ಕನ್ನಡ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಫಿನಾಲೆ ಹಂತಕ್ಕೆ ಬಂದಿದೆ. ಇದೇ ವಾರ ಅದರ ಫಿನಾಲೆ ಎಪಿಸೋಡ್ ಪ್ರಸಾರವಾಗುತ್ತಿದೆ. ಸದ್ಯಕ್ಕೆ ಬಿಗ್ ಬಾಸ್ ಬಗ್ಗೆ ದೊಡ್ಡ ಕುತೂಹಲ ಇರೋದು ʼಸೀಸನ್ ೮ʼ ವಿನ್ನರ್ ಯಾರು ಅಂತ. ಸಾಮಾನ್ಯವಾಗಿ ಬಿಗ್ ಬಾಸ್ ಫಲಿತಾಂಶ ವೀಕ್ಷಕರ ವೊಟಿಂಗ್ ವ್ಯವಸ್ಥೆ ಮೇಲೆ ನಡೆಯೋ ದ್ರಿಂದ ತಕ್ಷಣಕ್ಕೆ ಅದರ ವಿನ್ನರ್ ಯಾರು ಅಂತ ನಿಖರವಾಗಿ ಹೇಳುವುದು ಕಷ್ಟ. ಆದರೆ ಈಗ ಬಿಗ್ಬಾಸ್ ಫೈನಲ್ಗೆ ಬಹುತೇಕ ಅರವಿಂದ್ ಕೆ.ಪಿ., ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಬರುವುದು ಗ್ಯಾರಂಟಿ.
ಉಳಿದಂತೆ ಇದರಲ್ಲಿ ಗೆಲ್ಲೋದು ಯಾರು ಅನ್ನೋದೇ ದೊಡ್ಡ ಕುತೂಹಲ. ಈಗ ಬಿಗ್ ಬಾಸ್ ಮನೆಯಲ್ಲಿ ಐವರು ಸ್ಪರ್ಧಿಗಳಿದ್ದಾರೆ. ಪ್ರಶಾಂತ್ ಸಂಬರಗಿ, ವೈಷ್ಣವಿ ಗೌಡ, ಮಂಜು ಪಾವಗಡ, ಅರವಿಂದ್ ಕೆ.ಪಿ ಹಾಗೂ ದಿವ್ಯಾ ಉರುಡುಗ. ಈ ಪೈಕಿ ಫಿನಾಲೆಯಲ್ಲಿ ಎಲಿಮಿನೇಟ್ ಆಗುವವರು ಯಾರು ಎನ್ನುವುದು ಕೂಡ ಅಷ್ಟೇ ಕುತೂಹಲ ಹುಟ್ಟಿಸಿದೆ.
ಬಿಗ್ ಬಾಸ್ ರಿಯಾಲಿಟಿ ಶೋ ಅನ್ನು ಆರಂಭದಿಂದ ವೀಕ್ಷಿಸುತ್ತಾ ಬಂದವರಿಗೆ ಅರವಿಂದ್ ಕೆ.ಪಿ, ಮಂಜು ಪಾವಗಡ ಹಾಗೂ ವೈಷ್ಣವಿ ಗೌಡ ಅವರ ಪರ್ಫಾರ್ಮೆನ್ಸ್ ಬಗ್ಗೆ ಗೊತ್ತೇ ಇದೆ. ಆರಂಭದಿಂದಲೂ ಇಲ್ಲಿ ತನಕ ಈ ಮೂವರು ಯಾವುದೇ ಅಬ್ಬರ ಇಲ್ಲದೆ, ಯಾವುದೇ ವಿವಾದಕ್ಕೂ ಸಿಲುಕದೆ ಅತ್ಯಂತ ಜಾಣ ತನದಿಂದ ಆಟ ಆಡುತ್ತಾ ಬಂದಿದ್ದಾರೆ. ಸಹಜವಾಗಿಯೇ ಇವರ ಬಗ್ಗೆ ಸಾರ್ವಜನಿಕ ವಲಯದಲ್ಲೂ ಒಳ್ಳೆಯ ಅಭಿಪ್ರಾಯಗಳೇ ಇವೆ. ಹಾಗೆಯೇ ಇವರ ಆಟದ ವೈಖರಿಗೂ ಕಿಚ್ಚ ಸುದೀಪ್ ಕಡೆಯಿಂದಲೂ ಸಾಕಷ್ಟು ಮೆಚ್ಚುಗೆಯೂ ಸಿಕ್ಕಿದೆ. ಹಾಗಾಗಿ ಈ ಮೂವರಲ್ಲಿ ಒಬ್ಬರ ಬಿಗ್ ಬಾಸ್ ʼಸೀಸನ್ ೮ʼ ರ ಟ್ರೋಫಿ ಎತ್ತುವುದು ಗ್ಯಾರಂಟಿ ಎನ್ನುವ ಮಾತು ಸಾರ್ವಜನಿಕ ವಲಯದಲ್ಲೂ ಇದೆ. ಹಾಗಂತ ಪ್ರಶಾಂತ್ ಸಂಬರಗಿ, ದಿವ್ಯ ಉರುಡುಗ ಅವರೇನು ಕಮ್ಮಿ ಇಲ್ಲ. ಆರಂಭದಿಂದ ಇಲ್ಲಿ ತನಕ ಬಿಗ್ ಬಾಸ್ ಮನೆಯಲ್ಲಿ ಎಲಿಮಿನೇಟ್ ಆಗದೆ ಉಳಿದುಕೊಂಡಿದ್ದಾರೆಂದರೆ, ಅವರನ್ನು ಅಷ್ಟು ಸುಲಭವಾಗಿ ಕಡೆಗಣಿಸುವಂತಿಲ್ಲ. ಅವರು ಕೂಡ ಫಿನಾಲೆಗೆ ಕಾಲಿಟ್ಟು ಸುದೀಪ್ ಅವರ ಅಕ್ಕ-ಪಕ್ಕ ನಿಂತರೂ ಅಚ್ಚರಿ ಇಲ್ಲ.