ಹೆಡ್ ಬುಷ್ ಆಡಲಿದ್ದಾರೆ ಯೋಗಿ – ಧನಂಜಯ್ ; ಡಾಲಿ ಡಾನು, ಲೂಸ್‌ ಮಾದ ಏನು ? ಗೆಳೆಯನಾ, ವಿಲನ್ನಾ ?

ಡಾಲಿ ಧನಂಜಯ್‌ ಡಾನ್‌ ಆಗಿ ಕಾಣಿಸಿಕೊಂಡಿರುವ ʼಹೆಡ್‌ ಬುಷ್‌ʼ ಸ್ಯಾಂಡಲ್‌ ವುಡ್‌ ಅಂಗಳದಲ್ಲಿ ಸಖತ್‌ ಸೌಂಡ್‌ ಮಾಡತೊಡಗಿದೆ. ನಟ ಡಾಲಿ ಧನಂಜಯ್‌ ಹುಟ್ಟು ಹಬ್ಬಕ್ಕೆ ಭಾನುವಾರ ಅದರ ಫಸ್ಟ್‌ ಲುಕ್‌ ಟೀಸರ್‌ ಲಆಂಚ್‌ ಆಗಿದೆ. ಡಾಲಿ ಧನಂಜಯ್‌ ಅವರ ಕ್ಯಾರೆಕ್ಟರ್‌ ಒಂದು ಲುಕು ಇಲ್ಲಿ ರಿವೀಲ್‌ ಆಗಿದೆ. ಸಹಜವಾಗಿಯೇ ಇದು ಚಿತ್ರದ ಬಗ್ಗೆ ದೊಡ್ಡ ಕೌತುಕ ಹುಟ್ಟಿಸಿದೆ. ಈ ನಡುವೆಯೇ ಹೆಡ್‌ ಬುಷ್‌ ಚಿತ್ರದ ಬಗೆಗಿನ ಮತ್ತೊಂದು ಸಂಗತಿ ರಿವೀಲ್‌ ಆಗಿದೆ. ಇದೀಗ ಡಾಲಿ ಧನಂಜಯ್ ಹಾಗೂ ಲೂಸ್ ಮಾದ ಯೋಗಿ ಒಂದಾಗಿದ್ದಾರೆ. ಇಬ್ಬರು ಈಗ ಬೆಳ್ಳಿತೆರೆ ಮೇಲೆ ‘ಹೆಡ್ ಬುಷ್’ ಆಡಲು ರೆಡಿ ಆಗಿದ್ದಾರೆ.

ಹೌದು, ಪತ್ರಕರ್ತ ಅಗ್ನಿಶ್ರೀಧರ್ ಕಥೆ ಬರೆದು, ಶೂನ್ಯ ನಿರ್ದೇಶನ ಮಾಡುತ್ತಿರುವ ʼಹೆಡ್ ಬುಷ್ ʼ ಚಿತ್ರದಲ್ಲಿ ಧನಂಜಯ್ ಜತೆಗೆ ಲೂಸ್ ಮಾದ ಯೋಗೇಶ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಸಿಕೊಳ್ಳುತ್ತಿ ದ್ದಾರಂತೆ. ಈ ಸಂಗತಿಯನ್ನು ‘ಹೆಡ್ ಬುಷ್ ‘ಚಿತ್ರದ ನಾಯಕ ನಟ ಧನಂಜಯ್ ಅವರೇ ರಿವೀಲ್ ಮಾಡಿದ್ದಾರೆ. ಈಗಾಗಲೇ ರಿವೀಲ್‌ ಆಗಿರುವಂತೆ ಹೆಡ್‌ ಬುಷ್‌ ಸಿನಿಮಾ ಡಾನ್‌ ಜಯರಾಮ್‌ ಜೀವನ ಕುರಿತದ್ದು. ಅಂಡರ್‌ ವರ್ಲ್ಡ್‌ ಜಗತ್ತಿನ ಕಥೆ. ಇಲ್ಲಿ ಧನಂಜಯ್‌ ಜಯರಾಜ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಜತೆಗೀಗ ಯೋಗಿ ಜತೆಯಾಗಿದ್ದಾರಂದ್ರೆ ಕುತೂಹಲ ಇರೋದು ಯೋಗಿ ಪಾತ್ರದ ಬಗ್ಗೆ. ಹಾಗಾದ್ರೆ ಯೋಗಿ ಅವರ ಪಾತ್ರ ಏನು? ಸದ್ಯಕ್ಕೆ ಅದೆಲ್ಲ ಮಾಹಿತಿ ಇನ್ನು ನಿಗೂಢ. ಬಟ್‌, ಹೆಡ್‌ ಬುಷ್‌ ನಲ್ಲಿ ಯೋಗಿ ಇದ್ದಾರೆನ್ನುವುದು ನಟ ಧನಂಜಯ್‌ ಅವರೇ ರಿವೀಲ್‌ ಮಾಡಿರುವ ಸಂಗತಿ.

ಲೂಸ್‌ ಮಾದ ಯೋಗೇಶ್‌ ಅಭಿನಯದ ಲಂಕೆ ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ನಟ ಧನಂಜಯ್‌ ಇಲ್ಲಿಗೆ ಅತಿಥಿಯಾಗಿ ಆಗಮಿಸಿ, ಆಡಿಯೋ ಲಾಂಚ್‌ ಮಾಡಿದರು.ಅದೇ ವೇಳೆ ಯೋಗೇಶ್‌ ಜತೆಗಿನ ಒಡನಾಟದ ಕುರಿತು ಮಾತನಾಡಿದ ಅವರು, ‘ಯೋಗಿ ನನ್ನ ಸ್ನೇಹಿತ. ಸ್ನೇಹಕ್ಕಾಗಿ ಇಲ್ಲಿಗೆ ಬಂದಿದ್ದೀನಿ. ನಾನು ಹಾಗೂ ಯೋಗಿ ಹೆಡ್ & ಬುಷ್ ಚಿತ್ರದಲ್ಲಿ ಒಟ್ಟಾಗಿ ನಟಿಸುತ್ತಿದ್ದೇವೆ. ಆತನೊಂ‌ ದಿಗೆ ಕಾಣಸಿಕೊಳ್ಳುತ್ತಿರುವುದೇ ಖುಷಿ ಸಮಾಚಾರ ಎಂಬುದಾಗಿ ನಟ ಧನಂಜಯ್ ಲಂಕೆ ಚಿತ್ರದ ಆಡಿಯೋ ಬಿಡುಗಡೆಯ ವೇದಿಕೆಯಲ್ಲಿ ಹೇಳಿಕೊಂಡರು. ಲೂಸ್ ಮಾದ ಯೋಗಿ ಅಲಿಯಾಸ್ ಯೋಗೇಶ್ ಅಭಿನಯದ ಚಿತ್ರ ‘ಲಂಕೆ’. ಇದೀಗ ರಿಲೀಸ್‌ ರೆಡಿ ಆಗಿದೆ.

ಒಂದಷ್ಟು ಗ್ಯಾಪ್ ನಂತರ ಮತ್ತೆ ಮುಖಕ್ಕೆ ಬಣ್ಣ ಹಚ್ಚಿರುವ ನಟ ಲೂಸ್ ಮಾದ ಯೋಗಿ, ಈ ಚಿತ್ರದ ಮೇಲೆ ಸಾಕಷ್ಟು ಭರವಸೆ ಇಟ್ಟುಕೊಂಡಿದ್ದಾರೆ. ಅದರ ಜತೆಗೆ ಈಗ ಯೋಗೇಶ್‌ ಅಭಿನಯದ ʼಒಂಭತ್ತನೆ ದಿಕ್ಕುʼ ರಿಲೀಸ್‌ ಗೆ ಸಿದ್ದತೆ ನಡೆಸಿದೆ. ಹಾಗೆಯೇ ಪರಿಮಳ ಲಾಡ್ಜ್‌ ಚಿತ್ರೀಕರಣದ ಹಂತದಲ್ಲಿದೆ.ಕಿರಿಕ್‌ ಶಂಕರ್‌ ಹೆಸರಿನ ಒಂದು ಸಿನಿಮಾ, ಹಾಗೆಯೇ ನಾನು ಮತ್ತು ಸರೋಜ ಎನ್ನುವ ಮತ್ತೊಂದು ಸಿನಿಮಾಕ್ಕೂ ಯೋಗಿ ನಾಯಕರಾಗಿದ್ದು, ಅವೆಲ್ಲ ಕೊರೋನಾ ಹಿನ್ನೆಲೆಯಲ್ಲಿ ಸೈಲೆಂಟ್‌ ಆಗಿದ್ದು, ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಿದೆ. ಈ ನಡುವೆ ಈಗ ಹೆಡ್‌ ಬುಷ್‌ ಚಿತ್ರದಲ್ಲಿ ಧನಂಜಯ್‌ ಜತೆಗೆ ಕಾಣಿಸಿಕೊಳ್ಳುತ್ತಿದ್ದಾರಂತೆ.

ಎಂಟರ್‌ ಟೈನ್‌ ಮೆಂಟ್‌ ಬ್ಯುರೋ ಸಿನಿ ಲಹರಿ

Related Posts

error: Content is protected !!