ಅಂತಾರಾಷ್ಟ್ರೀಯ ಅತ್ಯುತ್ತಮ ನಟಿ ಪ್ರಶಸ್ತಿಗೆ ಭಾಜನರಾದ ನಟಿ ಅಕ್ಷತಾ ಪಾಂಡವಪುರ ; ಎರಡು ಪ್ರಶಸ್ತಿ ಪಡೆದ ಪಿಂಕಿ ಎಲ್ಲಿ?

‘ಬಿಗ್ ಬಾಸ್’ ಖ್ಯಾತಿಯ ರಾಜ್ಯ ಪ್ರಶಸ್ತಿ ಪುರಸ್ಕೃತ ನಟಿ ಅಕ್ಷತಾ ಪಾಂಡವಪುರ ಅವರು ಮತ್ತೊಂದು ಪ್ರತಿಷ್ಟಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪ್ರತಿಷ್ಟಿತ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಅವರು ಅತ್ಯುತ್ತಮ ನಟಿ ಪ್ರಶಸ್ತಿಗೆ
ಆಯ್ಕೆಯಾಗಿದ್ದಾರೆ. ಪೃಥ್ವಿ ಕೊಣನೂರು ನಿರ್ದೇಶನ ಹಾಗೂ ಕೃಷ್ಟೇ ಗೌಡ ನಿರ್ಮಾಣದ ಪಿಂಕಿ ಎಲ್ಲಿ? ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಈ ಪ್ರಶಸ್ತಿ ಬಂದಿದೆ. ಹಾಗೆಯೇ ಈ ಚಿತ್ರಕ್ಕೆ ಅತ್ಯುತ್ತಮ ಚಿತ್ರಕಥೆ ವಿಭಾಗದಲ್ಲೂ ಪ್ರಶಸ್ತಿಗೆ ಪಾತ್ರವಾಗಿದೆ.

ಜಗತ್ತಿನಲ್ಲಿ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ ಪ್ರತಿಷ್ಟಿತ ಫೆಸ್ಟಿವಲ್ ಎನ್ನುವ ಹೆಗ್ಗಳಿಕೆ ಇದೆ. ಅಲ್ಲಿಗೆ ಕನ್ನಡದಿಂದ ಆಯ್ಕೆಯಾದ ಏಕೈಕ ಚಿತ್ರವೂ ಇದಾಗಿತ್ತು. ಅತ್ಯುತ್ತಮ ಚಿತ್ರ, ಅತ್ಯುತ್ತಮ ಚಿತ್ರಕತೆ ಹಾಗೂ ಅತ್ಯುತ್ತಮ ನಟಿ ಸೇರಿದಂತೆ ಒಟ್ಟು ಮೂರು ವಿಭಾಗಗಳಲ್ಲಿ ಈ ಚಿತ್ರ ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಗೆ ನಾಮ ನಿರ್ದೇಶನ ಗೊಂಡಿತ್ತು. ಈ ಪೈಕಿ ಎರಡು ವಿಭಾಗಗಳಲ್ಲಿ ಪ್ರಶಸ್ತಿ ಬಾಚಿಕೊಂಡಿದೆ. ಅತ್ಯುತ್ತಮ ನಟಿ ಪ್ರಶಸ್ತಿ ಗೆ ನಟಿ ಅಕ್ಷತಾ ಪಾಂಡವಪುರ ಆಯ್ಕೆಯಾಗಿದ್ದಾರೆ. ‘ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ಕನ್ನಡ ಚಿತ್ರಗಳೇ ಆಯ್ಕೆಯಾಗುವುದು ಕಷ್ಟ. ಅಂತಹದರಲ್ಲಿ ನಮ್ಮ ಚಿತ್ರ ಮೂರು ವಿಭಾಗಗಳಲ್ಲಿ ನಾಮಿನೇಟ್ ಆಗಿದ್ದೇ ದೊಡ್ಡ ಖುಷಿ ತಂದಿತ್ತು. ಅದನ್ನು ಮೀರಿ ಈಗ ದೊಡ್ಡ ಸಂಭ್ರಮ‌ ಪ್ರಶಸ್ತಿ ಮೂಲಕ ಸಿಕ್ಕಿದೆ. ಚಿತ್ರಕ್ಕೆ ಎರಡು ಪ್ರಶಸ್ತಿ ಬಂದಿದೆ. ನನಗೆ ಅತ್ಯುತ್ತಮ ನಟಿ‌ ಪ್ರಶಸ್ತಿ ಬಂದಿದೆ. ಇದೇ ಮೊದಲು‌ ನನಗೆ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿ ಬಂದಿದೆ. ಚಿತ್ರದ‌ ನಿರ್ಮಾಪಕರಾದ ಕೃಷ್ಣೇಗೌಡರು ಹಾಗೂ ನಿರ್ದೇಶಕರಾದ ಪೃಥ್ವಿ ಕೊಣನೂರು ಅವರಿಗೆ ಈ ಕ್ರೆಡಿಟ್ ಸಲ್ಲುತ್ತದೆ ‘ ಎಂದು ನಟಿ ಅಕ್ಷತಾ ಪಾಂಡವಪುರ ಪ್ರತಿಕ್ರಿಯಿಸಿದ್ದಾರೆ.

ನ್ಯೂಯಾರ್ಕ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಭಾರತದಿಂದ ಅತ್ಯುತ್ತಮ ನಟಿ ಪ್ರಶಸ್ತಿ ಗೆ ಕನ್ನಡದ ಪಿಂಕಿ ಎಲ್ಲಿ?ಚಿತ್ರದ ನಾಯಕಿ ಅಕ್ಷತಾ ಪಾಂಡವಪುರ, ಮಲಯಾಳಂ ನ ಬಿರಿಯಾನಿ ಚಿತ್ರದ ಕನಿ‌ಕುಸ್ರುತಿ, ಹಿಂದಿಯ ನಜರ್ ಬಾಂಡ್ ಚಿತ್ರದ ಇಂದಿರಾ ತಿವಾರಿ, ಬೆಸ್ಟ್ ಇನ್ ದಿ ಮೌಂಟೈನ್ಸ್ ಚಿತ್ರದ ವಿನಿಮ್ರತಾ ರೈ ಹಾಗೂ ಅಶ್ವಿನಿ‌ಗಿರಿ ನಾಮಿನೇಟ್ ಆಗಿದ್ದರು. ಈ ಪೈಕಿ ತೀರ್ಪುಗಾರರ ಆಯ್ಕೆ ಅಕ್ಷತಾ ಪಾಂಡವಪುರಾಗಿದ್ದಾರೆ. ಹಾಗೆಯೇ ಅತ್ಯುತ್ತಮ ಚಿತ್ರಕತೆ ಪ್ರಶಸ್ತಿಗೂ ಪಿಂಕಿ ಎಲ್ಲಿ? ಚಿತ್ರ ಪಾತ್ರವಾಗಿದೆ. ಈಗಾಗಲೇ ಈ ಚಿತ್ರವು ಗೋವಾ ಪನೋರಮಾ ಚಿತ್ರೋತ್ಸವ ಸೇರಿದಂತೆ ಅನೇಕ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಪ್ರದರ್ಶನ ಗೊಂಡಿದೆ.

ಭಾರತೀಯ ಫಿಲಂ ಬಜಾರ್ ನಲ್ಲೂ ಆಯ್ಕೆ ಆಗಿದೆ. ಕನ್ನಡದಿಂದ ಇದೇ ಮೊದಲು ಅನೇಕ ಹೆಜ್ಜೆ ಗುರುತು ಮೂಡಿಸಿದೆ. ಈ ಕುರಿತು‌ ಮಾತನಾಡುವ ನಿರ್ಮಾಪಕ‌ ಕೃಷ್ಟೇಗೌಡ, ‘ಸಿನಿಮಾ ನಿರ್ಮಾಣ ನನಗೆ ಹೊಸದಲ್ಲ. ಈಗಾಗಲೇ ಹಲವು ಸಿನಿಮಾ‌ ಮಾಡಿದ್ದೇನೆ . ಎಷ್ಟೋ ಕಳೆದುಕೊಂಡಿದ್ದೇನೆ. ಆದರೆ, ಇದೇ ಮೊದಲ ಬಾರಿಗೆ ಒಂದು ಸಿನಿಮಾ ಮಾಡಿದ ಸಾರ್ಥಕತೆಯ ದೊಡ್ಡ
ತೃಪ್ತಿ‌ ಈ ಸಿನಿಮಾದಿಂದ ಸಿಕ್ಕಿದೆ. ಅನೇಕ ಪ್ರತಿಷ್ಟಿತ ಚಿತ್ರೋತ್ಸವಗಳಿಗೆ ನಮ್ಮ ಸಿನಿಮಾ ಆಯ್ಕೆಯಾಗಿ ಮೆಚ್ಚುಗೆ ಪಡೆದಿದೆ.

ಈ ನ್ಯೂಯಾರ್ಕ್ ಪ್ರಶಸ್ತಿಗೂ ಪಾತ್ರವಾಗಿದೆ. ಇದರ ಕ್ರೆಡಿಟ್ ಎಲ್ಲವೂ‌ ನಿರ್ದೇಶಕ ಪೃಥ್ವಿ ಕೊಣನೂರು ಸೇರಿದಂತೆ ತಂಡಕ್ಕೆ ಸಲ್ಲುತ್ತದೆ. ನಾನು‌ ನೆಪ ಮಾತ್ರವೇ’ ಎನ್ನುತ್ತಾರೆ.

Related Posts

error: Content is protected !!