ಮಾಳವಿಕ- ಶ್ರುತಿ- ಸುಧಾರಾಣಿಯ ಈ ಕಾರ್ಯಕ್ಕೆ ಚಪ್ಪಾಳೆ ಹೊಡಿಯಲೆಬೇಕು !

ನಟಿಯರಾದ ಸುಧಾರಾಣಿ, ಶ್ರುತಿ ಹಾಗೂ ಮಾಳವಿಕ ಅವಿನಾಶ್ ಅವರ ಅಂತಃಕರಣದ ಹೃದಯಕ್ಕೆ ಹಾಗೂ ಈ ಕಾರ್ಯಕ್ಕೆ ಚಪ್ಪಾಳೆ ಹೊಡೆ ಯುವ ಮೂಲಕ ಈ‌ ಮೂವರು ನಟಿಯರನ್ನು ಗೌರವಿಸಬೇಕು. ಸುಖ- ಸಂತೋಷ- ಸಂಭ್ರಮ ಅಂದಾಗ ಕರೆಯದೇ ಬರುವವರು ಹೆಚ್ಚು. ‌ಅದೇ, ಕಷ್ಟದಲ್ಲಿದ್ದಾಗ ಕರೆದರೂ ಕೂಡ ಹತ್ತಿರಕ್ಕೂ ಯಾರೂ ಸುಳಿಯಲ್ಲ.‌ ಆದರೆ, ಈ ಮೂವರು ನಟಿಯರು ಅದಕ್ಕೆ ತದ್ವಿರುದ್ಧ.‌ ಕಷ್ಟಕ್ಕೆ- ನೋವಿಗೆ ಎಷ್ಟು ಸ್ಪಂಧಿಸಿದ್ದಾರೋ ಇಲ್ಲವೋ ಗೊತ್ತಿಲ್ಲ‌ ಆದರೆ ಅನಾರೋಗ್ಯಕ್ಕೆ ಒಳಗಾದ ಲೀಲಾವತಿ ಅಮ್ಮನವರ ಕ್ಷೇಮ ಸಮಾಚಾರ ವಿಚಾರಿಸಿದ್ದಾರೆ.

ಲೀಲಾವತಿ ಕನ್ನಡ ಚಿತ್ರರಂಗದ ಮೇರುನಟಿ. ದಶಕಗಳ ಕಾಲ ಬೆಳ್ಳಿಪರ ದೆಯನ್ನಾಳಿದ ಲೀಲಾವತಿಯವರು, ಕೋಟ್ಯಾಂತರ ಅಭಿಮಾನಿಗಳ ಮನಸ್ಸಲ್ಲಿ‌ ಅಚ್ಚಳಿಯದೇ ಕುಳಿತಿದ್ದಾರೆ.ಇತ್ತೀಚೆಗೆ ತಮ್ಮ ತೋಟದ ಮನೆಯಲ್ಲಿ ಸ್ನಾನಕ್ಕೆಂದು ಹೋದಾಗ ಕಾಲು‌ ಜಾರಿ ಬಿದ್ದು ಬೆನ್ನು ಮೂಳೆಗೆ ಪೆಟ್ಟು ಮಾಡಿಕೊಂಡಿದ್ದರು. ಪುತ್ರ ವಿನೋದ್ ರಾಜ್ ತಕ್ಷಣಕ್ಕೆ ತಾಯಿನಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರು. ಒಂದು ತಿಂಗಳು‌ ಕಾಲ ಬೆಡ್ ರೆಸ್ಟ್ ನಲ್ಲಿರುವಂತೆ ವೈದ್ಯರು ಸೂಚಿಸಿದ್ದರು. ಈ‌ ಸುದ್ದಿ ತಿಳಿದ ಕೂಡಲೇ ದೂರವಾಣಿ ಮೂಲಕ ಮಾತನಾಡಿದ್ದ ನಟಿಯರಾದ ಸುಧಾರಾಣಿ, ಶ್ರುತಿ, ಮಾಳವಿಕಾ ಅವರು, ಎರಡು ದಿನ ಬಿಟ್ಟು ನೇರವಾಗಿ ಲೀಲಾವತಿಯವರ ಸೋಲೆದೇವನಹಳ್ಳಿ ಮನೆಗೆ ಭೇಟಿಕೊಟ್ಟರು.‌

ಅಮ್ಮನ ಆರೋಗ್ಯ ವಿಚಾರಿಸಿ, ಕೆನ್ನೆಗೆ ಸಿಹಿಮುತ್ತು ಕೊಟ್ಟ ನಟಿಯರು, ಕೆಲಕಾಲ ಅಮ್ಮನೊಟ್ಟಿಗೆ ಕಾಲಕಳೆದರು. ಎವರ್ ಗ್ರೀನ್ ‌ಗೀತೆಯೊಂ ದನ್ನು‌ ಹಾಡಿ ಮಕ್ಕಳಂತಿರುವ ಮೂವರು ನಟಿಯರಿಗೂ ಲೀಲಾವತಿ ಅಮ್ಮ ಶುಭಹಾರೈಸಿದರು. ಈ‌ ಸುವರ್ಣ ಕ್ಷಣವನ್ನು ಕ್ಯಾಮರಾದಲ್ಲಿ ಸೆರೆಯಾಗಿಸಿಕೊಂಡ ನಟಿ ಸುಧಾರಾಣಿ ತಮ್ಮ ಸೋಷಿಯಲ್ ಮೀಡಿ ಯಾದಲ್ಲಿ ಹಂಚಿಕೊಂಡಿದ್ದಾರೆ. ಹಿರಿಯ ನಟಿಯ ಕಷ್ಟಕ್ಕೆ- ನೋವಿಗೆ ಮಿಡಿದ ಮೂವರು ನಟಿಯರಿಗೆ ಫ್ಯಾನ್ಸ್ ಉಘೇ ಉಘೇ ಎನ್ನುತ್ತಿದ್ದಾರೆ. ಲೀಲಾವತಿ ಅಮ್ಮನ ಆರೋಗ್ಯ ಬೇಗ ಸುಧಾರಣೆ ಕಾಣಲೆಂದು ಹರಸು ತ್ತಿದ್ದಾರೆ.
ಎಂಟರ್ ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!