- ವಿಶಾಲಾಕ್ಷಿ
ಸ್ಯಾಂಡಲ್ ವುಡ್ ಬಾದ್ ಷಾ ಕಿಚ್ಚ ಸುದೀಪ್ ಆಕ್ಷನ್ ಕಟ್ ಹೇಳಿದರೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಆಕ್ಟ್ ಮಾಡೋದಕ್ಕೆ ರೆಡಿಯಂತೆ. ಇದು ಬರೀ ಅಂತೆ ಕಂತೆ ಸುದ್ದಿಯಲ್ಲ ಸ್ವತಃ ಶಿವಣ್ಣ ಅವರೇ ಸುದೀಪ್ ಪಕ್ಕದಲ್ಲಿ ನಿಂತು ಅಧಿಕೃತ ವಾಗಿ ಘೋಷಣೆ ಮಾಡಿರುವ ಸುದ್ದಿ ಇದು.
ಕಿಚ್ಚನ ಕಥೆಗೆ ಶಿವಣ್ಣ ಕ್ಲೀನ್ ಬೋಲ್ಡ್
ಹೌದು, ಕರುನಾಡ ಚಕ್ರವರ್ತಿಯ ‘ನೀ ಸಿಗೋವರೆಗೂ’ ಸಿನಿಮಾ ಮುಹೂರ್ತ ಕಾರ್ಯಕ್ರಮ ಖಾಸಗಿ ಹೋಟೆಲ್ ನಲ್ಲಿ ಹಮ್ಮಿಕೊಳ್ಳಲಾಗಿತ್ತು. ಇಲ್ಲಿಗೆ ವಿಶೇಷ ಅತಿಥಿಯಾಗಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಆಗಮಿಸಿದ್ದರು. ಶಿವಣ್ಣನಿಗೆ ಫಸ್ಟ್ ಕ್ಲಾಪ್ ಮಾಡಿ 124 ನೇ ಚಿತ್ರಕ್ಕೆ ತುಂಬು ಹೃದಯದಿಂದ ಹಾರೈಸಿದರು. ಇದೇ ವೇಳೆ ಹ್ಯಾಟ್ರಿಕ್ ಹೀರೋಗೆ ಸುದೀಪ್ ಒಂದು ಕಥೆ ನರೇಟ್ ಮಾಡಿದ್ದಾರೆ. ಒನ್ ಲೈನ್ ಸ್ಟೋರಿ ಕೇಳಿ ಎಕ್ಸೈಟ್ ಆದ ಶಿವಣ್ಣ ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ಸುದೀಪ್ ನಿರ್ದೇಶನ ಮಾಡಿದರೆ ನಾನು ಆ ಸಿನಿಮಾ ಮಾಡೋದಕ್ಕೆ ರೆಡಿಯಿದ್ದೇನೆ ಎಂದರು.
ಶಿವಣ್ಣನಿಗಾಗಿ ಡೈರೆಕ್ಟರ್ ಕ್ಯಾಪ್ ತೊಡ್ತಾರಾ ಕಿಚ್ಚ
ಶಿವಣ್ಣ ಮಾತು ಮುಗಿಸಿದ್ಮೇಲೆ ಮೈಕ್ ಕೈಗೆತ್ತಿಕೊಂಡ ಸುದೀಪ್ ಅವರು ಶಿವಣ್ಣನ ದೊಡ್ಡತನದ ಬಗ್ಗೆ ಮಾತನಾಡಿದರು. ಒಬ್ಬ ಹೀರೋ ಮತ್ತೊಬ್ಬ ಹೀರೋಗೆ ಡೈರೆಕ್ಟ್ ಮಾಡ್ತೀನಿ ಅಂಗ ಬಂದಾಗ
ಸಿನಿಮಾ ಮಾಡೋಕೆ ಬರ್ತಿದ್ದಾನಾ ಅಥವಾ ಹಾಳು ಮಾಡೋಕೆ ಬರ್ತಿದ್ದಾನಾ ಎನ್ನುವ ಯೋಚನೆ ಸಹಜವಾಗಿ ಬರುತ್ತೆ. ಜೊತೆಗೆ ಅವರೇ ಒಬ್ಬ ನಟನಾಗಿ ನನಗ್ಯಾಕೆ ಡೈರೆಕ್ಟ್ ಮಾಡಬೇಕು ಎನ್ನುವ ಥಾಟ್ ಕೂಡ ಫ್ಲ್ಯಾಶ್ ಆಗುತ್ತೆ. ವಾಸ್ತವ ಹೀಗಿರುವಾಗ ಡೈರೆಕ್ಟ್ ಮಾಡಿದರೆ ನಾನು ಆಕ್ಟ್ ಮಾಡ್ತೀನಿ ಅಂತ ಶಿವಣ್ಣ ಹೇಳ್ತಿದ್ದಾರೆ ಅಂದರೆ ಅದು ಅವರ ದೊಡ್ಡಗುಣ ಹಾಗೂ ಸುದೀಪ್ ಮೇಲಿರುವ ನಂಬಿಕೆ ಅಲ್ಲದೇ ಮತ್ತೇನು ಅಲ್ಲ.
ಮಾಣಿಕ್ಯ ನಿರ್ದೇಶನದ ಶಾಂತಿನಿವಾಸದಲ್ಲಿ ಮಿಂಚಿದ್ದಾರೆ ಶಿವಣ್ಣ
ಅಷ್ಟಕ್ಕೂ, ಸುದೀಪ್ ಅದ್ಯಾವ್ ಕಥೆ ಹೇಳಿದರೂ, ಸ್ಟೋರಿ ಲೈನ್ ಹೇಗಿದೆ? ಇದ್ಯಾವ ಬಗ್ಗೆಯೂ ಹೆಚ್ಚಿನ ಡಿಟೈಲ್ಸ್ ಇಲ್ಲ. ಆದರೆ, ಇಬ್ಬರು ಒಂದಾಗಿ ಸಿನಿಮಾ ಸಂದರ್ಭ ಎದುರಾದರೆ ನೂರಕ್ಕೆ ನೂರು ಪರ್ಸೆಂಟ್ ಜೊತೆಯಾಗಿ ಸಿನಿಮಾ ಮಾಡ್ತಾರೆ. ಈಗಾಗಲೇ ಒಮ್ಮೆ ಶಿವಣ್ಣನಿಗೆ ಕಿಚ್ಚ ಆಕ್ಷನ್ ಕಟ್ ಹೇಳಿದ್ದಾರೆ. ಸುದೀಪ್ ನಿರ್ದೇಶಿಸಿ ನಟಿಸಿದ್ದ ಶಾಂತಿನಿವಾಸದಲ್ಲಿ
ಹ್ಯಾಟ್ರಿಕ್ ಹೀರೋ ಮಿಂಚಿ ಹೋಗಿದ್ದಾರೆ. ‘ಒಂದು ಒಳ್ಳೆ ಕಥೆಯ ಹೇಳುವೆ’ ಹಾಡಿಗೆ ಸುದೀಪ್ ಹಾಗೂ ಶಿವಣ್ಣ ಒಟ್ಟಿಗೆ ಕಂಠಕುಣಿಸಿದ್ದಾರೆ.
ಈಗಾಗಲೇ, ಜೋಗಿ ಪ್ರೇಮ್ ನಿರ್ದೇಶನದ ಮಲ್ಟಿಸ್ಟಾರರ್ ದಿ ವಿಲನ್ ಚಿತ್ರದಲ್ಲಿ ಧಗಧಗಿಸಿದ್ದಾರೆ.
ಮತ್ತೆ ಒಟ್ಟಿಗೆ ಬೆಳ್ಳಿತೆರೆ ಮೇಲೆ ಯಾವಾಗ ಅಬ್ಬರಿಸ್ತಾರೋ ಅಂತ ಫ್ಯಾನ್ಸ್ ಕೂಡ ಕಾತುರರಾಗಿ ಕಾಯ್ತಿದ್ದಾರೆ. ಈ ಮಧ್ಯೆ ಸುದೀಪ್ ನಿರ್ದೇಶನದ- ಶಿವಣ್ಣನ ಅಭಿನಯದ
ಧಮಾಕೇದಾರ್ ಸುದ್ದಿ ದೊಡ್ಮನೆ ಫ್ಯಾನ್ಸ್ ಹಾಗೂ ಶಾಂತಿನಿವಾಸದ ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಇಬ್ಬರ ಫ್ಯಾನ್ಸ್ ಹಬ್ಬ ಮಾಡಿ ಸಂಭ್ರಮಿಸುವಂತೆ ಮಾಡಿದೆ. ಡೈರೆಕ್ಟರ್ ಕ್ಯಾಪ್ ತೊಟ್ಟು ಆಕ್ಷನ್ ಕಟ್ ಹೇಳುವ ಗಳಿಗೆಯನ್ನ ಆರಡಿ ಕಟೌಟ್ ಫ್ಯಾನ್ಸ್ ಎದುರು ನೋಡುವಂತಾಗಿದೆ. ಆ ದಿನ. ಆ ಕ್ಷಣ ಆದಷ್ಟು ಬೇಗ ಬರಲಿ. ಬಿಗ್ ಸ್ಕ್ರೀನ್ ಕೂಡ ಸಂಭ್ರಮ ಪಡಲಿ ಅಲ್ಲವೇ..
ಎಂಟರ್ಟೈನ್ಮೆಂಟ್ ಬ್ಯೂರೋ ಸಿನಿಲಹರಿ