ಸ್ಯಾಂಡಲ್ವುಡ್‌ ಕ್ವೀನ್‌ ರಮ್ಯಾ ಅವರಿಗೆ ಜ್ವಾಳದ್ ರೊಟ್ಟಿ-ಬದ್ನೆಕಾಯ್ ಪಲ್ಯೆ ಅಂದ್ರೆ ತುಂಬಾ ಇಷ್ಟವಂತೆ!

ಗಾಂಧಿನಗರದ ಇಡ್ಲಿವಡೆ ಸಾಂಬಾರ್, ಕಾಂಗ್ರೇಜ್ ಕಡ್ಲೆಬೀಜ ಹಾಕಿರೋ ಚಿತ್ರಾನ್ನ ಅಂದರೆ ಮೋಹಕತಾರೆ ರಮ್ಯಾ ಮೇಡಂಗೆ ಆಲ್‌ಟೈಮ್ ಫೇವರಿಟ್. ಇದು ಎಲ್ಲರಿಗೂ ಗೊತ್ತಿರೋ ವಿಷ್ಯ. ಆದರೆ, ಪದ್ಮಾವತಿಗೆ ಜ್ವಾಳದ್ ರೊಟ್ಟಿ ಮುಳ್‌ಗಾಯ್ ಪಲ್ಯ ಕಂಡ್ರೆ ಪಂಚಪ್ರಾಣ ಎಂಬುದು ಗೊತ್ತಿರಲಿಲ್ಲ. ಹೀಗೆ ಫೇವರಿಟ್ ಫೂಡ್‌ನಿಂದ ಹಿಡಿದು ಕೊರೊನಾ ವ್ಯಾಕ್ಸಿನ್ ತನಕ ಒಂದಿಷ್ಟು ಇಂಟ್ರೆಸ್ಟಿಂಗ್ ಸಂಗತಿಗಳ ಬಗ್ಗೆ ಸ್ವತಃ ರಮ್ಯಕ್ಕನೇ ಮಾತನಾಡಿದ್ದಾರೆ…

  • ಬರಹ: ವಿಶಾಲಾಕ್ಷಿ

ಸ್ಯಾಂಡಲ್‌ವುಡ್‌ನ ಮೋಹಕತಾರೆ ರಮ್ಯಾ ಮತ್ತೆ ಸುದ್ದಿಯಲ್ಲಿದ್ದಾರೆ. ಬಹಳ ದಿನಗಳ ನಂತರ ಸೋಷಿಯಲ್ ಲೋಕದಲ್ಲಿ ಲೈವ್ ಬಂದ ದಿಲ್ಲಿ ಮೇಡಂ ಸ್ಟ್ಯಾಂಡಪ್ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಮಾತುಕಥೆ ಶುರುಹಚ್ಚಿಕೊಂಡರು. ಲೈವ್‌ನಲ್ಲಿ ಚಾಕಲೇಟ್ಸ್ ತಿನ್ನುತ್ತಾ ಮಾತಿಗಿಳಿದ ಗೌರಮ್ಮ, ಹಾಲು ಕುಡಿಯಲ್ಲ, ಐಸ್‌ಕ್ರೀಮ್ ಎಷ್ಟು ಬೇಕಾದರೂ ತಿನ್ನುತ್ತೀನಿ.

ಇಡ್ಲಿಗೆ ಸಾಂಬಾರ್ ಡಿಪ್ ಮಾಡೋಕೆ ಇಷ್ಟವಿಲ್ಲ ಹೀಗಾಗಿ ಚಟ್ನಿ ಜೊತೆ ತಿನ್ನುತ್ತೀನಿ. ನುಗ್ಗೆಕಾಯಿ ಇಷ್ಟ ಆಗಲ್ಲ, ಮಶ್ರೂಮ್ ಚೆನ್ನಾಗಿ ಬ್ಯಾಟಿಂಗ್ ಮಾಡ್ತೀನಿ. ಮೊಟ್ಟೆ ಸಪರೇಟ್ ತಿನ್ನಲ್ಲ ಕೇಕ್‌ನಲ್ಲಿ ಹಾಕಿದ್ರೆ ಟೇಸ್ಟ್ ಮಾಡ್ತೀನಿ. ನಾನ್ ವೆಜ್ ತಿನ್ನೋದನ್ನ ಬಿಟ್ಟುಬಿಟ್ಟಿದ್ದೀನಿ ಹೀಗೆ ತಮ್ಮ ಇಷ್ಟದ ಫುಡ್ ಬಗ್ಗೆ ಮಾತನಾಡುತ್ತಾ ಲೈವ್‌ನಲ್ಲೇ ಬೆಂಗಳೂರಿನ ಗಾಂಧಿನಗರ ಹಾಗೂ ಬಸವನಗುಡಿಯನ್ನ ಒಂದು ರೌಂಡ್ ಹಾಕಿಬಂದರು.

ಇಷ್ಟೆಲ್ಲಾ ಮಾತನಾಡಿದ ರಮ್ಯಾ ಅಭಿಮಾನಿಗಳ ಕೂತೂಹಲದ ಪ್ರಶ್ನೆಗೆ ಉತ್ತರ ನೀಡ್ಲೆ ಇಲ್ಲ. ಪದ್ಮಾವತಿ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಚಿತ್ರರಂಗಕ್ಕೆ ಯಾವಾಗ ಕಮ್‌ಬ್ಯಾಕ್ ಮಾಡ್ತಾರೆ ಅನ್ನೋದು ಫ್ಯಾನ್ಸ್ಗಳ ಮಿಲಿಯನ್ ಡಾಲರ್ ಪ್ರಶ್ನೆ ಈ ಕೌತುಕದ ಪ್ರಶ್ನೆಗೆ ಗೌರಮ್ಮ ಸರಿಯಾದ ಉತ್ತರ ಕೊಡಲಿಲ್ಲ. ಮನೆಯಲ್ಲೇ ಇದ್ದೇನೆ ಎಂದರೇ ಹೊರೆತು ಯಾವ್ ಮನೆ ಎಲ್ಲಿಯ ಮನೆ ಎಂದು ಹೇಳಲಿಲ್ಲ. ಚಿತ್ರರಂಗಕ್ಕೆ ಕಮ್‌ಬ್ಯಾಕ್ ಮಾಡುವ ಪ್ಲ್ಯಾನ್ ಸದ್ಯಕ್ಕಿಲ್ಲ ಎಂದರೇ ಹೊರೆತು `ಡೋಂಟ್ ವರೀ ಐ ವಿಲ್ ಕಮ್’ ಅಂತ ಹೇಳಲೆ ಇಲ್ಲ ಗುರು. ಹಾಗಂತ ಫ್ಯಾನ್ಸ್ ಏನ್ ಬೇಜಾರ್ ಮಾಡಿಕೊಂಡಿಲ್ಲ. ಯಾವಾಗ ಬಂದ್ರೂ ಓಕೆ ರೆಡ್‌ಕಾರ್ಪೆಟ್ ಹಾಕೋದಕ್ಕೆ ನಾವ್ ರೆಡಿ ಎನ್ನುತ್ತಿದ್ದಾರೆ.

Related Posts

error: Content is protected !!