ಕೆವಿಎನ್ ಫೌಂಡೇಷನ್ ಮೂಲಕ ಕನ್ನಡ ಚಿತ್ರರಂಗದವರಿಗೆ ಉಚಿತ ಕಾನ್ಸನ್​ಟ್ರೇಟರ್ ವಿತರಣೆ

ಕೋವಿಡ್​ನಿಂದಾಗಿ ಚಿತ್ರರಂಗದ ಸಾಕಷ್ಟು ಮಂದಿ ಸಂಕಷ್ಟಕ್ಕೀಡಾಗಿದ್ದಾರೆ. ಅದೇ ರೀತಿ ಕೋವಿಡ್​ ಸೋಂಕಿನಿಂದಲೂ ಬಸವಳಿದಿದ್ದಾರೆ. ಇದೀಗ ಹಾಗೇ ಸಮಸ್ಯೆ ಎದುರಿಸುತ್ತಿರುವ ಸೋಂಕಿತರಿಗೆ ಕೆವಿಎನ್​ ಫೌಂಡೇಷನ್​ ಸ್ಪಂದಿಸುತ್ತಿದೆ. ಅಂದರೆ, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಉಚಿತವಾಗಿ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ನೀಡುತ್ತಿದೆ. ಗುಣಮುಖರಾಗುತ್ತಿದ್ದಂತೆ ಅದನ್ನು ಮರಳಿ ಅವರ ತಂಡಕ್ಕೆ ನೀಡಿದರೆ ಕೆಲಸ ಮುಗಿದಂತೆ.

ಕಳೆದ ಒಂದು ತಿಂಗಳಿಂದ ಸಾರ್ವಜನಿಕರಿಗೆ ಕೆವಿಎನ್​ ಫೌಂಡೇಷನ್​ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ಒದಗಿಸುತ್ತಿದೆ. ಸದ್ಯ 200 ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳು ಇವರ ಬಳಿ ಇದ್ದು, ನ್ಯೂಯಾರ್ಕ್​ನಿಂದ ಹೆಚ್ಚುವರಿ 400 ಕಾನ್ಸನ್​ಟ್ರೇಟರ್​ಗಳು ಆಗಮಿಸಿವೆ. ಅವೆಲ್ಲವುಗಳ ಸದ್ಬಳಕೆ ಆಗಲಿ ಎಂಬುದು ಕೆವಿಎನ್​ ಫೌಂಡೇಷನ್ ಉದ್ದೇಶ. ಇದೀಗ ಕೇವಲ ಸಿನಿಮಾ, ಕಿರುತೆರೆ ಕೆಲಸಗಾರರು, ಕಲಾವಿದರು, ತಂತ್ರಜ್ಞರು, ಕ್ಯಾಬ್ ಚಾಲಕರು ಹೀಗೆ ಒಟ್ಟಾರೆ ಸಿನಿಮಾರಂಗಕ್ಕೆ ಉಚಿತವಾಗಿ ಆಕ್ಸಿಜನ್ ಕಾನ್ಸನ್​ಟ್ರೇಟರ್​ಗಳನ್ನು ನೀಡಲು ಮುಂದೆ ಬಂದಿದ್ದಾರೆ.

ಈಗಾಗಲೇ ನಟಿ ಶ್ವೇತಾ ಚೆಂಗಪ್ಪ ಕೆವಿಎನ್​ ಫೌಂಡೇಷನ್​ ವತಿಯಿಂದ ಆಕ್ಸಿಜನ್ ಕಾನ್ಸನ್​ಟ್ರೇಟರ್ ಬಳಸಿಕೊಂಡಿದ್ದಾರೆ.
ಹಾಗಾದರೆ ಕಾನ್ಸನ್​ಟ್ರೇಟರ್​ ಪಡೆಯುವುದು ಹೇಗೆ? www.kvnfoundation.com ವೆಬ್​ಸೈಟ್​ಗೆ ಹೋಗಿ ಸೂಕ್ತ ಮಾಹಿತಿಯನ್ನು ಅದರಲ್ಲಿ ಸಲ್ಲಿಕೆ ಮಾಡಿದರೆ, ಯಾವುದೇ ವ್ಯಕ್ತಿಯ ಮಧ್ಯಸ್ಥಿಕೆ ಮತ್ತು ಸಂಪರ್ಕ ಇರದೇ ಆಕ್ಸಿಜನ್ ಕಾನ್ಸನ್​ಟ್ರೇಟರ್ ಪಡೆಯಬಹುದಾಗಿದೆ. ಎಲ್ಲದಕ್ಕಿಂತ ಮುಖ್ಯವಾಗಿ, ಕಾನ್ಸನ್​ಟ್ರೇಟರ್​ ಪಡೆಯುವಾಗ ಓರಿಜಿನಲ್ ಆಧಾರ್ ಕಾರ್ಡ್​ ಅನ್ನು ನೀಡಬೇಕು. ಸ್ಯಾಚುರೇಷನ್ ಲೆವಲ್​ 90-92 ಇದ್ದವರಿಗೆ ನೀಡಲಾಗುತ್ತದೆ. ವೈದ್ಯರ ನೀಡಿರುವ ಚೀಟಿಯೂ ತುಂಬ ಮಹತ್ವದ್ದು. ಇವರಿಗೆ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಅವಶ್ಯಕತೆ ಇದೆ ಎಂದು ಬರೆದ ನಂತರವಷ್ಟೇ ಅದನ್ನು ವಿತರಣೆ ಮಾಡಲಾಗುತ್ತದೆ.


5 ಲೀಟರ್​ನ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಗಳು ಕೆವಿಎನ್​ ಫೌಂಡೇಷನ್ ಬಳಿ ಇದ್ದು, ವಾರ, 15ದಿನಗಳ ಅಥವಾ ಸೋಂಕಿತರು ಗುಣಮುಖವಾಗುವ ತನಕ ಯಾವುದೇ ಹಣ ಪಾವತಿಸದೇ ಆಕ್ಸಿಜನ್ ಕಾನ್ಸನ್​ಟ್ರೇಟರ್​ ಬಳಕೆ ಮಾಡಬಹುದು. ಗುಣಮುಖರಾದ ಬಳಿಕ ಅದನ್ನು ಕೆವಿಎನ್​ ಫೌಂಡೇಷನ್​ಗೆ ಮರಳಿಸಬೇಕಾಗುತ್ತದೆ. ಅಲ್ಲಿ ಅದರ ರೀ ಸೈಕಲ್ ಮಾಡಿ ಮತ್ತೆ ಬೇರೆಯವರಿಗೆ ಹಂಚಿಕೆ ಮಾಡಲಾಗುತ್ತಿದೆ.

Related Posts

error: Content is protected !!