ಇಲ್ಲಿ ಯಾರೂ ಮಿತ್ರರಲ್ಲ ಯಾರೂ ಶತ್ರುವಲ್ಲ ಈ ಸನ್ನಿ ವೇಶಕ್ಕೆ ಈ ಸಾಲು ಸೂಕ್ತ ಎನಿಸುತ್ತೆ. ಕೇಳಿದರೆ ಹಣ ಅಲ್ಲ ಪ್ರಾಣನೇ ಕೊಡ್ತೀನಿ ಅಂತ ಚಕ್ರವರ್ತಿ ಸಾವಿರ ಸಾಲ ಹೇಳಿದ್ದಾರೆ. ಆದರೆ, ಸಾರಥಿಯ ಮಾತು ಮತ್ತು ಮನಸ್ಸು ಅದ್ಯಾಕೋ ಯಾರಿಗೂ ಸರಿಯಾಗಿ ಅರ್ಥ ಆದ್ಹಂಗೆ ಕಾಣ್ತಿಲ್ಲ. ಯಾಕಂದ್ರೆ, ಪದೇ ಪದೇ ಡಿಬಾಸ್ನ ಯಾಮಾರಿಸೋ ಕೆಲಸ ನಡೀತಿದೆ. ನಂಬಿದವರಿಂದಲೇ ಮೋಸ ಆಗ್ತಿದೆ. ಈಗ ಮತ್ತೊಮ್ಮೆ ದಾಸನಿಗೆ ಪಂಗನಾಮ ಹಾಕೋದಕ್ಕೆ ಹೋಗಿ ಪಜೀತಿಗೆ ಸಿಲುಕಿದ್ದಾರೆ. ಒಂದಲ್ಲ ಎರಡಲ್ಲ ಭರ್ತಿ 25 ಕೋಟಿ ದೋಖಾ ಮಾಡೋದಕ್ಕೆ ಹೊರಟು ತಗಲಾಕಿಕೊಂಡಿದ್ದಾರೆ. ತಾವೇ ತೋಡಿದ ಖೆಡ್ಡಾಗೆ ತಾವೇ ಬಿದ್ದು ಒದ್ದಾಡುತ್ತಿದ್ದಾರೆ. ಅಷ್ಟಕ್ಕೂ, ಇದರ ಕಿಂಗ್ ಫಿನ್ ಯಾರು ಅನ್ನೋದು ಗೊತ್ತಾಗಬೇಕಿದೆ. ತನಿಖೆ ನಡೆಯುತ್ತಿದೆ ಈ ಮಧ್ಯೆ ಚಕ್ರವರ್ತಿ ಸುದ್ದಿಗೋಷ್ಟಿ ಕರೆದು ಒಂದಿಷ್ಟು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ಎಳೆಎಳೆಯಾಗಿ ನಿಮ್ಮ ಮುಂದೆ ಇಡ್ತೇವೆ.
ದಚ್ಚುಗೆ 25 ಕೋಟಿ ವಂಚನೆಯ ಪ್ರಕರಣ ಸಾರಥಿ ಸ್ನೇಹಿತರು ಹಾಗೂ ಸಾರಥಿಯ ಅನ್ನದಾತ ಎನ್ನುವಂತಾಗಿದೆ. ಆರೋಪಿ ಸ್ಥಾನದಲ್ಲಿರುವ ಅರುಣ್ ಕುಮಾರಿ ಮೊದಲು ದರ್ಶನ್ ಆಪ್ತ ಸ್ನೇಹಿತರನ್ನು ಎಳೆದುತಂದರು. ಪ್ರಕರಣ ಪೊಲೀಸರ ಮುಂದೆ ಹೋದಾಗ ರಾಬರ್ಟ್ ಪ್ರೊಡ್ಯೂಸರ್ ಉಮಾಪತಿ ಶ್ರೀನಿವಾಸ್ ಗೌಡರ ವಿರುದ್ಧ
ಹೇಳಿಕೆ ಕೊಡ್ತಿದ್ದಾರೆ. ಹೀಗಾಗಿ, ಉಮಾಪತಿಯವರನ್ನು ಎಲ್ಲರೂ ಅನುಮಾನಿಸುವಂತಾಗಿದೆ.
ಸದ್ಯ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು ತನಿಖೆ ನಡೆಯುತ್ತಿದೆ. ಇತ್ತ ದರ್ಶನ್ ಸುದ್ದಿಗೋಷ್ಟಿ ಕರೆದು ಅಚ್ಚರಿಯ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸೋಮವಾರ ಮಧ್ಯಾಹ್ನ 1 ಗಂಟೆಗೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯನ್ನು ಕರೆದಿದ್ದರು. ಅಂತೆ ಕಂತೆ ಸುದ್ದಿಗಳಿಗೆ ಬ್ರೇಕ್ ಹಾಕಿ ಅಸಲಿ ಸತ್ಯವನ್ನು ತಿಳಿಸುವುದಕ್ಕೆ ತಮ್ಮ ಸ್ನೇಹಿತರೊಟ್ಟಿಗೆ ಆಗಮಿಸಿದ್ದರು. 25 ಕೋಟಿ ವಂಚನೆಯ ಪ್ರಕರಣದಲ್ಲಿ ಯಾವೆಲ್ಲ ಸ್ನೇಹಿತರ ಹೆಸರನ್ನ ಆರೋಪಿ ಅರುಣ್ ಕುಮಾರಿ ಹೇಳಿದ್ರೋ, ಅವರೆಲ್ಲರನ್ನೂ ಕೂಡ ಡಿಬಾಸ್ ತಮ್ಮ ಪಕ್ಕದಲ್ಲಿ ಕೂರಿಸಿಕೊಂಡು ಪ್ರೆಸ್ಮೀಟ್ ಮಾಡಿದರು.
ಆರೋಪಿ ಅರುಣ್ ಕುಮಾರಿಯ ಮುಖವಾಡ ವನ್ನು ಕಳಚುತ್ತಾ, 25 ಕೋಟಿ ದೋಖಾದ ಜಾಡುಹಿಡಿದು ಹೊರಟಾಗ ಸಿಕ್ಕಂತಹ ದಾಖಲೆಗಳನ್ನು ಮಾಧ್ಯಮದವರ ಮುಂದೆ ಪ್ರಸ್ತುತ ಪಡಿಸಿದರು.
ಅರುಣ್ ಕುಮಾರಿ 25 ಕೋಟಿ ವಂಚನೆಯ ಯತ್ನದಲ್ಲಿರುವ ಪ್ರಮುಖ ಆರೋಪಿ. ನಿರ್ಮಾಪಕ ಉಮಾಪತಿಯವರಿಂದಲೇ ದರ್ಶನ್ ಅವರಿಗೆ ಈಕೆಯ ಪರಿಚಯ ಆಗುತ್ತೆ. ಮುಂದೇನಾಯ್ತು ಅನ್ನೋದನ್ನ ಸ್ವತಃ ಅವರು ದರ್ಶನ್ ಹೇಳಿಕೊಂಡಂತೆ ನಿಮ್ಮ ಮುಂದಿಡುತ್ತೇವೆ.
ಲಾಕ್ ಡೌನ್ ಟೈಮ್ ನಲ್ಲಿ
ಮೈಸೂರಿಗೆ ಬಂದೆ. ಜೂನ್ 12 ರವರೆಗೆ ಮೈಸೂರಿನಲ್ಲೇ ಇದ್ದೆ. ಜೂನ್06 ನೇ ತಾರೀಖ್ ಉಮಾಪತಿಯವರು ಕಾಲ್ ಮಾಡಿದ್ದರು. ಬಾಸ್ ಯಾರಿಗಾದ್ರೂ ನೀವು ಶೂರಿಟಿ ಹಾಕ್ತಿದ್ದೀರಾ ಅಂತ ಕೇಳಿದರು. ಎರಡು ವರ್ಷ ಆಯ್ತು ಕೆಲಸ ಮಾಡಿ ಯಾವ್ ಶೂರಿಟಿ ಹಾಕಲಿ ಎಂದೆ. ಎಷ್ಟಕ್ಕೆ ಶೂರಿಟಿ ಹಾಕಿದ್ದೀನಿ ಅಂತ ಸುದ್ದಿಯಿದೆ ಹೇಳಿ ನಿರ್ಮಾಪಕರೇ ಎಂದಾಗ 25 ಕೋಟಿ ಅಂದರು.
ಫೇಕ್ ನ್ಯೂಸ್ ಇರ‍್ಬೇಕು ನೋಡಿ ಎಂದೆ. ಆಗ ಉಮಾಪತಿಯವರು ಈ ಶೂರಿಟಿ ಸುದ್ದಿ ಹೇಳಿದವರನ್ನ ಕಾನ್ಫರೆನ್ಸ್ ಗೆ ತಗೋತ್ತೀನಿ ಸರ್ ಅಂದರು ತಗೊಳ್ಳಿ ಎಂದಾಗ ಅರುಣ್ ಕುಮಾರಿಯವರನ್ನು ಕಾನ್ಫರೆನ್ಸ್ ಗೆ ತಗೊಂಡರು.
ಯಾವ್ ಲೋನ್, ಯಾವ್ ಶ್ಯೂರಿಟಿ ಅಂತ ಕೇಳಿದಾಗ ಆ ಮಹಿಳೆ ಹರ್ಷ ಮೆಲಂಟಾ, ರಾಕೇಶ್ ಪಾಪಣ್ಣ, ರಾಕೇಶ್‌ಶರ್ಮಾ
ಈ ಮೂರು ಜನ ನಿಮ್ಮ ಸ್ನೇಹಿತರು ನಿಮಗೆ ಗೊತ್ತಿಲ್ಲದ್ಹಂಗೆ ನಿಮ್ಮ ಡಾಕ್ಯುಮೆಂಟ್ ನ ಫೋರ್ಜರಿ ಮಾಡಿ ಲೋನ್ ತಗೋತ್ತಿದ್ದಾರೆ ಎಂದರು. ಅಲ್ಲದೇ, ಡಾಕ್ಯೂಮೆಂಟ್ಸ್ ತಗೊಂಡು ಬರ‍್ತೀನಿ
ಅಲ್ಲಿವರೆಗೂ ವೇಯ್ಟ್ ಮಾಡಿ ಎಂದರು.
ದರ್ಶನ್ ಮನೆಗೆ ಅರುಣ್ ಕುಮಾರಿನಾ ಕರ್ಕೊಂಡು ಹೋಗಿದ್ದೇ ನಿರ್ಮಾಪಕ ಉಮಾಪತಿಯವರು !
ಮೈಸೂರಿನಲ್ಲಿದ್ದ ದರ್ಶನ್ ಅವರು ಜೂನ್ 12 ಕ್ಕೆ ಬೆಂಗಳೂರಿಗೆ ಬರ್ತಾರೆ. ಜೂನ್ ೧೪ ರಂದು ಉಮಾಪತಿಯವರಿಂದ ದರ್ಶನ್ ಗೆ ಕಾಲ್ ಬರುತ್ತೆ.
ಅನಂತರ ಏನಾಯ್ತು ಡಿಬಾಸ್ ಹೇಳ್ತಾರೆ ಕೇಳಿ
ಬಾಸ್ ಎಲಿದ್ದೀರಾ ಅಂತ ಉಮಾಪತಿಯವರು ಕೇಳಿದರು ಬೆಂಗಳೂರಲ್ಲಿದ್ದೇನೆ ಎಂದಾಗ ಮೊನ್ನೆ ಲೋನ್ ಹಾಗೂ ಶ್ಯೂರಿಟಿ ಬಗ್ಗೆ ಮ್ಯಾಟರ್ ಹೇಳಿದ ಮಹಿಳೆಯನ್ನ ಮನೆಗೆ ಕರ್ಕೊಂಡು ಬರೋದಾ ಸರ್ ಅಂದರು ಆಯ್ತು ಕರ್ಕೊಂಡು ಬನ್ನಿ ಅಂತ ಹೇಳಿದೆ. ಜೂನ್ 16 ರಂದು
ಆರ್ ಆರ್ ನಗರದ ನಮ್ಮ ಮನೆಗೆ ಬಂದರು. ಹರ್ಷ ಮೆಲೆಂಟಾ, ವಿನಯ್ ಸುಧಾಕರ್ ಪೂಜಾರಿ
ಅನ್ಸಲ್ ಹೆಸರು ಹೇಳಿದರು.
ಅವರುಗಳ ಪತ್ನಿಯರ ಹೆಸರು ಹೇಳಿದ್ದು ಕೇಳಿ ಅಚ್ಚರಿಯಾಯ್ತು ನನಗೆ. ಡಾಕ್ಯೂಮೆಂಟ್ಸ್ ಫೋರ್ಜರಿ ಮಾಡಿದ್ದಾರೆ ಅಂತ ಹೇಳಿದ್ರಲ್ಲ ತೋರ್ಸಿ ಅಂತ ಕೇಳಿದರೆ ನನ್ನ ಆಧಾರ್ ಕಾರ್ಡ್ ತೋರಿಸಿದರು. ಪ್ಯಾನ್ ಕಾರ್ಡ್ ಫೋರ್ಜರಿ ಆಗಿದೆ ಎಂದರು. ಒಂದು ಡಾಕ್ಯೂಮೆಂಟ್ ನಲ್ಲಿ ದರ್ಶನ್ ತೂಗುದೀಪ ಅಗ್ರಿಕಲ್ಚರಿಸ್ಟ್ ಫಾರ್ಮರ್ ಪೊನ್ನಂಪೇಟೆ ಕೊಡಗು ಕರ್ನಾಟಕ ಎಂದು ಬರೆದಿತ್ತು.
ಅರುಣ್ ಕುಮಾರಿ ಮುಂದೆಯೇ ಸ್ನೇಹಿತರಿಗೆ ದರ್ಶನ್ ದೂರವಾಣಿ ಕರೆ !
ಯಾವ ಲೋನ್ ಇಲ್ಲ- ನಿಮ್ಮ ಹೆಸರಲ್ಲಿ ಫೋರ್ಜರಿನೂ ಮಾಡಿಲ್ಲ ; ದಚ್ಚು ಗೆಳೆಯರು ಹೀಗಂದರು ಸ್ನೇಹಿತರು !
ಅರುಣ್ ಕುಮಾರಿ ಮುಂದೆನೇ ಆತ್ಮೀಯ ನಾಗರಾಜ್ ಗೆ ದರ್ಶನ್ ಕಾಲ್ ಮಾಡ್ತಾರೆ. ನಾಗರಾಜ್ ಕಡೆಯಿಂದ ರಾಕೇಶ್ ಪರಿಚಯ
ರಾಕೇಶ್ ಕಡೆಯಿಂದ ಹರ್ಷ ಮೆಲೆಂಟಾ ಪರಿಚಯ ಆಗಿದ್ದರಿಂದ ಅವರೆಲ್ಲರಿಗೂ
ಕೇಳಿನೋಡು ಅಂತ ನಾಗರಾಜ್ ಗೆ ದರ್ಶನ್ ತಿಳಿಸ್ತಾರೆ. ದಚ್ಚು ಹೀಗಂದ ತಕ್ಷಣವೇ ನಾಗರಾಜ್ ರಾಕೇಶ್ ಪಾಪಣ್ಣಗೆ ಕಾನ್ಪರೆನ್ಸ್ ಹಾಕಿದರು. ರಾಕಿ ಹತ್ತಿರ ದರ್ಶನ್ ಮಾತನಾಡಿದರು.
ಹರ್ಷ ಅಥವಾ ನೀನು ಏನಾದರೂ ಲೋನ್‌ಗೆ ಅಪ್ಲೈ ಮಾಡಿದ್ದೀರೇನಪ್ಪ ಅಂತ ಕೇಳಿದ್ದಕ್ಕೆ ಚಾನ್ಸೆ ಇಲ್ಲ ಬಾಸ್ ಅಂದರು. ಇಲ್ಲಿಗೆ ಸುಮ್ಮನಾಗದ ದರ್ಶನ್, ತಮ್ಮ ಗೆಳೆಯರ ಬಳಗದಲ್ಲಿರುವ ರಾಕೇಶ್ ಶರ್ಮಾ ಕೋಟೆಕ್ ಮಹೇಂದ್ರದಲ್ಲಿ ವರ್ಕ್ ಮಾಡ್ತಿರುವುದನ್ನ ಹಾಗೂ ಎರಡು ವರ್ಷದ ಹಿಂದೆ ರಾಕೇಶ್ ಶರ್ಮಾಗೆ ಗಾಡಿ ಲೋನ್ ಮಾಡ್ಸು ಅಂತ ಡಾಕ್ಯೂಮೆಂಟ್ ಕೊಟ್ಟಿದ್ದನ್ನ ನೆನಪು ಮಾಡಿಕೊಂಡರು. ಅರುಣ ಕುಮಾರಿ ಕೂಡ ರಾಕೇಶ್ ಶರ್ಮಾ ಹೆಸರನ್ನ ಪ್ರಸ್ತಾಪ ಮಾಡಿರ್ತಾರೆ. ಹೀಗಾಗಿ, ಶರ್ಮಾಗೆ ಫೋನ್ ಮಾಡಿ
ಅರುಣ್ ಕುಮಾರಿ ಕೈಗೆ ಕೊಡ್ತಾರೆ.ಮಾತುಕತೆ ನಂತರ ನಿಮ್ಮ ಮೈಸೂರು ತೋಟವನ್ನು ವೆರಿಫೈ ಮಾಡಬೇಕು ಅವಕಾಶ ಮಾಡಿ ಅಂತ ಕೇಳಿಕೊಳ್ತಾಳೆ. ಅರುಣ್ ಕುಮಾರಿ ನಕಲಿ ಬ್ಯಾಂಕ್ ಮ್ಯಾನೇಜರ್ ಅಂತ ಗೊತ್ತಿಲ್ಲದ ಕಾರಣಕ್ಕೆ ತೋಟ ವೆರಿಫೈಗೆ ದರ್ಶನ್ ಒಪ್ಪಿಕೊಳ್ತಾರೆ.
ದರ್ಶನ್ ಫಾರ್ಮ್ ಹೌಸ್ ಗೆ ಅರುಣ್ ಕುಮಾರಿ ಭೇಟಿ !
ಹರ್ಷ ಮೆಲೆಂಟಾ- ರಾಕೇಶ್
ಪಾಪಣ್ಣನ ನೋಡಿ ಬೆವತರೇಕೆ ಕುಮಾರಿ ?
ತೋಟ ನನ್ನ ಹೆಸರಲ್ಲಿ ಇಲ್ಲ ನನ್ನ ಹೆಂಡ್ತಿ ಹೆಸರಲ್ಲಿ ಇದೆ ಅಂತ ದರ್ಶನ್ ಹೇಳಿದರೂ ಕೂಡ ವೆರಿಫೈಗೆ ಅಂತ ಫಾರ್ಮ್ ಹೌಸ್ ಗೆ ಹೋದ ಅರುಣ್ ಕುಮಾರಿ, ದರ್ಶನ್ ಸ್ನೇಹಿತರಾದ
ಹರ್ಷ ಮೆಲೆಂಟಾ ಹಾಗೂ ರಾಕೇಶ್ ಪಾಪಣ್ಣರನ್ನ ನೋಡಿ
ಬೆವತು ನೀರಾಗಿ ದರ್ಶನ್‌ಗೆ ಫೋನ್ ಮಾಡಿದ್ದಾರೆ.
ಇವರನ್ನ ಯಾಕೇ ಬರೋದಕ್ಕೆ ಹೇಳಿದ್ದೀರಾ ಸರ್ ಅವರು ಸೇಫ್ಟಿ ಮಾಡಿಕೊಳ್ತಾರೆ ಎಂದಿದ್ದಾಳೆ. ನೀವು ಬ್ಯಾಂಕ್ ನವರು ಮೇಡಂ ಹೆದರಿಕೊಳ್ಳಬೇಡಿ,
ನೀವು ಕರೆಕ್ಟಾಗಿದ್ರೆ ನಿಮ್ಮ ಜೊತೆ ನಾನು ಇರುತ್ತೇನೆ ಎಂದಿದ್ದಾರೆ.
ರಾಕೇಶ್ ಪಾಪಣ್ಣನೇ ಕಿಂಗ್ ಫಿನ್: ದರ್ಶನ್ ಆಪ್ತರ ಬಳಿ ಅರುಣ್ ಕುಮಾರಿ ಹೇಳಿಕೆ !
ಹರ್ಷ ಮೆಲಂಟಾ ಪ್ರಶ್ನೆಗೆ ಕುಮಾರಿ ಬಳಿ ಉತ್ತರವಿಲ್ಲ: ಐಡಿ ಕಾರ್ಡ್ ತೋರಿಸಲೇ ಇಲ್ಲ !?
ಹರ್ಷ ಮೆಲೆಂಟಾ ಹಾಗೂ ರಾಕೇಶ್ ಪಾಪಣ್ಣ ಫಾರ್ಮ್ ಹೌಸ್ ಗೆ ಬರುವ ಮೊದಲು ದಾಸನ ಆಪ್ತ ನಾಗರಾಜ್ ಬಳಿ ಅರುಣ್ ಕುಮಾರಿ ‘ರಾಕೇಶ್ ಪಾಪಣ್ಣನೇ ಕಿಂಗ್ ಪಿನ್’ ಅಂತ ಹೇಳಿದ್ದಾರೆ. ಆದರೆ, ಅವರಿಬ್ಬರು ಸ್ಪಾಟ್ ಗೆ ಬಂದ್ಮೇಲೆ ಇವರಿಬ್ಬರೂ ನನಗೆ ಗೊತ್ತಿಲ್ಲ ನನಗೆ ರಾಕೇಶ್ ಶರ್ಮಾ ಗೊತ್ತು ಅಷ್ಟೇ ಅಂತ ಉಲ್ಟಾ ಹೊಡೆದಿದ್ದಾಳೆ. ನಾನೇ ಬ್ಯಾಂಕಿಗೆ ಬಂದು ಲೋನ್ ಕೇಳಿದ್ದೀನಿ ಅಂತ ದರ್ಶನ್ ಸಾರ್ ಬಳಿ ಹೇಳಿದ್ದೀಯಲ್ಲ
ನಿಮ್ಮ ಬ್ಯಾಂಕ್ ಹತ್ತಿರ ಬರ್ತೀವಿ ಸಿಸಿಟಿವಿ ಫುಟೇಜ್ ತೋರಿಸಿ ಅಂತ ಹರ್ಷ ಮೆಲೆಂಟಾ ಅರುಣ್ ಕುಮಾರಿ ಬಳಿ ಹೇಳಿದ್ದಾರೆ. ಆಯ್ತು ಬೆಂಗಳೂರಿಗೆ ಬನ್ನಿ ಸೌತ್ ಎಂಡ್ ಸರ್ಕಲ್ ಬಳಿ ಆಫೀಸ್ ಅಂತ ಹೇಳಿ
ದರ್ಶನ್ ಫಾರ್ಮ್ ಹೌಸ್ ನಿಂದ ಆಕೆ ಹೊರಟಿದ್ದಾರೆ. ಐಡಿ ಕಾರ್ಡ್ ಕೇಳಿದರೆ ಮನೆಯಲ್ಲಿದೆ ಅಂತ ನೆಪ ಹೇಳಿದ್ದಾಳೆ.
ಕಾಲ್ ಯೂ ಲೇಟರ್ ಮೆಸೇಜ್ ನಿಂದ ಅರುಣ್ ಕುಮಾರಿ ಕಳ್ಳಾಟ ಬಯಲು !
ಫಾರ್ಮ್ ಹೌಸ್ ನಿಂದ ಹೊರಟ ಅರುಣ್ ಕುಮಾರಿ ಗೆ ಹರ್ಷ ಮೆಲೆಂಟಾ ಕಾಲ್ ಮಾಡಿದ್ದಾರೆ. ಆಕೆ ಕಡೆಯಿಂದ ಕಾಲ್ ಯೂ ಲೇಟರ್ ಅಂತ ರಿಪ್ಲೈ ಬಂದಿದೆ. ರಿಪ್ಲೈ ಬಂದಿದ್ದ ಸಿಮ್ ನ ಟ್ರೂ ಕಾಲರ್ ನಲ್ಲಿ ಚೆಕ್ ಮಾಡಿದಾಗ ಕುಮಾರ್ ಅನ್ನೋ ನೇಮ್ ಬಂದಿದೆ. ಆಗ ಕುಮಾರ್ ಜಾಡು ಹಿಡಿದು ಬೆನ್ನತ್ತಿದ್ದಾಗ ಆ ಕುಮಾರ್ ಬೇರೆ ಯಾರು ಅಲ್ಲ ರಾಕೇಶ್ ಶರ್ಮಾರ ಯೂನಿಯನ್ ನಲ್ಲಿಕೆಲಸ ಮಾಡುವ ಸೆಕ್ಯೂರಿಟಿ ಗಾರ್ಡ್ ಅನ್ನೋದು ಗೊತ್ತಾಗುತ್ತೆ. ಆಗ ರಾಕೇಶ್ ಶರ್ಮಾ, ಕುಮಾರ್ ಗೆ ಕಾಲ್ ಮಾಡ್ತಾರೆ ಅರುಣ್ ಕುಮಾರಿ ಯಾರು ಗೊತ್ತಾ ಅಂತ ಕೇಳ್ತಾರೆ. ಆಕೆ ನನ್ನ ವೈಫ್ ಈಗ ಜೊತೆಯಾಗಿಲ್ಲ ಬೇರೆಯಾಗಿದ್ದೇವೆ ಎಂಬ ಮಾಹಿತಿ ನೀಡಿದರು. ಆಕೆ ಪಿಯೂಸಿ ಓದಿದ್ದಾಳೆ ಅಷ್ಟೇ ಅವಳಿಗೆ ಬ್ಯಾಂಕ್ ನಲ್ಲಿ ಹೇಗೆ ಕೆಲಸ ಸಿಗುತ್ತೆ ಅಂತ ಆಕೆಯ ಗಂಡ ಹೇಳಿದಾಗ ಆಕೆಯನ್ನು ಹುಡುಕಿಕೊಂಡು ಹರ್ಷ ಮೆಲೆಂಟಾ, ರಾಕೇಶ್ ಶರ್ಮಾ, ರಾಕೇಶ್ ಪಾಪಣ್ಣ ಒಟ್ಟಿಗೆ ಸೇರಿ ಸೌತ್ ಎಂಡ್ ಸರ್ಕಲ್ ಬಳಿಯ ಬ್ಯಾಂಕ್ ಗೆ ಹೋಗ್ತಾರೆ. ಅಲ್ಲಿಗೆ ಹೋಗಿ ವಿಚಾರಿಸಿದರೆ ಅರುಣ್ ಕುಮಾರಿ ಹೆಸರಿನ ಯಾವ ಎಂಪಾಯ್ಲಿ ಕೂಡ ಅಲ್ಲಿ ಇರೋದಿಲ್ಲ.
ಹಾಗಾದ್ರೆ ಮುಂದೇನ್ ಮಾಡಿದರು, ದರ್ಶನ್ ಕೈಗೊಂಡ ನಿರ್ಧಾರ ಎಂತಹದ್ದು ? ಆಕೆ ಹೇಗೆ ತಗಲಾಕಿಕೊಂಡ್ಳು ? ದರ್ಶನ್ ಸ್ನೇಹಿತರನ್ನು ಬಿಟ್ಟು ರಾಬರ್ಟ್ ಪ್ರೊಡ್ಯೂಸರ್ ಕಡೆ ಯಾಕೇ ಬೊಟ್ಟು ಮಾಡಿ ತೋರಿಸಿದ್ಳು ಇದೆಲ್ಲದಕ್ಕೂ ಉತ್ತರ ಸಿಗಬೇಕು ಅಂದರೆ ಸಿನಿಲಹರಿ ಸಿನಿಮಾ ಪೇಜ್ ನ ಫಾಲೋ ಮಾಡಿ.