ ಜಾವದವರೆಗೂ ಮತ್ತಲ್ಲಿ ತೇಲುತ್ತಾರೆ. ಡ್ರಗ್ಸ್ ವ್ಯಾಪಾರ ದಂಧೆ-ದುಡಿಮೆ ಮಾಡುವ ಮನಸ್ಥಿತಿ ನಟರಿಗಿಲ್ಲ, ಆದರೆ ಮೋಜು ಮಸ್ತಿಗೇನು ಕಮ್ಮಿಯಿಲ್ಲ ಎನ್ನುವ ಪ್ರಶಾಂತ್, ಯಾವ್ಯಾವ ನಟರು ಡ್ರಗ್ಸ್ ವ್ಯಸನಿಯಾಗಿದ್ದಾನೆಂದು ನಾನು ಮಾಧ್ಯಮದ ಮುಂದೆ ಓಪನ್ ಆಗಿ ಹೇಳೋದಕ್ಕೆ ಆಗದೇ ಇರ‍್ಬೋದು ಆದರೆ ಒಂದೇ ಒಂದು ಸುಳಿವನ್ನ ಕೊಡ್ತೀನಿ ಅಂತ ಕೊಟ್ಟಿದ್ದಾರೆ. ನೀವುಗಳೇ ಆ ನಟರು ಯಾರೆಂದು ಪತ್ತೆಹಚ್ಚಬಹುದು ಹೀಗಂತ ಮಾತು ಶುರುಮಾಡಿದ ಪ್ರಶಾಂತ್ ಸಂಬರ್ಗಿಯವರು, ಕಳೆದ ಎರಡು ವರ್ಷಗಳಲ್ಲಿ ಯಾವ ನಟರ ತೂಕ ಹೆಚ್ಚಾಗಿದೆಯೋ ಆ ನಟರು ಡ್ರಗ್ಸ್ ಗೆ ಅಡಿಕ್ಟ್ ಆಗಿದ್ದಾರೆಂದು ಅರ್ಥ ಎಂದಿದ್ದಾರೆ. ಸಂಬರ್ಗಿಯವರ ಈ ಸ್ಟೇಟ್ಮೆಂಟ್ ಕಿವಿಗೆ ಬಿದ್ಮೇಲೆ ಸ್ಯಾಂಡಲ್‌ವುಡ್‌ನ ಒಂದಿಷ್ಟು ನಟರುಗಳು ಕಣ್ಮುಂದೆ ಬಂದು ನಿಲ್ತಾರೆ. ಹಾಗೇ ಬಂದುನಿಂತ ನಟರುಗಳು ದಪ್ಪ ಇದ್ದಾರೆ ಎಂದ ಮಾತ್ರಕ್ಕೆ ಅವರು ಡ್ರಗ್ಸ್ ದಾಸರಾಗಿದ್ದಾರೆಂದು ಒಪ್ಪಿಕೊಳ್ಳುವುದಕ್ಕೆ ಆಗಲ್ಲ. ಯಾಕಂದ್ರೆ, ನಟರುಗಳು ದಪ್ಪ ಆಗೋದು.. ಸಣ್ಣ ಆಗೋದು ಮಾಮೂಲಿ.
ಸಿನಿಮಾಗೋಸ್ಕರ ನಟರುಗಳು ಬದಲಾಗುತ್ತಾರೆ, ಬದಲಾಗಬೇಕಾಗುತ್ತದೆ. ಪಾತ್ರಕ್ಕೆ ಜೀವ ತುಂಬಲು ಕೆಲವೊಮ್ಮೆ ತೂಕ ಹೆಚ್ಚಿಸಿಕೊಳ್ಳಬೇಕಾಗು ತ್ತದೆ, ಕೆಲವೊಮ್ಮೆ ತೂಕ ಇಳಿಸಿಕೊಳ್ಳಬೇಕಾಗುತ್ತದೆ. ಒಂದು ಸಿನಿಮಾಗೆ ಕಮಿಟ್ ಆದ್ಮೇಲೆ ಆ ಸಿನಿಮಾದ ಪಾತ್ರ ಎರೆಡೆರಡು ಶೇಡ್ ಇದ್ದಲ್ಲಿ, ಆ ಪಾತ್ರ ತೂಕವನ್ನು ಹೆಚ್ಚು ಕಡಿಮೆ ಕೇಳಿದ್ದಲ್ಲಿ, ಆ ಪಾತ್ರದ ಚಿತ್ರೀಕರಣ ದ ಸಮಯ ವರ್ಷಗಳು ಹಿಡಿದಲ್ಲಿ ಆ ಚಿತ್ರದ ನಾಯಕನ ದೇಹದ ಹೆಚ್ಚುಕಡಿಮೆಯಾಗುತ್ತೆ. ದಪ್ಪಗಾಗೋದಕ್ಕೆ ಹಾಗೂ ಸಣ್ಣಗಾಗೋದಕ್ಕೆ ಜಿಮ್ ಬಾಗಿಲು ಬಡಿಯುತ್ತಾರೋ, ಫಿಟ್ನೆಸ್ ಟ್ರೈನರ್‌ಗಳ ಸಲಹೆಯಂತೆ ಸ್ಟಿರಾಯ್ಡ್ ಗಳನ್ನು ತೆಗೆದುಕೊಳ್ತಾರೋ ಅಥವಾ ಯಾವುದು ಬೇಡ ಗುರು ಅಂತ ನಾಲ್ಕು ಗೋಡೆಯ ಮಧ್ಯೆ ದೇಹದಂಡಿಸ್ತಾರೋ ಗೊತ್ತಿಲ್ಲ. ಒಟ್ನಲ್ಲಿ, ಸಿನಿಮಾಗೋಸ್ಕರ ಕಟ್ಟುಮಸ್ತಾಗಿ ಮೈಹುರಿಗೊಳಿಸಿಕೊಂಡು ಅಖಾಡಕ್ಕೆ ಧುಮುಕುತ್ತಾರೆ. ಕಮಿಟ್ ಆದಂತೆ ಆ ಮೂವೀನಾ ಮುಗಿಸಿಕೊಡ್ತಾರೆ, ಅನ್ನದಾತರನ್ನ ಉಳಿಸ್ತಾರೆ, ಚಿತ್ರರಂಗವನ್ನ ಬೆಳೆಸ್ತಾರೆ, ಕೋಟ್ಯಾಂತರ ಪ್ರೇಕ್ಷಕರನ್ನ ರಂಜಿಸ್ತಾರೆ. ಇದೆಲ್ಲಾ ಹೊರಜ ಗತ್ತಿಗೆ ಗೊತ್ತಿದೆ. ಇದರಾಚೆಗಿರುವ ಸತ್ಯಾಸತ್ಯತೆ ಸಾಮಾನ್ಯರಿಗೆ ಗೊತ್ತಿಲ್ಲ ಅಷ್ಟು ಸುಲಭವಾಗಿ ತಿಳಿಯೋದು ಇಲ್ಲ ಬಿಡಿ.
ಹಾಗಾದ್ರೆ, ಯಾವುದು ಸತ್ಯ? ಯಾವುದು ಸುಳ್ಳು? ಗೊತ್ತಿಲ್ಲ. ಆದರೆ, ಕೆಲವು ಸತ್ಯ ನನಗೆ ಗೊತ್ತಿದೆ ಎನ್ನುವ ಪ್ರಶಾಂತ್ ಸಂಬರ್ಗಿಯವರು ಕೆಲವು ನಟರು ಸಿನಿಮಾಗಾಗಿ ದಪ್ಪ ಆಗಿದ್ದಾರೆ ಅಂತ ನೀವು ತಿಳಿದುಕೊಂಡಿದ್ದೀರಾ ಅಷ್ಟೇ. ಆದರೆ, ಅವರುಗಳು ದಪ್ಪ ಆಗಿರುವುದು ಮೂವಿಗೋಸ್ಕರ ಅಲ್ಲ, ಬದಲಾಗಿ ಡ್ರಗ್ಸ್ ಅಡಿಕ್ಟ್ ಆಗಿ ತೂಕ ಹೆಚ್ಚಾಗಿದೆ ಎಂದಿದ್ದಾರೆ. ಡ್ರಗ್ಸ್ ನಲ್ಲಿ ಅಪ್ ಡ್ರಗ್ಸ್ ಹಾಗೂ ಡೌನ್ ಡ್ರಗ್ಸ್ ಎನ್ನುವ ಎರಡು ರೀತಿಯದಿದ್ದೇ. ಅಪ್ ಡ್ರಗ್ಸ್ ನಲ್ಲಿ ಗಾಂಜಾ ಬರುತ್ತೆ. ಇದು ತುಂಬಾ ಖುಷಿಪಡಿಸುತ್ತೆ. ಹೊಟ್ಟೆ ತುಂಬಾ ಊಟ ಮಾಡ್ತಾರೆ, ಸದಾ ಹ್ಯಾಪಿಯಾಗಿರುತ್ತಾರೆ. ಸುಮ್ ಸುಮ್ನೆ ನಗ್ತಾರೆ, ಕಿರುಚಾಡುತ್ತಾರೆ, ಹೊಡೆದಾಡುತ್ತಾರೆ, ಆವೇಶಭರಿತ ಮಾತುಗಳನ್ನಾಡುತ್ತಾರೆ. ಅದೇ, ರೀತಿ ಡೌನ್ ಡ್ರಗ್ಸ್ ಅಡಿಕ್ಟ್ ಆದ ನಟರುಗಳು ಇದ್ದಾರೆ. ಕೆಮಿಕಲ್ ಡ್ರಗ್ಸ್ನ ಸೇವನೆ ಮಾಡಿಕೊಂಡು ಗರ ಬಡಿದವರ ಥರ ಇರುತ್ತಾರೆ. ಟೈಮ್ ಟು ಟೈಮ್ ಊಟ ಮಾಡಲ್ಲ, ನಿದ್ದೆ ಮಾಡಲ್ಲ. ಒಂಟಿಯಾಗಿ ಅಲೆಮಾರಿ ಥರ ಇರುವುದು ನಿಲ್ಲಿಸಿಲ್ಲ ಅವರು ಹೀಗಂತ ಪ್ರಶಾಂತ್ ಹಿಂಟ್ ಮೇಲೆ ಹಿಂಟ್ ಕೊಟ್ಟಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದ ಪ್ರಶಾಂತ್ ಸಂಬರ್ಗಿಯವರು, ಗಾಂಜಾ ಸೇವನೆ ಮಾಡಿದವರು ಹೆಚ್ಚು ಊಟ ಮಾಡ್ತಾರೆ, ನಾನ್ ವೆಜ್ ತಿನ್ನುತ್ತಾರೆ ಇದರಿಂದ ಐದಲ್ಲ ಹತ್ತಲ್ಲ ೧೫ ಕೆಜಿ ತೂಕ ಜಾಸ್ತಿಯಾಗುತ್ತೆ ಎಂದಿದ್ದಾರೆ. ನಾನು ಕಾಗಕ್ಕ ಗುಬ್ಬಕ್ಕ ಸ್ಟೋರಿ ಹೇಳುತ್ತಿಲ್ಲ ಕಳೆದ ಎರಡು ವರ್ಷದಿಂದ ಡ್ರಗ್ಸ್ ದಾಸರ ಮೇಲೆ ವರ್ಕ್ ಮಾಡಿದ್ದೇನೆ. ೧೫೦ ರಿಯಾಬಿಲಿಟೇಷನ್ ಮಾಡಿ ಅದರ ಬಗ್ಗೆ ತಿಳಿದುಕೊಂಡಿದ್ದೇನೆ. ಮಾದಕ ವ್ಯಸನಕ್ಕೆ ಒಳಗಾದವರ ಮನಸ್ತಿತಿ ಹೇಗಿರುತ್ತೆ ಎಂದು ಅರಿತುಕೊಂಡಿದ್ದೇನೆ. ನಾನು ಯಾರೊಬ್ಬರನ್ನೂ ಟಾರ್ಗೆಟ್ ಮಾಡಿ ಹೇಳುತ್ತಿಲ್ಲ. ಸಮಾಜಕ್ಕೆ ಕಂಟಕವಾಗಿರುವ ಡ್ರಗ್ಸ್ ಮಾಫಿಯಾ ತೊಡೆದು ಹಾಕುವುದಕ್ಕೆ ತನ್ನ ಕೈಲಾದ ಪ್ರಯತ್ನ ಮಾಡುತ್ತಿದ್ದೇನೆ. ತನಗೆ ಗೊತ್ತಿರುವ ಹೆಚ್ಚಿನ ಮಾಹಿತಿಯನ್ನ ಪೊಲೀಸರಿಗೆ ಒಪ್ಪಿಸಲಿದ್ದೇನೆ ಎಂದಿದ್ದಾರೆ ಪ್ರಶಾಂತ್.
– ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ