ಕೊರೊನಾ ಸಂಕಷ್ಟ ಸಮಯದಲ್ಲಿ ನೊಂದವರ ಮತ್ತು ಶ್ರಮಿಕರಿಗೆ ತಮ್ಮ ಟ್ರಸ್ಟ್ ಮೂಲಕ ಕಿಟ್ ವಿತರಿಸಿದ ಬಗ್ಗೆ ನಮಗೆ ತೃಪ್ತಿ ಇದೆ – ಟ್ರಸ್ಟ್ ಸಂಸ್ಥಾಪಕ, ನಿರ್ದೇಶಕ ಕೃಷ್ಣ ಪಿ.
ಕೊರೊನಾ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ. ಅದೆಷ್ಟೋ ಜೀವಗಳು ಹೋಗಿವೆ. ಲೆಕ್ಕವಿಲ್ಲದಷ್ಟು ಕುಟುಂಬಗಳು ತತ್ತರಿಸಿವೆ. ಕಾರ್ಮಿಕರು, ಶ್ರಮಿಕರು, ಕಂಗಾಲಾಗಿದ್ದಾರೆ. ಇಂತಹ ಸಂಕಷ್ಟದ ಕಾಲದಲ್ಲಿ ಸರ್ಕಾರ ಒಂದಷ್ಟು ನೆರವು ನೀಡಲು ಮುಂದಾಗಿದೆ. ಅದಕ್ಕೂ ಮೊದಲೇ ಸಾಕಷ್ಟು ಸಂಘ ಸಂಸ್ಥೆಗಳು ನೊಂದವರ ಸಹಾಯಕ್ಕೆ ನಿಂತಿವೆ. ಆ ಸಾಲಿಗೆ ಹಲವಾರು ಟ್ರಸ್ಟ್ ಗಳು ಕೂಡ ನೆರವಿನ ಹಸ್ತ ಚಾಚಿವೆ. ಹಾಗೆಯೇ, ಬೆಂಗಳೂರು ವಿದ್ಯಾರಣ್ಯಪುರದಲ್ಲಿರುವ ‘ಅರ್ಬನ್ ಗುರುಕುಲ್ ಚಾರಿಟೇಬಲ್ ಟ್ರಸ್ಟ್’ ಮೂಲಕ ಒಂದಷ್ಟು ವರ್ಗದವರಿಗೆ, ಕಾರ್ಮಿಕರಿಗೆ ಅಗತ್ಯ ದಿನಸಿ ದಿನಸಿ ಕಿಟ್ ವಿತರಿಸಿದೆ.
ಹೌದು, ಅರ್ಬನ್ ಗುರುಕಲ್ ಚಾರಿಟೇಬಲ್ ಟ್ರಸ್ಟ್ ನ ಸಂಸ್ಥಾಪಕ ಕೃಷ್ಣ ಅವರ ನೇತೃತ್ವದಲ್ಲಿ ಭಾನುವಾರ ವಿದ್ಯಾರಣ್ಯಪುರ, ತಿಂಡ್ಲು, ಯಲಹಂಕ ಸುತ್ತಮುತ್ತಲಿನ ನೂರಾರು ಕಾರ್ಮಿಕರು, ಶ್ರಮಿಕರನ್ನು ಗುರುತಿಸಿ ದಿನಸಿ ಕಿಟ್ ವಿತರಿಸಲಾಗಿದೆ.
ಟ್ರಸ್ಟ್ ನಿರ್ದೇಶಕರು, ಸದಸ್ಯರು
ಕಳೆದ ಮೂರ್ನಾಲ್ಕು ವರ್ಷಗಳಿಂದಲೂ ‘ಅರ್ಬನ್ ಗುರುಕಲ್ ಚಾರಿಟೇಬಲ್ ಟ್ರಸ್ಟ್’ ನ ಸಂಸ್ಥಾಪಕ ಕೃಷ್ಣ ಅವರು ಸಾಕಷ್ಟು ಜನಪರ ಕಾರ್ಯಕ್ರಮಗಳನ್ನು ಮಾಡಿಕೊಂಡು ಬಂದಿದ್ದಾರೆ. ತಮ್ಮ ಟ್ರಸ್ಟ್ ಮೂಲಕ ಆ ಭಾಗದ ಬಡ ಜನರಿಗೆ ಉಚಿತ ಆರೋಗ್ಯ ಶಿಬಿರ, ದಂತ ಚಿಕಿತ್ಸೆ ಶಿಬಿರ ಏರ್ಪಡಿಸಿದ್ದಾರೆ.
ಅಷ್ಟೇ ಅಲ್ಲ ಗುರುಕುಲ ಮೂಲಕ ವಿದ್ಯಾರ್ಥಿಗಳಿಗೆ ಪೇಂಟಿಂಗ್ ಸ್ಪರ್ಧೆ ಸೇರಿದಂತೆ ಇತ್ಯಾದಿ ಕ್ರೀಡಾ ಚಟುವಟಿಕೆಯನ್ನೂ ನಡೆಸಿದೆ. ಈಗ ಕೊರೊನಾ ಸಂಕಷ್ಟದಲ್ಲಿ ನೊಂದವರ ಹಾಗೂ ಕಷ್ಟದಲ್ಲಿ ಸಿಲುಕಿರುವ ಜನರಿಗೆ ಧೈರ್ಯ ತುಂಬುವುದರ ಜೊತೆಗೆ ಆಹಾರದ ಕಿಟ್ , ಸ್ಯಾನಿಟೈಸರ್, ಮಾಸ್ಕ್ ವಿತರಿಸಿ ಆತ್ಮಸ್ಥೈರ್ಯ ತುಂಬಿದೆ. ಇದರ ಜೊತೆಗೆ ಕೊರೊನೊ ಹಾವಳಿ ತಪ್ಪಿಸಬೇಕೆಂಬ ಜಾಗೃತಿ ಮೂಡಿಸುವ ಕೆಲಸವನ್ನೂ ‘ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್ ‘ ತಂಡದ ನಿರ್ದೇಶಕರು, ಸದಸ್ಯರು ಮಾಡಿದ್ದಾರೆ.
ಕೊರೊನಾ ಸಂಕಷ್ಟ ಸಮಯದಲ್ಲಿ ನೊಂದವರ ಮತ್ತು ಶ್ರಮಿಕರಿಗೆ ತಮ್ಮ ಟ್ರಸ್ಟ್ ನ ನಿರ್ದೇಶಕರು ಹಾಗು ಸದಸ್ಯರ ಜೊತೆ ದಿನಸಿ ಕಿಟ್ ವಿತರಿಸಿದ ಟ್ರಸ್ಟ್ ಸಂಸ್ಥಾಪಕ, ನಿರ್ದೇಶಕ ಕೃಷ್ಣ ಪಿ, ‘ಈ ಕೆಲಸದ ಬಗ್ಗೆ ನಮಗೆ ತೃಪ್ತಿ ಇದೆ.
ನಾವು ಟ್ರಸ್ಟ್ ಸ್ಥಾಪಿಸಿದ ಉದ್ದೇಶವೇ ಸಮಾಜಮುಖಿ ಕೆಲಸ ಮಾಡಲು. ಅದರಲ್ಲೂ ನೊಂದವರು, ಶ್ರಮಿಕರು, ಕಾರ್ಮಿಕರ ನೋವಿಗೆ ಸ್ಪಂದಿಸಬೇಕೆಂಬ ಉದ್ದೇಶದಿಂದ. ಈಗಾಗಲೇ ನಮ್ಮ ಟ್ರಸ್ಟ್ ಮೂಲಕ ಸಾಕಷ್ಟು ಕೆಲಸ ಮಾಡಿದ್ದೇವೆ.
ಈಗ ಕೊರೊನಾ ಹೆಮ್ಮಾರಿ ವಿರುದ್ಧ ನಾವೆಲ್ಲ ಹೋರಾಡಬೇಕಿದೆ. ಇಂತಹ ಕಷ್ಟದ ಸಮಯದಲ್ಲಿ ನಾವು ಶ್ರಮಿಕರ ಜೊತೆ ನಿಲ್ಲಬೇಕು. ಮಾನವೀಯ ಮೌಲ್ಯ ಅಳವಡಿಸಿಕೊಡು ನಮ್ಮ ಕೈಲಾದಷ್ಟು ಸೇವೆ ಮಾಡಬೇಕು ಅನ್ನೋದಷ್ಟೇ ನಮ್ಮ ಉದ್ದೇಶ.
ಮುಂದಿನ ದಿನಗಳಲ್ಲಿ ಇನ್ನೂ ಹಂತ ಹಂತವಾಗಿ ಟ್ರಸ್ಟ್ ಮೂಲಕ ಹಲವು ವಿಶೇಷ ಕಾರ್ಯಕ್ರಮ ಮೂಲಕ ಶ್ರಮಿಕರ ಕಷ್ಟಕ್ಕೆ ಸ್ಪಂದಿಸುವ ಕೆಲಸನಡೆಯಲಿದೆ ಎಂಬುದು ಕೃಷ್ಣ ಅವರ ಮಾತು.
ಅಂದಹಾಗೆ , ಕೃಷ್ಣ ಅವರು ಉದ್ಯಮಿಯೂ ಹೌದು. ಜೊತೆಗೆ ಸಿನಿಮಾ ನಿರ್ಮಾಪಕರೂ ಕೂಡ ಕನ್ನಡ ಚಿತ್ರರಂಗದಲ್ಲಿ ಸದಭಿರುಚಿಯ ಚಿತ್ರವನ್ನು ಕಟ್ಟಿಕೊಡಬೇಕು, ಅದರಲ್ಲೂ ಹೊಸ ಪ್ರತಿಭೆಗಳಿಗೆ ಅವಕಾಶ ಕೊಡಬೇಕೆಂಬ ಉದ್ದೇಶ ಹೊಂದಿದ್ದು,
ಆ ನಿಟ್ಟಿನಲ್ಲಿ ಅವರು ಈಗಾಗಲೆ ‘ರಮೇಶ ಸುರೇಶ’ ಚಿತ್ರವನ್ನೂ ನಿರ್ಮಿಸಿದ್ದಾರೆ. ಸದ್ಯ ಆ ಚಿತ್ರ ರಿಲೀಸ್ ಗೆ ರೆಡಿಯಾಗುತ್ತಿದೆ. ಲಾಕ್ ಡೌನ್ ಬಳಿಕ ಪ್ರೇಕ್ಷಕರ ಮುಂದೆ ತರಲು ಸಜ್ಜಾಗಿದ್ದಾರೆ.
ಅದೇನೆ ಇರಲಿ, ತಮ್ಮ ‘ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್’ ಮೂಲಕ ಇರುವಷ್ಟು ಕಾಲ ಒಂದಷ್ಟು ಸಮಾಧಾನ ಎನಿಸುವ, ಮನಸ್ಸಿಗೆ ನೆಮ್ಮದಿ ತರುವ ಒಳ್ಳೆಯ ಕೆಲಸಗಳನ್ನು ಮಾಡಬೇಕೆಂಬ ನಿರ್ಧಾರ ಮಾಡಿದ್ದಾರೆ ಟ್ರಸ್ಟ್ ನ ಸಂಸ್ಥಾಪಕ ಕೃಷ್ಣ.
ಇನ್ನು, ಅರ್ಬನ್ ಗುರುಕುಲ ಚಾರಿಟೇಬಲ್ ಟ್ರಸ್ಟ್ ಮೂಲಕ ಆಯೋಜಿಸಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ನಿರ್ದೇಶಕರಾದ, ರೂಪ ಕೆ, ಮಾಲಿನಿ ಕೆ.ಕೆ, ಶ್ರೀನಾಥ್, ಮಂಜು , ವಿಜಯ್ ಭರಮಸಾಗರ ಮತ್ತು ತಂಡದ ಸದಸ್ಯರಾದ ರಕ್ಷಿತ್, ನಟಾಶ, ದೀಪು, ವಿಷ್ಣು, ವಿವೇಕ್ ಸಿಂಗ್, ಶ್ರೀರಾಮ್, ದೀಪಕ್ ಗೌಡ, ಹರೀಶ್, ನಿಖಿಲ್ ಇತರರು ಕೂಡ ದಿನಸಿ ಕಿಟ್ ವಿತರಣೆಯಲ್ಲಿ ತೊಡಗಿದ್ದರು.