ಚಕ್ರವರ್ತಿ.. ಚಕ್ರವರ್ತಿ.. ಚಕ್ರವರ್ತಿ.. ಈ ಹೆಸರಿಗೊಂದು ಘನತೆಯಿದೆ , ಗೌರವವಿದೆ , ಬೆಲೆಕಟ್ಟಲಾಗದ ಶಕ್ತಿಯಿದೆ. ಮಾತ್ರವಲ್ಲ ಶತಶತ ಮಾನ ಗಳಿಂದಲೂ ಚಕ್ರವರ್ತಿ ಎನ್ನುವ ಹೆಸರಿಗೆ ಒಂದು ವಿಶೇಷವಾದ ಸ್ಥಾನವಿದೆ. ಮಾನವಿದೆ. ಅದು ಇಡೀ ಮನುಕುಲಕ್ಕೆ ಗೊತ್ತಿರುವ ಸತ್ಯ. ಆದರೂ ಈ ಚಕ್ರವರ್ತಿ ಮಾತ್ರ ಚಕ್ರವರ್ತಿ ಎನ್ನುವ ಹೆಸರಿಗೆ ಕಳಂಕವೇ? ಹೆಣ್ಣು ಅಂದ್ರೆ ಈ ಚಕ್ರವರ್ತಿಗೆ ಅದ್ಯಾಕೆ ಅಷ್ಟು ಕೋಪ? ಇಷ್ಟಕ್ಕೂ ನಾವ್ ಇಲ್ಲಿ ಹೇಳ್ತಿರೋದು ಅದ್ಯಾವ ಚಕ್ರವರ್ತಿ ಅಂತ ನೀವೇನು ಕನ್ ಪ್ಯೂಸ್ ಆಗೋದು ಬೇಡ.ನಾವಿಲ್ಲಿ ಹೇಳ್ತಿರೋದು ನಿರ್ದೇಶಕ, ಬರಹಗಾರ, ಪತ್ರಕರ್ತ ಹಾಗೂ ಬಿಗ್ ಬಾಸ್ ಸೀಸನ್ 8 ರ ಸ್ಪರ್ಧಿಯಾ ಗಿರುವ ಚಕ್ರವರ್ತಿ ಚಂದ್ರಚೂಡ್ ಅವರ ಬಗ್ಗೆ.
ಹಾಗಂತ ಅವರದೇನು ಕಥೆ ಅಂತ ವಿವರಿಸಿ ಹೇಳಬೇಕಿಲ್ಲ ಅನಿಸು ತ್ತೆ.ಬಿಗ್ ಬಾಸ್ ಮನೆಯಲ್ಲಿ ಒಂದು ಹೆಣ್ಣು ಮಗಳಿಗೆ ಆತ , ಕೋಪದಿಂದ ತೋರ ಬಾರದ ಬೆರಳು ತೋರಿಸಿದ ಕಾರಣಕ್ಕೆ ಆ ಯುವತಿ ನೊಂದು ಕೊಂಡಿದ್ದು ಅಷ್ಟಿಷ್ಟಲ್ಲ. ಅದನ್ನು ಇಡೀ ಕರುನಾಡೇ ಕಂಡು ಕ್ಯಾಕರಿಸಿ ಉಗಿಯಿತು. ಸೋಷಲ್ ಮೀಡಿಯಾದಲ್ಲಿ ಆ ಏಪಿಸೋಡ್ ಗೆ ಬಂದ ಕಾಮೆಂಟ್ ನೋಡಿದ್ರೆ, ಅಬ್ಬಾ, ಚಕ್ರವರ್ತಿ ಚಂದ್ರಚೂಡ್ ಗೆ ಪಿಂಕಿ ಅಲಿಯಾಸ್ ಪ್ರಿಯಾಂಕಾ ಅವರ ಶಾಪ ಮಾತ್ರವಲ್ಲ ಸಕಲ ಹೆಣ್ಣು ಮಕ್ಕಳ ಶಾಪ ತಟ್ಟುವುದಂತೂ ಗ್ಯಾರಂಟಿ ಅಂತೆನಿಸಿ ದ್ದು ಹೌದು. ಅದೇನಾಗುತ್ತೋ ಗೊತ್ತಿಲ್ಲ, ಆದರೆ ಬಿಗ್ ಬಾಸ್ ನಿರೂಪಕರಾದ ಕಿಚ್ಚ ಸುದೀಪ್ ಮಾತ್ರ ಶಮಿವಾರ ಕೆಂಡಾಮಂಡಲ ಆಗಿದ್ದನ್ನು ಕಂಡ ಕರುನಾಡು ಒಂದು ಕ್ಷಣ ಅಚ್ಚರಿಯಿಂದ ನೋಡಿದ್ದಂತೂ ಹೌದು. ಯಾಕಂದ್ರೆ ಚಂದ್ರ ಚೂಡ್ ಗೆ ನಟ ಸುದೀಪ್ ಕ್ಲಾಸ್ ತೆಗೆದುಕೊಂಡ ಪರಿಯೇ ಹಾಗಿತ್ತು.
ಶನಿವಾರ ಚಕ್ರವರ್ತಿಗೆ ಚಳಿಬಿಡಿಸಿರುವ ಕಿಚ್ಚ ಭಾನುವಾರ ಗೇಟ್ ಪಾಸ್ ಕೊಟ್ಟು ಕಳುಹಿಸೋದು ಖಚಿತ ಎನ್ನುವ ಮಾತು ಕೇಳಿಬರ್ತಿದೆ. ಅದಕ್ಕೆ ಕಾರಣ ಈ ಘಟನೆಯಿಂದ ಚಂದ್ರಚೂಡ್ ಮೇಲೆ ಸುದೀಪ್ ಅವರಿಗಿರುವ ಕೋಪ ಅಂತ ಭಾವಿಸಬೇಕಿಲ್ಲ. ಯಾಕಂದ್ರೆ ಈ ವಾರ ನಾಮಿನೇಟ್ ಆದವರ ಪೈಕಿ ಚಂದ್ರಚೂಡ್ ಕೂಡ ಒಬ್ಬರು. ಶುಭಾಪುಂಜಾ, ಪ್ರಶಾಂತ್ ಸಂಬರ್ಗಿ, ಶಮಂತ್, ಚಕ್ರವರ್ತಿ ಚಂದ್ರಚೂಡ್, ದಿವ್ಯಾ ಉರುಡುಗ ಈ ಐವರು ಈ ವಾರ ನಾಮಿನೇಟ್ ಆಗಿದ್ದಾರೆ. ಈ ಐವರಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರೇ ಕಿಕ್ ಔಟ್ ಆಗೋದು ಎನ್ನುವ ಸುದ್ದಿ ಹಲ್ ಚಲ್ ಎಬ್ಬಿಸುತ್ತಿದೆ. ಅದಕ್ಕೆ ಬೆಟ್ಟು ತೋರಿಸಿದ ವಿವಾದವೂ ಒಂದು.
ಅಂದ್ಹಾಗೇ ಚಕ್ರವರ್ತಿ ಚಂದ್ರಚೂಡ್ ಫಿನಾಲೆಗೆ ತಲುಪಲಿದ್ದ ಕ್ಯಾಂಡಿಡೇಟ್. ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಳ್ಳುವ ಅವಕಾಶ ಮಿಸ್ಸಾಗಬಹುದು. ಆದರೆ ಫೈನಲ್ ತಲುಪೋದು ಗ್ಯಾರಂಟಿ ಎನ್ನುವ ಮಾತು ಜನರ ಬಾಯಲ್ಲಿ ಬಂದಿತ್ತು. ಆದ್ರೀಗ, ಅದೇ ಜನರ ಬಾಯಲ್ಲಿ ಚಕ್ರವರ್ತಿಗೆ ಗೇಟ್ ಪಾಸ್ ಕೊಡಿಸುವ ಮಾತು ಕೇಳಿಬರ್ತಿದೆ. ಅದಕ್ಕೆ ಕಾರಣ ಪಿಂಕಿ ಅಲಿಯಾದ್ ಪ್ರಿಯಾಂಕಾ ತಿಮ್ಮೇಶ್ ಬಿಗ್ ಬಾಸ್ ನಿಂದ ಕಿಕ್ ಔಟ್ ಆದಾಗ ಚಕ್ರವರ್ತಿ ಮಧ್ಯದ ಬೆರಳನ್ನು ಅಶ್ಲೀಲವಾಗಿ ತೋರಿಸಿದ್ದಿರೆನ್ನುವುದೇ ಕಾರಣ. ಇಷ್ಟಕ್ಕೂ ಚಂದ್ರಚೂಡ್ ಅವರಿಗೆ ನಟಿ ಪ್ರಿಯಾಂಕಾ ತಿಮ್ಮೇಶ್ ಅವರ ಮೇಲೆ ಅದ್ಯಾಕೆ ಅಷ್ಟು ಕೋಪವೋ ಗೊತ್ತಿಲ್ಲ. ಅವರನ್ನು ಕಂಡಾಗೆಲ್ಲ ಗುರ್ ಎನ್ನುತ್ತಿದ್ದರು. ಕೊನೆಗೆ ಆ ಸಿಟ್ಟು ತೋರಿಸಿಯೇ ಬಿಟ್ಟರು. ಆದರೆ ಅದರ ಪರಿಣಾಮ ಈಗ ಬೇರೆಯೇ ಆಗಿದೆ.
ಹೆಣ್ಣುಮಕ್ಕಳಿಗೆ ತುಂಬಾ ಗೌರವ ಕೊಡ್ತೀನಿ ಅಂತ ಗರ್ವದಿಂದ ಹೇಳಿಕೊಳ್ಳುವ ಚಕ್ರವರ್ತಿಯವರು ಅಶ್ಲೀಲ ಸನ್ನೆ ತೋರಿಸಿದ್ದಕ್ಕೆ ಹೆಣ್ಣು ಮಕ್ಕಳು ಮಾತ್ರವಲ್ಲ ರಾಜ್ಯದ ಜನರು ಕೆಂಡಾಮಂಡಲವಾದರು. ಬಿಗ್ ಬಾಸ್ ಕಿಚ್ಚ ಕೂಡ ಇದನ್ನ ಖಂಡಿಸಿದರು. ವಾರದ ಕಥೆ ಕಿಚ್ಚನ ಜೊತೆ ಕಾರ್ಯಕ್ರಮದಲ್ಲಿ ಸರಿಯಾಗಿ ಕ್ಲಾಸ್ ತೆಗೆದುಕೊಂಡರು. ಕೊನೆಗೆ ಚಕ್ರವರ್ತಿಯವರು ನನ್ನಿಂದ ತಪ್ಪಾಯ್ತು ಅಂತ ಒಪ್ಪಿಕೊಂಡರು. ಆದರೆ, ರಾಜ್ಯದ ಜನರು ಚಕ್ರವರ್ತಿಯವರ ಕ್ಷಮೆಯನ್ನ ಮನ್ನಿಸ್ತಾರಾ ? ಹೆಣ್ಣು ಮಕ್ಕಳ ಶಾಪದಿಂದ ಚಂದ್ರಚೂಡ್ ವಿಮುಕ್ತರಾಗುತ್ತಾರಾ? ಸದ್ಯಕ್ಕೆ ನಾಮಿನೇಟೆಡ್ ಆಗಿರುವ ಚಂದ್ರಚೂಡ್ ವಿಲಿಮಿನೇಟ್ ಆಗೋದ್ರಿಂದಲೂ ಈ ವಾರ ತಪ್ಪಿಸಿಕೊಂಡರೂ ಅಚ್ಚರಿ ಪಡಬೇಕಿಲ್ಲ. ಯಾಕಂದ್ರೆ ಈ ವಾರ ಎಲಿಮಿನೇಟೆಡ್ ಪ್ರಕ್ರಿಯೆಯೇ ಇಲ್ಲ ಎನ್ನಲಾಗಿದೆ. ಆದರೆ ಮುಂದೆ?
ಈ ನಡುವೆ ಕಿಚ್ಚನ ಅದೊಂದು ಮಾತು ಚಕ್ರವರ್ತಿ ಕಿಕ್ ಔಟ್ ಆಗೋ ದು ಪಕ್ಕಾ ಎನ್ನುವುದಕ್ಕೆ ರೆಕ್ಕೆ ಪುಕ್ಕ ಕಟ್ಟುತ್ತಿದೆ. ಮುಂದಿನ ವಾರ ನೀವಿದ್ದರೆ ಕ್ಲಿಪ್ಪಿಂಗ್ಸ್ ಸಮೇತ ತೋರಿಸ್ತೀನಿ ಅಂತ ಕಿಚ್ಚ ಹೇಳಿದ ಮಾತನ್ನ ಸೂಕ್ಷ್ಮವಾಗಿ ಗಮನಿಸಿದರೆ ಮುಂದಿನ ವಾರ ಅಲ್ಲ ಇವತ್ತು ರಾತ್ರಿಯಿಂದಲೇ ಚಕ್ರವರ್ತಿಯವರಿಗೆ ದೊಡ್ಮನೆಯಲ್ಲಿ ಜಾಗವಿಲ್ಲ ಎನ್ನುವ ಅನುಮಾನ ಮೂಡ್ತಿದೆ. ಈ ಅನುಮಾನ ಬರೀ ಅನುಮಾನ ವಾಗಿ ಉಳಿಯುತ್ತಾ? ಜಸ್ಟ್ ವೇಯ್ಟ್ ಅಂಡ್ ವಾಚ್.