ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಮೇಡಂ ಇನ್ನೂ ವ್ಯಾಕ್ಸಿನ್ ಹಾಕಿಸಿಕೊಂಡಿಲ್ಲ ಇದು ಈ ಕ್ಷಣದ ಬಿಗ್ ಬ್ರೇಕಿಂಗ್ ಸ್ಟೋರಿ.
ರೂಪಾಂತರಿ ಕೊರೊನಾ ಅಟ್ಟಹಾಸ ಇನ್ನೂ ಕಮ್ಮಿಯಾಗಿಲ್ಲ ದಯವಿಟ್ಟು ಎಲ್ಲರೂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳಿ ಅಂತ ಸರ್ಕಾರ ಸಾರಿ ಸಾರಿ ಹೇಳ್ತಿದೆ. ಸರ್ಕಾರ ಇಷ್ಟು ಹೇಳಿದರೂ, ಕೊರೊನಾ ಬಗ್ಗೆ ಅರಿವು ಮೂಡಿಸಿದ್ರೂ ಕೂಡ ಸೆಲೆಬ್ರಿಟಿ ಹುದ್ದೆಯಲ್ಲಿರುವ, ಸಾಮಾಜಿಕ ಜವಾಬ್ದಾರಿಯನ್ನ ನಿಭಾಯಿಸಬೇಕಾಗಿರುವ
ರಮ್ಯಾ ಮೇಡಂ ವ್ಯಾಕ್ಸಿನೇಷನ್ ಹಾಕಿಸಿಕೊಳ್ಳೋಕೆ ತಡ ಮಾಡ್ತಿದ್ದಾರೆ.
ಮಾಜಿ ನಟಿ, ಕಾಂಗ್ರೇಸ್ ಪಕ್ಷದ ಸಾಮಾಜಿಕ ಜಾಲತಾಣದ ಮುಖ್ಯಸ್ಥೆಯಾಗಿದ್ದಂತ ರಮ್ಯಾ ಅವರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳೋದಕ್ಕೆ ತಡ ಮಾಡ್ತಿರೋದಕ್ಕೆ ಕಾರಣ ಕೊರೊನಾ ವ್ಯಾಕ್ಸಿನ್ ಬಗ್ಗೆ ಅವರಿಗಿರುವ ಕನ್ಫ್ಯೂಶನ್
ಹೌದು, ಕೊವ್ಯಾಕ್ಸಿನ್ ತಗೊಳ್ಳೋದಾ, ಕೊವಿಶೀಲ್ಡ್ ಹಾಕಿಸಿಕೊಳ್ಳೋದಾ ಅಂತ ನಮ್ಮ ಜನ ಕನ್ಫ್ಯೂಶನ್ ಕ್ರಿಯೇಟ್ ಮಾಡಿಕೊಳ್ತಾರೆ. ಅದರಂತೇ ಚಂದನವನದ ಮಾಜಿ ಪದ್ಮಾವತಿಗೂ ಯಾವ್ ವ್ಯಾಕ್ಸಿನ್ ತಗೋಬೇಕು ಅಂತ ಕನ್ಫ್ಯೂಶನ್ ಆಗ್ತಿದೆಯಂತೆ.
ಈ ಬಗ್ಗೆ ಕಾಮಿಡಿಯನ್ ಸೋನು ವೇಣುಗೋಪಾಲ್ ಜೊತೆ ಇನ್ಸ್ ಟಾಗ್ರಾಮ್ ಲೈವ್ ನಲ್ಲಿ ಮಾತನಾಡಿರುವ ಗೌರಮ್ಮ, ವ್ಯಾಕ್ಸಿನ್ ಹಾಕಿಸಿಕೊಳ್ಳಲೆಬೇಕು ಆದರೆ ಮೊಡರ್ನಾ ವ್ಯಾಕ್ಸಿನ್ ಬಂದರೆ 100 ಪರ್ಸೆಂಟ್ ಹಾಕಿಸಿಕೊಳ್ತೀನಿ ಎಂದಿದ್ದಾರೆ. ಮೊಡರ್ನಾ ವ್ಯಾಕ್ಸಿನ್ ಗೆ ಪರ್ಮಿಷನ್ ಸಿಕ್ಕಿದೆ ಅದು ಬರೋವರೆಗೂ ವೇಯ್ಟ್ ಮಾಡಿ ಆಮೇಲೆ ತೆಗೆದುಕೊಳ್ಳೋದಕ್ಕೆ ರಮ್ಯಾ ನಿರ್ಧರಿಸಿದ್ದಾರೆ.
ಅಷ್ಟಕ್ಕೂ ಸದ್ಯಕ್ಕೆ ರಮ್ಯಾ ಮೇಡಂ ಅದೆಲ್ಲಿ ನೆಲೆಸಿದ್ದಾರೋ ಗೊತ್ತಿಲ್ಲ. ಮೊಡೊರ್ನಾ ಬಗ್ಗೆ ಮಾತನಾಡ್ತಿದ್ದಾರೆ ಅಂದರೆ ಮಂಡ್ಯ ಮೇಡಂ ಡೆಲ್ಲಿನಲ್ಲಿರೋದು ಡೌಟು ಮತ್ತೆಲ್ಲಿದ್ದಾರೆ ಅನ್ನೋ ಕೂತೂಹಲದ ಪ್ರಶ್ನೆಗೆ ಸದ್ಯಕ್ಕೆ ಉತ್ತರವಿಲ್ಲ. ಯಾಕಂದ್ರೆ ನಿನ್ನೆ ರಾತ್ರಿ ಲೈವ್ ಬಂದಾಗ ರಮ್ಯಕ್ಕನಿಗೆ ಎಲ್ಲಿದ್ದೀರಾ ಈಗ ಅಂತ ಫ್ಯಾನ್ಸ್ ಪ್ರಶ್ನೆ ಕೇಳಿದರೆ ಮನೆಯಲ್ಲಿದ್ದೀನಿ ಅಂತ ಹೇಳಿದರೆ ಹೊರೆತು,
ಯಾವ್ ಮನೆ? ಎಲ್ಲಿ ತಂಗಿದ್ದಾರೆ ಅನ್ನೋದನ್ನ ಕೊನೆಗೂ ಬಾಯ್ಬಿಟ್ಟು ಹೇಳಲಿಲ್ಲ. ಹೀಗಾಗಿ, ದಿಲ್ಲಿ ಮೇಡಂ ರಮ್ಯಾ ಅವರು ಎಲ್ಲಿದ್ದಾರೆ ಅನ್ನೋದು ಎಲ್ಲರ ಕೂತೂಹಲದ ಪ್ರಶ್ನೆ.