ಯುವ ನಿರ್ದೇಶಕ ಗಂಗಾಧರ್ ಸಾಲಿಮಠ್, ಒಂದಷ್ಟು ಗ್ಯಾಪ್ ಬಳಿಕ ಸಿನಿ ದುನಿಯಾಕ್ಕೆ ಮತ್ತೆ ಕಮ್ ಬ್ಯಾಕ್ ಮಾಡುತ್ತಿದ್ದಾರೆ. ಈ ಬಾರಿ ನಟ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಕಾಂಬಿನೇಷನ್ ಮೂಲಕ ತಮ್ಮ ನಿರ್ದೇಶನದ ಕೈ ಚಳಕ ತೋರಿಸಲು ಹೊರಟಿದ್ದಾರೆ. ಕನ್ನಡದಲ್ಲಿಯೇ ಕೊಂಚ ಹೊಸತೆನಿಸುವ ಟೆಕ್ನೋ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿರುವ ನಿರ್ದೇಶಕ ಗಂಗಾಧರ್ ಸಾಲಿಮಠ್, ಇದರಲ್ಲಿ ನಟ ವಿಜಯ್ರಾಘವೇಂದ್ರ ಅವರನ್ನು ಹೈ ಪ್ರೊಫೈಲ್ ಸೈಕಾಲಜಿಸ್ಟ್ ಆಗಿ ತೆರೆ ಮೇಲೆ ತೋರಿಸುವ ತವಕದಲ್ಲಿದ್ದಾರೆ. ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್ ಫೈನಲ್ ಆಗಿಲ್ಲ. ಹಾಗೆಯೇ ತಂತ್ರಜ್ಜರ ಜತೆಗೆ ಕಲಾವಿದರ ಆಯ್ಕೆ ಕೂಡ ಬಾಕಿ ಇದೆ. ಮೊದಲ ಹಂತದಲ್ಲಿ ಚಿತ್ರದ ನಾಯಕ ನಟ ವಿಜಯ್ ರಾಘವೇಂದ್ರ ಅವರ ಕಾಲ್ ಶೀಟ್ ಫೈನಲ್ ಆಗಿದೆ.
ಉಳಿದಂತೆ ಅಕ್ಟೋಬರ್ ಮೊದಲ ವಾರದೊಳಗೆ ಎಲ್ಲವನ್ನು ಫೈನಲ್ ಮಾಡಿಕೊಂಡು ಶೂಟಿಂಗ್ ಹೊರಡುವ ಫ್ಲಾನ್ನಲ್ಲಿದ್ದಾರೆ ನಿರ್ದೇಶಕ ಗಂಗಾಧರ್ ಸಾಲಿಮಠ್. ಇನ್ನು ಈ ಗಂಗಾಧರ್ ಸಾಲಿಮಠ್ ಯಾರು ಎನ್ನುವ ಪ್ರಶ್ನೆಗೆ ಉತ್ತರ ʼಅಯನʼ ಚಿತ್ರ. ವೃತ್ತಿಯಲ್ಲಿ ಅವರು ಸಾಫ್ಟ್ ವೇರ್ ಇಂಜಿನಿಯರ್. ಸಿನಿಮಾ ಮೇಲಿನ ವ್ಯಾಮೋಹಕ್ಕೆ ಕಳೆದ ಎರಡು ವರ್ಷಗಳ ಹಿಂದೆ ಗೆಳೆಯರ ಜತೆಗೆ ಸೇರಿಕೊಂಡು ʼಅಯನʼ ಹೆಸರಿನ ಚಿತ್ರವೊಂದನ್ನು ತೆರೆಗೆ ತಂದಿದ್ದರು. ಇದರ ನಿರ್ದೇಶಕರು ಗಂಗಾಧರ್ ಸಾಲಿಮಠ್.
ಡೆಬ್ಯೂ ಸಿನಿಮಾ. ಅಲ್ಲೊಂದು ಕುತೂಹಲಕಾರಿ ಕಥೆ ಇತ್ತು. ನಿರೂಪಣೆ ಕೂಡ ಚೆಂದವಾಗಿತ್ತು. ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಕೂಡ ಸಿಕ್ಕಿತು. ಆದರೆ ಆ ಹೊತ್ತಿಗಿದ್ದ ಸ್ಟಾರ್ ಸಿನಿಮಾಗಳ ಅಬ್ಬರದಲ್ಲಿ ʼಅಯನʼದಂತಹ ಹೊಸಬರ ಸಿನಿಮಾಗಳಿಗೆ ಪ್ರೇಕ್ಷಕರನ್ನು ತಲುಪು ವುದೇ ದುಸ್ತರ ಆಯಿತು. ಆದರೆ ಆಗ ಬಂದ ಹೊಸಬರ ಸಿನಿಮಾಗಳಲ್ಲಿ ʼಅಯನʼ ಒಂದಷ್ಟು ಸದ್ದು ಮಾಡಿದ್ದು ಹೌದು. ಆ ವರ್ಷ ಚೊಚ್ಚಲ ನಿರ್ದೇಶಕರ ಸಿನಿಮಾ ವಿಭಾಗದಲ್ಲಿ ಇದಕ್ಕೆ ರಾಜ್ಯ ಪ್ರಶಸ್ತಿಯೂ ಬಂತು. ಅಲ್ಲಿಂ ದ ಒಂದಷ್ಟು ಗ್ಯಾಪ್ ಮೂಲಕ ಗಂಗಾಧರ್ ಸಾಲಿಮಠ್ ಮತ್ತೆ ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಮತ್ತೆ ಸಸ್ಪೆನ್ಸ್, ಥ್ರಿಲ್ಲರ್ ಕಥೆಯೊಂದಕ್ಕೆ ಆಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. ಸಮಕಾಲೀನ ತಂತ್ರಜ್ಣಾನಕ್ಕೆ ಪೂಕರವಾದ ಸಬ್ಜೆಕ್ಟ್ ವೊಂದನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡಲು ಹೊರಟಿರುವುದು ಈಗ ವಿಶೇಷ.
ʼ ಈಗಿನ ಪ್ರೇಕ್ಷಕರಿಗೆ ತುಂಬಾ ಅಪ್ಡೇಟ್ ಆಗಿರುವಂತಹ ಕಥೆಯನ್ನೇ ಹೇಳ್ಬೇಕು, ಆಗ ಮಾತ್ರ ಆವರಿಗಿದು ಹೊಸತೆನಿಸುತ್ತದೆ. ಅದೇ ದೃಷ್ಟಿ ಯಲ್ಲಿ ನಾನೀಗ ಟೆಕ್ನೋ ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಆಯ್ಕೆ ಮಾಡಿಕೊಂಡಿದ್ದೇನೆ. ವರ್ಚುವಲ್ ನಲ್ಲಿನ ಒಂದು ಗೇಮ್ಗೆ ಅಡಿಕ್ಟ್ ಆದ ಮಕ್ಕಳ ಮನಸಲ್ಲಿ ಅದು ಹೇಗೆಲ್ಲ ಪರಿಣಾಮ ಬೀರುತ್ತದೆ, ಅದರಿಂದ ಹೊರ ಬರಬೇಕಾದರೆ ಎಷ್ಟೇಲ್ಲ ಕೌನ್ಸಿಲಿಂಗ್ ಬೇಕಾಗುತ್ತದೆ ಎನ್ನುವ ಎಲ್ಲರಿಗೂ ಗೊತ್ತಿರುವಂತಹ ಸಂಗತಿಗಳನ್ನೇ ತೆರೆ ಮೇಲೆ ತೋರಿಸಲು ಹೊರಟಿದ್ದೇನೆ. ಅದೇ ಸಿನಿಮಾದ ವಿಶೇಷ ಎನ್ನುತ್ತಾರೆ ನಿರ್ದೇಶಕ ಗಂಗಾಧರ್ ಸಾಲಿಮಠ್.
ಗಂಗಾಧರ್ ಸಾಲಿಮಠ್ ಈಗ ಆಕ್ಷನ್ ಕಟ್ ಹೇಳಲು ಹೊರಟಿರುವ ಕಥೆ ಐದು ಪ್ರಮುಖ ಪಾತ್ರಗಳಿವೆಯಂತೆ. ಅದರಲ್ಲಿ ಚಿತ್ರದ ನಾಯಕನ ಪಾತ್ರ ವೂ ಒಂದು. ಅದು ಒಬ್ಬ ಹೈ ಪ್ರೊಫೈಲ್ ಸೈಕಾಲಜಿಸ್ಟ್. ಆ ಪಾತ್ರದಲ್ಲಿ ಕಾಣಿಸಿ ಕೊಳ್ಳಲಿದ್ದಾರೆ ನಟ ಚಿನ್ನಾರಿ ಮುತ್ತಾ ವಿಜಯ್ ರಾಘವೇಂದ್ರ. ಉಳಿದ ನಾಲ್ಕು ಪಾತ್ರಗಳಲ್ಲಿ ಒಬ್ಬ ಬಾಲಕನ ಪಾತ್ರಕ್ಕೆ ಅಷ್ಟೇ ಆದ್ಯತೆ ಇದೆ. ಆ ಪಾತ್ರಕ್ಕೆ ತಕ್ಕಂತೆ ಒಬ್ಬ ಚೈಲ್ಡ್ ಆರ್ಟಿಸ್ಟ್ ಹುಡುಕಾಟ ನಡೆದಿದೆ. ಅದರಾಚೆ ಮೂರು ಸ್ತ್ರೀ ಪಾತ್ರಗಳಿದ್ದು, ಅದಕ್ಕೆ ಹುಡುಕಾಟ ನಡೆಸಿದ್ದಾ ರಂತೆ ನಿರ್ದೇಶಕ ಗಂಗಾಧರ್ ಸಾಲಿಮಠ್. ಇನ್ನು ಈ ಚಿತ್ರಕ್ಕೆ ಮುಂಬೈ ನಲ್ಲಿ ನೆಲೆಸಿರುವ ಧಾರವಾಡ ಮೂಲದ ಆನಂದ್ ಮುಗುದ್ ಬಂಡವಾ ಳ ಹೂಡುತ್ತಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಅವರೇ ಕಥೆ ಬರೆದಿದ್ದು. ಅದಕ್ಕೆ ಚಿತ್ರಕಥೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ ಗಂಗಾಧರ್ ಸಾಲಿಮಠ್. ಬಸವರಾಜ್ ಇದರ ಕಾರ್ಯಕಾರಿ ನಿರ್ಮಾಪಕ.