ಕುಂವೀ ಕಥೆಯೊಳಗೆ ನಟರಾಜ : ತೆರೆ ಮೇಲೆ ಮೂಡಿಬರಲಿದೆ ಕುಬುಸ !

ಕೊಟ್ರೇಶಿ ಕನಸು ಮೊದಲ್ಗೊಂಡು, ಸಾಹಿತಿ ಕುಂವೀ ಅವರ ಅನೇಕ ಕಥೆಗಳು, ಕಾದಂಬರಿಗಳು ಬೆಳ್ಳಿ ತೆರೆ ಮೇಲೆ ಮೂಡಿ ಬಂದಿವೆ. ಈಗ ಆ ಸಾಲಿಗೆ ಅವರೇ ಬರೆದ ʼಕುಬುಸʼ ಕಥೆ ಕೂಡ ಸಿನಿಮಾ ಆಗ್ತಿದೆ. ಇದರ ಫುಲ್‌ ಡಿಟೈಲ್ಸ್‌ ಇಲ್ಲಿದೆ.

ಸಾಹಿತಿ ಕುಂವೀ ವೀರಭದ್ರಪ್ಪ ಅವರಿಗೂ ಸಿನಿಮಾ ಜಗತ್ತಿಗೂ ಅವಿನಾಭಾವ ನಂಟು. ಯಾಕಂದ್ರೆ, ಅವರು ಬರೆದ ಅನೇಕ ಕಥೆಗಳು, ಕಾದಂಬರಿಗಳು ಸಿನಿಮಾ ಆಗಿವೆ. ಈಗ ಆ ಸಾಲಿಗೆ ಮತ್ತೊಂದು ಕಥೆ ಸೇರಿಕೊಂಡಿದೆ. ಆ ಕಥೆಯ ಹೆಸರು ಕುಬುಸ. ಇದು ಸಾಹಿತಿ ಕುಂವೀ ಅವರು ಬರೆದ ಜನಪ್ರಿಯ ಕಥೆಗಳಲ್ಲಿ ಒಂದು. ಈ ಕಥೆಯನ್ನಾಧರಿಸಿ ಈಗ ಯುವ ನಿರ್ದೇಶಕ ರಮೇಶ್‌ ಹಡಗಲಿ ಅವರು ಸಿನಿಮಾ ಮಾಡುತ್ತಿದ್ದು, ಸದ್ದಿಲ್ಲದೆ ಸುದ್ದಿ ಮಾಡದೆ ಲಾಕ್‌ಡೌನ್‌ ನಡುವೆ ಈ ಚಿತ್ರಕ್ಕೀಗ ಚಿತ್ರೀಕರಣವೂ ಮುಗಿದಿದೆ.

ಕುಂವೀ ಕಥೆ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ, ಅದರಲ್ಲಿ ಗ್ರಾಮೀಣ ಹಿನ್ನೆಲೆ ಯ ಜತೆಗೆ ಬಳ್ಳಾರಿಯ ಸೊಗಡು ಇದ್ದೇ ಇರುತ್ತೆ ಅನ್ನೋದು ಅಷ್ಟೇ ಸತ್ಯ. ಅದೇ ಹಿನ್ನೆಲೆಯಲ್ಲೀಗ ಚಿತ್ರ ತಂಡ ಚಿತ್ರಕ್ಕೆ ಹೊಸಪೇಟೆ ಸುತ್ತಮುತ್ತಲೇ ಚಿತ್ರೀಕರಣ ಮುಗಿಸಿಕೊಂಡು ಬಂದಿದೆ. ಪ್ರಮುಖವಾಗಿ ಎರಡು ಪಾತ್ರಗಳಿರುವ ಕಥೆ ಇದು. ತಾಯಿ-ಮಗನ ನಡುವೆ ನಡೆಯುವ ಮನ ಮೀಡಿಯುವ ಕಥಾ ಹಂದರ. ಅದರಲ್ಲಿ ʼರಾಮಾ ರಾಮಾ ರೇʼ ಖ್ಯಾತಿಯ ಯುವ ನಟ ನಟರಾಜ್‌ ಭಟ್ ಹಾಗೂ ರಂಗ ಕಲಾವಿದೆ ಬಳ್ಳಾರಿ ಮೂಲದ ಹನುಮಕ್ಕ ತಾಯಿ-ಮಗನಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಮಹಾಲಕ್ಷ್ಮಿ ನಾಯಕಿ ಆಗಿ ಕಾಣಿಸಿಕೊಂಡಿದ್ದಾರೆ. ಮಂಜುಗೌಡ,ರಮ್ಯಾ, ಮಂಜಮ್ಮ ಜೋಗುತಿ, ಹುಲಗಪ್ಪ ಕಟ್ಟಿಮನಿ ಹಾಗೂ ಚಂದ್ರಶೇಖರ್‌ ಪೋಷಕ ಪಾತ್ರಗಳಲ್ಲಿದ್ದಾರೆ. ಈ ಚಿತ್ರಕ್ಕಿನ್ನು ಟೈಟಲ್‌ ಫೈನಲ್‌ಆಗಿಲ್ಲ. ಶೂಟಿಂಗ್‌ ಮಾತ್ರ ಮುಗಿದಿದೆ.

ಸುಮಾರು 35 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ನಟ ಪಾಲ್ಗೊಂಡಿರುವ ನಟರಾಜ್‌, ಸಿನಿ ಲಹರಿ ಜತೆಗೆ ಚಿತ್ರೀಕರಣದ ಅನುಭವ ಹಂಚಿಕೊಂಡರು.ʼ ಗ್ರಾಮೀಣ ಸೊಗಡಿನ ಅದ್ಬುತ ಕಥೆ ಇದು. ಅವಕಾಶ ಸಿಕ್ಕಿದ್ದೇ ನನ್ನ ಪುಣ್ಯ. ದೊಡ್ಡ ಕಮರ್ಷಿಯಲ್‌ ಸಿನಿಮಾ ಅಲ್ಲ ಎನ್ನುವುದಕ್ಕಿಂತ, ಅಭಿನಯಕ್ಕೆ ಒಂದೊಳ್ಳೆಯ ಅವಕಾಶ ಇರುವಂತಹ ಪಾತ್ರ. ಹೊಸಪೇಟೆ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರೀಕರಣ ನಡೆದಿದ್ದೇ ಗೊತ್ತಾಗಲಿಲ್ಲ. ನಾನು ಹಳ್ಳಿಯಿಂದಲೇ ಬಂದವನು. ಅದೇ ಅನುಭವ ಚಿತ್ರೀಕರಣದಲ್ಲೂ ಇತ್ತು. ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದರು ನಟರಾಜ್.‌ ನಿರ್ದೇಶಕ ರಮೇಶ್‌ ಅವರೇ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆದಿದ್ದು, ಸಾಹಿತ್ಯ ರಚನೆಯ ಜತೆಗೆ ಪ್ರದ್ರೀಪ್‌ಚಂದ್ರ ಸಂಗೀತ ನೀಡಿದ್ದಾರೆ.ಚೇತನ್‌ ಶರ್ಮಾ ಛಾಯಾಗ್ರಹಣ ವಿದೆ.ಅರ್ಜುನ್‌ ಕಿಟ್ಟು ಸಂಕಲನ ಮಾಡುತ್ತಿದ್ದಾರೆ.
-ಎಂಟರ್‌ ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ

Related Posts

error: Content is protected !!