ಸಂಜನಾ – ರಾಗಿಣಿ ಡ್ರಗ್ಸ್‌ ದಾಸಿಯರಾ ? ಕೊದಲೆಳೆಯಲ್ಲಿ ಸಿಕ್ಕಿಬಿದ್ದವರ ಕಥೆ ಮುಂದೇನಾಗುತ್ತೆ?

ಜಾಮೀನ ಮೇಲೆ ಜೈಲಿನಿಂದ ಹೊರ ಬಂದ ಮೇಲೆ ರಾಗಿಣಿ, ಸಂಜನಾ ಇಬ್ಬರೂ ಫ್ರೀ ಬರ್ಡ್‌ ನಂತೆಯೇ ಹಾರಾಡಿಕೊಂಡಿದ್ದರು. ಪ್ರಕರಣದ ಬಗ್ಗೆ ಮಾತನಾಡದೆ, ದೇವರಿದ್ದಾನೆ ಅಂತ ನಂಬಿಕೊಂಡಿದ್ದರು. ಆದರೆ ಈಗ ರಿಯಾಲಿಟಿ ರಿವೀಲ್‌ ಆಗಿದೆ. ಇಬ್ಬರಿಗೂ ಈಗ ಸಂಕಷ್ಟ ಬಂದಾಗಿದೆ..

ಸ್ಯಾಂಡಲ್‌ವುಡ್‌ ಮತ್ತೆ ಬೆಚ್ಚಿ ಬಿದ್ದಿದೆ. ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಹೊರಬಂದಿದ್ದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರಿಗೂ ಈಗ ಮತ್ತೆ ಸಂಕಷ್ಟ ಎದುರಾಗಿದೆ. ಇಬ್ಬರೂ ನಟಿಯರು ಡ್ರಗ್ಸ್‌ ಸೇವನೆ ಮಾಡಿರುವುದು ಈಗ ಎಫ್‌ಎಸ್‌ಎಲ್‌ ಪರೀಕ್ಷೆಯಲ್ಲಿ ದೃಢ ಪಟ್ಟಿದೆ. ಪ್ರಕರಣ ಕುರಿತು ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಎಫ್‌ಎಸ್‌ಎಲ್‌ ವರದಿಯನ್ನು ಈಗಾಗಲೇ ಕೋರ್ಟ್‌ಗೂ ಸಲ್ಲಿಕೆ ಮಾಡಿದ್ದಾರೆ. ಈಗ ಶುರುವಾಗಿರೋದು ಈ ಇಬ್ಬರು ನಟಿಮಣಿಯರ ಕಥೆ ಮುಂದೇನು ಅಂತ.

ಡ್ರಗ್ಸ್‌ ಸೇವನೆ ದೃಢ ಪಟ್ಟಿರೋದ್ರಿಂದ ಮುಂದೆ ಇಬ್ಬರಿಗೂ ಮತ್ತೆ ಜೈಲಾ ಅಥವಾ ಇನ್ನೇನಾದರೂ ಶಿಕ್ಷಗೆ ಗುರಿಯಾಗಿ ಜೈಲಿಗೆ ಹೋಗದೆ ಉಳಿಯುತ್ತಾರಾ? ಎಫ್‌ಎಸ್‌ಎಲ್‌ ವರದಿ ಬಹಿರಂಗವಾದ ಬೆನ್ನಲೇ ಚಿತ್ರರಂಗದಲ್ಲಿ ಇಂತಹ ಪ್ರಶ್ನೆಗಳು ಹುಟ್ಟಿಕೊಂಡಿವೆ. ಸದ್ಯಕ್ಕೆ ಎಫ್‌ಎಸ್‌ಎಲ್‌ ಪರೀಕ್ಷಾ ವರದಿ ಈಗ ಕೋರ್ಟ್‌ಗೆ ಹೋಗಿದೆ. ಕೋರ್ಟ್‌ ಅದನ್ನು ಹೇಗೆ ತೆಗೆದುಕೊಳ್ಳುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ. ಆದರೆ ಡ್ರಗ್ಸ್‌ ಮಾಫಿಯಾ ಪ್ರಕರಣದಲ್ಲಿ ಇದು ದೊಡ್ಡ ಸಾಕ್ಷಿ ಆಗುವ ಸಾಧ್ಯತೆ ಇದೆ. ಇದೆಲ್ಲ ನೋಡಿದರೆ ಇಬ್ಬರೂ ನಟಿಯರಿಗೆ ಸಂಕಷ್ಟ ಎದುರಾಗುವುದು ಖಚಿತ ಅಂತಲೂ ಹೇಳಲಾಗುತ್ತಿದೆ. ಆ ಮೂಲಕ ಡ್ರಗ್ಸ್‌ ಮಾಫಿಯಾ ಪ್ರಕರಣ ಇನ್ನೊಂದು ಹಂತಕ್ಕೆ ಕಾಲಿಡಲಿದೆ.

ಹೆಚ್ಚು ಕಡಿಮೆ ಒಂದು ವರ್ಷದ ಹಿಂದೆ ಸ್ಯಾಂಡಲ್‌ ವುಡ್‌ ನಲ್ಲಿ ಭಾರೀ ಸಂಚಲನ ಸೃಷ್ಟಿಸಿದ ಪ್ರಕರಣ ಇದು. ಡ್ರಗ್ಸ್‌ ಮಾಫಿಯಾ ಪ್ರಕರಣ ಹೊರ ಬಂದ ದಿನಗಳಲ್ಲಿ ಸ್ಯಾಂಡಲ್‌ವುಡ್‌ ಮಂದಿಯ ಕೆಲವು ಹೆಸರುಗಳು ಒಂದೊಂದಾಗಿಯೇ ಹೊರಬರುತ್ತಿದ್ದಂತೆ ಇಡೀ ಚಿತ್ರರಂಗವೇ ಒಂದು ಕ್ಷಣ ನಡುಗಿ ಹೋಯಿತು. ಯಾಕಂದ್ರೆ ಸ್ಯಾಂಡಲ್‌ ವುಡ್‌ ಮಟ್ಟಿಗೆ ಇಂತಹ ಪ್ರಕರಣ ದೊಡ್ಡದಾಗಿ ಸುದ್ದಿ ಆಗಿದ್ದೇ ಅದೇ ಮೊದಲು. ಹಾಗೆ ನೋಡಿದರೆ ಇವತ್ತು ಕನ್ನಡ ಚಿತ್ರರಂಗವೂ ಕೂಡ ಟಾಲಿವುಡ್‌, ಕಾಲಿವುಡ್‌ ಮಟ್ಟಿಗೆ ಬೆಳೆದಿದೆ ಎನ್ನುವುದು ನಿಜವೇ ಆದರೂ, ಬಾಲಿವುಡ್‌ ನಲ್ಲಿರುವ ಮೋಜು ಮಸ್ತಿಯ ಸಂಸ್ಕೃತಿ ಇಲ್ಲಿ ಇಲ್ಲ ಅಂತಲೇ ಕನ್ನಡ ಸಿನಿಮಾ ಪ್ರೇಕ್ಷಕರು ನಂಬಿದ್ದರು. ಆದರೆ ಡ್ರಗ್ಸ್‌ ಮಾಫಿಯಾ ಪ್ರಕರಣ ಹೊರ ಬಂದ ಬೆನ್ನಲೇ ಅದರಲ್ಲಿ ನಟಿಯರಾದ ರಾಗಿಣಿ ದ್ವಿವೇದಿ, ಸಂಜನಾ ಗಲ್ರಾನಿ ಸೇರಿದಂತೆ ಕೆಲವರ ಹೆಸರು ಬಯಲಾಗುತ್ತಿದ್ದಂತೆ ಚಿತ್ರರಂಗ ಮಂದಿ ಮಾತ್ರವಲ್ಲ ಕನ್ನಡದ ಸಿನಿಮಾ ಪ್ರೇಕ್ಷಕಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಅದು ಇನ್ನೊಂದು ಹೆಜ್ಜೆ ಮುಂದೆ ಹೋಗಿ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ಜೈಲಿಗೆ ಕಳುಹಿಸಿದಾಗ ಚಿತ್ರರಂಗದ ನಟ-ನಟಿಯರ ಬಗ್ಗೆ ಜನರಲ್ಲಿದ್ದ ವಿಶ್ವಾಸಗಳೇ ಕಳೆದು ಹೋಗಿದ್ದು ಹೌದು. ಇಷ್ಟಾಗಿಯೂ ಆ ಹೊತ್ತಿಗೆ ಈ ಇಬ್ಬರು ನಟಿಯ ಮೇಲಿನ ಆರೋಪ ಸಾಬೀತು ಆಗಿರಲಿಲ್ಲ, ಜತೆಗೆ ಅವರ ಡ್ರಗ್ಸ್‌ ಸೇವನೆ ಮಾಡಿದ್ದು ಕೂಡ ದೃಢಪಟ್ಟಿರಲಿಲ್ಲ. ಅದೇ ಕಾರಣಕ್ಕೆ ಅವರಿಬ್ಬರೂ ಕೂಡ ಕೋರ್ಟ್‌ ಕೊಟ್ಟ ಜಾಮೀನಿನ ಮೇಲೆ ಹೊರ ಬಂದಿದ್ದು ನಿಮಗೂ ಗೊತ್ತು. ಅದರ ಜತೆಗೆ ಅವರೊಂದಿಗೆ ರಾತ್ರಿ ಪಾರ್ಟಿಗಳಲ್ಲಿ ಪಾಲ್ಗೊಳ್ಳುತ್ತಿದ್ದವರು, ಅವರನ್ನು ಇಂತಹ ಪೇಜ್‌ ತ್ರಿ ಪಾರ್ಟಿಗಳಿಗೆ ಇನ್ವೇಟ್‌ ಮಾಡುತ್ತಿದ್ದರ ಬಗ್ಗೆಯಾಗಲಿ ಅನುಮಾನಿ ಸುವುದು ಕಷ್ಟವೇ ಆಗಿತ್ತು. ಪರಿಸ್ಥಿತಿ ಈಗ ಬದಲಾಗುತ್ತಿದೆ. ಯಾಕಂದ್ರೆ ಈ ಇಬ್ಬರೂ ನಟಿಯರು ಡ್ರಗ್ಸ್‌ ಸೇವನೆ ಮಾಡಿರುವುದು ದೃಢಪಟ್ಟಿದೆ. ಪ್ರಕರಣದಲ್ಲಿ ಕೋರ್ಟ್‌ ಇದನ್ನು ಪ್ರಮುಖ ಸಾಕ್ಷಿಯಾಗಿ ಸ್ವೀಕರಿಸಿದರೆ, ಇಬ್ಬರಿಗೂ ಯಾವುದೇ ಬಗೆಯ ಕಠಿಣ ಶಿಕ್ಷೆ ನೀಡಬಹುದು. ಇದೇ ವಿಚಾರದಲ್ಲಿ ಈಗ ಜೈಲು ಹಕ್ಕಿಗಳಿಬ್ಬರಿಗೂ ಸಂಕಷ್ಟವೋ ಸಂಕಷ್ಟ.

ಫಿಕ್ಚರ್‌ ರಿಲೀಸ್‌ ಮುಂದಿದೆ. ಅದೇನಾಗುತ್ತೋ ಗೊತ್ತಿಲ್ಲ. ಆದರೆ, ಇವರಿಬ್ಬರು ಡ್ರಗ್ಸ್‌ ಸೇವನೆ ಮಾಡಿದ್ದು ದೃಢಪಟ್ಟಿರುವುದರ ಮೂಲಕ ಹೊಸ ವಿಚಾರಗಳು ಈಗ ಬಯಲಾಗಬೇಕಿದೆ. ಯಾಕಂದ್ರೆ ಇದೊಂದು ದೊಡ್ಡ ಮಾಫಿಯಾ ಅನ್ನೋದು ಮೊದಲಿನಿಂದಲೂ ಸದ್ದು ಮಾಡುತ್ತಾ ಬಂದಿದೆ. ದೊಡ್ಡ ದೊಡ್ಡ ರಾಜಕಾರಣಿಗಳು, ಪ್ರತಿಷ್ಟಿತ ಉದ್ಯಮಿಗಳು, ಸ್ಯಾಂಡಲ್‌ವುಡ್‌ನ ದಪ್ಪಗಿರುವ ಸ್ಟಾರ್‌ ಗಳು ಈ ಪ್ರಕರಣದಲ್ಲಿದ್ದಾ ರೆಂದೇ ಹೇಳಲಾಗುತ್ತಿದೆ. ಅದು ಮೊದಲು ಬಯಲಾಗಬೇಕು. ಆ ನಿಟ್ಟಿನಲ್ಲಿ ಡ್ರಗ್ಸ್‌ ಮಾಫಿಯಾ ಪ್ರಕರಣಕ್ಕೆ ಮುಂದೆ ಒಂದು ತಾರ್ಕಿಕ ಅಂತ್ಯ ಸಿಗಬಹುದಾ ಎನ್ನುವುದು ದೊಡ್ಡ ಕುತೂಹಲಸ ಸಂಗತಿ. ಸದ್ಯಕ್ಕೆ ರಾಗಿಣಿ, ಸಂಜನಾ ಅವರ ಮುಂದಿನ ಕಥೆ ಏನು ಅನ್ನೋದೇ ದೊಡ್ಡ ಪ್ರಶ್ನೆ. ಹಾಗೊಂದು ವೇಳೆ ಅವರಿಬ್ಬರಿಗೂ ಮತ್ತೆ ಜೈಲಿಗೆ ಹೋಗುವ ಪರಿಸ್ಥಿತಿ ಬಂದರೆ, ಅವರ ಬಣ್ಣದ ಬದುಕು ಏನಾಗುತ್ತೆ? ಎಲ್ಲವನ್ನು ಕಾಲವೇ ನಿರ್ಧರಿಸುತ್ತೆ.

  • ಎಂಟರ್ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!