ದೊಡ್ಮನೆ ಮಂದಿಗೆ “ಶಾಂತಿನಿವಾಸ”ದಿಂದ ಊಟ ಪಾರ್ಸೆಲ್; ಕಿಚ್ಚನ ಕೈರುಚಿ-ಮನೆಮಂದಿ ಸಂತೃಪ್ತಿ !

ದೊಡ್ಮನೆ ಕಾರ್ಯಕ್ರಮನಾ ಮಿಸ್ ಮಾಡದೇ ನೋಡುವವರಿಗೆ ಕಿಚ್ಚನ ಕೈ ತುತ್ತಿನ ಕಹಾನಿ ಏನು ಎಂಬುದು ಗೊತ್ತಿರುತ್ತೆ. ಬೈ ಚಾನ್ಸ್ ಮಿಸ್ ಮಾಡಿಕೊಂಡಿರುವವರು ಯಾರಾದರೂ ಇದ್ದರೆ, ಈ ಸ್ಟೋರಿ ನೋಡಿದರೆ ಆ ಕಹಾನಿ ಏನು ಅಂತ ತಿಳಿಯುತ್ತೆ. ಸ್ಯಾಂಡಲ್‌ವುಡ್ ಬಾದ್‌ಷಾ ಕುಕ್ಕಿಂಗ್‌ನಲ್ಲಿ ಮಾಸ್ಟರ್ ಎಂಬುದು ಎಲ್ಲರಿಗೂ ಗೊತ್ತಿರುವ ವಿಷ್ಯ. ಅಮ್ಮನ ಕೈತುತ್ತಿಗಾಗಿ ಮಕ್ಕಳು ಕಾಯುವಂತೆ, ಕಿಚ್ಚನ ಕೈತುತ್ತಿಗಾಗಿ ಸಾವಿರ, ಲಕ್ಷ ಅಲ್ಲ.. ಕೋಟ್ಯಾಂತರ ಮಂದಿಯಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಅಭಿನಯ ಚಕ್ರವರ್ತಿಯ ನಟನೆಯ ಪ್ರತಿ ಸಿನಿಮಾಗೋಸ್ಕರ ಎಷ್ಟು ಕಾತುರದಿಂದ ಕಾಯ್ತಾರೋ ಅಷ್ಟೇ ಕೌತುಕದಿಂದ ಸುದೀಪ್ ಕೈರುಚಿಯನ್ನ ನೋಡೋದಕ್ಕೆ ಎದುರು ನೋಡ್ತಿರ‍್ತಾರೆ. ಆದರೆ, ಎಲ್ಲರಿಗೂ ಮಾಣಿಕ್ಯನಿಂದ ಕೈ ತುತ್ತು ಹಾಕಿಸಿಕೊಳ್ಳುವ ಅವಕಾಶ ಸಿಕ್ಕೋದಿಲ್ಲ. ಕೆಲವೇ ಕೆಲವು ಮಂದಿಗೆ ಮಾತ್ರ ಕೋಟಿಗೊಬ್ಬ ತಮ್ಮ ಕೈಯ್ಯಾರೆ ಮಾಡಿದ ಮೃಷ್ಣಾನ ಭೋಜನವನ್ನು ಸವಿಯೋದಕ್ಕೆ ಚಾನ್ಸ್ ಸಿಗುತ್ತೆ. ಅಂತಹದ್ದೊಂದು ಲಕ್ಕಿ ಚಾನ್ಸ್ ಬಿಗ್‌ಬಾಸ್ ಮನೆಯ ಆರು ಸದಸ್ಯರಿಗೆ ಸಿಕ್ಕಿತ್ತು.

ಬಿಗ್‌ಬಾಸ್ ಮನೆಯ ಸದಸ್ಯರಿಗೆ ಕಿಚ್ಚನ ಕೈತುತ್ತು ತಿನ್ನುವ ಅವಕಾಶ ಹಂಡ್ರೆಂಡ್ ಪರ್ಸೆಂಟ್ ಸಿಕ್ಕೆ ಸಿಗುತ್ತೆ. ಪ್ರತಿವರ್ಷ ಕಿಚ್ಚ ತಮ್ಮ ಕೈಯ್ಯಾರೆ ವೆರೈಟಿ-ವೆರೈಟಿ ಫುಡ್ ಪ್ರಿಪೇರ್ ಮಾಡಿ ದೊಡ್ಮನೆ ಸದಸ್ಯರಿಗೆ ಕಳುಹಿಸಿಕೊಡ್ತಾರೆ. ಬಿಗ್‌ಬಾಸ್ ಫೈನಲ್ಸ್ ಮುಗಿದ್ಮೇಲೆ ಮನೆಯ ಎಲ್ಲಾ ಸದಸ್ಯರನ್ನು ಒಮ್ಮೆ ತಮ್ಮ ಶಾಂತಿ ನಿವಾಸಕ್ಕೆ ಕರೆಸಿಕೊಂಡು ಅವರಿಷ್ಟದ ಅಡುಗೆಯನ್ನು ತಾವೇ ಖುದ್ದಾಗಿ ಮಾಡಿಬಡಿಸುತ್ತಾರೆ. ಅದರಂತೇ, ಇದೀಗ ಬಿಗ್‌ಬಾಸ್ ಸೀಸನ್ 8ರ ಆರು ಜನ ಸ್ಪರ್ಧಿಗಳಿಗೆ ಕಿಚ್ಚ ತಮ್ಮ ಶಾಂತಿನಿವಾಸದಲ್ಲಿ ಅಡುಗೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.

ಮುದ್ದುಬೊಂಬೆ ವೈಷ್ಣವಿ ಪ್ಯೂರ್ ವೆಜಿಟೇರಿಯನ್ ಆಗಿರೋದ್ರಿಂದ ಸ್ಪೆಷಲ್ಲಾಗಿ ವೆಜ್ ಐಟಮ್‌ನ ಪ್ರಿಪೇರ್ ಮಾಡಿದರು. ಅರವಿಂದ್, ದಿವ್ಯಾ ಉರುಡುಗ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ, ಮಂಜು ಪಾವಗಡ ನಾನ್‌ವೆಜ್ ಬರ‍್ಸೋದ್ರಿಂದ ಚಿಕನ್ ಪಕೋಡಾ, ಚಿಕನ್ ಬಿರಿಯಾನಿ, ರ‍್ರಿ ಜೊತೆಗೆ ಒಂದಿಷ್ಟು ನಾನ್‌ವೆಜ್ ಐಟಮ್ ತಯ್ಯಾರಿಸಿದರು. ಇದರೊಟ್ಟಿಗೆ ಸ್ಪೆಷಲ್ ಕೇಕ್, ಐಸ್‌ಕ್ರೀಮ್ ಇಟ್ಟು ಸಪರೇಟ್ ಆಗಿ ಪ್ಯಾಕ್ ಮಾಡಿ ಬಿಗ್‌ಹೌಸ್‌ಗೆ ಪಾರ್ಸಲ್ ಮಾಡಿದರು.

ಅಷ್ಟಕ್ಕೂ, ಬಿಗ್‌ಬಾಸ್ ಸ್ಪರ್ಧಿಗಳಿಗೆ ಕಿಚ್ಚನ ಕೈರುಚಿಯನ್ನು ಸವಿಯುವಂತಹ ಅವಕಾಶ ಸಿಕ್ಕಿದ್ದು ದಿವ್ಯಾ ಉರುಡುಗ ಅವ್ರಿಂದ. ಹೌದು, ಬಿಗ್‌ಬಾಸ್‌ಗೆ ಕಾಲಿಟ್ಟ ಗಳಿಗೆಯಿಂದ ಇಲ್ಲಿಯವರೆಗೆ ಈಡೇರದ ನಿಮ್ಮ ಆಸೆ-ಕನಸು ಯಾವುದಾದರೂ ಇದ್ದರೆ ಅದನ್ನ ನೀವು ಗಾರ್ಡನ್ ಏರಿಯಾದಲ್ಲಿ ಇಟ್ಟಿರುವ ಕಿವಿಯಾಕೃತಿಯ ಮುಂದೆ ಬಂದು ಹೇಳಿಕೊಳ್ಳಿ. ಸಾಧ್ಯವಾದರೆ ಆ ಆಸೆಯನ್ನು ಬಿಗ್‌ಬಾಸ್ ಈಡೇರಿಸುತ್ತಾರೆಂದು ಸೂಚಿಸಲಾಗಿತ್ತು. ಅದರಂತೇ, ಮನೆಯಲ್ಲಿರುವ ಆರು ಮಂದಿ ಸ್ಪರ್ಧಿಗಳು ಗಾರ್ಡನ್ ಏರಿಯಾಗೆ ಒಂದೊಂದು ಬೇಡಿಕೆಯನ್ನು ಕಿವಿಯಾಕೃತಿಯ ಮುಂದೆ ಹೇಳಿಕೊಂಡಿದ್ದರು.

ಅದರಲ್ಲಿ ದಿವ್ಯಾ ಉರುಡುಗ ಬಯಕೆ ವಿಶೇಷವಾಗಿತ್ತು. ಸುದೀಪ್ ಸರ್ ತಾವೇ ಸ್ವತಃ ಕೈಯ್ಯಾರೆ ಅಡುಗೆ ಮಾಡಿ ಬಿಗ್‌ಬಾಸ್‌ಗೆ ಕಳುಹಿಸಬೇಕು ನಾವೆಲ್ಲರೂ ಅದನ್ನು ಸವಿಯಬೇಕು ಅಂತ ಬೇಡಿಕೆ ಇಟ್ಟಿದ್ದರು. ಕೊನೆಗೂ ಬಿಗ್‌ಬಾಸ್ ಕಿಚ್ಚ ಸ್ಯಾಂಡಲ್‌ವುಡ್ ಸುಂದ್ರಿ ದಿವ್ಯಾ ಉರುಡುಗರ ಬಯಕೆಯನ್ನು ಈಡೇರಿಸಿದರು. ಕಿಚ್ಚನ ಕೈರುಚಿಯನ್ನು ಸವಿದ ದೊಡ್ಮನೆಯ ಆರು ಸದಸ್ಯರು ನಾಳೆಗೂ ಒಂದು ಸ್ವಲ್ಪ ಇರಲಿ ಅಂತ ಫ್ರಿಜ್‌ನಲ್ಲಿರಿಸಿದ್ರು. ಇದರಲ್ಲೇ ಗೊತ್ತಾಗುತ್ತೆ ಶಾಂತಿನಿವಾಸದಲ್ಲಿ ಸ್ವಾತಿಮುತ್ತು ತಯ್ಯಾರಿಸಿದ ಅಡುಗೆ ಎಷ್ಟು ಪ್ರಿಯಕರವಾಗಿತ್ತು ಎಂಬುದು.

ಎನಿವೇ, ಅರಮನೆಯಂತಿರುವ ಸೆರೆಮನೆಯಲ್ಲಿ ಸದ್ಯ ಆರು ಮಂದಿ ಸ್ಪರ್ಧಿಗಳು ಉಳಿದಿದ್ದಾರೆ. ಬುಧವಾರ ರಾತ್ರಿ 11ಗಂಟೆಯೊಳಗಾಗಿ ಆರು ಜನರಲ್ಲಿ ಒಬ್ಬರು ದೊಡ್ಮನೆಯಿಂದ ಹೊರಬರುತ್ತಾರೆ. ಈಗಾಗಲೇ ಆ ಸ್ಪರ್ಧಿ ದಿವ್ಯಾ ಸುರೇಶ್ ಎನ್ನುವ ಸುದ್ದಿ ಜೋರಾಗಿ ಕೇಳಿರ‍್ತಿದೆ. ಅಧಿಕೃತವಾಗಿ ಹೊರಬಿದ್ದ ನಂತರ ಉಳಿದ ಐದು ಮಂದಿ ಫೈನಲ್ಸ್ ತಲುಪುತ್ತಾರೆ. ಅಂತಿಮ ಹಣಾಹಣಿಯಲ್ಲಿ ಐವರ ನಡುವೆ ಪೈಪೋಟಿ ಹೇಗಿರುತ್ತೆ? ಟಾಪ್ ಫೈವ್ ಸ್ಪರ್ಧಿಗಳಲ್ಲಿ ಕೊನೆಗೆ ಅದ್ಯಾರು ಕಿಚ್ಚನ ಅಕ್ಕ-ಪಕ್ಕದಲ್ಲಿ ನಿಲ್ತಾರೆ. ಅದ್ಯಾವ ಇಬ್ಬರು ಸ್ಪರ್ಧಿಗಳು ವಿನ್ನರ್-ರನ್ನರ್ ಅಪ್‌ಪಟ್ಟಕ್ಕೇರುತ್ತಾರೆ? ಅದ್ಯಾರಿಗೆ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಸಿಗುತ್ತೆ? ಅದ್ಯಾರಿಗೆ 50 ಲಕ್ಷದ ಚೆಕ್ ಸಿಗುತ್ತೆ? ಈ ಕ್ಯೂರಿಯಾಸಿಟಿ ಕೊಶ್ಚನ್‌ಗೆ ಅಂತೆ-ಕಂತೆ ಉತ್ತರಕ್ಕಿಂತ ಭಾನುವಾರ ಸಿಗುವ ಉತ್ತರವೇ ಅಂತಿಮ. ಅಲ್ಲಿವರೆಗೆ ತಾಳ್ಮೆಯಿಂದ ಕಾಯಬೇಕು ಕಾಯೋಣ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Related Posts

error: Content is protected !!