ಬಿಗ್ಬಾಸ್ ಸೀಸನ್ 4ರ ವಿನ್ನರ್.. ಒಳ್ಳೆಹುಡುಗ ಅಂತನೇ ಜನಪ್ರಿಯಗೊಂಡಿರುವ ಸ್ಯಾಂಡಲ್ವುಡ್ ಸೆನ್ಸೇಷನಲ್ ಆಕ್ಟರ್ ಪ್ರಥಮ್ ಆಗಾಗ ಬಿಗ್ಬ್ರೇಕಿಂಗ್ ನ್ಯೂಸ್ಗಳನ್ನ ಕೊಡ್ತಾ ಇ ರ್ತಾರೆ. ಕಳೆದ ಆರು ತಿಂಗಳ ಹಿಂದೆ ಸೋಷಿಯಲ್ ಮೀಡಿಯಾದಲ್ಲಿ ಡ್ರೋಣ್' ಹೆಸರಲ್ಲಿ ಸಿನಿಮಾ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಪ್ರಥಮ್ ಪೇಜ್ನಲ್ಲಿ ಡ್ರೋಣ್ ಕಂಡಾಗಲೇ ಇದು ಪಕ್ಕಾ
ಡ್ರೋಣ್ ಪ್ರತಾಪ್’ ಕುರಿತಾದ ಸಿನ್ಮಾ ಇರ್ಬೋದು ಅಂತ ಎಲ್ಲರೂ ನಿರೀಕ್ಷೆ ಮಾಡಿದ್ದರು. ಜನರ ನಿರೀಕ್ಷೆ ಕೊನೆಗೂ ನಿಜವಾಗಿದೆ ಒಳ್ಳೆಹುಡುಗ ಪ್ರಥಮ್ `ಡ್ರೋಣ್ ಪ್ರಥಮ್’ ಹೆಸರಲ್ಲೇ ಸಿನಿಮಾ ಮಾಡೋದಕ್ಕೆ ತೀರ್ಮಾನ ಮಾಡಿದ್ದಾರೆ. ಡ್ರೋಣ್ ಹಾರ್ಸೋಕೆ ಪ್ರಥಮ್ ಜೊತೆ ಪೋರ್ನ್ ಬ್ಯೂಟಿ ಕೈ ಜೋಡಿಸಲಿದ್ದಾರಂತೆ. ಆ ನೀಲಿರಾಣಿ ಯಾರು? ಸಿನಿಮಾದ ಕಂಪ್ಲೀಟ್ ಅಪ್ಡೇಟ್ ಏನು? ಆ ಬಗ್ಗೆ ತಿಳಿದುಕೊ ಳ್ಳುವುದಕ್ಕೂ ಮುನ್ನ ಸ್ವತಃ ಪ್ರಥಮ್ ಡ್ರೋಣ್ ಬಗ್ಗೆ ಹಿಂದೊಮ್ಮೆ ಬಿಚ್ಚಿಟ್ಟ ಕಥೆಯನ್ನೊಮ್ಮೆ ನೋಡ್ಬಿಡೋಣ.
ಮುಂದಿನ ಸಿನಿಮಾ ಹೆಸರು ಡ್ರೋಣ್.. ಒಂದು ಮಜವಾದ ಸಿನಿಮಾ.. ೧೫ ಕೆಜಿ ರೆಡ್ಯೂಸ್ ಆಗ್ತಿದ್ದೀನಿ.. ಟೀಸರ್ ನಿಮಗೆ ಬಂಪರ್..ಕೆಲವು ಟ್ರೋಲ್ ಪೇಜ್ರ ಮನವಿಯ ಮೇರೆಗೆ ಕಾಪಿ ರೈಟಿಂಗ್ ಬರದಂತೆ ಲೀಗಲ್ ಟೀಮ್ ಜೊತೆ ಪ್ರೊಸೀಡ್ ಮಾಡ್ತಿದ್ದೇವೆ ನಿರೀಕ್ಷಿಸಿ. ಹೀಗಂತ, ಪಿಂಕ್ ಲೆಟರ್ನಲ್ಲಿ ಅಕ್ಷರಗಳನ್ನ ಪ್ರಕಟಿಸಿದ್ದ ಪ್ರಥಮ್ ಅವರು. ಪ್ರಖ್ಯಾತ ನಿರ್ದೇಶಕರು ಡ್ರೋಣ್'ಚಿತ್ರ ನಿರ್ದೇಶನ ಮಾಡ್ತಾರೆ. ಗೌರಿಗಣೇಶ,ಉಂಡುಹೋದ ಕೊಂಡು ಹೋದ, ಯಾರಿಗೂ ಹೇಳ್ಬೇಡಿ ಶೈಲಿಯಲ್ಲಿ ಮೂಡಿಬರಲಿದೆ.ನಿಮ್ಗೆ ಡ್ರೋಣ್ ಅಂದ್ರೆ ಗೊತ್ತಲ್ವಾ? ನಿಮ್ಮತಲೆಯಲ್ಲಿ ಏನ್ ಬಂತೋ ಅದೇ ನಿಜ. ಅದೇ ಸಿನಿಮಾ ಆಗ್ತಿದೆ ಲೀಗಲ್ ಟೀಮ್ ಪ್ರೊಸಿಡಿಂಗ್ನಲ್ಲಿ ಇದೆ. ಕಾನೂ ನ್ಮಾತಕವಾಗಿ ಯಾವುದೇ ಸಮಸ್ಯೆಯಾಗದಂತೆ ನಿಮ್ಮನ್ನ ನಗಿಸೋ ಜೊತೆಗೆ ಕಾಡುವ ಸಿನಿಮಾ ಡ್ರೋಣ್..ಹೀಗಂತ ಸೋಷಿಯಲ್ ಪೇಜ್ನಲ್ಲಿ ಪ್ರಥಮ್ ಬರೆದುಕೊಂಡಿದ್ದರು. ಇದೀಗ ಖಾಸಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿ
ಡ್ರೋಣ್’ ಕಹಾನಿ ಮೇ ಟ್ವಿಸ್ಟ್ ನ ಬ್ರೇಕ್ ಮಾಡಿದ್ದಾರೆ.
ಡ್ರೋಣ್' ಸಿನಿಮಾ ಮಾಡ್ತೀನಿ ಅಂತ ಅನೌನ್ಸ್ ಮಾಡಿದ್ದೆ ಅದರಂತೇ ಡ್ರೋಣ್ ಹಾರ್ಸೋಕೆ ನಿರ್ಧಾರ ಮಾಡಿದ್ದೇನೆ.
ಡ್ರೋಣ್ ಪ್ರಥಮ್’ ಹೆಸರಲ್ಲೇ ಮೂವೀ ಮಾಡ್ಬೇಕು ಅಂತ ತೀರ್ಮಾನಿಸಿದ್ದಾಗಿದೆ. ನಟನೆ ಮಾತ್ರ ಮಾಡೋಣ ಎಂದುಕೊಂಡಿದ್ದೇ ಅದ್ಯಾಕೋ ಗೊತ್ತಿಲ್ಲ ನಿರ್ದೇಶನಕ್ಕೂ ಕೈಹಾಕಿದ್ದೇನೆ. ಕಳೆದ ನಾಲ್ಕು ತಿಂಗಳಿಂದ ಡ್ರೋಣ್ ಪ್ರತಾಪ್' ಮೇಲೆ ಸ್ಟಡಿ ಮಾಡಿದ್ದೇನೆ. ಎಲ್ಲೆಡೆ ಆತ ಕೊಟ್ಟಿರುವ ಭಾಷಣ ಹಾಗೂ ಸಂದರ್ಶನಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ ಹಾವ-ಭಾವವನ್ನು ತಿಳಿದುಕೊಂಡಿದ್ದೇನೆ ಎಂದಿದ್ದಾರೆ. ಡ್ರೋಣ್ ಬಾಯ್ಗೆ ಓವರ್ನೈಟ್ ಸಿಕ್ಕಂತಹ ಹೈಪ್, ಜೊತೆಗೆ ಪ್ರತಾಪ್ ಹಾರ್ಸಿದ್ದು ಡ್ರೋಣ್ ಅಲ್ಲ ಕಲರ್ ಕಾಗೆ ಎಂದಾಗ ವಲ್ ವೈಡ್ ಮೀಡಿಯಾದಲ್ಲಿ ಸೃಷ್ಟಿಯಾದ ಸಂಚಲನ ಹಾಗೂ ತಲ್ಲಣದ ಕಥೆ
ಡ್ರೋಣ್ ಪ್ರಥಮ್’ ಸಿನಿಮಾದಲ್ಲಿರಲಿದೆಯಂತೆ.
ಮಂಡ್ಯಹೈದ ಪ್ರತಾಪ್ ವಿವಿಧ ರೀತಿಯ ಡ್ರೋಣ್ ತಯ್ಯಾರು ಮಾಡಿದ್ದೇನೆ ಅಲ್ಲದೇ ಕಷ್ಟಪಟ್ಟು ಹಾರ್ಸಿದ್ದೇನೆ. ದೇಶ-ವಿದೇಶಗಳ ಸ್ಪರ್ಧೆಯಲ್ಲಿ ಕಾಂಪಿಟ್ ಮಾಡಿ ಇಂಡಿಯಾದ ಕೀರ್ತಿಪತಾಕೆಯನ್ನ ಹಾರ್ಸಿದ್ದೇನೆ ಅಂತ ಹೇಳಿಕೊಂಡು ಯುವ ವಿಜ್ಞಾನಿ' ಎನಿಸಿಕೊಂ ಡಿದ್ದ.ದಿನಗಳು ಕಳೆದಂತೆ ಪ್ರತಾಪ್ ಕಳ್ಳಾಟ ಬಯಲಾಯ್ತು. ಹಾರ್ಸಿ ದ್ದು ಡ್ರೋಣ್ ಅಲ್ಲ ಕಲರ್ ಕಲರ್ ಕಾಗೆ ಎನ್ನೋದು ಬಟಾಬಯ ಲಾಯ್ತು. ಹಿಂಗಾಗಿದ್ದೇ ತಡ ನಿರ್ದೇಶಕರೊಬ್ಬರು ಡ್ರೋಣ್ ಪ್ರತಾಪ್ ಹಾಕಿಕೊಂಡು ಸಿನಿಮಾ ಮಾಡೋದು ಬೇಡ ಅಂತ ನಿರ್ಧರಿಸಿಬಿಟ್ಟರು. ಆದರೆ, ಪ್ರಥಮ್ ಅಂದೇ ಪ್ರತಾಪ್ ಕಥೆಯನ್ನ ಸಿನಿಮಾ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರು ಅಂತ ಕಾಣುತ್ತೆ ಹೀಗಾಗಿಯೇ ಇಂದು
ಡ್ರೋಣ್ ಪ್ರಥಮ್’ ಹೆಸರಲ್ಲಿ ಸಿನಿಮಾ ಮಾಡ್ತಿದ್ದಾರೆ. ಸೀರಿಯಸ್ ಸಬ್ಜೆಕ್ಟ್ ನ ಹಾಸ್ಯ ರೂಪದಲ್ಲಿ ಕಟ್ಟಿಕೊಡು ವುದಕ್ಕೆ ನಿರ್ಧಾರ ಮಾಡಿದ್ದಾರೆ. ಡ್ರೋಣ್ ಹಾರ್ಸೋದಕ್ಕೆ ಪ್ರಥಮ್ಗೆ ಮುಂಬೈನ ಇಬ್ಬರು ನಾಯಕಿಯರು ಸಾಥ್ ಕೊಡಲಿದ್ದಾರಂತೆ. ಪೋರ್ನ್ ಸ್ಟಾರ್ವೊಬ್ಬರು ಪ್ರಥಮ್ ಪಕ್ಕದಲ್ಲಿ ನಿಲ್ಲಲಿದ್ದಾರಂತೆ. ಆ ನೀಲಿ ಸುಂದರಿ ಯಾರು ಅನ್ನೋದನ್ನ ಪ್ರಥಮ್ ಇನ್ನೂ ಬಿಟ್ಟುಕೊಟ್ಟಿಲ್ಲ.
ಕರ್ನಾಟಕದ ಅಳಿಯ ಸಿನಿಮಾದಲ್ಲಿ ಪ್ರಥಮ್ ಫುಲ್ ಬ್ಯುಸಿಯಾ ಗಿದ್ದಾರೆ. ನಿರ್ದೇಶಿಸಿ-ನಟಿಸಿರುವ ನಟ ಭಯಂಕರ ಸಿನಿಮಾ ಬಿಡುಗಡೆಗೆ ಎದುರು ನೋಡ್ತಿದ್ದಾರೆ. ಈ ನಡುವೆ `ಡ್ರೋಣ್ ಪ್ರಥಮ್’ ಸಿನಿಮಾದಲ್ಲಿ ತೊಡಗಿಸಿಕೊಳ್ಳೋದಕ್ಕೆ ಉತ್ಸುಕರಾಗಿದ್ದಾರೆ. ಶೀಘ್ರದಲ್ಲೇ ಮುಹೂರ್ತದ ದಿವ್ಯದಿನಾಂಕವನ್ನು ಅನೌನ್ಸ್ ಮಾಡ್ತಾರಂತೆ. ಪ್ರಥಮ್ ತಮ್ಮ ಚಿತ್ರದ ಲಾಂಚಿಂಗ್ಗೆ ರಾಜಕೀಯದ ಘಟಾನುಘಟಿ ನಾಯಕರನ್ನು ಕರೆಸುತ್ತಾರೆ. ಮಾಜಿ ಪ್ರಧಾನಿಗಳಾದ ಎಚ್.ಡಿ ದೇವೇಗೌಡ್ರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ನ್ಯಾಷನಲ್ ಲೀಡರ್ ಎಲ್.ಕೆ ಅಡ್ವಾಣಿಯವರು ಪ್ರಥಮ್ ಸಿನಿಮಾಗೆ ಫಸ್ಟ್ ಕ್ಲಾಪ್ ಮಾಡಿ ಶುಭ ಹಾರೈಸಿದ್ದಾರೆ. ಡ್ರೋಣ್ ಪ್ರಥಮ್ ಸಿನಿಮಾಗೂ ಹೆಸರಾಂತ ರಾಜಕೀಯ ನಾಯಕ ಬರಲಿದ್ದಾರಂತೆ. ಯಾರು ಏನು ಅನ್ನೋದನ್ನು ಶಾರ್ಟ್ಲೀ ಅನೌನ್ಸ್ ಮಾಡಲಿದ್ದಾರೆ ಪ್ರಥಮ್. ಅಲ್ಲಿವರೆಗೂ ವೇಯ್ಟ್ ಅಂಡ್ ಸೀ.
-ವಿಶಾಲಾಕ್ಷಿ, ಎಂಟರ್ಟೈನ್ಮೆಂಟ್,ಸಿನಿ ಲಹರಿ