ಕೋವಿಡ್ ಸೋಂಕು ದೃಢ ಪಟ್ಟು ಆಸ್ಪತ್ರೆಗೆ ದಾಖಲಾಗಿದ್ದ ʼಲವ್ ಗುರುʼ ಹಾಗೂ ʼಜೂಮ್ʼ ಚಿತ್ರಗಳ ಖ್ಯಾತಿಯ ನಿರ್ದೇಶಕ ಪ್ರಶಾಂತ್ ರಾಜ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ. ಕೊಂಚ ಗಂಭೀರವೇ ಎನಿಸಿದ್ದ ಆರೋಗ್ಯದ ಪರಿಸ್ಥಿತಿ ಚೇತರಿಕೆ ಕಂಡಿದ್ದು, ಇದು ಖುಷಿ ತಂದಿದೆ ಎಂಬುದಾಗಿ ನಿರ್ದೇಶಕ ಪ್ರಶಾಂತ್ ರಾಜ್ ಅವರೇ ಮೆಸೇಜ್ ಮಾಡಿದ್ದಾರೆ. ಹಾಗೆಯೇ ತಾವೀಗ ಕೊಂಚ ಚೇತರಿಸಿಕೊಂಡಿದ್ದನ್ನು ವಿಡಿಯೋ ಮಾಡಿ ಸೋಷಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೋವಿಡ್ ಸೋಂಕು ದೃಢಪಟ್ಟ ನಂತರ ನಾನು ಆಸ್ಪತ್ರೆಗೆ ದಾಖಲಾಗಿದ್ದೇನೆ. ಹಾಗೆಯೇ ಆರೋಗ್ಯದಲ್ಲಿ ಕೊಂಚ ಏರುಪೇರು ಆದಾಗ ಅನಿವಾರ್ಯವಾಗಿ ನಾನು ಆಸ್ಪತ್ರೆಗೆ ದಾಖಲಾದೆ.
ಆರಂಭದಲ್ಲಿ ಆರೋಗ್ಯದ ಸಮಸ್ಯೆ ಕೊಂಚ ಗಂಭೀರವೇ ಎನಿಸಿತ್ತು. ಕೊನೆಗೂ ದೇಹ ಈಗ ಚಿಕಿತ್ಸೆಗೆ ಸ್ಪಂದಿಸುತ್ತಿದೆ. ಇಷ್ಟರಲ್ಲಿಯೇ ಕಂಪ್ಲೀಟ್ ಗುಣಮುಖವಾಗುವ ವಿಶ್ವಾಸವಿದೆ. ಎಂದಿನಂತೆ ಸಿನಿಮಾ ಕೆಲಸಗಳನ್ನು ಶುರು ಮಾಡಬೇಕಿದೆ. ನಿಮ್ಮೆಲ್ಲರ ಹಾರೈಕೆ ನನ್ನ ಮೇಲಿರಲಿ ಎಂಬುದಾಗಿ ನಿರ್ದೇಶಕ ಪ್ರಶಾಂತ್ ರಾಜ್ ಹೇಳಿದ್ದಾರೆ