ಶ್ವಾಸ ಹೆಸರಿನ ಆಕ್ಸಿಜನ್ ಎಕ್ಸ್‌ಪ್ರೆಸ್‌ ಗೆ ಸಚಿವ ಸುಧಾಕರ್ ಚಾಲನೆ; ಕೊರೊನಾ ಸೋಂಕಿತರ ನೆರವಿಗೆ ನಿಂತ ಹರ್ಷಿಕಾ, ಭುವನ್

ಕಷ್ಟ ಅಂತ ಬಂದರೆ ಒಂದಷ್ಟು ಮಂದಿ ಅಂತಹವರ ನೆರವಿಗೆ ಬರೋದು ಗೊತ್ತೇ ಇದೆ. ಅಂತಹವರ ಸಾಲಿಗೆ ಈಗಾಗಲೇ ಗುರುತಿಸಿಕೊಂಡಿರುವ ನಟಿ ಹರ್ಷಿಕಾ‌ ಪೂಣಚ್ಚ ಹಾಗೂ ನಟ ಭುವನ್ ಪೊನ್ನಪ್ಪ ಈ ಕೊರೊನಾ ಸಂಕಷ್ಟದಲ್ಲಿ ಸಿಲುಕಿದ ಅದೆಷ್ಟೋ ಜನರಿಗೆ ನೆರವಾಗಿದ್ದಾರೆ.
ಹೌದು, ಕಳೆದ ವರ್ಷ ಕೊರೊನಾ ಹೊಡೆತಕ್ಕೆ ತತ್ತರಿಸಿದ್ದ ಜನರಿಗೆ ಹರ್ಷಿಕಾ ಮತ್ತು ಭುವನ್ ಅವರು ತಮ್ಮ ಸಮಾನ ಮನಸ್ಕರ ಜೊತೆಗೂಡಿ ಒಂದಷ್ಟು ಸಹಾಯ ಹಸ್ತ ಚಾಚಿದ್ದರು. ಕೊರೊನಾ ಮಾತ್ರವಲ್ಲ, ಹಿಂದೆ ಕೊಡಗು ಮಳೆಯಿಂದ ಸಂಪೂರ್ಣ ಜಲಾವೃತಗೊಂಡಾಗಲೂ ಇವರು ಕಾರ್ಯ ನಿರ್ವಹಿಸಿದ್ದರು.

ಈಗ ಕೊರೊನಾದ ಎರಡನೇ ಅಲೆ ಜೋರಾಗಿರುವುದರಿಂದ ಮತ್ತಷ್ಟು ಜಾಗೃತಗೊಂಡ ಹರ್ಷಿಕಾ ಮತ್ತು ಭುವನ್,
ಯಶಸ್ವಿ “ಫೀಡ್ ಕರ್ನಾಟಕ” ಯೋಜನೆ ನಂತರ ಭುವನಂ ಫೌಂಡೇಶನ್‌ ಮೂಲಕ ಹೊಸ ಯೋಜನೆಗಳ ಮೂಲಕ ಅಗತ್ಯ ಸೇವೆ ಕಲ್ಪಿಸುತ್ತಿದ್ದಾರೆ.

ಈ ನಿಟ್ಟಿನಲ್ಲಿ ಅವರು”ಶ್ವಾಸ” ಆಕ್ಸಿಜನ್ ಎಕ್ಸ್‌ಪ್ರೆಸ್ ಬಸ್‌ಗಳಲ್ಲಿ ಆಮ್ಲಜನಕ ಸಾಂದ್ರಕಗಳನ್ನು ಅಳವಡಿಸಿ ಆ ಮೂಲಕ ಕೊರೊನಾ ಸೋಂಕಿತರ ನೆರವಿಗೆ ಧಾವಿಸುತ್ತಿದ್ದಾರೆ. ಅದಕ್ಕೆ ಈಗಾಗಲೇ ಚಾಲನೆಯೂ ದ
ಉಚಿತ ಸೇವೆ ಇದಾಗಿದ್ದು, ಮನೆಯ ಬಾಗಿಲಿಗೇ, ಆಟೋ ಸೇವೆಯನ್ನೂ ಮಾಡುತ್ತಿದೆ.

ಕೋವಿಡ್ ರೋಗಿಗಳು ಮತ್ತು ಪ್ರತ್ಯೇಕವಾಗಿ ರೋಗಿಗಳಿಗೆ ಉಚಿತ ಪಡಿತರ, ಆಹಾರ, ಆಮ್ಲಜನಕ ವಿತರಣೆ ಕಾರ್ಯಕ್ರಮಕ್ಕೆ ಆರೋಗ್ಯ ಸಚಿವ ಡಾ.ಸುಧಾಕರ್ ಅವರು ಮೇ.14ರಂದು ಫ್ರೀಡಂ ಪಾರ್ಕ್ ನಲ್ಲಿ ಚಾಲನೆ ನೀಡಿದ್ದಾರೆ.

ಈ ಸೇವೆ ಉಚಿತವಾಗಿದ್ದು, ಅಗತ್ತ ಇರುವರು ಪಡೆಯಬಹುದಾಗಿದೆ ಎಂಬುದು ಹರ್ಷಿಕಾ ಹಾಗೂ ಭುವನ್ ಮಾತು.

Related Posts

error: Content is protected !!