ಗೀತ ಸಾಹಿತಿ ಕವಿರಾಜ್ ಮತ್ತು ಸಮಾನ ಮನಸ್ಕ ಗೆಳೆಯರು ಸೇರಿ ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರಿಗಾಗಿ ‘ ‘ಉಸಿರು’ ತಂಡ ಕಟ್ಟಿಕೊಂಡು ಆ ಮೂಲಕ ಆಕ್ಸಿಜನ್ ಕೊಡುವ ಕೆಲಸ ಮಾಡುತ್ತಿದ್ದು, ಯಶಸ್ವಿಯಾಗಿ ಸಾಗುತ್ತಿದೆ.
ಈಗಾಗಲೇ ಬೆಂಗಳೂರಿನ ಹಲವು ಮಂದಿ ಉಸಿರು ಪಡೆದಿದ್ದಾರೆ.
ಶನಿವಾರವಷ್ಟೆ ಮೈಸೂರು ನಗರದಲ್ಲೂ ಉಸಿರು ತಂಡ ತನ್ನ ಕೆಲಸಕ್ಕೆ ಚಾಲನೆ ನೀಡಿದೆ. ಇದರ ಬೆನ್ನಲ್ಲೇ ಚಾಲೆಂಜಿಂಗ್ ದರ್ಶನ್ ಕೂಡ ಉಸಿರು ತಂಡಕ್ಕೆ ಸಾಥ್ ನೀಡುತ್ತಿದ್ದಾರೆ.
ಇದು ಸಹಜವಾಗಿಯೇ ಉಸಿರು ತಂಡದ ಖುಷಿ ಹೆಚ್ಚಿಸಿದೆ.
ದರ್ಶನ್ ಅವರು ಉಸಿರು ಹಿಂದೆ ನಿಂತಿರುವುದರಿಂದ ಗಜಬಲ ಬಂದಂತಾಗಿದೆ. ಬೆಂಗಳೂರು, ಮೈಸೂರು ಭಾಗದಲ್ಲಿ ಶುರುವಾದ ಉಸಿರು ಕೆಲಸಕ್ಕೆ ಡಿ ಬಾಸ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನಷ್ಟು ಜಿಲ್ಲೆಗಳಲ್ಲಿ ಉಸಿರು ಹರಡಲು ಸಾಧ್ಯವಾಗಿದೆ ಎಂಬುದು ಉಸಿರು ತಂಡದ ಖುಷಿಯ ಮಾತು.
ಈ ಉಸಿರು ತಂಡದ ಕೆಲಸ ಇನ್ನಷ್ಟು ಹೆಚ್ಚಲಿ, ಯಶಸ್ವಿಯಾಗಲಿ ಎಂಬುದಹ ಸಿನಿಲಹರಿ ಆಶಯ.