ಅಣ್ಣಾವ್ರಿಗೆ ಯೋಗ ಹೇಳಿಕೊಡುತ್ತಿದ್ದ ಯೋಗ ಗುರು ಹೊನ್ನಪ್ಪ ನಾಯ್ಕರ್ ನಿಧನ

 
ವರನಟ ಡಾ.ರಾಜಕುಮಾರ್ ಸೇರಿದಂತೆ ಅವರ ಕುಟುಂಬಕ್ಕೆ ಯೋಗ ಹೇಳಿಕೊಡುತ್ತಿದ್ದ ಹೊನ್ನಪ್ಪ ನಾಯ್ಕರ್ (90) ಕೊರೊನಾದಿಂದ ನಿಧನರಾಗಿದ್ದಾರೆ.
ಹೊನ್ನಪ್ಪ ನಾಯ್ಕರ್  ಅವರು ಈ ಹಿಂದೆ ಪೊಲೀಸ್ ಇಲಾಖೆಯಲ್ಲಿ   ಕಾರ್ಯನಿರ್ವಹಿಸುತ್ತಿದ್ದರು.  ವರ ನಟ ಡಾಕ್ಟರ್ ರಾಜಕುಮಾರ್ ಅವರು ಸೇರಿದಂತೆ  ಡಾಕ್ಟರ್ ರಾಜಕುಮಾರ್ ಅವರ  ಕುಟುಂಬದವರಿಗೆ ಯೋಗಾಸನವನ್ನು  ಹೇಳಿಕೊಡುವ ಮೂಲಕ ಯೋಗ ಗುರುವಾಗಿದ್ದರು. ಅಲ್ಲದೆ ನಾಡಿನ  ಅತ್ಯಂತ ಗಣ್ಯವ್ಯಕ್ತಿಗಳಿಗೆ  ಯೋಗಾಸನವನ್ನು ಪ್ರತಿ ನಿತ್ಯ  ಹೇಳಿಕೊಡುತ್ತಿದ್ದ ವ್ಯಕ್ತಿಯಾಗಿದ್ದರು.

ಇವರು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.
ಜೆಪಿ ನಗರದಲ್ಲಿ ವಾಸವಿದ್ದರು. ಕನಕಪುರದ ಬಳಿ ಇವರ ಯೋಗಾಶ್ರಮವಿತ್ತು. ಇವರ ಅಂತ್ಯಕ್ರಿಯೆಯನ್ನು  ಕನಕಪುರದ  ನಾಗದೇವನಹಳ್ಳಿ  ಬಳಿ  ನೆರವೇರಿಸಲು  ಅವರ ಕುಟುಂಬಸ್ಥರು  ತೀರ್ಮಾನಿಸಿದ್ದಾರೆ.   ಹೊನ್ನಪ್ಪ ನಾಯ್ಕರ್ ಅವರ ಆತ್ಮೀಯರಾದ ಎಸ್. ಎ. ಚಿನ್ನೇಗೌಡ ಅವರು  ಮೃತರ  ಆತ್ಮಕ್ಕೆ  ಶಾಂತಿ ಸಿಗಲೆಂದು ಸಂತಾಪ ಸೂಚಿಸಿದ್ದಾರೆ.

Related Posts

error: Content is protected !!