ಲೂಸ್ ಮಾದ ‘ಲಂಕೆ’ ಅಖಾಡದಲ್ಲಿ ದರ್ಶನ್ ನಾಯಕಿ ಲಕಲಕ ; ಸ್ವಾಮಿ ಸುಂದರಿಯ ಸೆಕೆಂಡ್ ಇನ್ನಿಂಗ್ಸ್ ಸ್ಟೋರಿ !

ಜುಮ್ಮಂತ ಜಾರುವ ಬಾ… ಜುಮ್ಮಂತ ಹಾರುವ ಬಾ..ಮುಂಜಾನೆಲೆ.. ಮಂಜಿನಲೆ ಉಬ್ಬಿ ತಬ್ಬಿ ಹಬ್ಬ ಮಾಡೋಣ… ಹೀಗಂತ ಸೊಂಟ ಬಳುಕಿಸಿಕೊಂಡು ದಚ್ಚು ಜೊತೆ ‘ಸ್ವಾಮಿ’ ಚಿತ್ರದಲ್ಲಿ ಹಾಡಿಕುಣಿದ ನಟಿ ಗಾಯತ್ರಿ ಜಯರಾಮನ್‌ ಮತ್ತೆ ಕನ್ನಡಕ್ಕೆ‌ ಬಂದಿದ್ದಾರೆ. ಯಸ್.. ‘ಸ್ವಾಮಿ‌’ ಸುಂದರಿ ಸ್ಯಾಂಡಲ್ ವುಡ್ ಗೆ ಕಮ್ ಬ್ಯಾಕ್ ಮಾಡಿದ್ದಾರೆ. ಭರ್ತಿ ಹದಿನೈದು ವರ್ಷಗಳು ಕಳೆದಮೇಲೆ ಮತ್ತೆ ಚಂದನವನಕ್ಕೆ ಹಿಂತಿರುಗಿದ್ದಾರೆ. ಲೂಸ್ ಮಾದ ಯೋಗಿ ಅಭಿನಯದ ‘ಲಂಕೆ‌’ ಸಿನಿಮಾದ ಮೂಲಕ ಸ್ವಾಮಿ ಚಿತ್ರನಟಿ ಗಾಯತ್ರಿ ಜಯರಾಮನ್ ಸೆಕೆಂಡ್ ಇನ್ನಿಂಗ್ಸ್ ಶುರುಮಾಡಿದ್ದಾರೆ.

ನಾಗಾಭರಣ್ ನಿರ್ದೇಶನದ ‘ ನೀಲ’ ಗಾಯತ್ರಿ ಜಯರಾಮನ್ ಮೊದಲ ಕನ್ನಡದ ಸಿನಿಮಾ. ಕೊನೆಯ ಚಿತ್ರ ‘ಸ್ವಾಮಿ’ ಈಗ ಲಂಕೆಗೆ ಬಂದಿದ್ದಾರೆ. ಪಾತ್ರದ ಬಗ್ಗೆ ಗುಟ್ಟುಬಿಟ್ಟುಕೊಡದ ನಟಿ ಗಾಯತ್ರಿ ಜಯರಾಮನ್, ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರಕ್ಕೆ ಜೀವತುಂಬಿದ್ದೇನೆ. ಅವಕಾಶ ಕೊಟ್ಟ ‘ಲಂಕೆ‌’ ಟೀಮ್ ಗೆ ಧನ್ಯವಾದ ತಿಳಿಸಿದ ನಟಿ ಕನ್ನಡ ಸಿನಿಮಾ ಇಂಡಸ್ಟ್ರಿಯ ಬಗ್ಗೆ ಹೊಗಳಿದರು ಪರ್ಫಾಮೆನ್ಸ್ ಓರಿಯೆಂಟೆಡ್ ಸಿನಿಮಾಗಳು ಬರುತ್ತಿವೆ, ಲಂಕೆಯಲ್ಲಿ ತನ್ನ ಪಾತ್ರಕ್ಕೂ ಸ್ಕೋಪ್ ಇದೆ‌ ಎಂದು ಖುಷಿವ್ಯಕ್ತಪಡಿಸಿದರು.‌

‘ಲಂಕೆ‌’ ಲೂಸ್ ಮಾದ ಯೋಗಿ‌ ಅಭಿನಯದ ಹೈವೋಲ್ಟೇಜ್ ಸಿನಿಮಾ.‌ ಈ ಚಿತ್ರದ ಮೂಲಕ ಯೋಗಿ ಗಾಂಧಿನಗರಲ್ಲಿ ಹೊಸ ಮೇನಿಯಾ ಸೃಷ್ಟಿಸ್ತಾರೆ ಎನ್ನುವ ಮಾತು ಜೋರಾಗ್ತಿದೆ. ಟ್ರೈಲರ್ ಮೂಲಕ ಭರವಸೆ ಮೂಡಿಸಿದ್ದಾರೆ. ಹಾಡುಗಳು ಸಖತ್ ಸೌಂಡ್ ಮಾಡ್ತಿವೆ. ಕಾರ್ತಿಕ್ ಶರ್ಮಾರ ಸಂಗೀತ ಚಿತ್ರಕ್ಕಿದ್ದು ಇತ್ತೀಚಿಗೆ ಆಡಿಯೋ ಬಿಡುಗಡೆ ಮಾಡಲಾಯ್ತು.‌ ಡಾಲಿ ಧನಂಜಯ್ ಸ್ಪೆಷಲ್ ಗೆಸ್ಟ್ ಆಗಿ ಬಂದು ಲಂಕೆಗೆ ಸಾಥ್ ಕೊಟ್ಟರು. ಯೋಗಿಗೆ ಕೃಷಿ ತಾಪಂಡ ಹಾಗೂ ಕಾವ್ಯಾಶೆಟ್ಟಿ ಜೋಡಿಯಾಗಿದ್ದಾರೆ.‌ ದಿ ಗ್ರೇಟ್ ಎಂಟರ್ ಟೈನರ್ ಲಾಂಛನದಲ್ಲಿ ಪಟೇಲ್ ಶ್ರೀನಿವಾಸ್ ಹಾಗೂ ಸುರೇಖಾ ರಾಮಪ್ರಸಾದ್ ನಿರ್ಮಾಣದಲ್ಲಿ ಲಂಕೆ ಅದ್ದೂರಿಯಾಗಿ ನಿರ್ಮಾಣವಾಗಿದೆ.ಸರ್ಕಾರ 100 ಪರ್ಸೆಂಟ್ ಅನುಮತಿ ಕೊಟ್ಟರೆ ಲಂಕಾರ್ಭಟ ಶುರುವಾಗಲಿದೆ

ವಿಶಾಲಾಕ್ಷಿ, ಎಂಟರ್ ಟೈನೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!